ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬಲಿ ; ಮದುವೆಗೆ ತೆರಳಿ ಹಿಂತಿರುಗುತ್ತಿದ್ದ ವ್ಯಕ್ತಿ ಮಸಣಕ್ಕೆ, ತೊಕ್ಕೊಟ್ಟಿನಲ್ಲಿ ಘಟನೆ 

27-10-25 11:01 pm       Mangalore Correspondent   ಕರಾವಳಿ

ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಸೋಮವಾರ ಸಂಜೆ ರಾ.ಹೆ.66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಎಂಬಲ್ಲಿ ನಡೆದಿದೆ. 

ಉಳ್ಳಾಲ, ಅ.27 : ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಸೋಮವಾರ ಸಂಜೆ ರಾ.ಹೆ.66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಎಂಬಲ್ಲಿ ನಡೆದಿದೆ. 

ಸೋಮೇಶ್ವರ ಗ್ರಾಮದ ಪಿಲಾರು ಸರಕಾರಿ ಶಾಲಾ ಬಳಿಯ ನಿವಾಸಿ ರಾಮಚಂದ್ರ ಬಿ(59)ಮೃತಪಟ್ಟ ದುರ್ದೈವಿ. ರಾಮಚಂದ್ರ ಅವರು ಸೋಮವಾರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಓವರ್ ಬ್ರಿಡ್ಜ್ ಬಸ್ ಸ್ಟಾಪ್ ನಲ್ಲಿ ಉಳ್ಳಾಲದ ಬಸ್ಸಿನಿಂದ ಇಳಿದು ಹೆದ್ದಾರಿ ದಾಟುತ್ತಿದ್ದ ವೇಳೆ ಮಂಗಳೂರಿಗೆ ಧಾವಿಸುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ರಾಮಚಂದ್ರ ಅವರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಅಪಘಾತ ನಡೆಸಿದ ಲಾರಿ ಮತ್ತು ಚಾಲಕನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮೃತ ರಾಮಚಂದ್ರ ಅವರು ಈ ಹಿಂದೆ ಪ್ರತಿಷ್ಟಿತ ಫಿಲಿಪ್ಸ್ ಕಂಪನಿಯ ನುರಿತ ಟಿವಿ ಟೆಕ್ನೀಷಿಯನ್ ಆಗಿದ್ದು ಬಳಿಕ ಕುಲಶೇಖರದ ಕೆಎಮ್ ಎಫ್ ನಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನ ಅಗಲಿದ್ದಾರೆ.

A tragic road accident claimed the life of a 59-year-old pedestrian who was hit by a speeding lorry while crossing the National Highway 66 near Thokkottu overbridge on Monday evening.