SIT, Sujata Bhat, Dharmasthala Case: ಕೇಸ್ ಹಿಂಪಡೆಯುತ್ತೇನೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ.. ಎಸ್ಐಟಿ ಪ್ರಶ್ನೆ ಕೇಳಿ ಗೋಗರೆದ ಸುಜಾತ ಭಟ್, ಉಲ್ಟಾ ಕೇಸು ಜಡಿವ ಸನ್ನಾಹದಲ್ಲಿ ಅಧಿಕಾರಿಗಳು 

28-08-25 11:27 am       Mangalore Correspondent   ಕರಾವಳಿ

ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿ ಸಂಚಲನ ಮೂಡಿಸಿದ್ದ ಸುಜಾತಾ ಭಟ್, ಎಸ್ಐಟಿ ಅಧಿಕಾರಿಗಳ ಪ್ರಶ್ನಾವಳಿ ಕೇಳುತ್ತಲೇ ತನ್ನ ದೂರನ್ನೇ ವಾಪಸ್ ಪಡೆಯುವ ಮಾತನ್ನಾಡಿದ್ದಾರೆ.

ಮಂಗಳೂರು, ಅ.28 : ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿ ಸಂಚಲನ ಮೂಡಿಸಿದ್ದ ಸುಜಾತಾ ಭಟ್, ಎಸ್ಐಟಿ ಅಧಿಕಾರಿಗಳ ಪ್ರಶ್ನಾವಳಿ ಕೇಳುತ್ತಲೇ ತನ್ನ ದೂರನ್ನೇ ವಾಪಸ್ ಪಡೆಯುವ ಮಾತನ್ನಾಡಿದ್ದಾರೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ, ನಾನು ದೂರು ಹಿಂಡೆಯುತ್ತೇನೆ ಎಂದು ಸುಜಾತ ಭಟ್, ಎಸ್ಐಟಿ ಅಧಿಕಾರಿಗಳ ಮುಂದೆ ಅಲವತ್ತುಕೊಂಡಿದ್ದಾರೆ. 

ಆ.22ರ ಬದಲು 26ರ ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿದ್ದ ಸುಜಾತಾ ಭಟ್ ಅವರನ್ನು ಎಸ್ಪಿ ಜಿತೇಂದ್ರ ದಯಾಮ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಹಲವಾರು ಮಾಹಿತಿಗಳನ್ನು ಕೇಳಿದ್ದು ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸುಜಾತಾ ಬಳಲಿದ್ದಾರೆ. ಸತತ ಎರಡನೇ ದಿನವೂ ವಿಚಾರಣೆ ನಡೆಸಿದ್ದು ದೂರಿಗೆ ಸಂಬಂಧಿಸಿ ಖಚಿತ ಮಾಹಿತಿಗಳನ್ನು ನೀಡಲು ಸುಜಾತಾ ಭಟ್ ವಿಫಲವಾಗಿದ್ದಾರೆ. 

ಇದರಿಂದಾಗಿ ಸುಜಾತಾ ತನ್ನ ದೂರನ್ನು ಹಿಂಪಡೆಯುತ್ತೇನೆ, ದಯವಿಟ್ಟು ಬಿಟ್ಟು ಬಿಡಿ ಎಂದು ಗೋಗರೆದಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಎಸ್ಐಟಿ ತಂಡ ಅವರನ್ನು ಹಾಗೆಯೇ ಬಿಟ್ಟು ಕಳುಹಿಸಲು ಒಪ್ಪಿಲ್ಲ‌. ತನ್ನ ಮಗಳು ಕಾಣೆಯಾಗಿದ್ದಾಳೆಂದು ಕಾಲ್ಪನಿಕ ಕತೆ ಸೃಷ್ಟಿಸಿ, ಸರ್ಕಾರಿ ವ್ಯವಸ್ಥೆಯನ್ನೇ ಯಾಮಾರಿಸಿದ ಆರೋಪ ಅವರ ಮೇಲಿದ್ದು ಪ್ರತ್ಯೇಕ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುವ ಸಾಧ್ಯತೆ ಇದೆ.  

ಉಡುಪಿ ಜಿಲ್ಲೆಯ ಪರ್ಕಳ ಮೂಲದವರಾದ ಸುಜಾತ ಭಟ್ ಕುಟುಂಬಕ್ಕೆ ಸೇರಿದ ಭೂಮಿಯನ್ನು ಧರ್ಮಸ್ಥಳಕ್ಕೆ ಬಿಟ್ಟು ಕೊಡಲಾಗಿತ್ತು. ಇದೇ ಸಿಟ್ಟಿನಿಂದ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿ ಈ ರೀತಿ ಹಗ ತೀರಿಸಲು ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಅವರ ಪೊಲೀಸ್ ದೂರು ಅವರಿಗೇ ಮುಳುವಾಗಿ ಪರಿಣಮಿಸಿದೆ.

Sujata Bhatt, who had stirred controversy by filing a complaint alleging that her daughter Ananya Bhatt had gone missing in Dharmasthala, has now reportedly expressed her desire to withdraw the case. During an intense interrogation session by the Special Investigation Team (SIT), Bhatt is said to have broken down, pleading with officials to release her, saying, “Please let me go, I want to withdraw the case.”