ಬ್ರೇಕಿಂಗ್ ನ್ಯೂಸ್
14-10-24 10:26 pm Mangalore Correspondent ಕರಾವಳಿ
ಮಂಗಳೂರು, ಅ.14: ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದ ಪಿಲಿನಲಿಕೆ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಹೋಗಿದ್ದಾರೆ, ಇದು ಹಿಂದುತ್ವಕ್ಕೆ ಮಾಡಿದ ಅಪಮಾನ ಎನ್ನುವ ರೀತಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಬಿಜೆಪಿ ಒಳಗಿದ್ದವರೇ ವಿತಂಡವಾದಿ ಪ್ರಶ್ನೆ ಮುಂದಿಡುತ್ತಿದ್ದಾರೆ. ನಿಜಕ್ಕಾದರೆ, ಇದರಲ್ಲಿ ರಾಜಕೀಯದ ಲೇಪ ಬರುವುದಿಲ್ಲ. ಕರಾವಳಿಯಲ್ಲಿ ಗಣೇಶೋತ್ಸವ, ಶಾರದೋತ್ಸವ ಗಲ್ಲಿ ಗಲ್ಲಿಗಳಲ್ಲಿ ಆಗುತ್ತಿದ್ದು ಇದರ ಆಯೋಜಕರಲ್ಲಿ ಬಿಜೆಪಿ, ಕಾಂಗ್ರೆಸಿನಲ್ಲಿ ಗುರುತಿಸಿಕೊಂಡವರೇ ಇರುತ್ತಾರೆ. ಹಾಗೆಂದು, ಇದರ ಬಗ್ಗೆ ಪ್ರಶ್ನಿಸಿದ ಉದಾಹರಣೆ ಇಲ್ಲ. ಎಲ್ಲ ಕಾರ್ಯಕ್ರಮಕ್ಕೂ ಎರಡು ಪಕ್ಷದವರೂ ಹೋಗುತ್ತಾರೆ, ಭಾಷಣ ಮಾಡುತ್ತಾರೆ. ಹಿಂದುತ್ವ ಅನ್ನುವುದೇ ಎಲ್ಲರನ್ನು ಒಳಗೊಳಿಸುವಂಥದ್ದು. ಇತರೇ ಧರ್ಮೀಯರನ್ನೂ ಒಳಗೊಂಡು ಗಣೇಶೋತ್ಸವ ಮಾಡುವುದೂ ನಮ್ಮ ವಿಭಿನ್ನ ಸಂಸ್ಕೃತಿಗೆ ಸಾಕ್ಷಿ.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ಟರಿಗೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರಿಗೆ ರಾಜಕೀಯ ಕಾರ್ಯಕ್ರಮಗಳಲ್ಲಿ ಬೈದಿದ್ದಾರೆ ಎನ್ನುವ ಕಾರಣಕ್ಕೆ ಆತ ಹಿಂದುವೇ ಅಲ್ಲ ಎನ್ನುವ ರೀತಿ ಕೆಲವರು ಬಿಂಬಿಸುತ್ತಿದ್ದಾರೆ. ಇದು ಅವರ ಸಣ್ಣತನ ತೋರಿಸುತ್ತದೆ ಅಷ್ಟೇ. ಮಿಥುನ್ ರೈ ರಾಜಕೀಯ ಕಾರಣಕ್ಕೆ ಬಿಜೆಪಿ ನಾಯಕರನ್ನು ವಿರೋಧ ಮಾಡಿದ್ದಾರೆ ಎಂದು ಅವರನ್ನು ಹಿಂದುಗಳ ದೇವಸ್ಥಾನದಿಂದ ದೂರ ಇಡುವುದಕ್ಕಾಗುತ್ತದೆಯೇ..? ಹಾಗೆ ನೋಡಿದರೆ, ಕಾಂಗ್ರೆಸಿಗ ಯು.ಟಿ ಖಾದರ್, ಹಿಂದುಗಳ ಕೋಲ, ನೇಮ, ದೇವಸ್ಥಾನ ಎಲ್ಲದಕ್ಕೂ ಬರುತ್ತಾರೆ. ಅವರನ್ನು ಬರಬೇಡಿ ಎನ್ನುವುದಕ್ಕೆ ಬಿಜೆಪಿಯವರಿಂದ ಆಗುತ್ತಾ ಎನ್ನುವುದನ್ನು ಟ್ರೋಲ್ ಮಾಡುವವರು ಯೋಚನೆ ಮಾಡಬೇಕು.
ಬಿಜೆಪಿ ಬಗ್ಗೆ ಪ್ರಶ್ನಿಸಿದರ ಜೊತೆಗೇ ದೋಸ್ತಿ
ಹಾಗೆ ನೋಡಿದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕ್ಯಾ.ಬ್ರಿಜೇಶ್ ಚೌಟ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಬಗ್ಗೆ ವಿರೋಧಿಸಿ ಮಾತನಾಡಿದ್ದ ಬಿರುವೆರ್ ಕುಡ್ಲದ ಉದಯ ಪೂಜಾರಿ ನೇತೃತ್ವದ ಹುಲಿವೇಷ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು, ಶಾಸಕರೆಲ್ಲ ಹೋಗಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್, ಶಾಸಕ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಹಿಂದಿನ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಅವರು ಜೊತೆಯಾಗಿಯೇ ಉದಯ ಪೂಜಾರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲ ಈಗ ಉದಯ ಪೂಜಾರಿ ಜೊತೆಗೆ ನಿಂತಿದ್ದಾರೆಂಬ ಕಾರಣಕ್ಕೆ ಇವರೇ ಈ ಹಿಂದೆ ಬಿಜೆಪಿ ಅಭ್ಯರ್ಥಿ ವಿರುದ್ಧ ಹೇಳಿಕೆ ಕೊಡುವಂತೆ ಮಾಡಿದ್ದಾರೆಂದು ಹೇಳುವುದಕ್ಕಾಗುತ್ತಾ..? ನಿಜಕ್ಕಾದರೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಜಿಲ್ಲಾ ನಾಯಕರ ವಿರುದ್ಧ ಪ್ರಶ್ನೆ ಮಾಡಿದವರ ಜೊತೆಗೆ ನಿಂತಿದ್ದನ್ನೂ ಟ್ರೋಲ್ ಮಾಡುವವರು ಪ್ರಶ್ನೆ ಮಾಡಬೇಕಿತ್ತು. ಯಾಕಂದ್ರೆ, ಚುನಾವಣೆ ಸಂದರ್ಭದಲ್ಲಿ ಉದಯ ಪೂಜಾರಿ ಹೇಳಿಕೆ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಆದರೆ ಟ್ರೋಲಿಗರ ಟಾರ್ಗೆಟ್ ಕೆಲವರನ್ನು ಮಾತ್ರ ಗುರಿಯಾಗಿಸಿದೆ. ಅದಕ್ಕೆ ಹಿಂದುತ್ವದ ಸೋಗನ್ನು ಮುಂದೆ ಹಾಕಿದ್ದಾರೆ ಅಷ್ಟೇ.
ಆಚರಣೆಗಳಲ್ಲಿ ರಾಜಕೀಯ ಹುಡುಕುವುದೇ ತಪ್ಪು
ಈ ಬಗ್ಗೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರನ್ನು ಪ್ರಶ್ನಿಸಿದಾಗ, ಈ ಸಲ ಪಿಲಿನಲಿಕೆ, ಪಿಲಿಗೊಬ್ಬು, ಪಿಲಿಪರ್ಬ ಹೀಗೆ ಎಲ್ಲದಕ್ಕೂ ಹೋಗಿದ್ದೇನೆ. ಇದರಲ್ಲಿ ಪಾಲ್ಗೊಂಡ ಹುಲಿ ವೇಷಧಾರಿಗಳಲ್ಲಿ ನನ್ನೂರಿನ ಕುಂಪಲದ ತಂಡದವರೂ ಇದ್ದಾರೆ. ಅವರ ಆಹ್ವಾನಕ್ಕೆ ಓಗೊಟ್ಟು ಹೋಗಿದ್ದೇನೆ, ಹೊರತು ಆಯೋಜಕರು ಕರೆದು ಹೋಗಿದ್ದಲ್ಲ. ಮೇಲಾಗಿ ಪಾಲ್ಗೊಂಡ ಹುಲಿ ವೇಷ ತಂಡದವರು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ. ಇದಲ್ಲದೆ, ಹುಲಿವೇಷ ಅಪ್ಪಟ ತುಳುನಾಡಿನ ಕಲೆ. ಹಿಂದಿನಿಂದಲೂ ತುಳುವರ ಸಂಪ್ರದಾಯ, ಆಚರಣೆಗಳಲ್ಲಿ ಯಾರೂ ರಾಜಕೀಯ ಮಾಡಿದ್ದಿಲ್ಲ. ಕಂಬಳ, ಹುಲಿ ವೇಷ, ಕೋಲ, ನೇಮಕ್ಕೆ ಎಲ್ಲ ಪಕ್ಷದವರೂ ಬರುತ್ತಾರೆ. ಅದು ತುಳುವರ, ಹಿಂದುಗಳ ಮಣ್ಣಿನ ಹಬ್ಬ. ಹಾಗೆ ಎನಿಸುವುದೇ ತಪ್ಪು ಭಾವನೆ ಎಂದು ಸತೀಶ್ ಕುಂಪಲ ಪ್ರತಿಕ್ರಿಯಿಸಿದ್ದಾರೆ.
ಕುದ್ರೋಳಿ ದಸರಾಕ್ಕೆ ಎಲ್ಲರೂ ಹೋಗಲ್ವೇ..?
ಹಾಗೆ ನೋಡಿದರೆ, ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಕುದ್ರೋಳಿ ದಸರಾ ಆಗುತ್ತದೆ. ಅಲ್ಲಿಗೆ ಎಲ್ಲ ಪಕ್ಷದವರೂ ಹೋಗುತ್ತಾರೆ, ಬಿಜೆಪಿ, ಕಾಂಗ್ರೆಸ್ ಎನ್ನುವ ಮಾತು ಬರೋದಿಲ್ಲ. ನಮ್ಮ ಜಿಲ್ಲೆಯಾದ್ಯಂತ ಪ್ರತಿ ಗ್ರಾಮದಲ್ಲಿ ಶಾರದೋತ್ಸವ, ಹುಲಿವೇಷ ಹಾಕುತ್ತಾರೆ. ಇದರಲ್ಲಿ ರಾಜಕೀಯ ಹುಡುಕುವುದೇ ಸಣ್ಣತನ. ಮಿಥುನ್ ರೈ ಕಾರ್ಯಕ್ರಮ ಅಂತ ನಾವೇನಾದರೂ ರಾಜಕೀಯ ಲಾಭಕ್ಕೆ ಎಡ್ಜಸ್ಟ್ ಮಾಡಿಕೊಂಡಿದ್ದೇವಾ ಎಂದು ಕುಂಪಲ ಪ್ರಶ್ನಿಸಿದ್ದಾರೆ. ಬೇಕಾದರೆ ನನ್ನ ಬಗ್ಗೆ ವಿರೋಧ ಮಾಡಿದ್ದ ಬಿರುವೆರ್ ಕುಡ್ಲದ ಉದಯ ಪೂಜಾರಿ ತನ್ನ ಹುಲಿವೇಷಕ್ಕೆ ಕರೆದಿದ್ದರೂ, ಹೋಗುತ್ತಿದ್ದೆ. ತುಳುನಾಡಿನ ಕಲೆ ಅನ್ನುವ ಗೌರವದಿಂದ ಹೋಗುತ್ತಿದ್ದೆ. ಅದರಲ್ಲಿ ವ್ಯಕ್ತಿ ಮುಖ್ಯ ಅಲ್ಲ, ನಮ್ಮ ಕಲೆ, ಆಚರಣೆ ಮುಖ್ಯ ಎಂದಿದ್ದಾರೆ ಸತೀಶ್ ಕುಂಪಲ.
ಹುಲಿ ವೇಷ ಹಾಕೋರೆಲ್ಲ ಹಿಂದುಗಳೇ ಅಲ್ವೇ ?
ಹುಲಿವೇಷ ಹಾಕುವವರೆಲ್ಲ ಹಿಂದುಗಳೇ ಹೊರತು ಬೇರೆ ಸಮುದಾಯದವರಲ್ಲ. ಅದರಿಂದಾಗಿ ಹಿಂದುತ್ವಕ್ಕೆ ಅಪಮಾನ ಆಗಿದೆ ಎನ್ನುವುದರಲ್ಲಿ ತರ್ಕವೇ ಇಲ್ಲ. ತುಳುನಾಡಿನ ಹುಲಿವೇಷ ಆಗಲೀ, ಕಂಬಳ ಆಗಲೀ ಅದರಲ್ಲಿ ಹಿಂದಿನಿಂದಲೂ ರಾಜಕೀಯ ಇರಲಿಲ್ಲ. ಅದನ್ನು ಯಾರು ಆಯೋಜಿಸಿದ್ದಾರೆಂದು ನೋಡಿ ಹೋಗುವ ಪರಿಪಾಟವೂ ಅಲ್ಲ. ತುಳುನಾಡಿನ ಮಣ್ಣಿನ ಕಲೆ ಅನ್ನುವ ಕಾರಣಕ್ಕೆ ಹೋಗಿದ್ದೇವೆ ವಿನಾ ಅದರಲ್ಲೇನೂ ತಪ್ಪು ಕಾಣುವುದಿಲ್ಲ ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಹೇಳಿದ್ದಾರೆ.
Trollers spark controversy over BJP leaders attending Pili Nalike of congress mithun Rai in Mangalore. Some trollers on social media have created fuss after BJP Leaders like MP Brijesh Chowta, Satish Kumpala attended Pili Nalike program held by Congress leader mithun Rai. At the same time MLA's of BJP have attend Udu pooje held by Biruver Kudla president Uday Poojary.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm