ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ ಸಾಮರಸ್ಯ ಗಟ್ಟಿಗೊಳಿಸಲು ಆರೆಸ್ಸೆಸ್ ಚಟುವಟಿಕೆ ನಿಷೇಧಿಸಬೇಕು ;  ರಮಾನಾಥ ರೈ 

16-10-25 05:09 pm       Mangalore Correspondent   ಕರಾವಳಿ

ಆರೆಸ್ಸೆಸ್ ಬಗ್ಗೆ ಪ್ರಿಯಾಂಕ ಖರ್ಗೆ ಹೇಳಿರುವ ಮಾತು ಸರಿಯಾಗಿಯೇ ಇದೆ. ಸಮಾಜದಲ್ಲಿ ಸಾಮರಸ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಗಟ್ಟಿಗೊಳಿಸಲು ಸರ್ಕಾರಿ ಶಾಲೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸಬೇಕು ಎನ್ನುವ ಖರ್ಗೆ ಮಾತನ್ನು ಜಾರಿಗೊಳಿಸಲು ಆಗ್ರಹ  ಮಾಡುತ್ತೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. 

ಮಂಗಳೂರು, ಅ.16 : ಆರೆಸ್ಸೆಸ್ ಬಗ್ಗೆ ಪ್ರಿಯಾಂಕ ಖರ್ಗೆ ಹೇಳಿರುವ ಮಾತು ಸರಿಯಾಗಿಯೇ ಇದೆ. ಸಮಾಜದಲ್ಲಿ ಸಾಮರಸ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಗಟ್ಟಿಗೊಳಿಸಲು ಸರ್ಕಾರಿ ಶಾಲೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸಬೇಕು ಎನ್ನುವ ಖರ್ಗೆ ಮಾತನ್ನು ಜಾರಿಗೊಳಿಸಲು ಆಗ್ರಹ  ಮಾಡುತ್ತೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. 

ಸುದ್ದಿಗೋಷ್ಟಿ ನಡೆಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಆರೆಸ್ಸೆಸ್ ಶಾಖೆ ನಡೆಸುವುದರಿಂದ ಮಕ್ಕಳ ಮೇಲೆ ವಿಷ ಬೀಜ ಬಿತ್ತುವಂತಹ ಕೆಲಸ ಆಗುತ್ತಿದೆ. ಇದೇ ವಿಷ ಬೀಜದಿಂದ ಸಮಾಜದಲ್ಲಿ ಮತೀಯ ಸಾಮರಸ್ಯ ಕೆಡಿಸುವಂತಹ ಪ್ರಯತ್ನ ಆಗುತ್ತಿದೆ, ದ.ಕ. ಜಿಲ್ಲೆಯಲ್ಲಿ ಆರೆಸ್ಸೆಸ್ ಹಿಡಿತದ ಸಂಟನೆಗಳಿಂದ ಮತೀಯ ದ್ವೇಷ, ಧರ್ಮಾಧರಿತ ಹತ್ಯೆಗಳು ಆಗಿರುವುದನ್ನು ನಾವು ನೋಡಿದ್ದೇವೆ. ಇದಕ್ಕೆಲ್ಲ ಮೂಲ ದ್ವೇಷ ಬಿತ್ತುವುದೇ ಕಾರಣವಾಗಿದೆ ಎಂದು ಹೇಳಿದರು. ‌ 

ಕಾಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವನ್ನು ಒಪ್ಪಿಕೊಂಡವರು ನಾವು, ಮತೀಯವಾದಿ ಸಂಘಟನೆ ಆರೆಸ್ಸೆಸ್ ಚಟುವಟಿಕೆ ವಿರೋಧಿಸುತ್ತ ಬಂದಿದ್ದೇವೆ. ರಾಹುಲ್ ಗಾಂಧಿಯವರು ಆರೆಸ್ಸೆಸ್ ಗೆ ಹೆದರುವವರು ನಮ್ಮ ಪಕ್ಷದಲ್ಲಿ ಇರುವುದು ಬೇಡವೆಂದು ಈಗಾಗಲೇ ಹೇಳಿದ್ದಾರೆ. ಸಮಾಜದಲ್ಲಿ ನಮ್ಮ ನಿಲುವನ್ನು ಹೇಳುವುದರಲ್ಲಿ ಗಟ್ಟಿತನ ಇರಬೇಕು. ಆರೆಸ್ಸೆಸ್ ಅನ್ನು ಎರಡು ಬಾರಿ ಸರ್ದಾರ್ ವಲ್ಲಭಭಾಯಿ ಪಟೇಲರು ನಿಷೇಧ ಮಾಡಿದ್ದರು. ಬಿಜೆಪಿಯವರು ಪಟೇಲರು ಮಾಡಿದ ತೀರ್ಮಾನವನ್ನು ಒಪ್ಪಿಕೊಳ್ಳುತ್ತಾರೆಯೇ? ಇವರು ಪಟೇಲರ ಮೂರ್ತಿ ಮಾಡಿದ್ದು ಬಿಟ್ಟರೆ ಅವರ ನೀತಿಯನ್ನು ಅನುಸರಿಸುತ್ತಾರೆಯೇ ಎಂದು ಪ್ರಶ್ನಿಸಿದರು. 

ಪ್ರಿಯಾಂಕ ಖರ್ಗೆಯವರನ್ನು ಹೆದರಿಸುವಂತಹ ಕೆಲಸ ಆಗುತ್ತಿದ್ದು  ಅದನ್ನು ಉಗ್ರವಾಗಿ ಖಂಡಿಸುತ್ತೇವೆ, ಆರೆಸ್ಸೆಸ್ ಚಟುವಟಿಕೆ ನಿಷೇಧ ವಿಚಾರದಲ್ಲಿ ಮುಖ್ಯಮಂತ್ರಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ‌ಬಿಜೆಪಿಯ ರವಿಕುಮಾರ್ ಹಿಂದುಳಿದ ಸಮಾಜದವರು. ಅವರಿಗೆ ತಿಳುವಳಿಕೆ ಕೊರತೆ ಇದೆ, ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಲಿ, ಬಿಜೆಪಿ ಮಾಡೋದೆಲ್ಲ ಓಟಿಗಾಗಿ. ಮೋದಿಯವರು ಬಿಹಾರದಲ್ಲಿ ಮತ ಗಳಿಕೆಗಾಗಿ ಹತ್ತು ಸಾವಿರ ಕೊಡೋದಾಗಿ ಹೇಳಿದ್ದಾರೆ. ಚುನಾವಣೆ ಗೆಲ್ಲುವುದಷ್ಟೆ ಅವರಿಗೆ ಉದ್ದೇಶ. ಅವರಿಗೆ ಧರ್ಮ, ದೇವರು ದೇಶಪ್ರೇಮ ಕಿಂಚಿತ್ ಇಲ್ಲ ಎಂದು ಹೇಳಿದರು. ‌

Former Minister Ramanath Rai has backed Minister Priyank Kharge’s call to restrict RSS activities in public spaces and government schools, saying it is essential to preserve social harmony and cultural values. Speaking at a press conference in Mangaluru, Rai said conducting RSS shakhas in schools spreads divisive ideology among children, which later fuels communal hatred and violence.