ಬ್ರೇಕಿಂಗ್ ನ್ಯೂಸ್
03-11-24 10:24 pm Mangalore Correspondent ಕರಾವಳಿ
ಮಂಗಳೂರು, ನ.3: ವಕ್ಛ್ ಕಾಯ್ದೆ ಎನ್ನುವುದು ಬ್ರಿಟಿಷರ ಕಾಲದಿಂದ ಬಂದಿರುವ ಕ್ರೂರ ವ್ಯವಸ್ಥೆಯಾಗಿದ್ದು, ಮುಸ್ಲಿಂ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಸರಕಾರ ಅದನ್ನು ಮತ್ತಷ್ಟು ಪೋಷಿಸಿಕೊಂಡು ಬಂದಿದೆ. 1995ರಲ್ಲಿ ವಕ್ಫ್ ಕಾನೂನಿಗೆ ತಿದ್ದುಪಡಿ ತಂದು ಈ ಕಾಯ್ದೆಯಡಿ ನೋಟಿಫೈ ಆದ ಭೂಮಿಯನ್ನು ಸುಪ್ರೀಂ ಕೋರ್ಟಿನಲ್ಲಿಯೂ ಪ್ರಶ್ನಿಸುವಂತಿಲ್ಲ ಎಂಬಂತೆ ಮಾಡಿದೆ. ವಕ್ಫ್ ಕಾಯ್ದೆ ಎನ್ನುವುದು ಸಂವಿಧಾನ ವಿರೋಧಿಯಾಗಿದ್ದು, ದೇಶದ ಪಾಲಿಗೆ ಮರಣ ಶಾಸನ ಇದ್ದಂತೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕರಾಳ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರದ ಮೋದಿ ಸರಕಾರ ಹೊರಟಿರುವಾಗಲೇ ರಾಜ್ಯದಲ್ಲಿ ವಕ್ಪ್ ಅದಾಲತ್ ಏರ್ಪಡಿಸಿ ಸಚಿವ ಜಮೀರ್ ಅಹ್ಮದ್ ಖಾನ್ ರೈತರ ಆಸ್ತಿಗೂ ವಕ್ಫ್ ನೋಟೀಸ್ ಕೊಡಿಸಿದ್ದಾರೆ. ಆಮೂಲಕ ಸಿಎಂ ಸಿದ್ದರಾಮಯ್ಯ ಅವರೇ ರೈತರ ಜಮೀನನ್ನು ಅತಿಕ್ರಮಣಕ್ಕೆ ಮುಂದಾಗಿದ್ದಾರೆ. 2013ರಲ್ಲಿ ಯುಪಿಎ ಸರಕಾರ ಈ ಕಾಯ್ದೆಗೆ ಪೂರಕ ತಿದ್ದುಪಡಿ ತಂದು ದೇಶದಲ್ಲಿ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಹಕ್ಕು ಸ್ಥಾಪಿಸಬಹುದೆಂದು ಅತಿರೇಕದ ಅಧಿಕಾರ ಕೊಟ್ಟಿದೆ. ಇಂತಹ ಅತಿರೇಕವನ್ನು ತೆಗೆದುಹಾಕಲು ಕೇಂದ್ರ ಸರಕಾರ ಮುಂದಾಗಿದ್ದು ಮಸೂದೆ ಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಕೊಟ್ಟಿದೆ.
ಆದರೆ ಇಂತಹ ಸಂದರ್ಭದಲ್ಲಿಯೇ ರಾಜ್ಯದಲ್ಲಿ ಸರಕಾರಿ ಭೂಮಿಯನ್ನು, ರೈತರ ಜಮೀನನ್ನು ಕಬಳಿಸಲು ವಕ್ಫ್ ಸಚಿವರು ಮುಂದಾಗಿದ್ದಾರೆ. ಇದು ಕಾಕತಾಳೀಯ ಎಂದು ತೋರುವುದಿಲ್ಲ. ಕೇಂದ್ರದಲ್ಲಿ ತಿದ್ದುಪಡಿ ಬರುವ ಮೊದಲೇ ವಕ್ಫ್ ಆಸ್ತಿ ನೆಪದಲ್ಲಿ ಲ್ಯಾಂಡ್ ಬ್ಯಾಂಕ್ ಮಾಡುವುದರ ಸಂಕೇತದಂತೆ ತೋರುತ್ತಿದೆ. ಹಿಂದಿನ ವಕ್ಫ್ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿಯವರು ವಕ್ಫ್ ಆಸ್ತಿ ಬಗ್ಗೆ ತನಿಖೆ ನಡೆಸಿ, ರಾಜ್ಯದಲ್ಲಿ 54 ಸಾವಿರ ಎಕ್ರೆ ಭೂಮಿ ವಕ್ಫ್ ಆಸ್ತಿಯಿದ್ದು, ಈ ಪೈಕಿ 29 ಸಾವಿರ ಎಕ್ರೆ ಭೂಮಿಯನ್ನು ಕಬಳಿಸಲಾಗಿದೆ. ಕಾಂಗ್ರೆಸಿನ ಮುಸ್ಲಿಂ ನಾಯಕರು ಸೇರಿದಂತೆ ಹಲವು ಪ್ರಭಾವಿಗಳು ಇದರಲ್ಲಿ ಪಾಲು ಪಡೆದಿದ್ದಾರೆ. ವಕ್ಫ್ ಹೆಸರಲ್ಲಿ ದೊಡ್ಡ ಹಗರಣ ಆಗಿದೆ ಎಂದು ಹೇಳಿದ್ದರು. ಆ ವರದಿಯನ್ನು ಜಾರಿಗೆ ತರಬೇಕು ಎನ್ನುವ ಆಗ್ರಹವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಮುಸ್ಲಿಂ ಮಹಿಳೆಯರು, ಬಡವರ ಶ್ರೇಯೋಭಿವೃದ್ಧಿಗಾಗಿ ವಕ್ಫ್ ಕಾಯ್ದೆ ತರಲಾಗಿತ್ತು. ಆದರೆ, 75 ವರ್ಷದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮುಸ್ಲಿಮರನ್ನು ಕೇವಲ ಮತ ಬ್ಯಾಂಕ್ ಆಗಿಯಷ್ಟೇ ಬಳಕೆ ಮಾಡಿದೆ. ವಕ್ಫ್ ಆಸ್ತಿಯನ್ನು ಲ್ಯಾಂಡ್ ಬ್ಯಾಂಕ್ ಮಾಡಿ, ಉಳ್ಳವರು ದುರುಪಯೋಗ ಮಾಡಲು ಅವಕಾಶ ಕೊಟ್ಟಿದೆ. ಈಗ ತರಾತುರಿಯಲ್ಲಿ 50 ವರ್ಷಗಳ ಹಿಂದಿನ ಕಾನೂನನ್ನು ಜಾರಿಗೆ ತರುವ ಅಗತ್ಯ ಏನಿದೆ ಅನ್ನುವುದು ಪ್ರಶ್ನೆಯಾಗಿದೆ. ಜಮೀರ್ ಅಹ್ಮದ್ ಖಾನ್ ಅಲ್ಲಾನ ಆಸ್ತಿ ಎಂದು ಹೇಳುತ್ತಾರೆ. ಆದರೆ ಇವರು ಅಲ್ಲಾನೂ ಮೆಚ್ಚದ ಕೆಲಸವನ್ನು ಮಾಡಿದ್ದಾರೆ.
ಐತಿಹಾಸಿಕ ಬ್ಲಂಡರನ್ನು ಸರಿಮಾಡಲು ಮೋದಿ ಸರಕಾರ ಹೊರಟಿದ್ದರೆ, ಕಾಂಗ್ರೆಸಿಗರು ಜೆಪಿಸಿ ಕಮಿಟಿ ಸಭೆಯಲ್ಲಿ ಗಲಾಟೆ ನಡೆಸಿ ಸದಸ್ಯರಿಗೆ ಹಲ್ಲೆ ನಡೆಸಿದ್ದಾರೆ. ಅದೇ ವೇಳೆ, ರಾಜ್ಯದಲ್ಲಿ ಜನಸಾಮಾನ್ಯರ ಭೂಮಿಯನ್ನು ಲೂಟಿ ಮಾಡಲು ಹೊರಟಿದ್ದಾರೆ. ಇವೆಲ್ಲ ಒಂದಕ್ಕೊಂದು ಕನೆಕ್ಟಿವಿಟಿ ಇರುವಂತೆ ತೋರುತ್ತಿದೆ. ರೈತರು, ಕ್ರಿಶ್ಚಿಯನ್, ಮುಸ್ಲಿಮರು ಎಲ್ಲರಲ್ಲಿಯೂ ವಿನಂತಿಸುತ್ತಿರುವುದು ಏನಂದ್ರೆ, ಎಲ್ಲರೂ ತಮ್ಮ ಭೂಮಿಯ ದಾಖಲಾತಿಯನ್ನು ಪರಿಶೀಲನೆ ನಡೆಸಬೇಕು. ಆಮೂಲಕ ವಕ್ಫ್ ಕಾಯ್ದೆಯ ಕರಾಳ ನೀತಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎನ್ನುವುದು ಬಿಜೆಪಿ ಕಳಕಳಿ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳೂರು ತಾಲೂಕಿನಲ್ಲಿ ವಕ್ಫ್ ಇಲಾಖೆಯಡಿ 112 ಆಸ್ತಿಗಳಿದ್ದು, ಆ ಪೈಕಿ 37 ಆಸ್ತಿಯನ್ನು ಅಕ್ರಮ ಪರಭಾರೆ ಮಾಡಲಾಗಿದೆ. ಅಲ್ಲದೆ, ಸರಕಾರಿ ಭೂಮಿ ಹಾಗೂ ವಕ್ಫ್ ಬೈ ಯೂಸರ್ ಎಂದು ದಾಖಲೆ ರಹಿತ ಭೂಮಿಯನ್ನೂ ವಕ್ಫ್ ಇಲಾಖೆಗೆ ಕೊಟ್ಟಿರುವ ಮಾಹಿತಿಗಳಿವೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಂಸದರು ಆಗ್ರಹ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಕ್ಫ್ ಕಾಯ್ದೆಯ ದುಷ್ಪರಿಣಾಮಕ್ಕೊಳಗಾದವರಿಗೆ ನೆರವು ನೀಡಲು ವಕೀಲರ ತಂಡವನ್ನು ನೇಮಕ ಮಾಡಲಾಗುವುದು. ಅಲ್ಲದೆ, ಕರಾಳ ವಕ್ಫ್ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಲು ನ.4ರಂದು ಬೆಳಗ್ಗೆ ಜಿಲ್ಲಾ ಬಿಜೆಪಿಯಿಂದ ಮಂಗಳೂರಿನ ಮಿನಿ ವಿಧಾನಸೌಧ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಸಂಜಯ ಪ್ರಭು, ವಸಂತ ಪೂಜಾರಿ ಇದ್ದರು.
Member of Parliament for Dakshina Kannada Capt Brijesh Chowta has sharply criticised the Wakf board land scam, dubbing the ongoing controversy as a "land jihad."
30-07-25 11:40 am
Bangalore Correspondent
Durgaamba Bus Accident, Shivamogga: ಮಂಗಳೂರಿನಿ...
30-07-25 10:33 am
Kerala Nurse Nimisha Priya: ಕೇರಳ ನರ್ಸ್ ನಿಮಿಷ...
29-07-25 01:31 pm
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
30-07-25 09:06 am
HK News Desk
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
30-07-25 03:00 pm
Mangalore Correspondent
Shirur Landslide, Malayalam Film: ಶಿರೂರು ಗುಡ್...
30-07-25 09:04 am
No Evidence, Dharmasthala Burial, SIT: ಹೆಣ ಹೂ...
29-07-25 09:56 pm
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
30-07-25 11:37 am
HK News Desk
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm