ಬ್ರೇಕಿಂಗ್ ನ್ಯೂಸ್
08-10-25 06:07 pm Mangalore Correspondent ಕರಾವಳಿ
ಮಂಗಳೂರು, ಅ.8 : ರಾಜ್ಯದ ಜನರ ಸ್ಥಿತಿಗತಿ ಹೇಗಿದೆ ಎಂದು ತಿಳಿಯಲು ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರ ಇದೆ. 1951ರಲ್ಲಿ ಮಾಡಿದ ಸಂವಿಧಾನ ತಿದ್ದುಪಡಿಯಲ್ಲಿ ರಾಜ್ಯ ಸರಕಾರಗಳಿಗೆ ಸಮೀಕ್ಷೆ ಮಾಡುವ ಅಧಿಕಾರ ಕೊಡಲಾಗಿದೆ. ಆದರೆ ಬಿಜೆಪಿ ನಾಯಕರು, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಜನರಿಗೆ ಸಮೀಕ್ಷೆಗೆ ಸಹಕರಿಸಬೇಡಿ ಎಂದು ಹೇಳಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜನರ ಬದುಕಿನ ಪ್ರಶ್ನೆ ಇದಾಗಿದ್ದು, ಎಲ್ಲ ಸಮುದಾಯಗಳ ಜನರು ಸಮೀಕ್ಷೆಗೆ ಸಹಕಾರ ನೀಡಬೇಕು ಎಂದು ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನಾಯಕರ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕಾದ ಶಾಸಕರು ಸಮೀಕ್ಷೆಗೆ ಸಹಕಾರ ಕೊಡಬೇಡಿ ಎಂದು ಹೇಗೆ ಹೇಳುತ್ತಾರೆ. ನಿಮಗೆ ವಿವೇಚನೆ ಇದೆಯಾ, ಜನರ ಸ್ಥಿತಿಗತಿ ತಿಳಿಯಲು ಸರ್ಕಾರ ಸಮೀಕ್ಷೆ ನಡೆಸೋದು ಹೇಗೆ ತಪ್ಪಾಗುತ್ತದೆ. ಇಡೀ ರಾಜ್ಯದಲ್ಲಿ ಎಲ್ಲ ಸಮುದಾಯಗಳು ಒಂದಲ್ಲೊಂದು ವಿಷಯದಲ್ಲಿ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿವೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ಹಿಂದುಳಿದ ವರ್ಗದ ಸಮುದಾಯಗಳಿದ್ದು, ಅವರ ಸ್ಥಿತಿ ಹೇಗಿದೆ ಎಂದು ತಿಳಿದು ಕಾರ್ಯಕ್ರಮ ರೂಪಿಸುವುದಕ್ಕಾಗಿ ಈ ಸಮೀಕ್ಷೆ ಮಾಡಲಾಗುತ್ತಿದೆ ಎಂದರು.
ಪ್ರಹ್ಲಾದ ಜೋಷಿ ತಮ್ಮ ಬೇಜವಾಬ್ದಾರಿ ಹೇಳಿಕೆ ಹಿಂಪಡೆಯಬೇಕು. ರಾಜ್ಯದಲ್ಲಿರುವ ಎಲ್ಲ ಸಮುದಾಯಗಳೂ ಹಿಂದುಳಿದವರೇ ಆಗಿದ್ದು, 12 ಲಕ್ಷಕ್ಕಿಂತ ಹೆಚ್ಚು ಆದಾಯ ಇರೋರಿಗೆ ಮೀಸಲಾತಿ ಬರೋದಿಲ್ಲ. ಹಿಂದುಳಿದ ವರ್ಗಗಳ ಬಗ್ಗೆ ಯಾವ ರೀತಿ ಸಮೀಕ್ಷೆ ಮಾಡಬೇಕೆಂದು ಕಾನೂನು ಇದೆ. ಇದಲ್ಲದೆ, ಹತ್ತು ವರ್ಷಗಳಿಗೊಮ್ಮೆ ದೇಶದಲ್ಲಿ ಜನರ ಸ್ಥಿತಿಗತಿ ತಿಳಿಯಲು ಗಣತಿ ಮಾಡಬೇಕು. ಆದರೆ ಕಳೆದ 20 ವರ್ಷಗಳಲ್ಲಿ ಗಣತಿ ಆಗಿಲ್ಲ, ಈಗ ಕಾಂಗ್ರೆಸ್ ಹೇಳಿದ ಬಳಿಕ ಕೇಂದ್ರವೂ ಜಾತಿ ಗಣತಿ ಮಾಡುವುದಕ್ಕೆ ಮುಂದಾಗಿದೆ ಎಂದರು. ಸಮೀಕ್ಷೆ ಸಂದರ್ಭದಲ್ಲ ಸಣ್ಣ ಪುಟ್ಟ ತಪ್ಪು ಸಹಜ. ಲೋಪ ದೋಷ ಇದ್ದರೆ ಸರಿಪಡಿಸಿಕೊಳ್ಳಬೇಕು. ಆಯೋಗ ಅಥವಾ ಸರ್ಕಾರಗಳು ಸಂವಿಧಾನಕ್ಕಿಂತ ಮಿಗಿಲಲ್ಲ ಎಂದು ವಿ.ಆರ್ ಸುದರ್ಶನ್ ಹೇಳಿದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, ಗಣತಿ ವಿಚಾರದಲ್ಲಿ ಯಡಿಯೂರಪ್ಪ, ದೇವೇಗೌಡರು ಮಾತನಾಡಿಲ್ಲ. ಅವರಿಗೆ ಇದರ ಉದ್ದೇಶ ಅರ್ಥವಾದಂತಿದೆ, ಸ್ವಲ್ಪ ಮೆಚ್ಯೂರ್ಡ್ ಇರುವುದರಿಂದ ಮಾತನಾಡಿಲ್ಲ. ಜೋಷಿ, ಪ್ರತಾಪಸಿಂಹ, ತೇಜಸ್ವಿಯಂಥವರು ಮಾತಾಡಿದ್ದಾರೆ. ಸಮೀಕ್ಷೆ ಕಡ್ಡಾಯ ಅಲ್ಲ. ಮತದಾನದಲ್ಲಿ ನೋಟಾ ಇದ್ದ ರೀತಿ ಕೆಲವು ಪ್ರಶ್ನೆಗಳಿಗೆ ಉತ್ತರಿಸದಿರುವುದಕ್ಕೂ ಅವಕಾಶ ಇದೆ. ಬಿಲ್ಲವ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎನ್ನುವುದು ಆಯೋಗ ಸೃಷ್ಟಿಸಿದ್ದಲ್ಲ. ಜನರೇ ಈ ರೀತಿ ಬರೆಸಿಕೊಂಡಿದ್ದಾರೆ ಎಂದರು.
ಕೆಲವು ಜಿಲ್ಲೆಗಳಲ್ಲಿ ಗಣತಿ 98 ಪರ್ಸೆಂಟ್ ಆಗಿದ್ದರೆ, ಬೆಂಗಳೂರಿನಲ್ಲಿ 38 ಶೇ., ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ 68 ಶೇ. ಆಗಿದೆ. ಇಲ್ಲಿನವರು ವಿದೇಶದಲ್ಲಿ ಹೆಚ್ಚಿರುವುದರಿಂದ ಗಣತಿಗೆ ಹಿನ್ನಡೆ ಆಗಿರಲೂಬಹುದು. ಆದರೆ ಮುಂದಿನ ಹತ್ತು ದಿನದಲ್ಲಿ ಕಂಪ್ಲೀಟ್ ಮಾಡಬೇಕೆಂದು ಸಿಎಂ ಶಿಕ್ಷಕರಿಗೆ ರಜೆ ಕೊಟ್ಟಿದ್ದಾರೆ. ರಜೆ ಕೊಟ್ಟಿದ್ದರಿಂದ ಪಾಠ ಚಟುವಟಿಕೆಗೆ ತೊಂದರೆ ಆಗಲ್ಲ. ವರ್ಷದಲ್ಲಿ 240 ದಿವಸಗಳ ತರಗತಿ ಅವಧಿಗೆ ಅವಕಾಶ ಇದೆ. ಈ ಬಗ್ಗೆ ಶಿಕ್ಷಕರ ಸಂಘದವರ ಅನುಮತಿ ಪಡೆದೇ ರಜೆ ವಿಸ್ತರಣೆ ಮಾಡಲಾಗಿದೆ. ಇದರಿಂದ ಶಾಲಾ ತರಗತಿಗೆ ತೊಂದರೆ ಆಗೋದಿಲ್ಲ ಎಂದರು.
ಹಿಂದುಳಿದ ವರ್ಗದ ಸಮುದಾಯಗಳ ಬಗ್ಗೆ ಖಚಿತ ಮಾಹಿತಿಗಳನ್ನು ಆಧರಿಸಿ ಆಯೋಗದವರು ಶಿಫಾರಸು ಮಾಡಲಿದ್ದಾರೆ. ಅದನ್ನು ಮುಂದಿಟ್ಟು ಸಮುದಾಯಗಳಿಗೆ ಹೆಚ್ಚಿನ ಸವಲತ್ತು ನೀಡುವ ಬಗ್ಗೆ ಯೋಜನೆ ರೂಪಿಸುತ್ತೇವೆ. ಇದಕ್ಕಾಗಿ ಯಾರು ಕೂಡ ಗಣತಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಪ್ರಶ್ನೆಗಳಿಗೆ ಉತ್ತರಿಸಲು ಇಷ್ಟವಿಲ್ಲದಿದ್ದರೆ ನಿರಾಕರಿಸಲು ಅವಕಾಶ ಇರುತ್ತದೆ. ಆದರೆ ಗಣತಿಯೇ ಬೇಡವೆಂದು ನಿರಾಕರಿಸುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ವಿನಯಕುಮಾರ್ ಸೊರಕೆ, ಬೇಳೂರು ಗೋಪಾಲಕೃಷ್ಣ, ಎಸ್.ರವಿ, ಭೀಮಣ್ಣ ನಾಯ್ಕ್, ಪ್ರದೀಪ್ ಈಶ್ವರ್, ಪಿವಿ ಮೋಹನ್, ಪದ್ಮರಾಜ್, ಹರೀಶ್ ಕುಮಾರ್, ವಿಶ್ವಾಸ್ ಕುಮಾರ್ ಮತ್ತಿತರರು ಇದ್ದರು.
Former Legislative Council Chairman V.R. Sudarshan and Education Minister Madhu Bangarappa defended Karnataka’s ongoing socio-economic survey, asserting that the state government is fully empowered under the 1951 Constitutional Amendment to conduct it.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 05:49 pm
HK News Desk
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
08-10-25 06:07 pm
Mangalore Correspondent
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
08-10-25 12:23 pm
Mangalore Correspondent
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm