ಬ್ರೇಕಿಂಗ್ ನ್ಯೂಸ್
13-11-24 11:05 pm Mangalore Correspondent ಕರಾವಳಿ
ಮಂಗಳೂರು, ನ.13: ಸಿಟಿಜನ್ ಕೌನ್ಸಿಲ್ ಕಾರ್ಯಕ್ರಮಕ್ಕೆ ಬಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳೂರಿನ ನಾಗರಿಕರ ಜೊತೆಗೆ ಸಂವಾದ ನಡೆಸಿದರು. ಇದೇ ವೇಳೆ, ಐದನೇ ತರಗತಿ ವಿದ್ಯಾರ್ಥಿಯೊಬ್ಬ ಹಣಕಾಸಿನ ವಿಚಾರದಲ್ಲಿ ಮಕ್ಕಳು ಕಲಿಯಬೇಕಾದ ಪಾಠ ಏನು ಎಂದು ಪ್ರಶ್ನೆ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ಹುಡುಗನ ಪ್ರಶ್ನೆ ಕೇಳಿದ ಸಚಿವೆ ನಿರ್ಮಲಾ, ಆತನನ್ನು ವೇದಿಕೆಗೆ ಬರಹೇಳಿ ಬೆನ್ನುತಟ್ಟಿದರು.
ಮಂಗಳೂರಿನ ಸಂತ ಅಲೋಶಿಯಸ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ರಿಷ್ಯಂತ್ ಪ್ರಶ್ನೆ ಮಾಡಿದ್ದು ಅದಕ್ಕುತ್ತರಿಸಿದ ವಿತ್ತ ಸಚಿವರು, ಹೆತ್ತವರು ಬ್ಯಾಂಕ್‍ನಲ್ಲಿ ಇದ್ದಾರೆಯೇ.. ತಾಯಿ ಖಜಾನೆ ಇಲಾಖೆಯಲ್ಲಿ ದುಡಿಯುತ್ತಿದ್ದಾರಾ ಎಂದು ಪ್ರಶ್ನಿಸಿ ರಿಷ್ಯಂತ್‍ನ ಪ್ರಶ್ನೆಗೆ ಶಹಬ್ಬಾಸ್ ಎಂದು ಹೇಳುತ್ತಾ ಮಕ್ಕಳಲ್ಲಿ ಹಣಕಾಸಿನ ಅರಿವು ಇರಲೇ ಬೇಕು. ಎಳವೆಯಲ್ಲೇ ಹಣಕಾಸಿನ ಕುರಿತು ಶಿಕ್ಷಣ ಸಿಕ್ಕರೆ, ಉಳಿತಾಯದ ಬಗ್ಗೆ ಕಾಳಜಿ ಮೂಡುತ್ತದೆ ಎಂದು ಹೇಳಿ ಸಿಂಡಿಕೇಟ್ ಬ್ಯಾಂಕಿನ ಧ್ಯೇಯ ವಾಕ್ಯವನ್ನು ನೆನಪಿಸಿದರು. ಮಕ್ಕಳಲ್ಲಿ ಉಳಿತಾಯದ ಭಾವನೆ ಜೊತೆಗೆ ಹಣವನ್ನು ಹೇಗೆ ಬಳಸಬೇಕೆಂಬ ಜವಾಬ್ದಾರಿಯೂ ಬರಬೇಕಿದೆ ಎಂದರು.
ಮಂಗಳೂರಿನ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ಚಾಪ್ಟರ್ ವತಿಯಿಂದ ವಿತ್ತ ಸಚಿವರ ಜತೆಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜಿಎಸ್ ಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ಪಾದನೆಗೊಂಡು ಮಾರಾಟವಾಗುವ ಪ್ರತಿ ವಸ್ತುಗಳಿಗೆ ತೆರಿಗೆ ವಿಧಿಸಲು ಜಿಎಸ್‍ಟಿ ಕೌನ್ಸಿಲ್ ಇರುತ್ತದೆ. ಎಲ್ಲ ರಾಜ್ಯಗಳ ಹಣಕಾಸು ಸಚಿವರ ಮಾಹಿತಿ ಆಧರಿಸಿ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಈ ಬಾರಿ ಜಿಎಸ್‍ಟಿ ಕೌನ್ಸಿಲ್ ಸಭೆ ಡಿಸೆಂಬರಿನಲ್ಲಿ ನಡೆಯಲಿದ್ದು, ಇದರಲ್ಲಿ ಕೆಲವು ವಸ್ತುಗಳು ಜಿಎಸ್‍ಟಿ ದರ ಬದಲಾಗುವ ಸಾಧ್ಯತೆಯಿದೆ ಎಂದರು.
ತೆರಿಗೆ ಪಾಲು ನೀಡುತ್ತಿಲ್ಲ ಎನ್ನುವುದು ಸುಳ್ಳು
ಕೇಂದ್ರ ಸರಕಾರ ಕರ್ನಾಟಕಕ್ಕೆ ತೆರಿಗೆ ಪಾಲು ನೀಡುತ್ತಿಲ್ಲ ಎನ್ನುವುದು ಸುಳ್ಳು. ಕರ್ನಾಟಕದ ಬುದ್ಧಿವಂತ ಮತದಾರರಲ್ಲಿ ಗೊಂದಲ ಸೃಷ್ಟಿಸಲು ತೆರಿಗೆಯ ಪಾಲು ನೀಡುತ್ತಿಲ್ಲ ಎಂದು ಹೇಳಿಕೊಂಡು ಬರುತ್ತಿದೆ. ನಾವು ಯಾವುದೇ ರಾಜ್ಯದ ವಿಚಾರದಲ್ಲೂ ತಾರತಮ್ಯ ಮಾಡಿಲ್ಲ. ಹಿಂದೆ ಯುಪಿಎ ಸರಕಾರ ಇದ್ದಾಗ ನೀಡುತ್ತಿದ್ದ ಪಾಲೆಷ್ಟು, ಈಗ ಬಿಜೆಪಿ ಸರಕಾರದಲ್ಲಿ ಸಿಗುತ್ತಿರುವ ತೆರಿಗೆ ಪಾಲೆಷ್ಟು ಎಂದು ತುಲನೆ ಮಾಡಬೇಕು. ರಾಜ್ಯದ ಮುಖ್ಯಮಂತ್ರಿ ಈ ಬಗ್ಗೆ ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.
ಬಿಹಾರ, ಆಂಧ್ರ ಪ್ರದೇಶಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಿ ಕೇರಳ ಮತ್ತು ಮಣಿಪುರ ರಾಜ್ಯಗಳಿಗೆ ಕಡಿಮೆ ಪಾಲು ನೀಡುತ್ತಿರುವುದಾಗಿ ಸಭಿಕರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಬಿಹಾರ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಲು ಅಲ್ಲಿನ ನೆರೆ ಸಮಸ್ಯೆಯೇ ಕಾರಣ. ನೇಪಾಳದ ಕೋಸಿ ನದಿಯಿಂದ ಬಿಹಾರ ರಾಜ್ಯ ಪ್ರತಿ ವರ್ಷವೂ ಸಂಕಷ್ಟಕ್ಕೆ ಗುರಿಯಾಗುತ್ತಿದೆ. ಈ ಕುರಿತು ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ನೇಪಾಳದ ಜತೆಗೆ ಮಾತುಕತೆ ನಡೆಯುತ್ತಿದೆ. ಇದೇ ರೀತಿ ಆಂಧ್ರದಲ್ಲಿಯೂ ಮಳೆ ಹಾನಿಯ ಕಾರಣಕ್ಕೆ ಬಜೆಟ್‍ನಲ್ಲಿ ಹೆಚ್ಚು ಅನುದಾನ ನೀಡಲಾಗಿತ್ತೇ ಹೊರತು ಕೇರಳ ಮತ್ತು ಮಣಿಪುರ ರಾಜ್ಯಗಳ ಮೇಲೆ ತಾರತಮ್ಯ ಮಾಡಿಲ್ಲ ಎಂದರು.
ಈ ಸಂದರ್ಭ ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ಚಾಪ್ಟರ್‍ನ ವಾಸುದೇವ ಕಾಮತ್ ಉಪಸ್ಥಿತರಿದ್ದರು.
Union finance minister (FM) Nirmala Sitharaman rebutted the Karnataka govt's claims of step-motherly treatment in tax devolution, affirming that the claim was utterly baseless and intended to create confusion among educated voters."I am speaking with responsibility.
11-12-24 10:48 pm
Bangalore Correspondent
ಸಜ್ಜನ ರಾಜಕಾರಣಿಯ ಯುಗಾಂತ್ಯ ! ಪಂಚಭೂತಗಳಲ್ಲಿ ಲೀನರ...
11-12-24 07:28 pm
Murdeshwar beach drowning, Kolar: ಮುರುಡೇಶ್ವರ...
11-12-24 04:45 pm
Bangalore Techie Suicide, Crime: ಪತ್ನಿ ಕಿರುಕು...
11-12-24 01:51 pm
Alvas Virasat 2024: 30ನೇ ವರ್ಷದ ಆಳ್ವಾಸ್ ವಿರಾಸತ...
10-12-24 10:47 pm
11-12-24 05:44 pm
HK News Desk
Mumbai Bus Accident; ಮುಂಬೈನಲ್ಲಿ ಬೆಸ್ಟ್ ಸಂಸ್ಥೆ...
10-12-24 10:57 pm
Idli Guru, Franchise Fraud, Owner Karthik She...
09-12-24 10:12 pm
Assad dynasty; ಸಿರಿಯಾದಲ್ಲಿ 54 ವರ್ಷಗಳ ವಂಶಾಡಳಿತ...
09-12-24 12:17 pm
ಮೇಕ್ ಇನ್ ಇಂಡಿಯಾ ಬಗ್ಗೆ ಪುಟಿನ್ ಮೆಚ್ಚುಗೆ ; ಭಾ...
05-12-24 11:00 pm
11-12-24 06:51 pm
Mangalore Correspondent
Mangalore, White Doves: 15 ವರ್ಷಗಳ ಬಳಿಕ ಮರಳಿ ಕ...
11-12-24 01:26 pm
Mangalore Lawyers, Sports: ಮಂಗಳೂರಿನಲ್ಲಿ ಹೈಕೋರ...
10-12-24 09:37 pm
Ranjith Ballal Bike Accident, Kundapur, Manga...
09-12-24 11:05 pm
Swamiji, Mangalore, Waqf: ಬಾಂಗ್ಲಾ ವಿರುದ್ಧ ಇಸ್...
09-12-24 07:40 pm
11-12-24 10:39 pm
Udupi Correspondent
Mangalore crime cyber fraud: ಪಾರ್ಟ್ ಟೈಮ್ ಜಾಬ್...
11-12-24 03:57 pm
Mangalore CCB police, Crime: ಜೈಲಿನಿಂದ ಹೊರಬಂದ...
10-12-24 11:18 pm
Mangalore crime, Kadri police, robbery: ಕಂಕನಾ...
10-12-24 06:46 pm
ಕೇವಲ ಎಂಟು ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರಿಗೆ ವ...
10-12-24 03:59 pm