ಬ್ರೇಕಿಂಗ್ ನ್ಯೂಸ್
28-06-24 05:43 pm Mangalore Correspondent ಕರಾವಳಿ
ಮಂಗಳೂರು, ಜೂನ್ 28: ನಷ್ಟಕ್ಕೀಡಾದ ಬಿಎಸ್ಸೆನ್ನೆಲ್ ಕಂಪನಿಯು ತನ್ನ ಆರ್ಥಿಕ ಸ್ಥಿತಿ ಸರಿದೂಗಿಸಲು ಸ್ಥಿರಾಸ್ತಿಯನ್ನು ಮಾರಾಟಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ಮಂಗಳೂರಿನ ಕದ್ರಿ ಪಾರ್ಕ್ ಬಳಿಯ ಆಸ್ತಿ ಮತ್ತು ಮೈಸೂರಿನ ಕುವೆಂಪು ನಗರದ ಆಸ್ತಿಯನ್ನು ಏಲಂ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಬಿಎಸ್ಸೆನ್ನೆಲ್ ಕರ್ನಾಟಕ ವೃತ್ತದ ಮುಖ್ಯ ಮಹಾಪ್ರಬಂಧಕ ಉಜ್ವಲ್ ಗುಲ್ಹಾನೆ ಹೇಳಿದ್ದಾರೆ.
ಎರಡನೇ ಹಂತದಲ್ಲಿ ಬಜಾಲ್ ನಲ್ಲಿರುವ 30 ಸೆಂಟ್ಸ್ ವಿಸ್ತೀರ್ಣದ ಬಿಟಿಎಸ್ ಸೈಟ್, ಕುಂಜತ್ತ್ ಬೈಲಿನಲ್ಲಿರುವ 20,592 ಚದರ್ ಮೀಟರ್ ವಿಸ್ತೀರ್ಣದ ಮೈಕ್ರೋವೇವ್ ಸ್ಟಾಫ್ ಕ್ವಾಟ್ರಸ್ ಜಾಗ, ಬೋಳಾರ ಟೆಲಿಫೋನ್ ಎಕ್ಸ್ ಚೇಂಜ್ ಕಂಪೌಂಡ್ 13 ಸೆಂಟ್ಸ್ ಜಾಗ ಮಾರಾಟಕ್ಕೆ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಸುದ್ದಿಗೋಷ್ಟಿಯಲ್ಲಿ ಉಜ್ವಲ್ ಗುಲ್ಹಾನೆ ತಿಳಿಸಿದ್ದಾರೆ.
ಮುಂದಿನ ಒಂದು ವರ್ಷದೊಳಗೆ ಮಡಿಕೇರಿ ಮೈಕ್ರೋವೇವ್ ಸ್ಟೇಶನ್, ಮೈಸೂರಿನ ಜೆಎಸ್ಎಸ್ ಲೇಔಟ್, ಕನಕದಾಸ ನಗರ, ಹೂಟಗಳ್ಳಿ ಕೈಗಾರಿಕಾ ಪ್ರದೇಶ, ಬನ್ನಿಮಂಟಪ, ಚಾಮುಂಡಿ ಬೆಟ್ಟದ ವಿನಿಮಯ ಕೇಂದ್ರಗಳ ಆಸ್ತಿಯನ್ನು ಹರಾಜು ಮೂಲಕ ಮಾರಾಟ ಮಾಡಲಾಗುವುದು. ಆಮೂಲಕ ಆದಾಯವನ್ನು ಹೆಚ್ಚಿಸಿ ಬಿಎಸ್ಸೆನ್ನೆಲ್ ಸಂಪರ್ಕ ಜಾಲದಲ್ಲಿ ಹೊಸ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಬಿಎಸ್ಸೆನ್ನೆಲ್ ಇಡೀ ದೇಶದಲ್ಲಿ 4ಜಿ ನೆಟ್ವರ್ಕ್ ಅನುಷ್ಠಾನಕ್ಕೆ ಯೋಚಿಸಿದ್ದು, ಮಂಗಳೂರು ವೃತ್ತ (ದ.ಕ., ಉಡುಪಿ, ಉತ್ತರ ಕನ್ನಡ) ದಲ್ಲಿ ಈಗಾಗಲೇ ಕೆಲಸ ಆರಂಭಿಸಿದೆ. ಮಂಗಳೂರು ಕಾರ್ಯಕ್ಷೇತ್ರದಲ್ಲಿ ಒಟ್ಟು 610 ಟವರ್ ಅಳವಡಿಸಲು ಯೋಜಿಸಲಾಗಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 412, ಉಡುಪಿಯಲ್ಲಿ 198 ಟವರ್ ಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.
ಕೇಂದ್ರ ಸರಕಾರದ 4ಜಿ ಸ್ಯಾಚುರೇಶನ್ ಯೋಜನೆಯನ್ನು ಬಿಎಸ್ಸೆನ್ನೆಲ್ ಕೈಗೆತ್ತಿಕೊಂಡಿದ್ದು, ಯಾವುದೇ ಕಂಪನಿಯ ಮೊಬೈಲ್ ನೆಟ್ವರ್ಕ್ ಇಲ್ಲದ ಹಳ್ಳಿಗಳಲ್ಲೂ ಬಿಎಸ್ಸೆನ್ನೆಲ್ ಟವರ್ ಅಳವಡಿಸುವ ಯೋಜನೆ ಆರಂಭಿಸಲಾಗಿದೆ. ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಂಪರ್ಕವೇ ಇಲ್ಲದ 173 ಹಳ್ಳಿಗಳಿಗೆ ನೇರವಾಗಿ 4ಜಿ ಸಂಪರ್ಕ ನೀಡಲಾಗುವುದು. ದಕ್ಷಿಣ ಕನ್ನಡದ ಎಳನೀರು ಎಂಬ ಕೊನೇ ಗ್ರಾಮಕ್ಕೂ 4ಜಿ ಸಂಪರ್ಕ ನೀಡಲಾಗುತ್ತದೆ ಎಂದು ಉಜ್ವಲ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ ದೆಹಲಿಯ ಬಿಎಸ್ಎನ್ಎಲ್ ಸಿಜಿಎಂ ಪರಮೇಶ್ವರಿ ದಯಾಳ್, ಮಂಗಳೂರು ವೃತ್ತದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎಸ್.ಜಿ. ದೇವಾಡಿಗ ಮತ್ತಿತರರಿದ್ದರು.
ಕಂಪನಿ ಸ್ಥಿರಾಸ್ತಿ ಮಾರಾಟ ಅಗತ್ಯವಿದೆಯೇ ?
ಬಿಎಸ್ಸೆನ್ನೆಲ್ ಕೇಂದ್ರ ಸರಕಾರಿ ಸ್ವಾಮ್ಯದ ದೂರವಾಣಿ ಸಂಸ್ಥೆಯಾಗಿದ್ದು, ಇಡೀ ದೇಶದಲ್ಲಿ ಸಾವಿರಾರು ಕೋಟಿಯ ಸ್ವಂತ ಆಸ್ತಿಯನ್ನು ಹೊಂದಿದೆ. ನಗರ, ಹಳ್ಳಿಗಳಲ್ಲಿ ಸ್ವಂತ ಜಾಗದಲ್ಲಿ ಟವರ್, ಕಟ್ಟಡಗಳನ್ನು ಹೊಂದಿರುವ ಏಕೈಕ ಸಂಸ್ಥೆ. ಆದರೆ, ಈಗ ಕಂಪನಿಯ ಪ್ರಮುಖ ಸ್ಥಾನಗಳಲ್ಲಿರುವವರು ಕಂಪನಿ ಆಸ್ತಿಯನ್ನೇ ಅದರಲ್ಲೂ ನಗರ ಪ್ರದೇಶದ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಆಮೂಲಕ ಇವರು ಕಂಪನಿಯ ಆಸ್ತಿ ಹೆಚ್ಚಿಸುತ್ತಾರೋ, ಮುಂಚೂಣಿ ಸ್ತರದಲ್ಲಿರುವ ಅಧಿಕಾರಿಗಳು ಅದರ ನೆಪದಲ್ಲಿ ಲಾಭ ಮಾಡಿಕೊಳ್ಳುತ್ತಾರೋ ಅನ್ನುವ ಸಂಶಯ ಇದೆ. ಹೀಗಾಗಿ ಸರಕಾರದ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಅಗತ್ಯವಿದೆ.
ಮಂಗಳೂರು, ಮೈಸೂರು ನಗರದಲ್ಲಿ ಕೋಟ್ಯಂತರ ಬೆಲೆಯಿರುವ ಆಸ್ತಿಗಳನ್ನು ಮಾರಿ, ಇವರು ಈಗ ಸಂಪರ್ಕ ಜಾಲವನ್ನು ವಿಸ್ತರಿಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಖಾಸಗಿ ಕಂಪನಿಗಳು 5ಜಿ ನೆಟ್ವರ್ಕ್ ನೀಡುತ್ತಿರುವಾಗ ಬಿಎಸ್ಸೆನ್ನೆಲ್ ಇನ್ನೂ 4ಜಿ ಸಂಪರ್ಕ ನೀಡದಿರುವುದೇ ಮೈನಸ್ ಪಾಯಿಂಟ್. ಸ್ವಂತ ಟವರ್, ಆಸ್ತಿ ಎಲ್ಲ ಇದ್ದರೂ, ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡದಿರುವುದಿರುವುದೇ ಕಂಪನಿ ನಷ್ಟಕ್ಕೆ ಕಾರಣ ಎನ್ನುವುದು ಸಾರ್ವಜನಿಕರ ಮಾತಾಗಿದೆ. ಹಲವು ಕಡೆಗಳಲ್ಲಿ ಬಿಎಸ್ಸೆನ್ನೆಲ್ ಟವರ್ ಗಳನ್ನು ಖಾಸಗಿ ಕಂಪನಿಗಳು ನಿರ್ವಹಣೆಗೆ ಗುತ್ತಿಗೆ ಪಡೆದಿರುವುದು ಇವರ ದಿವಾಳಿತನಕ್ಕೆ ಸಾಕ್ಷಿ. ನಗರ ಪ್ರದೇಶದಲ್ಲೇ ಇನ್ನೂ 4ಜಿ ನೆಟ್ವರ್ಕ್ ಕೊಡುವುದಕ್ಕಾಗದ ಬಿಎಸ್ಸೆನ್ನೆಲ್ ಸರ್ಕಾರದ ಆಸ್ತಿಯನ್ನು ಮಾರಾಟ ಮಾಡಿ, ರಿಯಲ್ ಎಸ್ಟೇಟ್ ಕುಳಗಳಿಗೆ ಲಾಭ ಮಾಡುತ್ತಾ ಅಥವಾ ಕಂಪನಿಯ ಅಧಿಕಾರಿಗಳು ಲಾಭ ಮಾಡಿಕೊಳ್ಳುತ್ತಾರೆಯೇ ಎನ್ನುವ ಸಂಶಯ ಇದೆ. ಆಸ್ತಿ ಮಾರಿ 4ಜಿ ನೀಡುತ್ತೇವೆ ಎನ್ನುವುದೇ ವ್ಯವಸ್ಥೆಯ ವ್ಯಂಗ್ಯ.
The loss-making BSNL has decided to sell real estate to rebalance its financial position. In the first phase, it has been decided to sell the property near Kadri Park in Mangalore and the property in Kuvempu city in Mysore through Aelum, said Ujwal Gulhane, Chief General Manager of BSChannel Karnataka Circle.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm