ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರಣ ; ಡಿಸೆಂಬರ್ ವರೆಗೆ ಮಂಗಳೂರು- ಬೆಂಗಳೂರು ಮಧ್ಯೆ ರೈಲು ಸಂಚಾರ ವ್ಯತ್ಯಯ 

25-10-25 02:36 pm       Mangalore Correspondent   ಕರಾವಳಿ

ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ನಡುವೆ ನಡೆಯುತ್ತಿರುವ ರೈಲ್ವೆ ವಿದ್ಯುದ್ದೀಕರಣ ಕಾರ್ಯದಿಂದಾಗಿ, ಮಂಗಳೂರು ಬೆಂಗಳೂರು ನಡುವೆ ಸಂಚರಿಸುವ ಹಲವು ರೈಲುಗಳ ಸಮಯದಲ್ಲಿ ವ್ಯತ್ಯಯವಾಗಲಿದ್ದು, ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. 

ಮಂಗಳೂರು, ಅ.25: ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ನಡುವೆ ನಡೆಯುತ್ತಿರುವ ರೈಲ್ವೆ ವಿದ್ಯುದ್ದೀಕರಣ ಕಾರ್ಯದಿಂದಾಗಿ, ಮಂಗಳೂರು ಬೆಂಗಳೂರು ನಡುವೆ ಸಂಚರಿಸುವ ಹಲವು ರೈಲುಗಳ ಸಮಯದಲ್ಲಿ ವ್ಯತ್ಯಯವಾಗಲಿದ್ದು, ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. 

ವಿದ್ಯುದ್ದೀಕರಣ ಕಾಮಗಾರಿ ನವೆಂಬರ್ 2 ರಿಂದ ಡಿಸೆಂಬರ್ 15ರ ವರೆಗೆ ನಡೆಯಲಿದ್ದು ಈ ವೇಳೆ ಹಲವು ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ. ಈ ಕುರಿತು ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ. ಕಾಮಗಾರಿ ನಡುವೆ ಪ್ರತಿ ದಿನ ನಾಲ್ಕು ಗಂಟೆಗಳಿಗೊಮ್ಮೆ ಲೈನ್ ಬ್ಲಾಕ್ ತೆರೆದುಕೊಳ್ಳಲಿದೆ. ಈ ವೇಳೆ ಮಾತ್ರ ರೈಲುಗಳ ಸಂಚಾರ ಇರಲಿದೆ. 

ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಮೊದಲು 01.11.2025 ರ ವರೆಗೆ ರದ್ದುಗೊಂಡಿತ್ತು. ಈಗ 08.11.2025 ರಿಂದ 13.12.2025 ರವರೆಗೆ ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್–ಯಶವಂತಪುರ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಮೊದಲು 02.11.2025 ರ ವರೆಗೆ ರದ್ದುಗೊಂಡಿತ್ತು. ಈಗ 09.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈನ್-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 30.10.2025 ರ ವರೆಗೆ ರದ್ದುಗೊಂಡಿತ್ತು. ಈಗ 02.11.2025 ರಿಂದ 14.12.2025 ರ ವರೆಗೆ ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್– ಯಶವಂತಪುರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 30.10.2025ರ ವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 31.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ. 

ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 04.11.2025 ರಿಂದ 16.12.2025 ರವರೆಗೆ ರದ್ದುಗೊಳ್ಳಲಿದೆ. 

ಬೆಳಗಿನ ರೈಲು ರದ್ದು ವಿಸ್ತರಣೆ

ಭಾರಿ ಮಳೆಯ ಕಾರಣ ರದ್ದಾಗಿದ್ದ ಮಂಗಳೂರು - ಬೆಂಗಳೂರು ಬೆಳಗಿನ ರೈಲುಗಳ ರದ್ದು ನಿರ್ಧಾರವನ್ನು ಕಳೆದ ತಿಂಗಳು ವಿಸ್ತರಣೆ ಮಾಡಲಾಗಿದೆ. ವಿದ್ಯುದ್ದೀಕರಣ ಕಾಮಗಾರಿ ಹಿನ್ನಲೆಯಲ್ಲಿ ಈ ರೈಲು ಸಂಚಾರವನ್ನು ಡಿಸೆಂಬರ್ 16ರ ವರೆಗೆ ರದ್ದು ಮಾಡಲಾಗಿದೆ.

Train services between Mangaluru and Bengaluru will face disruptions until mid-December due to ongoing railway electrification work between Sakleshpur and Subrahmanya Road. Several trains have been cancelled or rescheduled during this period, according to a press release issued by the South Western Railway.