ಬ್ರೇಕಿಂಗ್ ನ್ಯೂಸ್
14-10-24 01:37 pm Mangalore Correspondent ಕರಾವಳಿ
ಮಂಗಳೂರು, ಅ.14: ನಸುಕಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಅಡಿಕೆ ತೋಟಕ್ಕೆ ಪಲ್ಟಿಯಾಗಿ ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿಯ ಬಾಂಬಿಲ ಮಸೀದಿ ತಿರುವಿನಲ್ಲಿ ನಡೆದಿದ್ದು ಕಾರಿನಲ್ಲಿದ್ದ ಮಂಗಳೂರಿನ ಮಹಿಳೆ ಮೃತಪಟ್ಟಿದ್ದಾರೆ.
ಮಂಗಳೂರು ನಗರದ ಕೊಡಿಯಾಲಬೈಲು ನಿವಾಸಿ ಭಾಗೀರಥಿ (58 ) ಮೃತರು. ಕಾರು ಚಲಾಯಿಸುತ್ತಿದ್ದ ಮೂಲತಃ ತುಮಕೂರು ನಿವಾಸಿ ರೂಪೇಶ್ (40) ಗಂಭೀರ ಗಾಯಗೊಂಡಿದ್ದಾರೆ. ರೂಪೇಶ್ ಅವರ ಪತ್ನಿ, ಭಾಗೀರಥಿ ಅವರ ಪುತ್ರಿ ಸುಚಿತ್ರಾ (33) ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ರೂಪೇಶ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರೂಪೇಶ್ ಮೂಲತಃ ತುಮಕೂರು ನಿವಾಸಿಯಾಗಿದ್ದು ಮಂಗಳೂರಿನ ಸುಚಿತ್ರಾ ಅವರನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದ್ದರು. ನವರಾತ್ರಿ ಹಿನ್ನೆಲೆಯಲ್ಲಿ ತುಮಕೂರಿಗೆ ಹೋಗಿ ಮರಳುತ್ತಿದ್ದರು ಎನ್ನಲಾಗಿದೆ. ಚಾರ್ಮಾಡಿ- ಪುಂಜಾಲಕಟ್ಟೆ ಕಡೆಯಿಂದ ಬರುತ್ತಿದ್ದಾಗ ಮುಂಜಾನೆ ಸುಮಾರು 4.30 ಗಂಟೆಗೆ ಬಾಂಬಿಲ ಮಸೀದಿ ಮುಂಭಾಗದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಭಾಗೀರಥಿ ಮೃತಪಟ್ಟಿದ್ದಾರೆ. ಭಾಗೀರಥಿಯವರ ಸೋದರ ಗೋಪಾಲ್ ಮಂಗಳೂರಿನಲ್ಲಿ ಪಿಡಬ್ಲ್ಯುಡಿ ಇಂಜಿನಿಯರ್ ಆಗಿದ್ದಾರೆ.
ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬಾಂಬಿಲ ತಿರುವಿನಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಹೆದ್ದಾರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Mangalore punjalkatte accident, 58 year old woman dies on spot. Three people were traveling in the car, including Bhagirathi (58), a resident of Kodiyal Bailu, who unfortunately lost her life. The driver, Roopesh (40), suffered severe injuries and is being treated, while his wife, Suchitra (33), sustained minor injuries.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm