ಬ್ರೇಕಿಂಗ್ ನ್ಯೂಸ್
18-11-24 11:01 pm Giridhar Shetty, Mangalore Correspondent ಕರಾವಳಿ
ಮಂಗಳೂರು, ನ.18: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಆರ್ಥಿಕ ಹೊರೆ ಸರಿದೂಗಿಸಲು ಹಲವು ಸ್ನಾತಕೋತ್ತರ ಅಧ್ಯಯನ ವಿಭಾಗಗಳನ್ನು ಮುಚ್ಚಲಾಗಿದೆ. ಮಾಹಿತಿ ಪ್ರಕಾರ, 10ಕ್ಕೂ ಹೆಚ್ಚು ಅಧ್ಯಯನ ವಿಭಾಗಕ್ಕೆ ಈ ಬಾರಿ ಪ್ರಥಮ ವರ್ಷಕ್ಕೆ ಅಡ್ಮಿಶನ್ ಮಾಡಿಕೊಂಡಿಲ್ಲ. ಇದರಿಂದಾಗಿ ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿದ್ದ ಬೋಧಕ ವರ್ಗಕ್ಕೆ ಪೆಟ್ಟು ಬಿದ್ದಿದೆ. ಖಾಲಿ ಬಿದ್ದ ಬೋಧಕ ವರ್ಗಕ್ಕೆ ವೇತನ ನೀಡಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳುತ್ತಿದ್ದು, ಅಲ್ಲಿರುವ ಬೋಧಕ, ಬೋಧಕೇತರ ಸಿಬಂದಿ ಡೆಪ್ಯುಟೇಶನ್ ಮೇಲೆ ಬದಲಿ ಉದ್ಯೋಗ ಪಡೆಯಲು ಲಾಬಿ ಆರಂಭಿಸಿದ್ದಾರೆ.
ಪ್ರತಿ ವಿಭಾಗದಲ್ಲಿ ಕನಿಷ್ಠ 15 ವಿದ್ಯಾರ್ಥಿಗಳು ಇರಲೇಬೇಕೆಂದು ಎರಡು ತಿಂಗಳ ಹಿಂದೆ ಮಂಗಳೂರು ವಿವಿಯ ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರವಾಗಿತ್ತು. ವಿದ್ಯಾರ್ಥಿಗಳು ಕಡಿಮೆಯಿದ್ದ ವಿಭಾಗವನ್ನು ತಾತ್ಕಾಲಿಕವಾಗಿ ಮುಚ್ಚುವುದಕ್ಕೂ ನಿರ್ಧಾರ ಕೈಗೊಳ್ಳಲಾಗಿತ್ತು. ಆನಂತರ, 15 ವಿದ್ಯಾರ್ಥಿಗಳ ಕನಿಷ್ಠ ಮಾನದಂಡ ದುಬಾರಿಯಾಗುವ ಲಕ್ಷಣ ತೋರಿದಾಗ, ಅದನ್ನು ಹತ್ತಕ್ಕೆ ಇಳಿಸಲಾಗಿತ್ತು. ಆದರೂ ಪರಿಸರ ವಿಜ್ಞಾನ, ಸ್ಟಾಟಿಸ್ಟಿಕ್ಸ್, ಇಲೆಕ್ಟ್ರಾನಿಕ್ಸ್, ಎಂ.ಇಡಿ, ಎಂಎಸ್ ಡಬ್ಲ್ಯು, ಜಿಯೋ ಇನ್ಫಾರ್ಮೆಟಿಕ್ಸ್, ಮೆಟೀರಿಯಲ್ ಸೈನ್ಸ್, ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗ, ಕೊಂಕಣಿ ಎಂಎ ಸಹಿತ 10ಕ್ಕೂ ಹೆಚ್ಚು ಅಧ್ಯಯನ ವಿಭಾಗವನ್ನು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿದೆ. ಇದರಿಂದಾಗಿ ಇಲ್ಲಿ ಬೋಧನೆ ಮಾಡುತ್ತಿದ್ದ ಪರ್ಮನೆಂಟ್ ಉದ್ಯೋಗಿಗಳಿಗೂ ಸಂಕಷ್ಟ ಎದುರಾಗಿದೆ.
ಆಂತರಿಕ ಸಂಘರ್ಷಕ್ಕೆ ಗುಣಮಟ್ಟ ಕುಸಿತ
ರಾಜ್ಯದ ಬೇರೆ ಕಡೆಯ ವಿವಿಗಳಲ್ಲಿ ವಿವಿಧ ಕೋರ್ಸ್ ಗಳನ್ನು ಆರಂಭಿಸಲು ಬೇಡಿಕೆ ಇದ್ದರೂ, ಬೋಧನಾ ವರ್ಗದ ಅಸಮರ್ಪಕ ಕಾರ್ಯ ನಿರ್ವಹಣೆಯಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. ವಿಭಾಗದೊಳಗಿನ ಅಧ್ಯಾಪಕರ ಆಂತರಿಕ ಸಂಘರ್ಷ, ಬೋಧನಾ ಗುಣಮಟ್ಟ ಇಳಿಕೆ, ಗುಣಮಟ್ಟ ರಹಿತ ಪಿಎಚ್ ಡಿ ಅಧ್ಯಯನಗಳು, ಬೋಧನೆ ಬಿಟ್ಟು ಬೇರೆ ಕೆಲಸಗಳ ಉಸ್ತುವಾರಿ ಇತ್ಯಾದಿ ಕಾರಣದಿಂದಾಗಿ ಮಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಿರುವುದನ್ನು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಂಡುಕೊಂಡಿದ್ದು, ಬೋಧನಾ ವರ್ಗದ ವೈಫಲ್ಯವೇ ಇದಕ್ಕೆಲ್ಲ ಕಾರಣ ಎಂಬ ವರದಿ ಪಡೆದಿದೆ ಎನ್ನುವ ಮಾಹಿತಿ ಲಭಿಸಿದೆ. ಈ ವರದಿ ಆಧರಿಸಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗದೇ ಇದ್ದರೆ ಸ್ವಯಂ ನಿವೃತ್ತಿ ಪಡೆಯುವಂತೆ ಬೋಧಕ ಸಿಬಂದಿಗೆ ಖಡಕ್ ಸೂಚನೆ ನೀಡಲಾಗಿದೆ.
ಬೇರೆ ವಿವಿಗಳಲ್ಲಿ ಉನ್ನತ ಹುದ್ದೆಗಳತ್ತ ಲಾಬಿ
ಇದರ ಬೆನ್ನಲ್ಲೇ ಅಧ್ಯಯನ ವಿಭಾಗ ಮುಚ್ಚಿದ್ದರಿಂದ ಕೆಲಸ ಕಳಕೊಳ್ಳುವ ಭೀತಿ ಎದುರಿಸುತ್ತಿರುವ ಬೋಧಕ ವರ್ಗದ ಸಿಬಂದಿ ಬೇರೆ ವಿವಿಗಳಿಗೆ, ರಾಜ್ಯದ ಇತರೇ ಪ್ರಥಮ ದರ್ಜೆ ಕಾಲೇಜುಗಳಿಗೆ ಡೆಪ್ಯುಟೇಶನ್ ಮೇಲೆ ತೆರಳುವುದಕ್ಕೆ ಲಾಬಿ ನಡೆಸಿದ್ದಾರೆ. ಇದಲ್ಲದೆ, ಸಿಂಡಿಕೇಟ್ ಮಂಡಳಿಯ ಶಿಫಾರಸು ಪಡೆದು ಬೇರೆ ಇಲಾಖೆಗಳಿಗೆ ತೆರಳುವುದಕ್ಕೂ ಯೋಚನೆ ಮಾಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ವರ್ಗಾವಣೆ ಪಡೆಯುವುದಕ್ಕೂ ಸಾಧ್ಯವಿದೆ. ಮಂಗಳೂರು ವಿವಿಯ 5-6 ಪ್ರಾಧ್ಯಾಪಕ ಹುದ್ದೆಯಲ್ಲಿದ್ದವರು ರಾಜ್ಯದ ಬೇರೆ ವಿವಿಗಳಲ್ಲಿ ಪರೀಕ್ಷಾಂಗ ಕುಲಸಚಿವ, ಹಣಕಾಸು ಅಧಿಕಾರಿ ಹುದ್ದೆಗಳತ್ತ ಲಾಬಿ ನಡೆಸುತ್ತಿದ್ದಾರೆ. ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿದ್ದವರು ಗಣಿ ಇಲಾಖೆ, ಕಂದಾಯ, ನೀರಾವರಿ ಇಲಾಖೆಯ ಪ್ರಮುಖ ಆಡಳಿತಾತ್ಮಕ ಹುದ್ದೆಗಳತ್ತ ಕಣ್ಣಿಟ್ಟಿದ್ದು, ಉನ್ನತ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.
ಸ್ವಯಂ ನಿವೃತ್ತಿ ಪಡೆಯಲು ಸೂಚನೆ
ರಾಜ್ಯದ ಬಹುತೇಕ ವಿವಿಗಳಲ್ಲಿ 50 ಶೇಕಡಾದಷ್ಟು ಖಾಯಂ ಹುದ್ದೆಗಳ ಕೊರತೆಯಿದ್ದು, ಶೈಕ್ಷಣಿಕ ವ್ಯವಸ್ಥೆಯನ್ನು ಸಂಭಾಳಿಸಲು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದೆ. ಪ್ರಸ್ತುತ ಕೆಲವು ಕೋರ್ಸುಗಳನ್ನು ಮುಚ್ಚಿರುವುದರಿಂದ ಅಲ್ಲಿದ್ದ ಅತಿಥಿ ಉಪನ್ಯಾಸಕರ ಕೆಲಸಕ್ಕೂ ಕತ್ತರಿ ಬಿದ್ದಿದೆ. ಹಾಲಿ ಎರಡನೇ ವರ್ಷದ ಸ್ನಾತಕೋತ್ತರ ಅಧ್ಯಯನಕ್ಕೆ ವಿದ್ಯಾರ್ಥಿಗಳಿರುವಲ್ಲಿ ಖಾಯಂ ಹುದ್ದೆಯ ಪ್ರಾಧ್ಯಾಪಕರಿಗೆ ಬೋಧನೆಗೆ ಒಂದು ವರ್ಷದ ಅವಧಿ ಇರುತ್ತದೆ. ಮುಂದಿನ ವರ್ಷಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು ಅಥವಾ ಸರಕಾರಿ ಕೆಲಸಕ್ಕೆ ಸ್ವಯಂ ನಿವೃತ್ತಿ ಪಡೆಯಲೇಬೇಕು. ಇದಕ್ಕಾಗಿ ಈಗಲೇ ಬೇರೆ ಕಡೆ ಹುದ್ದೆಗಳಿದ್ದರೆ, ತಮ್ಮ ಸ್ಥಾನ ಖಚಿತಪಡಿಸಿಕೊಳ್ಳಲು ಲಾಬಿ ಶುರು ಮಾಡಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ. ಶಿಕ್ಷಣ ಸಂಸ್ಥೆಗಳಲ್ಲಿ ಇರುವವರಿಗೆ ಡೆಪ್ಯುಟೇಶನ್ ಮೇಲೆ ಬೇರೆ ಇಲಾಖೆಯಲ್ಲಿ ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಲು ಅವಕಾಶ ಇರುವುದರಿಂದ ನಿವೃತ್ತಿ ಅಂಚಿನಲ್ಲಿರುವವರೂ ಇಲಾಖೆ ಬದಲಾಯಿಸುವ ಯೋಚನೆಯಲ್ಲಿದ್ದಾರೆ.
Mangalore More than 10 courses at Mangalore University cancelled, cut in salary of lectures
26-05-26 11:03 pm
HK News Desk
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
ಬರೆದಿಟ್ಕೊಳ್ಳಿ , ಮುಂದೇನೂ ನಮ್ದೇ ಸರ್ಕಾರ ಇರ್ತದೆ ;...
25-05-26 09:38 pm
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
26-05-26 09:02 pm
HK News Staffer
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
26-05-26 02:43 pm
HK News Staffer
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm