ಬ್ರೇಕಿಂಗ್ ನ್ಯೂಸ್
22-10-24 10:26 pm Mangalore Correspondent ಕರಾವಳಿ
ಮಂಗಳೂರು, ಅ.22: ಹೊಸತಾಗಿ ಖರೀದಿಸಿದ ವಾಹನದಲ್ಲಿ ಪದೇ ಪದೇ ಸಮಸ್ಯೆಗಳು ಕಂಡುಬಂದ ಕಾರಣ ಗ್ರಾಹಕರೊಬ್ಬರು ವಾಹನ ಕಂಪನಿಯ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದಲ್ಲದೆ, ಪ್ರಕರಣವನ್ನು ಗೆದ್ದು ವಾಹನದ ಬಾಬ್ತು ಹಣವನ್ನು ಬಡ್ಡಿ ಸಮೇತ ಕೊಡಿಸುವಂತೆ ತೀರ್ಪು ಪಡೆದಿದ್ದಾರೆ.
ಅಶೋಕ್ ಲೇಲ್ಯಾಂಡ್ ಕಂಪನಿಯ ಬಡಾ ದೋಸ್ತ್ ವಾಹನವನ್ನು ಪುತ್ತೂರು ತಾಲೂಕಿನ ಶಾಂತಿಗೋಡು ನಿವಾಸಿ ಪದ್ಮನಾಭ ಪ್ರಭು ಎಂಬವರು 2021ರಲ್ಲಿ ಪುತ್ತೂರಿನ ಕಂಪನಿ ಶೋರೂಮಿನಿಂದ ಖರೀದಿಸಿದ್ದರು. ವಾಹನ ಖರೀದಿಸಿದ ಮೊದಲ ದಿನವೇ ಸಮಸ್ಯೆ ಕಂಡುಬಂದಿತ್ತು. ತರಕಾರಿ ಖರೀದಿಗಾಗಿ ಮುಳ್ಳೇರಿಯಾಕ್ಕೆ ಹೋಗಿದ್ದಾಗ ಗೇರ್ ಜಾಮ್ ಆಗಿದ್ದು ರಿಪೇರಿಗೆ ಕರೆದರೆ ಕಂಪನಿ ಮೆಕ್ಯಾನಿಕ್ ಬಂದಿರಲಿಲ್ಲ. ಆನಂತರ, ಮೆಕ್ಯಾನಿಕ್ ಕರೆಸಿ ಶೋರೂಮಿನಲ್ಲಿಯೇ ಕೆಲಸ ಮಾಡಿಸಿದ್ದರು. ಇದರ ಬಳಿಕವೂ ಪದೇ ಪದೇ ಸೈಲೆನ್ಸರ್, ಸೆನ್ಸಾರ್ ಸಮಸ್ಯೆ, ಗೇರ್ ಜಾಮ್, ಎಲ್ ಅಂಡ್ ಟಿ ಸಂಪರ್ಕದಲ್ಲಿ ಸಮಸ್ಯೆ ಕಾಣಿಸಿತ್ತು. ಬದಲಿ ವಾಹನ ಕೊಡುವಂತೆ ಕೇಳಿದರೂ, ಕಂಪನಿಯವರು ಕೊಟ್ಟಿರಲಿಲ್ಲ. ವಾಹನ ರಿಪೇರಿ ಸಂದರ್ಭದಲ್ಲಿಯೂ ಬದಲಿ ಬಿಡಿಭಾಗಗಳನ್ನೂ ಹೊಸತಾಗಿ ಹಾಕದೆ ಕಂಜೂಸ್ ಮಾಡಿದ್ದರು ಎಂದು ಗ್ರಾಹಕ ಪದ್ಮನಾಭ ಪ್ರಭು ಹೇಳುತ್ತಾರೆ.
ಇದರಿಂದ ಬೇಸತ್ತ ಪದ್ಮನಾಭ ಪ್ರಭು ವಕೀಲರ ಮೂಲಕ 2022ರ ಆಗಸ್ಟ್ ತಿಂಗಳಲ್ಲಿ ಮಂಗಳೂರಿನ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ವಾಹನ ಖರೀದಿಸಿದ ಒಂದು ವರ್ಷದ ಒಳಗೆ 45 ಬಾರಿ ರಿಪೇರಿಗೆ ಇಟ್ಟಿರುವ ವಿಚಾರವನ್ನು ಮುಂದಿಟ್ಟು ಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದರು. ಸೆನ್ಸಾರ್ ಸಮಸ್ಯೆ, ಪಿಕ್ ಅಪ್ ಇಲ್ಲದಿರುವುದು, ಗೇರ್ ಜಾಮ್ ಮತ್ತಿತರ ಸಮಸ್ಯೆಗಳನ್ನು ಹೇಳಿ ಕಂಪನಿಯ ನಿರ್ಲಕ್ಷ್ಯ ಧೋರಣೆಯನ್ನು ಪ್ರಶ್ನಿಸಿದ್ದರು.
ದೂರಿನಲ್ಲಿ ವಾಹನ ತಯಾರಿಕಾ ಸಂಸ್ಥೆಯಾದ ಅಶೋಕ ಲೇಲ್ಯಾಂಡ್ ಹಾಗೂ ಡೀಲರ್ ಗಳಾದ ಮಂಗಳೂರಿನ ಕಾಂಚನ ಆಟೋಮೋಟಿವ್ ಸಂಸ್ಥೆ ಮತ್ತು ಅದರ ಪುತ್ತೂರು ಶಾಖೆಗಳನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿತ್ತು. ದೂರುದಾರರು ಮತ್ತು ಪ್ರತಿವಾದಿಗಳ ಸಾಕ್ಷಿ ವಿಚಾರಣೆ ನಡೆಸಿದ ನ್ಯಾಯಾಲಯ, ಸದ್ರಿ ವಾಹನದಲ್ಲಿ ತಯಾರಿಕಾ ದೋಷ ಇದೆ ಎಂಬ ವಾದವನ್ನು ಎತ್ತಿ ಹಿಡಿದಿದೆ. ಇದರಂತೆ, ಅಶೋಕ ಲೇಲ್ಯಾಂಡ್ ಮತ್ತು ಕಾಂಚನ ಆಟೋಮೋಟಿವ್ ಸಂಸ್ಥೆಗಳು ವಾಹನದ ವೆಚ್ಚ 7.50 ಲಕ್ಷವನ್ನು 2022ರಿಂದ ಈವರೆಗಿನ ಅವಧಿಗೆ ಶೇಕಡಾ 6 ಬಡ್ಡಿದರದಲ್ಲಿ ಗ್ರಾಹಕರಿಗೆ ನೀಡುವಂತೆ ತಿಳಿಸಿದೆ.
ಇದಲ್ಲದೆ, ದೂರುದಾರರಿಗೆ ಆಗಿರುವ ಸೇವಾನ್ಯೂನತೆ, ಮಾನಸಿಕ ಕಿರುಕುಳ ರೂ. 25 ಸಾವಿರ ಹಾಗೂ ವ್ಯಾಜ್ಯ ವೆಚ್ಚವಾಗಿ ರೂ.10 ಸಾವಿರ ನೀಡುವಂತೆ ಆದೇಶ ನೀಡಿದೆ. ದೂರುದಾರರ ಪರವಾಗಿ ಪುತ್ತೂರಿನ ವಕೀಲರಾದ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೊಳುವಾರು, ಭುವನೇಶ್ವರಿ ಎಂ., ರಕ್ಷಿತಾ ಬಂಗೇರ ವಾದಿಸಿದ್ದರು.
Mangalore Bada dost ashok leyland van manufacturing defect, consumer court orders for money with intrest. Owner had purchased the van in 2021 and was facing huge problems.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am