ಬ್ರೇಕಿಂಗ್ ನ್ಯೂಸ್
21-11-24 06:19 pm Udupi Correspondent ಕರಾವಳಿ
ಉಡುಪಿ, ನ.21: 2005ರಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆ ಜೋರಾಗಿತ್ತು. ಮಲೆಕುಡಿಯ ಜನಾಂಗದ ಯುವಕರು ತಮ್ಮನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆಯೆಂದು ನಕ್ಸಲರ ಪರ ವಹಿಸಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ನಕ್ಸಲ್ ವಾದಿಗಳು ಅಲ್ಲಿನ ಯುವಕರನ್ನು ಬ್ರೇನ್ ವಾಷ್ ಮಾಡಿ ತಮ್ಮ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರು. ಇಂಥ ಹೊತ್ತಿನಲ್ಲೇ 2005, ಫೆಬ್ರವರಿ 6ರಂದು ನಟೋರಿಯಸ್ ನಕ್ಸಲ್ ನಾಯಕನಾಗಿದ್ದ ಸಾಕೇತ್ ರಾಜನ್ ಪೊಲೀಸರ ಗುಂಡಿಗೆ ಬಲಿಯಾಗಿದ್ದ.
ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯ ಮೆಣಸಿನಹಾಡ್ಯದಲ್ಲಿ ಮನೆಯೊಂದಕ್ಕೆ ಬರುತ್ತಾನೆಂದು ಮಾಹಿತಿ ಪಡೆದ ಪೊಲೀಸರು ಸಾಕೇತ್ ರಾಜನ್ ಮೇಲೆ ಮುಗಿಬಿದ್ದು ಹತ್ಯೆ ಮಾಡಿದ್ದರು. ಗುಂಡಿನ ಚಕಮಕಿಯಲ್ಲಿ ಆತನ ಸಹಚರ ಶಿವಲಿಂಗು ಎಂಬಾತನೂ ಹತ್ಯೆಯಾಗಿದ್ದ. ದೆಹಲಿ ವಿವಿಯಲ್ಲಿ ಡಬಲ್ ಡಿಗ್ರಿ ಪಡೆದಿದ್ದ ಸಾಕೇತ್ ರಾಜನ್ ಮೈಸೂರಿನ ಅಯ್ಯಂಗಾರ್ ಮನೆತನಕ್ಕೆ ಸೇರಿದ್ದ ವ್ಯಕ್ತಿಯಾಗಿದ್ದರೂ, ನಕ್ಸಲ್ ವಾದಿಗಳ ಸಂಪರ್ಕಕ್ಕೆ ಬಂದ ಬಳಿಕ ಸಮಾಜದ ಮುಖ್ಯವಾಹಿನಿ ಬಿಟ್ಟು ಭೂಗತನಾಗಿದ್ದುಕೊಂಡೇ ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಳವಳಿ ರೂಪಿಸಿದ್ದವರಲ್ಲೊಬ್ಬ. ಕಬ್ಬಿನಾಲೆಯ ವಿಕ್ರಂ ಗೌಡನ ರೀತಿಯ ವ್ಯಕ್ತಿಗಳಿಗೆ ಸಾಕೇತನೇ ಗುರುವಾಗಿದ್ದ. 1980ರ ಕಾಲದಲ್ಲಿ ಬೆಂಗಳೂರಿನಲ್ಲಿ ಬುದ್ಧಿಜೀವಿಗಳ ಜೊತೆಗೆ ಕುಳಿತು ಹರಟುತ್ತಿದ್ದ ಸಾಕೇತ್ ರಾಜನ್ ಯಾರಿಗೂ ಬೇಡದ ರೀತಿ ಹೆಣವಾಗಿದ್ದು ನಕ್ಸಲರಲ್ಲಿ ಪೊಲೀಸರ ಬಗ್ಗೆ ಪ್ರತೀಕಾರದ ಭಾವನೆ ಮೂಡಿಸಿತ್ತು.
ಇದರ ಬೆನ್ನಲ್ಲೇ 2005ರ ಜೂನ್ 23ರಂದು ಕುಂದಾಪುರ ತಾಲೂಕಿನ ಹಳ್ಳಿಹೊಳೆ ಬಳಿಯ ದೇವರಬಾಳು ಎಂಬಲ್ಲಿ ಎನ್ಕೌಂಟರ್ ನಡೆದಿತ್ತು. ಅಲ್ಲಿನ ಎಸ್ಸಿ- ಎಸ್ಟಿ ಜನಾಂಗದ ಯುವಕರು ನಕ್ಸಲರ ಪರವಾಗಿದ್ದಾರೆಂದು ಪೊಲೀಸರು ಚುರುಕಾಗಿದ್ದರು. ನಕ್ಸಲರ ಜೊತೆಗೆ ಗುರುತಿಸಿಕೊಂಡಿದ್ದ ಕುಡುಬಿ ಜನಾಂಗದ ಉಮೇಶ್ ಮತ್ತು ಅಜಿತ್ ಎಂಬ 23-24ರ ಹರೆಯದ ಯುವಕರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಸಾಕೇತ್ ರಾಜನ್ ಎನ್ಕೌಂಟರ್ ಬೆನ್ನಿಗೇ ಪೊಲೀಸರು ದೇವರಬಾಳುವಿನಲ್ಲಿ ಏನೂ ಅರಿಯದ ಮುಗ್ಧರನ್ನು ಬಲಿ ಪಡೆದಿದ್ದಾರೆಂದು ನಕ್ಸಲರು ಪ್ರತೀಕಾರಕ್ಕೆ ಸಿದ್ಧತೆ ನಡೆಸಿದ್ದರು. ಛತ್ತೀಸ್ಗಢ ಮಾದರಿಯಲ್ಲಿ ಪೊಲೀಸರ ವಿರುದ್ಧ ದೊಡ್ಡ ಮಟ್ಟದ ಗ್ರೆನೇಡ್ ದಾಳಿಗೆ ಸ್ಕೆಚ್ ಹಾಕಲಾಗಿತ್ತು.
2005ರ ಜುಲೈ 28ರಂದು ಬೆಳಗ್ಗೆ ಮುನಿಯಾಲಿನಿಂದ ಕಬ್ಬಿನಾಲೆಗೆ ಸಾಗುವ ಮುಟ್ಲುಪಾಡಿ ರಸ್ತೆಯ ಮತ್ತಾವು ಎಂಬಲ್ಲಿ ಪೊಲೀಸರು ತೆರಳುತ್ತಿದ್ದ ಜೀಪಿಗೆ ಗ್ರೆನೇಡ್ ದಾಳಿ ನಡೆದಿತ್ತು. ಗುಡ್ಡದ ಮೇಲೆ ಕುಳಿತಿದ್ದ ನಕ್ಸಲರು ಪೊಲೀಸ್ ಜೀಪಿನತ್ತ ದಾಳಿ ನಡೆಸಿದ್ದರೆ, ರಸ್ತೆ ಬದಿಯಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬು ಒಮ್ಮಿಂದೊಮ್ಮೆಲೆ ಸ್ಫೋಟಗೊಂಡಿತ್ತು. ಜೀಪು ನಿಂತಿದ್ದ ಜಾಗದ ರಸ್ತೆ ಬದಿಯಲ್ಲಿ ಬಾಂಬು ಸ್ಫೋಟಗೊಂಡಿದ್ದು ಅದರಲ್ಲಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಹತ್ತು ಮಂದಿ ಪೊಲೀಸರಿಗೆ ಗಾಯಗಳಾಗಿದ್ದವು. ದಾಳಿಯಲ್ಲಿ ಪೊಲೀಸರ ಎರಡು ಜೀಪು ಸಂಪೂರ್ಣ ಜಖಂಗೊಂಡಿತ್ತು. ಹಿಂಭಾಗದಲ್ಲಿ ಸಾಗಿಬರುತ್ತಿದ್ದ ಮೆಟಡೋರ್ ವ್ಯಾನಿನಲ್ಲಿದ್ದ ಪೊಲೀಸರು ಕೂಡಲೇ ಪ್ರತಿದಾಳಿ ನಡೆಸಿದ್ದರು. ಇದರಿಂದಾಗಿ ಜೀಪಿನಲ್ಲಿದ್ದ ಪೊಲೀಸರು ಅಪಾಯದಿಂದ ಬಚಾವಾಗಿದ್ದರು. ಘಟನೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್, ಪ್ರೊಬೇಶನರಿ ಎಸ್ಐ ಮಂಜೇಗೌಡ, ಹೆಬ್ರಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಿದ್ದಲಿಂಗಯ್ಯ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಸಂಕಪ್ಪಯ್ಯ, ಕಾನ್ ಸ್ಟೇಬಲ್ ಕೃಷ್ಣಪ್ರಸಾದ್, ಜೀಪು ಚಾಲಕ ನಾರಾಯಣ, ರಾಜ್ಯ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್ ಟೇಬಲ್ ಗೋಪಣ್ಣ ಗಾಯಗೊಂಡಿದ್ದರು.
ಕಬ್ಬಿನಾಲೆ, ನಾಡ್ಪಾಲು ಪ್ರದೇಶದಲ್ಲಿ ಜನರಿಗೆ ಕರಪತ್ರ ಹಂಚುತ್ತಿದ್ದು, 20 ಮಂದಿ ನಕ್ಸಲರು ಇದ್ದಾರೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಅಲ್ಲಿ ತೆರಳುತ್ತಿದ್ದಾಗಲೇ ದಾಳಿಯಾಗಿತ್ತು. ಈ ದಾಳಿಯನ್ನು ವಿಕ್ರಂ ಗೌಡ ಮತ್ತು ಆತನ ತಂಡವೇ ಮಾಡಿತ್ತು ಎನ್ನಲಾಗಿತ್ತು. ಪ್ರತಿದಾಳಿ ಆಗುತ್ತಿದ್ದಂತೆ ನಕ್ಸಲರು ಕಾಡಿನಲ್ಲಿ ಪರಾರಿಯಾಗಿದ್ದರು. ಸ್ಥಳದಲ್ಲಿ ಟಿಫಿನ್ ಬಾಕ್ಸ್ ನಲ್ಲಿ ಇಡಲಾಗಿದ್ದ ಸ್ಫೋಟಗೊಳ್ಳದೇ ಇದ್ದ ಬಾಂಬ್ ಪತ್ತೆಯಾಗಿತ್ತು. ಐದು ಕಡೆ ನೆಲಬಾಂಬು ಸಿಡಿದಿತ್ತು. ಗುಡ್ಡದಲ್ಲಿ 50 ಮೀಟರ್ ದೂರಕ್ಕೆ ವಯರ್ ಬಳಸಿ ಬಾಂಬ್ ಸ್ಫೋಟಿಸುವುದಕ್ಕೆ ತಯಾರಿ ನಡೆಸಿದ್ದರು ಎಂದು ಅಂದಿನ ಉಡುಪಿ ಎಸ್ಪಿ ಮುರುಗನ್ ಮಾಧ್ಯಮಕ್ಕೆ ತಿಳಿಸಿದ್ದರು.
ನಕ್ಸಲರು ಹೂತಿಟ್ಟಿದ್ದ ಬಾಂಬ್ ರಸ್ತೆ ಬದಿಯಿಂದ ಸ್ಫೋಟಗೊಂಡಿದ್ದರಿಂದ ಪೊಲೀಸರ ಕಡೆಯಲ್ಲಿ ಪ್ರಾಣಾಪಾಯ ಆಗಿರಲಿಲ್ಲ. ಗ್ರೆನೇಡ್ ದಾಳಿಯೂ ಗುರಿ ತಪ್ಪಿದ್ದರಿಂದ ಹಿಂಬದಿ ವ್ಯಾನಲ್ಲಿದ್ದ ಪೊಲೀಸರು ಪ್ರತಿದಾಳಿ ನಡೆಸಿದ್ದರು. ಕರ್ನಾಟಕದಲ್ಲಿ ಪೊಲೀಸರಿಗೆ ಎದುರಾಗಿ ನಕ್ಸಲರು ನಡೆಸಿದ್ದ ಅತಿ ದೊಡ್ಡ ದಾಳಿ ಇದಾಗಿತ್ತು. ಆನಂತರ, ವಿಕ್ರಂ ಗೌಡ ಹತ್ಯೆಗೆ ಪೊಲೀಸರು ನಾಲ್ಕೈದು ಬಾರಿ ಯತ್ನ ಮಾಡಿದ್ದರೂ, ಸಾಧ್ಯವಾಗಿರಲಿಲ್ಲ. 2008ರಲ್ಲಿ ಸೀತಾನದಿಯ ಶಿಕ್ಷಕ ಭೋಜ ಶೆಟ್ಟಿ, ಅವರ ಜೊತೆಗಿದ್ದ ಸುರೇಶ್ ಶೆಟ್ಟಿ, 2011ರಲ್ಲಿ ಸದಾಶಿವ ಯಾನೆ ಸಾಧು ಗೌಡ ಎಂಬವರನ್ನು ಪೊಲೀಸರ ಮಾಹಿತಿದಾರರು ಎಂಬ ಕಾರಣಕ್ಕೆ ನಕ್ಸಲರು ಹತ್ಯೆ ಮಾಡಿದ್ದರು. ಈ ಕೃತ್ಯದಲ್ಲಿ ವಿಕ್ರಂ ಗೌಡನದ್ದೇ ಪಾತ್ರ ಇದೆಯೆಂದು ಹೇಳಲಾಗಿತ್ತು. ಆನಂತರ 2005ರಲ್ಲಿ ಎಎನ್ಎಫ್ ಸ್ಥಾಪನೆಗೊಂಡು ಕಾರ್ಕಳದಲ್ಲಿಯೇ ಠಿಕಾಣಿ ಹೂಡಿದ್ದರಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ನಕ್ಸಲ್ ಚಳವಳಿ ಬಹುತೇಕ ಇಲ್ಲವಾಗಿತ್ತು.
ಈ ಬಾರಿಯೂ ಪ್ರತೀಕಾರ ಆಗಬಹುದೇ ?
ಸಾಕೇತ್ ರಾಜನ್ ಹತ್ಯೆಗೆ ನಕ್ಸಲರು ಪ್ರತೀಕಾರ ತೀರಿಸಿದ ರೀತಿಯಲ್ಲೇ ವಿಕ್ರಂ ಗೌಡ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿಬರಬಹುದು. ಆದರೆ, 20 ವರ್ಷಗಳ ಹಿಂದೆ ಸೇನೆ ಮಾದರಿಯಲ್ಲಿ ಪರಿಣತಿ ಪಡೆದ ಎಎನ್ಎಫ್ ಪಡೆ ಇರಲಿಲ್ಲ. ಸ್ಥಳೀಯ ಪೊಲೀಸರೇ ನಕ್ಸಲ್ ವಿರುದ್ಧ ಕಾರ್ಯಾಚರಣೆ ನಡೆಸಬೇಕಿತ್ತು. ಈಗ ಬಿಎಸ್ಎಫ್ ಮಾದರಿಯಲ್ಲಿ ಯಾವುದೇ ದಾಳಿಯನ್ನೂ ಹಿಮ್ಮೆಟ್ಟಿಸಬಲ್ಲಷ್ಟು ಚಾಕಚಕ್ಯತೆ ಇರುವ ಎಎನ್ಎಫ್ ಪಡೆಯಿದೆ. ನಕ್ಸಲರನ್ನು ಸಂಪೂರ್ಣ ಮಟ್ಟಹಾಕಬೇಕೆಂದೇ ಕೇಂದ್ರ ಗೃಹ ಸಚಿವಾಲಯದಿಂದ ಸೂಚನೆ ಇರುವುದರಿಂದ ಎನ್ಕೌಂಟರ್ ನಡೆಸುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಸ್ಥಿತಿಯಿಲ್ಲ. ಇದಲ್ಲದೆ, ಹಿಂದಿನ ರೀತಿ ನಕ್ಸಲರಿಗೆ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಜನ ಬೆಂಬಲ ಸಿಗುತ್ತಿಲ್ಲ. ಈ ಭಾಗದಲ್ಲಿ ಜನರು ಕೂಡ ಬದಲಾಗಿದ್ದಾರೆ. ಅಲ್ಲಿದ್ದ ಯುವಕರು ಊರು ಬಿಟ್ಟು ಬೇರೆ ಕಡೆಗಳಲ್ಲಿ ನೆಲೆಸಿದ್ದಾರೆ. ನಕ್ಸಲರಲ್ಲಿಯೂ ಆರೇಳು ಮಂದಿಯಷ್ಟೇ ಉಳಿದಿದ್ದಾರೆ ಎನ್ನಲಾಗುತ್ತಿದ್ದು, ಅವರಲ್ಲಿ ಹೆಚ್ಚೇನೂ ಮದ್ದುಗುಂಡು ಉಳಿದಿಲ್ಲ. ಹಾಗಿದ್ದರೂ, ಮೊನ್ನೆಯ ಎನ್ಕೌಂಟರ್ ಬಳಿಕ ಪೊಲೀಸರು ಘಟ್ಟದ ಭಾಗದಲ್ಲಿ ಎಲರ್ಟ್ ಆಗಿದ್ದಾರೆ.
How Police planned the encounter of Saket Rajan. Who was Saketh Rajan? Saketh, who was born to a Tamil Brahmin family in Mysore. Wanted Naxal leader Vikram Gowda took the revenge on police department for killing Saketh by bomb blast using Grandes.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 05:10 pm
Mangalore Correspondent
Suhas Shetty Murder, VHP, Bajpe Police: ಸುಹಾಸ...
05-05-25 03:24 pm
Paakashala Resturant, Mangalore: ಮಂಗಳೂರಿನಲ್ಲು...
05-05-25 11:22 am
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
Mangalore, Hate speech, BJP MLA Harish Poonja...
04-05-25 08:49 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm