ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್‌ ಮಾತ್ರ ಬಾಕಿ, ಪುರುಷರ ಸಿಂಗಲ್ಸ್‌ನಲ್ಲಿ ರಿತ್ವಿಕ್ ಸತೀಶ್ - ರೌನಾಕ್ ಚೌಹಾಣ್ ಸೆಣಸಾಟ, ಮಹಿಳಾ ಸಿಂಗಲ್ಸ್‌ನಲ್ಲಿ ಮಾನ್ಸಿ ಸಿಂಗ್ - ಅಶ್ಮಿತಾ ಚಲಿಯಾ ಸೆಣಸು

01-11-25 10:31 pm       Mangalore Correspondent   ಕರಾವಳಿ

ನಗರದ ನ್ಯೂ ಉರ್ವಾ ಇಂಡೋರ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಯೋನೆಕ್ಸ್  - ಸನ್ ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಶುಕ್ರವಾರ ಸೆಮಿಫೈನಲ್ ಪಂದ್ಯಗಳು ನಡೆದವು. ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಭಾರತದ ಅಶ್ಮಿತಾ ಚಲಿತಾ ಅವರು 16ನೇ ಶ್ರೇಯಾಂಕಿತ ಸೂರ್ಯ ಚರಿಷ್ಮಾ ಅವರನ್ನು 21-12, 21-15 ಆಟಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು.

ಮಂಗಳೂರು, ನ.1 : ನಗರದ ನ್ಯೂ ಉರ್ವಾ ಇಂಡೋರ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಯೋನೆಕ್ಸ್  - ಸನ್ ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಶುಕ್ರವಾರ ಸೆಮಿಫೈನಲ್ ಪಂದ್ಯಗಳು ನಡೆದವು. ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಭಾರತದ ಅಶ್ಮಿತಾ ಚಲಿತಾ ಅವರು 16ನೇ ಶ್ರೇಯಾಂಕಿತ ಸೂರ್ಯ ಚರಿಷ್ಮಾ ಅವರನ್ನು 21-12, 21-15 ಆಟಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು.

3ನೇ ಶ್ರೇಯಾಂಕದ ಭಾರತದ ಮಾನ್ಸಿ ಸಿಂಗ್ ಅವರು ಸ್ವದೇಶದ ತನ್ವಿ ಪತ್ರಿ ಅವರನ್ನು 22-10, 21-9 ಆಟಗಳಿಂದ ಸೋಲಿಸಿ ಫೈನಲ್‌ ಗೆ ಆಯ್ಕೆಯಾದರು. ನಂತರ ನಡೆದ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಥಾಯ್ಲಂಡಿನ ತನಾವಿನ್ ಮಾದೀ ಮತ್ತು ನಪಪಕೊರ್ನ್‌ ತುಂಗ್ಕಸತಾನ್ ಜೋಡಿಯು 21-15, 21-19 ಆಟಗಳಿಂದ ತಮ್ಮದೇ ದೇಶದ 5ನೇ ಶ್ರೇಯಾಂಕಿತ ಪೊಂಗಸ್ಕೊರ್ನ್ ತೊಂಗ್ಖಾಮ್ ಮತ್ತು ನನ್ನಪಸ್ ಸುಕ್ಲದ್ ಜೋಡಿಯನ್ನು ಪರಾಭವಗೊಳಿಸಿ ಫೈನಲ್‌ಗೆ ಅರ್ಹತೆ ಪಡೆದರು.

ಮಿಕ್ಸೆಡ್‌ ಡಬಲ್ಸ್‌ನ ಎರಡನೇ ಪಂದ್ಯದಲ್ಲಿ ಭಾರತದ 2ನೇ ಶ್ರೇಯಾಂಕದ ಧ್ರುವ್ ರಾವತ್ ಮತ್ತು ಮನೀಶಾ ಕೆ ಜೋಡಿಯು ಸ್ವದೇಶದ ಆಯುಷ್ ಮಖಿಜಾ ಮತ್ತು ಲಿತಿಕಾ ಶ್ರೀವಾಸ್ತವ ಜೋಡಿಯನ್ನು 22-20, 21-17 ಆಟಗಳಿಂದ ಪರಾಭವಗೊಳಿಸಿ ಫೈನಲ್‌ಗೆ ಏರಿದರು. ಮಹಿಳಾ ಡಬಲ್ಸ್‌ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಶ್ರೀನಿಧಿ ನಾರಾಯಣನ್ ಮತ್ತು ರೆಶಿಕಾ ಉತಯಸೂರ್ಯನ್ ಜೋಡಿಯು 21-17, 12-21, 21-16 ಆಟಗಳಿಂದ ಸ್ವದೇಶದ 3ನೇ ಶ್ರೇಯಾಂಕದ ಅಶ್ವಿನಿ ಭಟ್ ಕೆ ಮತ್ತು ಶಿಖಾ ಗೌತಮ್ ಜೋಡಿಯನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು.

ಮಹಿಳಾ ಡಬಲ್ಸ್‌ನ ಎರಡನೇ ಪಂದ್ಯದಲ್ಲಿ 5ನೇ ಶ್ರೇಯಾಂಕದ ಥಾಯ್ಲೆಂಡಿನ ಹತಾಯ್‌ತಿಪ್ ಮಿಜದ್ ಮತ್ತು ನಪಪಕೊರ್ನ್ ತುಂಗ್ಕಸತಾನ್ ಜೋಡಿಯು ಭಾರತದ ಅದಿತಿ ಭಟ್ ಮತ್ತು ಶರ್ವಾಣಿ ವಾಲೇಕರ್ ಜೋಡಿಯನ್ನು 21-19, 21-7 ಆಟಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದರು.

ಪುರುಷರ ಸಿಂಗಲ್ಸ್‌ನ ಮೊದಲ ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಭಾರತದ ಆಟಗಾರ ರಿತ್ವಿಕ್ ಸಂಜೀವಿ ಸತೀಶ್‌ ಕುಮಾರ್ ಅವರು ಸ್ವದೇಶದ ಎ.ಆರ್. ರೋಹನ್ ಕುಮಾರ್ ಆನಂದಾಸ್ ರಾಜ್‌ ಕುಮಾರ್ ಅವರನ್ನು 21-12, 21-17 ಆಟಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಪುರುಷರ ಸಿಂಗಲ್ಸ್‌ನ ಎರಡನೇ ಪಂದ್ಯದಲ್ಲಿ ಭಾರತದ ರೌನಾಕ್ ಚೌಹಾಣ್ ಅವರು ಸ್ವದೇಶದ 16ನೇ ಶ್ರೇಯಾಂಕದ ಪ್ರಣಯ್ ಶೆಟ್ಟಿಗಾರ್ ಅವರನ್ನು 21-17, 21-16 ಆಟಗಳಿಂದ ಸೋಲಿಸಿ ಫೈನಲ್‌ಗೆ ಏರಿದರು.

ಪುರುಷರ ಡಬಲ್ಸ್‌ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕದ ಸಿಂಗಾಪುರದ ಡೊನೊವಾನ್ ವಿಲ್ಲರ್ಡ್ ವೀ ಮತ್ತು ಜಿಯಾ ಹವೋ ಹೊವಿನ್ ವೋಂಗ್ ಜೋಡಿಯು ಥಾಯ್ಲೆಂಡಿನ 2ನೇ ಶ್ರೇಯಾಂಕದ  ಚಲೊಯೆಂಪೊನ್ ಚರೊಎನಿಟಮೊರ್ನ್ ಮತ್ತು ವೊರ್ರಪೊಲ್ ತೊಂಗ್ಸಂಗ್ ಜೋಡಿಯನ್ನು 22-2, 21-14 ಆಟಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಪುರುಷರ ಡಬಲ್ಸ್‌ನ ಎರಡನೇ ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಸಿಂಗಾಪುರದ ಎಂಗ್ ಕೀಟ್‌ ವೆಸ್ಲಿ ಕೋಹ್ ಮತ್ತು ಜನ್ಸೂಕ್ ಕುಬೊ ಜೋಡಿಯು 5ನೇ ಶ್ರೇಯಾಂಕದ ಥಾಯ್ಲೆಂಡಿನ ಫರಾನ್ಯು ಕವೊಸಮಾಂಗ್ ಮತ್ತು ತನಾಡೊನ್ ಪುನ್‌ಪನಿಚ್ ಜೋಡಿಯನ್ನು 21-11, 11-21, 21-13 ಆಟಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿತು. 

ಭಾನುವಾರ ಫೈನಲ್‌ ಪಂದ್ಯಗಳು ನಡೆಯಲಿದ್ದು ಮಹಿಳಾ ಡಬಲ್ಸ್‌ನಲ್ಲಿ ಥಾಯ್ಲೆಂಡಿನ 5ನೇ ಶ್ರೇಯಾಂಕದ  ಹತಾಯ್‌ತಿಪ್ ಮಿಜದ್ ಮತ್ತು ನಪಪಕೊರ್ನ್ ತುಂಗ್ಕಸತಾನ್ ಜೋಡಿಯು ಭಾರತದ ಶ್ರೀನಿಧಿ ನಾರಾಯಣನ್ ಮತ್ತು ರೆಶಿಕಾ ಉತಯಸೂರ್ಯನ್ ಜೋಡಿಯನ್ನು ಎದುರಿಸಲಿದೆ.

ಮಿಕ್ಸೆಡ್‌ ಡಬಲ್ಸ್‌ ನಲ್ಲಿ ಥಾಯ್ಲೆಂಡಿನ ತನಾವಿನ್ ಮಾದೀ ಮತ್ತು ನಪಪಕೊರ್ನ್‌ ತುಂಗ್ಕಸತಾನ್ ಜೋಡಿಯನ್ನು ಭಾರತದ 2ನೇ ಶ್ರೇಯಾಂಕದ ಧ್ರುವ ರಾವತ್ ಮತ್ತು ಮನೀಶಾ ಕೆ ಜೋಡಿಯು ಎದುರಿಸಲಿದೆ. ಪುರುಷರ ಡಬಲ್ಸ್‌ನಲ್ಲಿ ಸಿಂಗಾಪುರದ ಅಗ್ರ ಶ್ರೆಯಾಂಕಿತ ಎಂಗ್ ಕೀಟ್ ವೆಸ್ಲಿ ಕೋಹ್ ಮತ್ತು ಜನ್‌ಸ್ಯೂಕ್ ಕುಬೋ ಜೋಡಿಯು ಸಿಂಗಾಪುರದವರೇ ಆದ ಡೊನೊವಾನ್ ವಿಲ್ಲರ್ಡ್‌ ವೀ ಮತ್ತು ಜಿಯಾ ಹವೋ ಹೊವಿನ್ ವೊಂಗ್ ಜೋಡಿಯ ಜತೆಗೆ ಮುಖಾಮುಖಿಯಾಗಲಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕದ ರಿತ್ವಿಕ್ ಸಂಜೀವಿ ಸತೀಶ್ ಕುಮಾರ್ ಅವರು ಸ್ವದೇಶದ ರೌನಕ್ ಚೌಹಾಣ್ ಅವರನ್ನು ಎದುರಿಸಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಶ್ರೇಯಾಂಕದ ಭಾರತದ ಮಾನ್ಸಿ ಸಿಂಗ್ ಅವರು 4ನೇ ಶ್ರೇಯಾಂಕದ ಅಶ್ಮಿತಾ ಚಲಿಯಾ ಅವರ ಜತೆಗೆ ಸೆಣಸಲಿದ್ದಾರೆ.

The Yonex–Sunrise Chief Minister’s Mangalore India International Challenge 2025 badminton tournament, being held at the New Urwa Indoor Stadium, witnessed exciting semifinal matches on Friday.