ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ, ಛಾಯಾಗ್ರಾಹಕ ಸತೀಶ್ ಇರಾ ಸೇರಿ 70 ಸಾಧಕರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಗೌರವ 

31-10-25 10:47 pm       Mangalore Correspondent   ಕರಾವಳಿ

2025ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, 70 ಮಂದಿ ಸಾಧಕರನ್ನು ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ 24 ಸಂಘ- ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಮಂಗಳೂರು, ಅ.31 : 2025ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, 70 ಮಂದಿ ಸಾಧಕರನ್ನು ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ 24 ಸಂಘ- ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಶ್ವಾನ ಪ್ರೇಮಿ ರಜನಿ ಶೆಟ್ಟಿ, ನೃತ್ಯ ಸಾಧಕಿ ರೆಮೋನಾ ಇವೆಟ್ ಪಿರೇರಾ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಛಾಯಾಗ್ರಾಹಕ ಸತೀಶ್ ಇರಾ, ಎ.ಕೆ.ಕುಕ್ಕಿಲ, ರಾಜೇಶ್ ದಡ್ಡಂಗಡಿ, ಉದ್ಯಮ ಕ್ಷೇತ್ರದಲ್ಲಿ ಎಡಕ್ಕಾನ ಮಹಾಬಲೇಶ್ವರ ಭಟ್, ಸಮಾಜ ಸೇವೆ ಕ್ಷೇತ್ರದಲ್ಲಿ ಅನಿವಾಸಿ ಭಾರತೀಯ ಪ್ರವೀಣ್ ಶೆಟ್ಟಿ ಪಿಲಾರು, ಮೊಹಮ್ಮದ್ ಮುಕ್ಕಚ್ಚೇರಿ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ರಂಗಭೂಮಿ ಕ್ಷೇತ್ರದಲ್ಲಿ ಸುಂದರ ರೈ ಮಂದಾರ, ದೈವಾರಾಧನೆ ಕ್ಷೇತ್ರದಲ್ಲಿ ಗಣೇಶ್ ಎಸ್, ಗೋಪಾಲ ಕೋಟ್ಯಾನ್, ಸುರೇಂದ್ರ ಪರವ, ಸ್ಯಾಕ್ಸೋಫೋನ್ – ಬಾಬು ಸಪಲ್ಯ ವಗ್ಗ, ನಾಟಿವೈದ್ಯ – ಸೋಮನಾಥ ಪಂಡಿತ ಅವರನ್ನು ಆಯ್ಕೆ ಮಾಡಲಾಗಿದೆ.

ಕಂಬಳ ಕ್ಷೇತ್ರದಲ್ಲಿ ಸತೀಶ್ ದೇವಾಡಿಗ ಅಳದಂಗಡಿ, ಕೃಷಿ ಆಧಾರಿತ ಉದ್ಯಮ- ಅವಿನಾಶ್ ರಾವ್, ಧಾರ್ಮಿಕ ಕುಕ್ಕಾಡಿ ಪ್ರೀತಂ ತಂತ್ರಿ, ಕ್ರೀಡೆ – ಅಶೋಕ್ ಪೂವಯ್ಯ, ರಾಮಣ್ಣ ಗೌಡ ಪಡೀಲ್, ಬಾಲಕೃಷ್ಣ ರೈ, ಜೋಯ್ಸಿನ್ ಲೋಬೋ ಮತ್ತಿತರ ಸಾಧಕರನ್ನು ಜಿಲ್ಲಾ ರಾಜ್ಯೋತ್ಸವ ಪಟ್ಟಿಗೆ ಆಯ್ಕೆ ಮಾಡಲಾಗಿದೆ. 24 ಸಂಘ- ಸಂಸ್ಥೆಗಳ ಹೆಸರುಗಳನ್ನು ಹೆಸರಿಸಲಾಗಿದ್ದು, ಉಳ್ಳಾಲ ಮತ್ತು ಮಂಗಳೂರು ನಗರ ಭಾಗದ್ದು ಹೆಚ್ಚಿವೆ.

The Dakshina Kannada district administration has announced the list of recipients for the 2025 District-level Rajyotsava Awards, honoring 70 individual achievers and 24 organizations for their outstanding contributions in various fields.