Honey Bees Attack in Puttur: ಪುತ್ತೂರು ; ಹೆಜ್ಜೇನು ದಾಳಿಗೀಡಾಗಿ 2ನೇ ಕ್ಲಾಸ್ ಕಲಿಯುತ್ತಿದ್ದ ಮಗು ಸಾವು 

12-10-25 09:53 pm       Mangalore Correspondent   ಕರಾವಳಿ

ಹೆಜ್ಜೇನು ದಾಳಿಗೀಡಾಗಿ ಎರಡನೇ ಕ್ಲಾಸ್ ಕಲಿಯುತ್ತಿದ್ದ ಮಗುವೊಂದು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ವಿಟ್ಲ ಪಡ್ನೂರಿನ ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ಜಿಶಾ (7) ಮೃತ ಬಾಲಕಿ. 

ಪುತ್ತೂರು, ಅ.12: ಹೆಜ್ಜೇನು ದಾಳಿಗೀಡಾಗಿ ಎರಡನೇ ಕ್ಲಾಸ್ ಕಲಿಯುತ್ತಿದ್ದ ಮಗುವೊಂದು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ವಿಟ್ಲ ಪಡ್ನೂರಿನ ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ಜಿಶಾ (7) ಮೃತ ಬಾಲಕಿ. 

ಜಿಶಾ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಎರಡನೇ ಕ್ಲಾಸ್ ಕಲಿಯುತ್ತಿದ್ದು 5ನೇ ಕ್ಲಾಸ್ ಕಲಿಯುತ್ತಿದ್ದ ಕಿರಣ್ ಅವರ ಸೋದರನ ಪುತ್ರ ಪ್ರತ್ಯುಷ್ (10) ಜೊತೆಗೆ ಅ.10ರಂದು ಸಂಜೆ ಶಾಲೆಯಿಂದ ಮರಳುತ್ತಿದ್ದಾಗ ಮನೆ ಬಳಿಯಲ್ಲಿ ಹೆಜ್ಜೇನು ದಾಳಿ ನಡೆಸಿದೆ. ಮಕ್ಕಳು ಬೊಬ್ಬೆ ಹಾಕಿದ್ದನ್ನು ಕೇಳಿ ಸ್ಥಳೀಯ ನಿವಾಸಿ ನಾರಾಯಣ ಎಂಬವರು ಮಕ್ಕಳ ರಕ್ಷಣೆಗೆ ಬಂದಿದ್ದು ಅವರಿಗೂ ನೊಣಗಳು ದಾಳಿ ನಡೆಸಿವೆ. 

ಕೂಡಲೇ ಮಕ್ಕಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದು ಜಿಶಾಳನ್ನು ಸೀರಿಯಸ್ ಇದ್ದ ಕಾರಣ ಮಂಗಳೂರಿನ ಆಸ್ಪತ್ರೆಗೆ ತರಲಾಗಿತ್ತು. ಆದರೆ ಅ.11ರಂದು ಸಂಜೆ ಜಿಶಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಜಿಶಾ ಹೆತ್ತವರಿಗೆ ಒಬ್ಬಳೇ ಪುತ್ರಿಯಾಗಿದ್ದು ಮಗುವಿನ ಅಗಲಿಕೆಯಿಂದ ಕುಟುಂಬಸ್ಥರು ತೀವ್ರ ಕಂಗಾಲಾಗಿದ್ದಾರೆ. ಪ್ರತ್ಯುಷ್ ಕೂಡ ಗಂಭೀರ ಗಾಯಕ್ಕೀಡಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ನಾರಾಯಣ ಅವರಿಗೂ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

In a tragic incident, a second-grade student died after being attacked by a swarm of honey bees near her home in Puttur.