ಬ್ರೇಕಿಂಗ್ ನ್ಯೂಸ್
05-08-23 11:03 pm Mangalore Correspondent ಕರಾವಳಿ
ಪುತ್ತೂರು, ಆಗಸ್ಟ್ 5: ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಕೇರಳ ಮೂಲದ ಉದ್ಯಮಿಯೊಬ್ಬ ಎಕರೆಗಟ್ಟಲೆ ಸರ್ಕಾರಿ ಭೂಮಿಯನ್ನು ಕಬಳಿಸಿದ ಆರೋಪ ಕೇಳಿಬಂದಿದೆ. ಸ್ಥಳೀಯರ ದೂರಿನಂತೆ ಸ್ಥಳಕ್ಕೆ ಬಂದ ಪುತ್ತೂರು ಸಹಾಯಕ ಕಮಿಷನರ್ ಆರೋಪಿತ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಿದ್ದಾರೆ.
ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣಾಲು, ಕೋಲ್ಪೆ ಗ್ರಾಮದಲ್ಲಿ ಏಳೆಂಟು ಎಕ್ರೆ ಸರ್ಕಾರಿ ಭೂಮಿಯನ್ನು ಕೇರಳ ಮೂಲದ ಉದ್ಯಮಿಯೊಬ್ಬ ಕಬಳಿಸಿರುವ ಆರೋಪ ಕೇಳಿಬಂದಿದೆ. ಸೆಬಾಸ್ಟಿಯನ್ ಎಂಬ ಕೊಚ್ಚಿ ಮೂಲದ ವ್ಯಕ್ತಿ ಎರಡು ವರ್ಷಗಳ ಹಿಂದೆ ಕಡಬದಲ್ಲಿ ಖಾಸಗಿ ಜಾಗ ಖರೀದಿಸಿ ಪ್ಲಾಸ್ಟಿಕ್ ಬ್ಯಾಗ್ ತಯಾರಿಕೆ ಕಂಪನಿಯನ್ನು ಆರಂಭಿಸಿದ್ದ. ಇದೀಗ ಆಸುಪಾಸಿನ ಸರಕಾರಿ ಜಾಗವನ್ನು ಕಬಳಿಸಿದ್ದು, ಕೋಣಾಲು, ಕೋಲ್ಪೆ ಭಾಗದ ನೂರಾರು ಜನರು ಬಳಸುತ್ತಿದ್ದ ಜಿಪಂ ರಸ್ತೆಯನ್ನೇ ಮಣ್ಣು ಹಾಕಿ ನುಂಗಿ ಹಾಕಿದ್ದಾನೆ. ರಸ್ತೆಗೆ ಪೂರ್ತಿ ಮಣ್ಣು ಹಾಕಿದ್ದು, ಅದು ತನ್ನದೆಂದು ಹಕ್ಕು ಸ್ಥಾಪಿಸಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯರು ಈ ಬಗ್ಗೆ ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್ ಅವರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಅಧಿಕಾರಿ ಅಕ್ರಮವಾಗಿ ಭೂಮಿ ಕಬಳಿಸಿದ ವಿಚಾರದಲ್ಲಿ ಗೋಳಿತೊಟ್ಟು ಪಂಚಾಯತ್ ಪಿಡಿಓಗೆ ತರಾಟೆಗೆತ್ತಿಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ರಸ್ತೆಗೆ ಮಣ್ಣು ಹಾಕಿದ್ದು, ಈ ಭಾಗದ ನಿವಾಸಿಗಳಿಗೆ ರಸ್ತೆ ಇಲ್ಲದಾಗಿದೆ. ಅಲ್ಲದೆ, ಆಸುಪಾಸಿನ ಜಾಗದಲ್ಲಿ ಬಡ ಜನರನ್ನು ಒಕ್ಕಲೆಬ್ಬಿಸಿದ್ದಾನೆಂದು ಸ್ಥಳೀಯ ಉಸ್ಮಾನ್ ಎಂಬವರು ದೂರಿದ್ದಾರೆ.
ಅಧಿಕಾರಿಗಳ ಭೇಟಿ ವೇಳೆ ಮೇಲ್ನೋಟಕ್ಕೆ ಜಿಪಂ ರಸ್ತೆಯನ್ನು ಕಡಿದು ಹಾಕಿದ್ದು, ಸರಕಾರಿ ಜಾಗ ಕಬಳಿಸಿರುವುದು ಕಂಡುಬಂದಿದೆ. ಇದೇ ವೇಳೆ, ಸ್ಥಳದಲ್ಲಿ ಸರ್ವೆ ನಡೆಸುವುದಲ್ಲದೆ, ಅಕ್ರಮವಾಗಿ ಜಾಗ ಕಬಳಿಸಿದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಪಿಡಿಓಗೆ ಸೂಚನೆ ನೀಡಿದ್ದಾರೆ.
ಕಡಬದ ನೆಲ್ಯಾಡಿ, ಉಪ್ಪಿನಂಗಡಿ, ಉದನೆ ಭಾಗದಲ್ಲಿ ಕೇರಳ ಮೂಲದ ವ್ಯಕ್ತಿಗಳು ಅಕ್ರಮವಾಗಿ ಜಾಗ ಕಬಳಿಸಿ ನೆಲೆಯೂರಿದ್ದು, ಇದಕ್ಕೆಲ್ಲ ಸ್ಥಳೀಯ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆಂಬ ಆರೋಪ ಇದೆ. ಇದೀಗ ಕಡಬದ ಕೋಣಾಲು ಗ್ರಾಮದಲ್ಲಿ ಏಳೆಂಟು ಎಕ್ರೆ ಸರಕಾರಿ ಜಾಗ ಕಬಳಿಸಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಕಂದಾಯ ಅಧಿಕಾರಿಗಳು ಖಡಕ್ ಕ್ರಮ ಕೈಗೊಂಡರೆ ಮಾತ್ರ ಜಾಗ ಕಬಳಿಸುವ ನುಂಗಣ್ಣರಿಗೆ ತಕ್ಕ ಶಾಸ್ತಿ ಮಾಡಬಹುದು.
A Kerala-based businessman has been accused of grabbing acres of government land at Kadaba in Dakshina Kannada district. Puttur Assistant Commissioner, who reached the spot on the complaint of the locals, instructed to file a criminal case against the accused person.
22-08-25 09:47 am
HK News Desk
Dharmasthala Case, Minister Eshwar Khandre: ಧ...
21-08-25 10:31 pm
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm