ಬ್ರೇಕಿಂಗ್ ನ್ಯೂಸ್
04-11-24 04:34 pm Mangalore Correspondent ಕರಾವಳಿ
ಮಂಗಳೂರು, ನ.4: ಕದ್ದ ಮಾಲನ್ನು ವಾಪಸ್ ಕೊಡುವ ಹೊಸ ಪರಿಪಾಠ ಕಾಂಗ್ರೆಸ್ ಸರಕಾರದಲ್ಲಿ ಬೆಳೆದು ಬಂದಿದೆ. ವಾಲ್ಮೀಕಿ ಹಗರಣದಲ್ಲಿ ಭ್ರಷ್ಟಾಚಾರ ಒಪ್ಪಿಕೊಂಡ ಬಳಿಕ ಮುಡಾ ಪ್ರಕರಣದಲ್ಲಿಯೂ ಪತ್ನಿ ಪಡೆದ 14 ಸೈಟ್ ಗಳನ್ನು ಸಿದ್ದರಾಮಯ್ಯ ವಾಪಸ್ ಮಾಡಿದ್ದಾರೆ. ಇದೀಗ ವಕ್ಫ್ ಕಾಯ್ದೆಯಡಿ 50 ವರ್ಷಗಳ ಹಿಂದಿನ ನೋಟಿಫಿಕೇಶನ್ ಆಧರಿಸಿ 1200 ಎಕ್ರೆ ಭೂಮಿಗೆ ನೋಟೀಸ್ ಕೊಟ್ಟು ವಾಪಸ್ ಮಾಡಿಸಿದ್ದಾರೆ. ಕದಿಯೋದು, ಸಿಕ್ಕಿಬಿದ್ದಾಗ ವಾಪಸ್ ಮಾಡೋದು ಖಯಾಲಿಯಾಗಿದೆ. ಕೇಂದ್ರ ಸರಕಾರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತೆ ಎಂದು ತಿಳಿದು ರಾಹುಲ್ ಗಾಂಧಿ ಅಣತಿಯಂತೆ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ಮಾಡುತ್ತಿದ್ದಾರೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳೂರು ನಗರದ ಹಂಪನಕಟ್ಟೆಯ ಮಿನಿ ವಿಧಾನಸೌಧ ಮುಂಭಾಗದಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ಮತ್ತು ಸಿದ್ದರಾಮಯ್ಯ ಸರ್ಕಾರದ ನಡೆ ವಿರೋಧಿಸಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ವಕ್ಫ್ ಕಾಯ್ದೆ ಬ್ರಿಟಿಷರು ಹಿಂದು - ಮುಸ್ಲಿಂ ಒಡೆದಾಳುವುದಕ್ಕಾಗಿ ಮಾಡಿದ್ದ ಕಾಯ್ದೆ. ಅದನ್ನು ಯಥಾವತ್ ಸ್ವಾತಂತ್ರ್ಯ ಭಾರತದಲ್ಲಿ ಜಾರಿಗೆ ತಂದಿದ್ದು ಕಾಂಗ್ರೆಸ್. ಆದರೆ, ಬಡ ಮುಸ್ಲಿಮರ ಉದ್ಧಾರ ಮಾಡುವ ಬದಲು ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಲ್ಯಾಂಡ್ ಜಿಹಾದ್ ಮಾಡಿದ್ದಾರೆ. ದೇಶಾದ್ಯಂತ ವಕ್ಫ್ ಆಸ್ತಿಯನ್ನು ಲೂಟಿ ಮಾಡಿದ್ದಾರೆ.
ಇದಲ್ಲದೆ, ಯಾವುದೇ ಖಾಸಗಿ ಆಸ್ತಿಯನ್ನೂ ವಕ್ಫ್ ಕಾಯ್ದೆಯಡಿ ನೋಟಿಫೈ ಮಾಡಲು ಅವಕಾಶ ಕೊಟ್ಟಿದ್ದಾರೆ. ಅದನ್ನು ಖಾಸಗಿ ವ್ಯಕ್ತಿ ಪ್ರಶ್ನೆ ಮಾಡುವುದಕ್ಕೂ ಸಾಧ್ಯವಿಲ್ಲದಂತೆ ಮಾಡಿದ್ದು ಕಾಂಗ್ರೆಸ್. ವಕ್ಫ್ ಭೂಮಿಯೆಂದು ನೋಟಿಫೈ ಆದಲ್ಲಿ ಅದನ್ನು ವಕ್ಫ್ ಟ್ರಿಬ್ಯುನಲ್ ನಲ್ಲಿ ಮಾತ್ರ ಪ್ರಶ್ನೆ ಮಾಡಬೇಕಾಗುತ್ತದೆ. ಮುಸ್ಲಿಂ ವೈಯಕ್ತಿಕ ಕಾನೂನನ್ನು ಪಾಲಿಸುವ, ಮುಸ್ಲಿಮರು ಮಾತ್ರ ಇರುವ ಟ್ರಿಬ್ಯುನಲ್ ನಲ್ಲಿ ಪ್ರಶ್ನೆ ಮಾಡಿದರೆ ಇತರೇ ಧರ್ಮೀಯನಿಗೆ ನ್ಯಾಯ ಸಿಗುವುದೇ. ಸ್ವತಂತ್ರ ಭಾರತದಲ್ಲಿ ಜನಸಾಮಾನ್ಯನಿಗೆ ಇಂಥ ಹೀನ ಸ್ಥಿತಿ ತಂದಿಟ್ಟಿದ್ದು ಕಾಂಗ್ರೆಸ್ ಎಂದು ದೂರಿದರು ಬ್ರಿಜೇಶ್ ಚೌಟ.
ಹಿಂದು ವಿರೋಧಿ, ದೇಶ ವಿರೋಧಿ, ಸಂವಿಧಾನ ವಿರೋಧಿ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಲು ಮೋದಿ ಸರಕಾರ ಜಂಟಿ ಸದನ ಸಮಿತಿಯ ಚರ್ಚೆಗೆ ಕೊಟ್ಟಿದೆ. ಕಾಯ್ದೆ ತಿದ್ದುಪಡಿ ಆಗುತ್ತಿರುವುದನ್ನು ತಿಳಿದ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್, ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ಸೇರಿದ 1200 ಎಕ್ರೆ ಭೂಮಿಗೆ ನೋಟಿಸ್ ಕೊಟ್ಟಿದ್ದಾರೆ. ಕಾಯ್ದೆಗೆ ತಿದ್ದುಪಡಿ ತರುತ್ತಿರುವಾಗಲೇ ರೈತರ ಭೂಮಿಗೆ ನೋಟಿಸ್ ಕೊಟ್ಟಿರುವುದು ಏನನ್ನು ಸೂಚಿಸುತ್ತದೆ ಸಿದ್ದರಾಮಯ್ಯ ಅವರೇ ಎಂದು ಕೇಳಿದ ಚೌಟ, ನೀವು ಕೇವಲ ಮುಸ್ಲಿಮರಿಗೆ ಮುಖ್ಯಮಂತ್ರಿ ಆಗಿದ್ದೀರಾ ಎಂದು ಪ್ರಶ್ನಿಸಿದರು.
ಶಾಸಕ ಭರತ್ ಶೆಟ್ಟಿ ಮಾತನಾಡಿ, ಟಿವಿಯಲ್ಲಿ ಡಿಬೇಟ್ ಕುಳಿತ ವ್ಯಕ್ತಿಯೊಬ್ಬ ವಿಧಾನಸೌಧ ಕೂಡ ವಕ್ಫ್ ಆಸ್ತಿ. ಅದರ ಮೇಲೆ ನಾವೀಗ ಸಮಸ್ಯೆ ಮಾಡಿಲ್ಲ ಎಂದು ಹೇಳುತ್ತಾನೆ. ಅಂದ್ರೆ, ಮುಂದೆ ಸಮಸ್ಯೆ ತರುತ್ತೇವೆ ಎನ್ನುವುದು ಆತನ ಮಾತಿನ ಅರ್ಥ. ಬಿಟ್ಟರೆ ವಿಧಾನಸೌಧ, ಪಾರ್ಲಿಮೆಂಟನ್ನೂ ತಮ್ಮದೇ ಆಸ್ತಿಯೆಂದು ಹೇಳುತ್ತೀರಿ. ನಿಮ್ಮ ಕರಾಳ ಕಾಯ್ದೆಯನ್ನು ಮೋದಿ ಸರಕಾರ ಬದಲಾವಣೆ ಮಾಡುತ್ತದೆ. ವಕ್ಫ್ ಕಾಯ್ದೆ ಕುರಿತ ಪ್ರಶ್ನೆಗಳನ್ನು ನ್ಯಾಯಾಂಗದಲ್ಲಿ ಪ್ರಶ್ನಿಸಲು ಹಕ್ಕಿಲ್ಲ ಎಂದರೆ, ಅದು ಸಂವಿಧಾನ ವ್ಯಾಪ್ತಿಗೆ ಬರುವುದಿಲ್ಲ ಎಂದಾಯಿತು. ಸಂವಿಧಾನದಲ್ಲಿ ಇಲ್ಲದ ಕಾಯ್ದೆ ನಮ್ಮಲ್ಲಿ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಸೇರಿದಂತೆ ಮಂಗಳೂರು ಉತ್ತರ, ದಕ್ಷಿಣ, ಉಳ್ಳಾಲ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Protest against Waqf scam by MP Brijesh Chowta in Mangalore. “Congress is still trapped in a colonial mindset, using Waqf as a political tool,” Chowta declared.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm