ಬ್ರೇಕಿಂಗ್ ನ್ಯೂಸ್
12-10-24 07:08 pm Mangalore Correspondent ಕರಾವಳಿ
ಮಂಗಳೂರು, ಅ.12: ಜರ್ಮನಿಯಲ್ಲಿ ಸಾಫ್ಟ್ ವೇರ್ ಕಂಪನಿಯನ್ನು ಹುಟ್ಟುಹಾಕಿ ಪಾಲುದಾರಿಕೆಯಲ್ಲಿ ಮುನ್ನಡೆಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಅತ್ತಾಜೆ ನಿವಾಸಿ ಆದಿತ್ಯ ಭಟ್ (29) ಹಠಾತ್ ಹೃದಯಾಘಾತಕ್ಕೀಡಾಗಿ ಸಾವು ಕಂಡಿದ್ದಾರೆ. ಮದುವೆಯಾಗಿ ಬಾಳಿ ಬದುಕಬೇಕಿದ್ದ ಆದಿತ್ಯ ಭಟ್ ಎದೆನೋವಿನ ಬಗ್ಗೆ ಸಣ್ಣ ನಿರ್ಲಕ್ಷ್ಯ ಮಾಡಿದ್ದರಿಂದ ಜೀವವನ್ನೇ ಕಳಕೊಂಡಿದ್ದಾರೆ.
ಆದಿತ್ಯ ಭಟ್ ಅವರು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ ಮುಗಿಸಿ 2020ರಲ್ಲಿ ಜರ್ಮನಿಗೆ ತೆರಳಿ, ಅಲ್ಲಿ ಎಂಎಸ್ಸಿ ಪೂರೈಸಿದ್ದರು. ಆನಂತರ, ಜರ್ಮನಿಯದ್ದೇ ತನ್ನ ಕ್ಲಾಸ್ ಮೇಟ್ ಒಬ್ಬರ ಜೊತೆಗೂಡಿ 2022ರಲ್ಲಿ ಸ್ಟಾರ್ಟಪ್ ಕಂಪನಿಯನ್ನು ಆರಂಭಿಸಿದ್ದರು. 2023ರ ಡಿಸೆಂಬರ್ ತಿಂಗಳಲ್ಲಿ ತಂದೆಗೆ ಹುಷಾರಿಲ್ಲವೆಂದು ಊರಿಗೆ ಬಂದು ಉಜಿರೆ ಸಮೀಪದ ಅತ್ತಾಜೆಯ ಮನೆಯಲ್ಲೇ ನೆಲೆಸಿದ್ದರು. ಜೊತೆಗೆ, ತನ್ನೂರಿಂದಲೇ ಜರ್ಮನಿಗೆ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದರು.
ಇದರ ಜೊತೆಗೆ, ತಂದೆ ರಮೇಶ್ ಭಟ್ 30 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಅತ್ತಾಜೆ ಪಾಲಿಮರ್ಸ್ ಹೆಸರಿನ ರಬ್ಬರ್ ಫ್ಯಾಕ್ಟರಿ ಕೆಲಸ ಮತ್ತು ತೋಟವನ್ನೂ ನೋಡಿಕೊಂಡಿದ್ದರು. ನಿನ್ನೆ ಶುಕ್ರವಾರ, ರಬ್ಬರ್ ಫ್ಯಾಕ್ಟರಿಯಲ್ಲಿ ಆಯುಧ ಪೂಜೆ ಮುಗಿಸಿ ಉಜಿರೆಯಲ್ಲಿ ಶಾರದಾ ಪೂಜೆಯಲ್ಲಿ ಪಾಲ್ಗೊಂಡು ಸಂಜೆ ಹೊತ್ತಿಗೆ ಮನೆಗೆ ಮರಳಿದ್ದರು. ಅದೇ ವೇಳೆಗೆ, ಆದಿತ್ಯ ಭಟ್ ಮನೆಯಲ್ಲಿ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವು ಕಂಡಿದ್ದಾರೆ.
ಆದಿತ್ಯ ಭಟ್ ಅವರಿಗೆ ಮದುವೆ ನಿಶ್ಚಯ ಆಗಿತ್ತು. ಮುಂದಿನ ಡಿಸೆಂಬರ್ ನಲ್ಲಿ ಮದುವೆಯಾಗುವ ಬಗ್ಗೆ ಸಿದ್ಧತೆ ನಡೆದಿತ್ತು. ಈ ನಡುವೆಯೇ ಆದಿತ್ಯ ಭಟ್ ಇಹಲೋಕ ತ್ಯಜಿಸಿದ್ದು, ಕುಟುಂಬಸ್ಥರಿಗೆ ತೀವ್ರ ಶಾಕ್ ಉಂಟು ಮಾಡಿದೆ. ಆದಿತ್ಯ ಅವರಿಗೆ ಎರಡು ದಿನಗಳ ಹಿಂದೆಯೇ ಎದೆನೋವು ಕಾಣಿಸಿಕೊಂಡಿತ್ತು. ಗ್ಯಾಸ್ ಟ್ರಬಲ್ ಎಂದೆನಿಸಿ ಮನೆಯಲ್ಲೇ ಮದ್ದು ಮಾಡಿದ್ದರು. ಆದರೆ, ಅದೇ ನಿರ್ಲಕ್ಷ್ಯ ಯುವಕನ ಜೀವ ಕಿತ್ತುಕೊಂಡಿದೆ.
ಆದಿತ್ಯ ಭಟ್ ಅವರು ಕಳೆದೊಂದು ವರ್ಷದಿಂದ ರಬ್ಬರ್ ಫ್ಯಾಕ್ಟರಿಯನ್ನು ನವೀಕರಣ ಮಾಡುತ್ತಿದ್ದರು. ಆಧುನಿಕ ಮಾದರಿಯ ಯಂತ್ರೋಪಕರಣ ಬಳಸಿ ದೊಡ್ಡದಾಗಿಸಲು ಪ್ಲಾನ್ ಹಾಕಿದ್ದರು. ಇದಕ್ಕಾಗಿ ಸಾಕಷ್ಟು ಕೆಲಸಗಳನ್ನೂ ಮಾಡಿದ್ದರು. ಇನ್ನೊಂದು ವರ್ಷದಲ್ಲಿ ಜರ್ಮನಿಯ ಸಾಫ್ಟ್ ವೇರ್ ಕಂಪನಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಯೋಜನೆಯನ್ನೂ ಹಾಕ್ಕೊಂಡಿದ್ದರು. ಆದರೆ ಬಾಳಿ ಬದುಕಬೇಕಿದ್ದ ಯುವಕ ಹಠಾತ್ತಾಗಿ ಜೀವ ಕಳಕೊಂಡಿದ್ದಾರೆ.
Mangalore 29 year old software engineer dies of heart attack at ujre. The deceased has been identified as Aditya Bhat. His marriage also was fixed in few months time. He had a software company in Germany.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
28-08-26 04:17 pm
HK News Staffer
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am