ಬ್ರೇಕಿಂಗ್ ನ್ಯೂಸ್
16-10-23 08:31 pm Mangalore Correspondent ಕರಾವಳಿ
ಮಂಗಳೂರು, ಅ.16: ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಸಂತೆ ವ್ಯಾಪಾರ ವಿಚಾರದಲ್ಲಿ ಮತ್ತೆ ಧರ್ಮ ದಂಗಲ್ ಆಗಿದೆ. ಜಿಲ್ಲಾಡಳಿತ ಸೂಚನೆಯಂತೆ ಎರಡನೇ ಬಾರಿ ಹರಾಜು ನಡೆಸಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಿದ್ದನ್ನು ಖಂಡಿಸಿರುವ ಹಿಂದು ಸಂಘಟನೆಗಳು, ಹಿಂದು ವ್ಯಾಪಾರಸ್ಥರನ್ನು ಗುರುತಿಸಲು ಹಿಂದುಗಳ ಅಂಗಡಿಗಳಿಗೆ ಕೇಸರಿ ಭಗವಾಧ್ವಜ ಕಟ್ಟಿದ್ದು ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿವೆ.
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಕಾರ್ಯಕರ್ತರು, ಸೋಮವಾರ ಮಧ್ಯಾಹ್ನ ಹಿಂದು ವ್ಯಾಪಾರಸ್ಥರು ನಡೆಸುವ ಅಂಗಡಿಗಳಿಗೆ ಕೇಸರಿ ಪತಾಕೆಯನ್ನು ಹಾಕಿದ್ದಾರೆ. ಇದೇ ವೇಳೆ ಮಾತನಾಡಿದ ಶರಣ್ ಪಂಪ್ವೆಲ್, ಇವತ್ತು ಎಲ್ಲಾ ಅಂಗಡಿಗಳಿಗೆ ಕೇಸರಿ ಭಗವಾಧ್ವಜ ಹಾಕಿದ್ದೇವೆ. ಹಿಂದೂಗಳ ಅಂಗಡಿಯೆಂದು ಭಕ್ತರಿಗೆ ಗೊತ್ತಾಗಬೇಕು ಎಂದು ಭಗವಧ್ವಜ ಕಟ್ಟುತ್ತಿದ್ದೇವೆ. ಹಿಂದುಗಳು ಹಿಂದೂಗಳ ಅಂಗಡಿಯಲ್ಲೇ ವ್ಯಾಪಾರ ಮಾಡಬೇಕು. ಹಿಂದೂಗಳ ದೇವಸ್ಥಾನದಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.


ಮಂಗಳಾದೇವಿ ದೇವಸ್ಥಾನದ ದಸರಾ ಸಂದರ್ಭದಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಎಂಬ ಬೇಡಿಕೆಯನ್ನು ಸನಾತನ ಹಿಂದು ವ್ಯಾಪಾರಸ್ಥರ ಸಂಘದವರು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ನಮ್ಮ ಈ ರೀತಿಯ ಬೇಡಿಕೆ ಕಳೆದ ಎರಡು ಮೂರು ವರ್ಷಗಳಿಂದ ಇದೆ. ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನ ಪ್ರಕಾರ ದೇವಸ್ಥಾನ, ಜಾತ್ರೆಯ ಸಂತೆ ವ್ಯಾಪಾರ ಹಿಂದೂಗಳಿಗೆ ಕೊಡಬೇಕು ಎಂಬ ನಿಯಮ ಇದೆ. ಇದನ್ನೀಗ ಮಂಗಳಾದೇವಿ ದೇವಸ್ಥಾನದಲ್ಲಿ ಮಾಡಿದ್ದೇವೆ. ಮುಂದೆ ಎಲ್ಲಾ ದೇವಸ್ಥಾನಗಳಲ್ಲಿ ಇದೇ ನೀತಿ ಮಾಡಬೇಕು.
ಕಮ್ಯುನಿಸ್ಟ್ ನವರು ಮುಸಲ್ಮಾನ ಬಡ ವ್ಯಾಪಾರಿಗಳಿಗೆ ಅವಕಾಶ ನೀಡಬೇಕು ಎನ್ನುತ್ತಾರೆ. ನಾವು ಮುಸಲ್ಮಾನ ವ್ಯಾಪಾರಿಗಳ ವಿರೋಧಿಗಳಲ್ಲ. ನಮ್ಮ ದೇವಸ್ಥಾನದ ಸುತ್ತ ಮುತ್ತ ಹಿಂದುಗಳಿಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಆಸುಪಾಸಿನ ರಸ್ತೆಯ ಎಲ್ಲಿ ಬೇಕಾದರೂ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಿ, ನಮ್ಮ ಅಭ್ಯಂತರ ಇಲ್ಲ. ಎಲ್ಲಿ ದೇವಸ್ಥಾನಕ್ಕೆ ಜನ ಬರುತ್ತಾರೆ, ಎಲ್ಲಿ ದೇವಸ್ಥಾನದ ರಥ ಹೋಗುತ್ತೆ. ಅಲ್ಲಿ ಹಿಂದುಗಳಿಗೆ ಅವಕಾಶ ಕೊಡಬೇಕು ಎಂಬುದು ನಮ್ಮ ನಿಲುವು.


ಒಮ್ಮೆ ಹರಾಜು ಪ್ರಕ್ರಿಯೆ ಆದ ಬಳಿಕ ಮಹಾನಗರ ಪಾಲಿಕೆ ಮತ್ತೆ ಹರಾಜು ಪ್ರಕ್ರಿಯೆ ನಡೆಸಿದೆ. ಒಂದು ಬಾರಿ ಹರಾಜು ಆದ ಬಳಿಕ ಎರಡನೇ ಹರಾಜಿಗೆ ಅವಕಾಶ ಇರುವುದಿಲ್ಲ. ಇದು ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನ. ಕಾನೂನು ಪ್ರಕಾರ ಹಿಂದುಯೇತರರಿಗೆ ಅವಕಾಶ ಇಲ್ಲ. ಯಾವ ರೀತಿಯಲ್ಲಿ ಎರಡನೇ ಸಲ ಹರಾಜು ನಡೆಸಿ ಅನ್ಯರಿಗೆ ಅವಕಾಶ ಕೊಟ್ಟರು ಅಂತ ಗೊತ್ತಿಲ್ಲ. ನಾವು ಇದನ್ನ ವಿರೋಧ ಮಾಡ್ತೀವಿ.
ಮಹಾನಗರ ಪಾಲಿಕೆ ಸೇರಿದ ರಸ್ತೆಯಲ್ಲಿ ಅನ್ಯ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಅಂತಾರೆ. ಮಂಗಳೂರು ಮಹಾನಗರ ಪಾಲಿಕೆ ಎಷ್ಟು ವರ್ಷದ ಹಿಂದೆ ಪ್ರಾರಂಭ ಆಯ್ತು. ಈ ದೇವಸ್ಥಾನಕ್ಕೆ ನೂರಾರು ವರ್ಷದ ಇತಿಹಾಸ ಇದೆ. ಇದೇ ರಸ್ತೆಯಲ್ಲಿ ದೇವರು ಓಡಾಡುತ್ತಾರೆ, ದೇವಸ್ಥಾನದ ರಥ ಓಡಾಡುತ್ತೆ. ಎಲ್ಲಿವರೆಗೆ ದೇವಸ್ಥಾನ ಇರುತ್ತೆ ಅಲ್ಲಿ ತನಕ ಇದು ದೇವಸ್ಥಾನದ ಜಾಗ. ಮಹಾನಗರ ಪಾಲಿಕೆಗಿಂತ ಮೊದಲೇ ದೇವಸ್ಥಾನ ಇದೆ. ದೇವಸ್ಥಾನ ಪರಿಸರ ಬಿಟ್ಟು ಎಲ್ಲಿ ಬೇಕಾದರೂ ಅನ್ಯಧರ್ಮೀಯರು ವ್ಯಾಪಾರ ಮಾಡಲಿ. ಮೊದಲು ಇದು ದೇವಸ್ಥಾನದ ಜಾಗ, ಆಮೇಲೆ ಅದೂ ಪಾಲಿಕೆ ವ್ಯಾಪ್ತಿಗೆ ಬಂದಿದ್ದು. ಎಲ್ಲೆಲ್ಲಿ ಹಿಂದು ದೇವಸ್ಥಾನದ ವಠಾರ ಇದೆಯೋ ಅಲ್ಲಿ ನಾವು ವ್ಯಾಪಾರ ಮಾಡುತ್ತೇವೆ. ಹಿಂದೂ ಶಬ್ದದ ಮೇಲೆ ನಂಬಿಕೆ ಇಲ್ಲದವರು, ಮೂರ್ತಿ ಪೂಜೆಯನ್ನ ನಂಬದವರು, ನಮ್ಮ ಧರ್ಮವನ್ನ ಪ್ರಶ್ನೆ ಮಾಡುವವರು, ಸನಾತನ ಧರ್ಮದ ಬಗ್ಗೆಯೇ ವಿರೋಧ ವ್ಯಕ್ತ ಪಡಿಸುವವರು ನಮಗೆ ವ್ಯಾಪಾರ ಕೊಡಿ ಎಂದರೆ ಅರ್ಥ ಇಲ್ಲದ ಮಾತು ಎಂದರು ಶರಣ್ ಪಂಪ್ವೆಲ್.
Mangalore Mangaladevi temple row over Muslim traders, sharan pumpwell slams muslim traders says let Muslims do their business out of temple area.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm