ಬ್ರೇಕಿಂಗ್ ನ್ಯೂಸ್
19-10-23 10:31 pm Mangalore Correspondent ಕರಾವಳಿ
ಮಂಗಳೂರು, ಅ.19: ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಯರ ಮೇಲೆರಗಿದ ಯಮರೂಪಿ ಕಾರಿನ ದೃಶ್ಯಾವಳಿ ಮಂಗಳೂರಿನ ಜನರ ಮನ ಕಲಕಿದೆ. ತಮ್ಮಷ್ಟಕ್ಕೆ ರಸ್ತೆ ಬದಿಯ ಫುಟ್ ಪಾತ್ ನಲ್ಲಿ ನಡೆದು ಹೋಗುತ್ತಿದ್ದವರ ಮೇಲೆ ಕಾರು ಹಾಯ್ದು ಹೋಗಿತ್ತು. ಏನೋ ದ್ವೇಷ ಇದ್ದವರ ರೀತಿ ಆ ಹುಡುಗಿಯರ ಮೇಲಿಂದ ಚಾಲಕ ಕಾರನ್ನು ಹಾಯಿಸಿಕೊಂಡು ಹೋಗಿದ್ದ. ಆದರೆ, ಇಷ್ಟೆಲ್ಲ ನಡೆದರೂ ಆ ವ್ಯಕ್ತಿ ಕೇವಲ ಆಕ್ಸಿಡೆಂಟ್ ಎನ್ನುವ ರೀತಿ ಪೊಲೀಸರ ಕುಣಿಕೆಯಿಂದ ಪಾರಾಗಿದ್ದಾನೆ.
ರಾಜಸ್ಥಾನಿ ಮೂಲದ ವ್ಯಕ್ತಿಯೇ ಆಗಿದ್ದರೂ, ಆರೋಪಿ ಕಮಲೇಶ್ ಹುಟ್ಟಿ ಬೆಳೆದಿದ್ದು ಮಂಗಳೂರಿನಲ್ಲೇ. ಮಂಗಳೂರಿನ ಅಳಕೆಯ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿದ್ದ ಕಮಲೇಶ್(57) ಮಧ್ಯವಯಸ್ಸು ದಾಟಿದ ವ್ಯಕ್ತಿ. ಪೊಲೀಸರ ಪ್ರಕಾರ, ಈ ವ್ಯಕ್ತಿ ಅಪಘಾತ ನಡೆದ ಬಳಿಕ ಸ್ಥಳೀಯರ ಹೆದರಿಕೆಯಿಂದ 85 ವರ್ಷದ ತನ್ನ ತಂದೆ ಬಲದೇವ್ ಅವರನ್ನು ಜೊತೆಗೆ ಕರೆಸಿಕೊಂಡು ಪೊಲೀಸು ಠಾಣೆಗೆ ಬಂದು ಶರಣಾಗಿದ್ದಾನೆ. ಮಣ್ಣಗುಡ್ಡ ಮತ್ತು ಲೇಡಿಹಲ್ ಮಧ್ಯ ಇರುವ ಮಂಗಳಾ ಸ್ಟೇಡಿಯಂ ಎದುರಿನ ಎಸ್.ಎಲ್ ಶೇಟ್ ಜುವೆಲ್ಲರಿ ಮಳಿಗೆಯ ಎದುರಿನ ಫುಟ್ ಪಾತ್ ನಲ್ಲಿ ಘಟನೆ ನಡೆದಿತ್ತು. ಅಪಘಾತ ನಡೆದ ಕೆಲವೇ ಹೊತ್ತಿನಲ್ಲಿ ಅಲ್ಲಿನ ಕಟ್ಟಡದಲ್ಲಿ ದಾಖಲಾಗಿದ್ದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದವು.
ದೃಶ್ಯದಲ್ಲಿ ಕಾರು ನೇರವಾಗಿ ರಸ್ತೆಯನ್ನು ಬಿಟ್ಟು ಫುಟ್ ಪಾತಿಗೆ ಬಂದು ಉದ್ದೇಶಪೂರ್ವಕ ಎನ್ನುವಂತೆ ಅಲ್ಲಿದ್ದ ಹುಡುಗಿಯರ ಮೇಲೆ ಹಾಯ್ದುಕೊಂಡು ಹೋಗಿದ್ದು ದಾಖಲಾಗಿದೆ. ಅಪಘಾತದ ದೃಶ್ಯ ಭೀಭತ್ಸವಾಗಿದ್ದು, ಮೂವರು ಅಪ್ರಾಪ್ತ ಬಾಲಕಿಯರು ಸೇರಿ ನಾಲ್ಕು ಮಂದಿ ಕಾರಿನ ಡಿಕ್ಕಿಯ ರಭಸಕ್ಕೆ ಮೇಲಕ್ಕೆ ಹಾರಿ ದೂರಕ್ಕೆ ಬಿದ್ದಿದ್ದಾರೆ. ಒಬ್ಬಳು ಯುವತಿಯ ಮೇಲಿನಿಂದಲೇ ಕಾರಿನ ಚಕ್ರ ಹರಿದು ಹೋಗಿತ್ತು. ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ಕೆಂಪು ಚೂಡಿದಾರ್ ಧರಿಸಿದ್ದ ಇತರ ಹುಡುಗಿಯರಿಗಿಂತ ಸ್ವಲ್ಪ ಉದ್ದವಾಗಿದ್ದ ರೂಪಶ್ರೀ(23) ಎನ್ನುವ ಸುರತ್ಕಲ್ ಕಾನ ನಿವಾಸಿ ಯುವತಿ ಕಾರಿನ ಚಕ್ರ ಹರಿದು ಗಂಭೀರ ಗಾಯಗೊಂಡು ಕೆಲ ಹೊತ್ತಿನಲ್ಲೇ ಸಾವು ಕಂಡಿದ್ದಾಳೆ.
ಘಟನೆ ಬಗ್ಗೆ ಟ್ರಾಫಿಕ್ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರಲ್ಲಿ ಕೇಳಿದರೆ, ಸೆಕ್ಷನ್ 304ಎ ಅಡಿಯಲ್ಲಿ ಅನಿರೀಕ್ಷಿತ ಅಪಘಾತ ಎನ್ನುವಂತೆ ಕೇಸು ದಾಖಲಾಗಿದೆ. ಇದು ಬಿಟ್ಟು ಕೊಲೆಗೆ ಸಮಾನ ಆಗಬಲ್ಲ ಉದ್ದೇಶಪೂರ್ವಕ ಕೃತ್ಯ ಎನ್ನುವುದನ್ನು ಸೂಚಿಸುವ ಸೆಕ್ಷನ್ 304 ಅನ್ವಯ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇದೆ. ಆ ರೀತಿ ಮಾಡಿದರೆ, ಒಮ್ಮೆಗೆ ಕಾರು ಚಾಲಕನನ್ನು ಜೈಲಿಗೂ ಹಾಕಬಹುದು. ಆದರೆ ಈ ಸೆಕ್ಷನ್ ಹಾಕಿದರೆ, ಸಂತ್ರಸ್ತ ಯುವತಿಗೆ ಕಾರಿನ ಇನ್ಶೂರೆನ್ಸ್ ಹಣ ಸಿಗಲ್ಲ. ಇದರಿಂದಾಗಿ ಸಂತ್ರಸ್ತ ಯುವತಿಯ ದೃಷ್ಟಿಯಿಂದ ನಾವು ಆ ಸೆಕ್ಷನ್ ವಿಧಿಸಿಲ್ಲ ಎಂದು ಹೇಳುತ್ತಾರೆ. ಆರೋಪಿ ಕಮಲೇಶ್ ಕುಡಿದ ಅಮಲಿನಲ್ಲಿ ಅಥವಾ ಗಾಂಜಾ ಅಮಲಿನಲ್ಲಿ ಆ ರೀತಿ ಕಾರು ಚಲಾಯಿಸಿದ್ದಾನೆಯೇ ಎಂಬ ಅನುಮಾನವೂ ಸಾರ್ವಜನಿಕರಲ್ಲಿದೆ. ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ನೆಗೆಟಿವ್ ಬಂದಿದೆಯಂತೆ. ಈ ಮಾಮೂಲಿ ಕೇಸಿನಿಂದಾಗಿ ಆರೋಪಿತ ವ್ಯಕ್ತಿ ಸ್ಟೇಶನಲ್ಲೇ ಜಾಮೀನು ಪಡೆದು ಸ್ಥಳದಿಂದ ಹಿಂತಿರುಗಿದ್ದಾನೆ.
ಹಾಗಾದರೆ, ಆ ರೀತಿ ಕಾರು ಯಾಕೆ ಚಲಾಯಿಸಿದ, ರಸ್ತೆ ಬಿಟ್ಟು ಫುಟ್ ಪಾತ್ ಮೇಲೆ ಬಂದಿದ್ದು ಹೇಗೆಂದು ಕೇಳಿದರೆ, ರಸ್ತೆಯಲ್ಲಿ ಹಂಪ್ಸ್ ಇದ್ದಿದ್ದೇ ಕಾರಣವಂತೆ. ಹಂಪ್ಸ್ ಮೇಲಿನಿಂದ ನೇರವಾಗಿ ಫುಟ್ ಪಾತ್ ಮೇಲೆ ಕಾರು ಸಾಗಿದ್ದು ಚಾಲಕನ ನಿಯಂತ್ರಣಕ್ಕೆ ಸಿಗದೆ ಹಾರಿ ಹೋಗಿದೆ. ಎದುರಿಗಿದ್ದ ಯುವತಿಯರನ್ನು ನೋಡಿ ಗಲಿಬಿಲಿಗೊಳ್ಳುವ ಬದಲು ಚಾಲಕ ಬ್ರೇಕ್ ಅದುಮುತ್ತಿದ್ದರೂ ಕಾರು ನಿಲ್ಲುತ್ತಿತ್ತು. ದೂರದ ವರೆಗೂ ಹುಡುಗಿಯರನ್ನು ಹಾರಿಸಿಕೊಂಡು ಮುನ್ನುಗ್ಗುವ ಸ್ಥಿತಿ ಬರುತ್ತಿರಲಿಲ್ಲ. ಬ್ರೇಕ್ ಒತ್ತುತ್ತಿದ್ದರೆ,
ಒಮ್ಮೆಗೆ ದೂರಕ್ಕೆ ಹಾರಿ ಬಿದ್ದ ಯುವತಿಯ ಮೇಲೆ ಮತ್ತೆ ಕಾರಿನ ಚಕ್ರ ಹರಿದು ಹೋಗುತ್ತಲೂ ಇರಲಿಲ್ಲ. ಹೀಗಾಗಿ ಆತನಿಗೆ ಏನಾದರೂ ಅಲ್ಲಿದ್ದ ಯುವತಿಯರ ಮೇಲೆ ದ್ವೇಷ ಇತ್ತೇ ಎನ್ನುವ ಬಗ್ಗೆ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Mangalore Mannagudda car accident, accused given station bail, says lost control. A 23-year-old woman died and four others were injured in Mangaluru after being hit by a car while walking on the footpath on Wednesday evening. The deceased is identified as Roopashri, a resident of Surathkal and daughter of Gangadhar. The incident took place around 4 p.m. near the Corporation swimming pool in Mangaluru city when the women were walking on the footpath. The accused identified as Kamalesh Baldev (57) drove away after the incident.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm