ಬ್ರೇಕಿಂಗ್ ನ್ಯೂಸ್
13-10-24 08:23 pm Mangalore Correspondent ಕರಾವಳಿ
ಉಳ್ಳಾಲ, ಅ.13: ಉಳ್ಳಾಲ ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ಬೀಚ್ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕಡೆಗಣಿಸಿದ್ದು, ಇಲ್ಲಿನ ಜೀವ ರಕ್ಷಕ ಸಿಬ್ಬಂದಿಯ ಆಶ್ರಯಕ್ಕಾಗಿ ವಿಶ್ರಾಂತಿ ಕೊಠಡಿಯನ್ನೂ ಇಲಾಖೆ ನಿರ್ಮಿಸಿಲ್ಲ. ಜೀವದ ಹಂಗು ತೊರೆದು ಸಮುದ್ರ ಪಾಲಾಗುವ ಪ್ರವಾಸಿಗರನ್ನ ರಕ್ಷಿಸುವ ಜೀವ ರಕ್ಷಕರ ಬವಣೆಯನ್ನ ಅರಿತ "ಫ್ರೆಂಡ್ಸ್ ಕೊಲ್ಯ"ದ ಉತ್ಸಾಹಿ ಯುವಕರು ಅಗಲಿದ ಆತ್ಮೀಯ ಸ್ನೇಹಿತನ ಸ್ಮರಣಾರ್ಥ ಸೋಮೇಶ್ವರ ಬೀಚಿನಲ್ಲಿ ಜೀವ ರಕ್ಷಕ ಸಿಬ್ಬಂದಿಗಳಿಗಾಗಿ ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಟ್ಟಿದ್ದು , ಯುವಕರ ಈ ಸಮಾಜಮುಖಿ ಕಾರ್ಯವು ಪ್ರವಾಸೋದ್ಯಮ ಇಲಾಖೆಯನ್ನ ಅಣಕಿಸಿದಂತಿದೆ.
ಪ್ರವಾಸಿಗರ ಪಾಲಿಗೆ ಸೋಮೇಶ್ವರ ಬೀಚ್ ಫೇಮಸ್. ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ಈ ಬೀಚ್ ಗೆ ಸಾವಿರಾರು ಪ್ರವಾಸಿಗರು ಬರುತ್ತಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಪ್ರವಾಸಿಗರನ್ನ ಬೀಚ್ ನತ್ತ ಆಕರ್ಷಿಸಬೇಕಾದ ಪ್ರವಾಸೋದ್ಯಮ ಇಲಾಖೆ ಇದುವರೆಗೂ ಜೀವ ರಕ್ಷಕರಿಗೆ ಕನಿಷ್ಠ ಒಂದು ಆಶ್ರಯ ಕೊಠಡಿಯನ್ನೂ ನಿರ್ಮಿಸಿಲ್ಲ. ಘಟ್ಟ ಪ್ರದೇಶದ ಪ್ರವಾಸಿಗರು ಕರಾವಳಿಯ ಸಮುದ್ರದ ಪ್ರಕ್ಷುಬ್ಧತೆಯನ್ನ ತಿಳಿಯದೆ ನೀರಾಟಕ್ಕಿಳಿದು ಪ್ರಾಣಕ್ಕೆ ಕಂಟಕ ತರುತ್ತಾರೆ. ಈ ಸಂದರ್ಭ ಇಲ್ಲಿನ ಜೀವರಕ್ಷಕ ಸಿಬ್ಬಂದಿಗಳೇ ಅಪಾಯಕ್ಕೀಡಾದವರನ್ನು ರಕ್ಷಿಸುತ್ತಾರೆ.
ಕರಾವಳಿ ಕಾವಲು ಪಡೆಯ ಅರೆಕಾಲಿಕ ಜೀವ ರಕ್ಷಕ ಸಿಬ್ಬಂದಿ ಅಶೋಕ್ ಸೋಮೇಶ್ವರ ಅವರು ಸಮುದ್ರ ಪಾಲಾಗುತ್ತಿರುವ ಅದೆಷ್ಟೋ ಜನರನ್ನು ರಕ್ಷಿಸಿದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸೋಮೇಶ್ವರ ಬೀಚಿನಲ್ಲಿ ಪ್ರವಾಸಿಗರನ್ನ ಕಾಯುವ ಜೀವರಕ್ಷಕ ಸಿಬ್ಬಂದಿಗಳು ಹಳೆಯ ಬೋಟಿನ ಅವಶೇಷವನ್ನೇ ಇಷ್ಟು ದಿವಸ ವಿಶ್ರಾಂತಿ ಕೊಠಡಿಯನ್ನಾಗಿಸಿದ್ದರು. ಇವರ ಕಷ್ಟವನ್ನ ಅರಿತ ಕೊಲ್ಯದ "ಫ್ರೆಂಡ್ಸ್ ಕೊಲ್ಯ" ಸಂಘಟನೆಯ ಯುವಕರು ತಮ್ಮ ಸ್ವಂತ ಹಣ ಮತ್ತು ದಾನಿಗಳ ಸಹಕಾರದಿಂದ 2.5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ವಿಶ್ರಾಂತಿ ಕೊಠಡಿಯೊಂದನ್ನು ನಿರ್ಮಿಸಿ ಕೊಟ್ಟಿದ್ದಾರೆ.
ಎಪ್ರಿಲ್ ತಿಂಗಳಲ್ಲಿ ಸ್ನೇಹಿತನ ಅಕಾಲಿಕ ಸಾವು
ಕಳೆದ ಎಪ್ರಿಲ್ 22 ರ ರಾತ್ರಿ ಕೊಲ್ಯದ ಮಳಯಾಲ ಕೋಡಿ ದೈವಸ್ಥಾನದ ವಲಸರಿ ಜಾತ್ರೆ ನೋಡಿ ಮನೆಯಲ್ಲಿ ಮಲಗಿದ್ದ ನವವಿವಾಹಿತ ಕೊಲ್ಯದ ಕನೀರುತೋಟ ನಿವಾಸಿ ಜಿತೇಶ್(28) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಜಿತೇಶ್ ಫ್ರೆಂಡ್ಸ್ ಕೊಲ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅಗಲಿದ ಸ್ನೇಹಿತನ ಹೆಸರನ್ನು ಸದಾ ಸ್ಮರಿಸುವುದಕ್ಕಾಗಿ ಆತನ ಹೆಸರಲ್ಲಿ ಕೊಠಡಿಯನ್ನು ಗೆಳೆಯರು ನಿರ್ಮಿಸಿದ್ದಾರೆ.
ಜೀವ ರಕ್ಷಕ ಸಿಬ್ಬಂದಿಗಳು ಹಳೆಯ ಬೋಟಿನ ಅವಶೇಷದಲ್ಲಿ ಆಶ್ರಯ ಪಡೆದಿರುವುದನ್ನ ಕಂಡು ಮನಸ್ಸಿಗೆ ತುಂಬ ಬೇಸರವಾಗಿತ್ತು. ನಾವು ಪ್ರತೀ ವರುಷದ ನವರಾತ್ರಿಗೆ ದಾನಿಗಳ ಸಹಕಾರದಿಂದ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಈ ಬಾರಿ ನಮ್ಮನ್ನಗಲಿದ ಸ್ನೇಹಿತ ಜಿತೇಶ್ ಸ್ಮರಣಾರ್ಥ ಜೀವರಕ್ಷಕ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಿದ್ದೇವೆ ಎಂದು ಫ್ರೆಂಡ್ಸ್ ಕೊಲ್ಯದ ಸ್ಥಾಪಕಾಧ್ಯಕ್ಷ ಅಶ್ವಿನ್ ಕೊಲ್ಯ ಹೇಳಿದ್ದಾರೆ.
ಪ್ರವಾಸಿಗರು ಸಮುದ್ರ ಪಾಲಾಗುವ ಸಂದರ್ಭದಲ್ಲಿ ನಮ್ಮ ಬಟ್ಟೆ, ಇನ್ನಿತರ ಸೊತ್ತುಗಳನ್ನ ಇಡಲು ಸುರಕ್ಷಿತ ಪ್ರದೇಶವಿರದೆ ಹಳೆಯ ಬೋಟ್ ಒಂದರ ಅವಶೇಷವನ್ನ ತಂದಿರಿಸಿ ಅದನ್ನೇ ವಿಶ್ರಾಂತಿ ಕೊಠಡಿಯನ್ನಾಗಿಸಿದ್ದೆವು. ಫ್ರೆಂಡ್ಸ್ ಕೊಲ್ಯದ ಯುವಕರು ಸಮುದ್ರ ತೀರಕ್ಕೆ ಬಂದಾಗ ನಮ್ಮ ಸಮಸ್ಯೆಯನ್ನ ಆಲಿಸಿದ್ದರು. ಯುವಕರು ಸುಸಜ್ಜಿತ ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಟ್ಟಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೀವ ರಕ್ಷಕ ಅಶೋಕ್ ಸೋಮೇಶ್ವರ ಹೇಳಿದ್ದಾರೆ.
Youth build Rest room for lifeguards at Someshwar Beach in memory of a departed friend in Mangalore.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm