ಬ್ರೇಕಿಂಗ್ ನ್ಯೂಸ್
07-10-25 03:33 pm Mangalore Correspondent ಕರಾವಳಿ
ಉಳ್ಳಾಲ, ಅ.7 : ಉಳ್ಳಾಲ ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಗಳಿಗೆ ಕೊಳೆತ ಮೀನುಗಳನ್ನ ಸಾಗಿಸುವ ಕಂಟೇನರ್ ಲಾರಿಗಳು ದುರ್ವಾಸನೆ ಬೀರುವ ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನ ರಸ್ತೆಯುದ್ಧಕ್ಕೂ ಹರಿಯ ಬಿಡುತ್ತಿದ್ದು, ಓವರ್ ಲೋಡ್ ಸರಕುಗಳಿಂದಾಗಿ ನಡು ರಸ್ತೆಯಲ್ಲೇ ಕೆಟ್ಟು ನಿಂತು ಉಳ್ಳಾಲದಲ್ಲಿ ತೀವ್ರ ವಾಸನೆಯಿಂದ ಗಬ್ಬೆದ್ದ ಸ್ಥಿತಿಯಾಗಿದೆ. ಒಂದೆಡೆ ದುರ್ವಾಸನೆ, ಇನ್ನೊಂದೆಡೆ ಈ ಲಾರಿಗಳಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಬರುವ ದುರ್ವಾಸನೆ ಕೋಟೆಪುರದಿಂದ ನೇತ್ರಾವತಿ ನದಿಯ ಆಚೆಗಿರುವ ಮಂಗಳಾದೇವಿ ಪರಿಸರಕ್ಕೂ ವ್ಯಾಪಿಸಿದೆ.
ಫಿಶ್ ಮೀಲ್ ಫ್ಯಾಕ್ಟರಿಗಳಿಗೆ ಕೊಳೆತ ಮೀನುಗಳನ್ನ ಸಾಗಿಸುವ ಲಾರಿಗಳಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ದಿನದಿಂದ ದಿನಕ್ಕೆ ಜನಸಾಮಾನ್ಯರಿಗೆ ತೀವ್ರ ಪರಿಣಾಮ ಬೀರತೊಡಗಿದೆ. ಕಳೆದ ಮೂರು ದಿನಗಳಿಂದ ಫಿಶ್ ಮೀಲ್ ಫ್ಯಾಕ್ಟರಿಗಳಿಗೆ ಸಾಗುವ ಲಾರಿಗಳಿಂದಾಗಿ ಉಳ್ಳಾಲದಲ್ಲಿ ಸಂಚಾರ ವ್ಯತ್ಯಯ ಆಗುತ್ತಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಮೊನ್ನೆ ಶನಿವಾರ ರಾತ್ರಿ ದುರ್ವಾಸನೆಯುಕ್ತ ತ್ಯಾಜ್ಯವನ್ನ ರಸ್ತೆಗೆ ಹರಿಯಬಿಟ್ಟು ತೆರಳುತ್ತಿದ್ದ ಕಂಟೇನರ್ ಲಾರಿಯನ್ನ ಅಡ್ಡಗಟ್ಟಿ ನಿಲ್ಲಿಸಿ ಪರಿಸರ ನಿವಾಸಿಗಳು ಚಾಲಕನನ್ನ ತರಾಟೆಗೆ ತೆಗೆದಿದ್ದರು. ಈ ವೇಳೆ ಸುಮಾರು ಎರಡು ಗಂಟೆಗಳ ಕಾಲ ಉಳ್ಳಾಲದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಭಾನುವಾರ ಸಂಜೆ ಕೂಡ ಉಳ್ಳಾಲದ ರಸ್ತೆಯಲ್ಲಿ ಫ್ಯಾಕ್ಟರಿಗೆ ಸಾಗುತ್ತಿದ್ದ ಲಾರಿ ಕೆಟ್ಟು ನಿಂತು ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ರಾತ್ರಿ ವರೆಗೂ ಸಂಕಷ್ಟ ಅನುಭವಿಸುವಂತಾಯಿತು. ಸೋಮವಾರ ಮಧ್ಯಾಹ್ನ ಮತ್ತೆ ಉಳ್ಳಾಲದಲ್ಲಿ ಮೀನಿನ ತ್ಯಾಜ್ಯದ 407 ಲಾರಿ ಕೆಟ್ಟು ಹೋಗಿದ್ದು ಟ್ರಾಫಿಕ್ ಜಾಮ್ ಉಂಟಾಯಿತು.
ಫಿಶ್ ಮೀಲ್ ಫ್ಯಾಕ್ಟರಿಗಳ ಕಾರಣಕ್ಕೆ ದಿನದಲ್ಲಿ ಏನಿಲ್ಲಾಂದ್ರೂ ಇನ್ನೂರಕ್ಕೂ ಹೆಚ್ಚು ಲಾರಿಗಳು ಉಳ್ಳಾಲಕ್ಕೆ ಬರುತ್ತಿದ್ದು ಟ್ರಾಫಿಕ್ ಪೊಲೀಸರು ಇದರ ಪರಿಶೀಲನೆ ನಡೆಸುವ ಗೋಜಿಗೆ ಹೋಗುತ್ತಿಲ್ಲ.ಮಂಗಳೂರು ನಗರ ಪೊಲೀಸ್ ಆಯುಕ್ತರು ಇದರ ಬಗ್ಗೆ ಗಮನಹರಿಸುವಂತೆ ತೊಕ್ಕೊಟ್ಟಿನ ಟೆಂಪೋ ಚಾಲಕ ರಹಿಮತ್ತುಲ್ಲ ಆಗ್ರಹಿಸಿದ್ದಾರೆ.
ನಿಯಮಗಳನ್ನ ಗಾಳಿಗೆ ತೂರಿ ಕಾರ್ಯಾಚರಿಸುತ್ತಿರುವ ಫಿಶ್ ಮೀಲ್ ಫ್ಯಾಕ್ಟರಿಗಳು ಉಳ್ಳಾಲ ನಗರವನ್ನ ಗಬ್ಬು ನಾರುವಂತೆ ಮಾಡಿದೆ. ಇದಕ್ಕೆ ಕಡಿವಾಣ ಹಾಕಲು ಸಂಘಟಿತ ಕಾನೂನು ಹೋರಾಟಕ್ಕೆ ಇಳಿಯಲಿದ್ದೇವೆಂದು ಬಿಜೆಪಿ ಮಂಗಳೂರು ಮಂಡಲದ ಮಾಜಿ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದ್ದಾರೆ. ಜನನಿಬೀಡ ಪ್ರದೇಶದ ಕೆಲ ಫ್ಯಾಕ್ಟರಿಗಳಲ್ಲಿ ಕಲ್ಲಿದ್ದಲು ಬಳಸಲಾಗುತ್ತಿದ್ದು ಇದರಿಂದ ಉತ್ಪತ್ತಿಯಾಗುವ ಹಾರೋ ಬೂದಿಯಿಂದ ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸಮುದ್ರಕ್ಕೆ ಸೇರುವ ರಾಸಾಯನಿಕ ತ್ಯಾಜ್ಯದಿಂದ ಜಲಚರಗಳು ನಶಿಸುತ್ತಿವೆ. ಫ್ಯಾಕ್ಟರಿಗಳಿಂದ ಹೊರಹೊಮ್ಮುವ ವಿಪರೀತ ದುರ್ವಾಸನೆಯು ಬೋಳಾರದ ಮಂಗಳಾದೇವಿ ಪುಣ್ಯ ಕ್ಷೇತ್ರಕ್ಕೂ ಹಬ್ಬಿದೆಯೆಂದು ಚಂದ್ರಹಾಸ್ ಆರೋಪಿಸಿದ್ದಾರೆ.
ನಿತ್ಯವೂ ಕೇರಳ ಮತ್ತು ಮಂಗಳೂರಿನ ಧಕ್ಕೆಯಿಂದ ಉಳ್ಳಾಲಕ್ಕೆ ಸಾಗುವ ನೂರಾರು ಲಾರಿಗಳು ಮೀನಿನ ದುರ್ವಾಸನೆಯುಕ್ತ ತ್ಯಾಜ್ಯವನ್ನ ರಸ್ತೆಗೆ ಹರಿಸುತ್ತಿವೆ. ಇದರಿಂದ ಇಡೀ ಉಳ್ಳಾಲ ನಗರವೇ ಗಬ್ಬು ನಾರುವಂತಾಗಿದೆ ಎಂದು ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಕೊರಗಜ್ಜ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ರಾಜೇಶ್ ಕಾಪಿಕಾಡು ದೂರಿದ್ದಾರೆ. ಮೀನಿನ ತ್ಯಾಜ್ಯದ ದುರ್ವಾಸನೆಯಿಂದಾಗಿ ಕೊರಗಜ್ಜ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಮೂಗು ಮುಚ್ಚಿ ದೈವದ ಬಳಿ ಪ್ರಾರ್ಥಿಸುವಂತಾಗಿದೆ. ಉಳ್ಳಾಲದಂತಹ ಜನನಿಬಿಡ ಪ್ರದೇಶವನ್ನ ಗಬ್ಬು ನಾರಿಸುವ ಫ್ಯಾಕ್ಟರಿಗಳಿಂದ ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.
Residents of Ullal are up in arms over the unbearable stench caused by fish meal trucks leaking foul, chemical-laced wastewater onto the roads. The containers, carrying rotten fish to factories in Kotekar and surrounding areas, have been causing severe environmental pollution and frequent traffic jams. Several overloaded trucks have broken down mid-road in recent days, worsening the situation.
07-10-25 05:23 pm
Bangalore Correspondent
ಮುಗಿಯದ ಜಾತಿ ಗಣತಿ ; ಅ.8ರಿಂದ ಶಾಲಾ ಅವಧಿ ಕಡಿತ, ಮಧ...
06-10-25 10:47 pm
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
07-10-25 01:53 pm
HK News Desk
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
07-10-25 05:17 pm
Mangalore Correspondent
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
Madhu Bangarappa: ರಾಜ್ಯದಲ್ಲಿ 18,500ಕ್ಕೂ ಅಧಿಕ...
06-10-25 10:42 pm
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
07-10-25 10:31 am
HK News Desk
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm