ಬ್ರೇಕಿಂಗ್ ನ್ಯೂಸ್
12-10-24 07:39 pm Mangalore Correspondent ಕರಾವಳಿ
ಮಂಗಳೂರು, ಅ.12: ಗಣೇಶ ಹಬ್ಬದಂತೆ ನವರಾತ್ರಿ ಹಬ್ಬದ ಆಯುಧಪೂಜೆ, ವಿಜಯದಶಮಿ ವೀಕೆಂಡಲ್ಲಿ ಬಂದಿರುವುದರಿಂದ ಈ ಬಾರಿಯೂ ಹಬ್ಬದ ಸೀಸನ್ನಲ್ಲಿ ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್ಸುಗಳು ಪ್ರಯಾಣಿಕರ ಸುಲಿಗೆ ಮಾಡಲು ಮುಂದಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ರಜೆಯಲ್ಲಿ ಊರಿಗೆ ಹೊರಟವರನ್ನು ಬಸ್ ಕಂಪನಿಗಳು ನೇರವಾಗಿ ಸುಲಿಗೆ ಮಾಡುತ್ತಿದ್ದು, ಈ ಬಾರಿ ವಿಮಾನದ ದರಕ್ಕಿಂತಲೂ ಹೆಚ್ಚು ಬಸ್ಸಿನ ದರ ಏರಿಕೆಯಾಗಿದೆ.
ವೀಕೆಂಡಲ್ಲಿ ಸಾಮಾನ್ಯವಾಗಿ ಬಸ್ಸಿನ ದರವು ಹೆಚ್ಚೇ ಇರುತ್ತದೆ. ಈ ಬಾರಿ ಹಬ್ಬದ ಸಡಗರ ವಾರಾಂತ್ಯದಲ್ಲೇ ಬಂದಿದ್ದರಿಂದ ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್ಸಿನ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ, ಹುಬ್ಬಳ್ಳಿ ಹೀಗೆ ರಾಜ್ಯದ ಎಲ್ಲ ನಗರ ಪ್ರದೇಶಗಳಿಂದಲೂ ರಾಜಧಾನಿ ಬೆಂಗಳೂರಿಗೆ ತೆರಳುವ ಮತ್ತು ಬೆಂಗಳೂರಿನಿಂದ ಆಯಾ ಪ್ರದೇಶಗಳಿಗೆ ಹೊರಡುವ ಎಲ್ಲ ಖಾಸಗಿ ಬಸ್ಸುಗಳ ದರವೂ ವಿಪರೀತ ಏರಿಕೆಯಾಗಿದೆ. ಕೆಎಸ್ಸಾರ್ಟಿಸಿ ಸ್ಲೀಪರ್ ಬಸ್ಸುಗಳಲ್ಲಿಯೂ ನಾವೇನೂ ಕಮ್ಮಿಯಿಲ್ಲ ಎಂದು ದರವನ್ನು ಏರಿಸಲಾಗಿದೆ.
ಮಂಗಳೂರು- ಬೆಂಗಳೂರು ಮಧ್ಯೆ ಸಾಮಾನ್ಯ ದಿನಗಳಲ್ಲಿ ಟೆಕೆಟ್ ದರ 700 ರೂ. ಇದ್ದರೆ, ನವರಾತ್ರಿ ಹಬ್ಬದ ಈ ಸಲದ ವೀಕೆಂಡಲ್ಲಿ 2000 ರೂ.ನಿಂದ 3000 ರೂ. ವರೆಗೆ ಟಿಕೆಟ್ ದರ ಏರಿಸಲಾಗಿದೆ. ಉಳ್ಳಾಲ್ ಹಾಲಿಡೇಸ್ -2700 ರೂ., ಬಾಲಾಜಿ ಟೂರಿಸ್ಟ್ 2000 ರೂ., ವಿಆರ್ ಎಲ್ 1300-1500 ರೂ., ಭಾರತಿ ಟ್ರಾವೆಲ್ಸ್ ನಲ್ಲಿ 1500 ರೂ.ಗಿಂತ ಹೆಚ್ಚಿದೆ. ಉಡುಪಿ- ಬೆಂಗಳೂರು ಬಸ್ ದರವೂ ಇದೇ ರೀತಿ ಇದೆ. ಕಾರವಾರ – ಬೆಂಗಳೂರು ಮಧ್ಯೆ ಬಸ್ ದರವು 2300 ರೂ.ನಿಂದ 3700 ರೂ.ನಷ್ಟು ಏರಿಸಲಾಗಿದೆ. ರಜತ್ ಟ್ರಾವೆಲ್ಸ್ 2300, ಭಾರತಿ ಟ್ರಾವೆಲ್ಸ್ 3047 ರೂ., ಆನಂದ್ ಟ್ರಾವೆಲ್ಸ್ 2310 ರೂ., ಬಟರ್ ಫ್ಲೈ ಹಾಲಿಡೇಸ್ ಎಸಿ ಸ್ಲೀಪರ್ 3999 ರೂ., ಬಾಲಾಜಿ ಟೂರಿಸ್ಟ್ 3000, ಜಾಲಿ ಟ್ರಾವೆಲ್ಸ್ 2600 ರೂ., ಇಂಟರ್ ಸಿಟಿ ಸ್ಮಾರ್ಟ್ ಬಸ್ ದರವು 4500 ರೂ. ಇದೆ. ಇತರೇ ದಿನಗಳಲ್ಲಿ ಕಾರವಾರ- ಬೆಂಗಳೂರು ಮಧ್ಯೆ ಬಸ್ ದರ 800 ರೂ. ಇರುತ್ತದೆ.
ಶಿವಮೊಗ್ಗ- ಬೆಂಗಳೂರು (ಸಾಮಾನ್ಯ ದರ-700) ಬಸ್ಸಿನ ಟಿಕೆಟ್ ದರವನ್ನೂ 1200 ರೂ.ನಿಂದ ತೊಡಗಿ 1700 ರೂ., 2000 ರೂ. ಮಾಡಲಾಗಿದೆ. ಈ ರೂಟಿನಲ್ಲಿ ಸುಗಮ ಟ್ರಾವೆಲ್ಸ್, ಸೀಬರ್ಡ್ ಟ್ರಾವೆಲ್ಸ್, ಮಂಜುಶ್ರೀ ಟ್ರಾವೆಲ್ಸ್, ಡಿಎ ಟ್ರಾನ್ಸ್ ಪೋರ್ಟ್, ಮಹಾಲಕ್ಷ್ಮಿ ಟ್ರಾವೆಲ್ಸ್ ಬಸ್ಸಿನಲ್ಲಿ ಟಿಕೆಟ್ ದರ 1700ಕ್ಕಿಂತ ಹೆಚ್ಚಿದ್ದರೆ, ಎಸ್ಆರ್ ಎಸ್ ಬಸ್ಸಿನಲ್ಲಿ 2000 ದರ ಇರಿಸಲಾಗಿದೆ. ಬೆಂಗಳೂರು – ಹುಬ್ಬಳ್ಳಿ (ಸಾಮಾನ್ಯ ದರ 800) ಬಸ್ ದರವನ್ನೂ 2500 ರೂ.ನಿಂದ 3000 ದಷ್ಟು ಏರಿಸಲಾಗಿದೆ. ಬೆಂಗಳೂರು- ಬಾಗಲಕೋಟ, ಬೆಳಗಾವಿ ಬಸ್ಸಿನ ಟಿಕೆಟ್ ದರವೂ ಇದೇ ರೀತಿ ಇದೆ.
ಇದೇ ವೇಳೆ, ಮಂಗಳೂರು – ಬೆಂಗಳೂರು, ಬೆಂಗಳೂರು- ಗೋವಾ ವಿಮಾನ ದರವು 2500 ರೂ.ನಿಂದ 3900 ರೂ. ಮಧ್ಯ ಇದೆ. ಏರ್ ಇಂಡಿಯಾ, ಇಂಡಿಗೋದಲ್ಲಿ ಇದರೊಳಗೆ ದರ ವ್ಯತ್ಯಾಸ ಇದೆ. ಶಿವಮೊಗ್ಗ- ಬೆಂಗಳೂರು ಮಧ್ಯೆ ವಿಮಾನ ದರ ಇದಕ್ಕಿಂತಲೂ ಕಡಿಮೆ ಇದೆ. ರಾಜಧಾನಿಯಿಂದ ಹೊರಡುವ ಸಾಮಾನ್ಯ ಸ್ಲೀಪರ್ ಬಸ್ ಗಳಲ್ಲಿ ಟಿಕೆಟ್ ದರವನ್ನು ಇದೇ ಮೊದಲ ಬಾರಿಗೆ ವಿಮಾನ ದರಕ್ಕಿಂತಲೂ ಹೆಚ್ಚಿಸಲಾಗಿದೆ. ಹೀಗಾಗಿ ಸ್ಲೀಪರ್ ಬಸ್ಸಿನಲ್ಲಿ ಏಳು ಗಂಟೆ ಕುಳಿತು ಹೊರಳಾಡಿಕೊಂಡು ಪ್ರಯಾಣಿಸುವುದಕ್ಕಿಂತ ವಿಮಾನದಲ್ಲಿ ಒಂದೂವರೆ ಗಂಟೆಯಲ್ಲಿ ಅದೇ ಬೆಲೆಯಲ್ಲಿ ಊರು ತಲುಪಬಹುದಾಗಿದೆ.
Dasara 2024, private bus ticket fare spikes high than flight. Bus tickets from Bangalore to Mangalore, Karwar, belagavi, shivamogga has spiked high on bus booking platforms like redbus and abhibus.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 11:07 pm
HK News Desk
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm