ಬ್ರೇಕಿಂಗ್ ನ್ಯೂಸ್
28-07-23 11:17 pm Mangaluru Correspondent ಕರಾವಳಿ
ಮಂಗಳೂರು, ಜುಲೈ 28: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪಕ್ಷದ ಹಿರಿಯರು ಮತ್ತು ಆರೆಸ್ಸೆಸ್ ನಾಯಕರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ, ಸೂಕ್ತ ಭರವಸೆ ಸಿಗದ ಕಾರಣ ಈ ಮಾತುಕತೆ ಫಲಪ್ರದವಾಗಿಲ್ಲ ಎನ್ನುವ ಮಾಹಿತಿಗಳಿವೆ. ಇದರಿಂದಾಗಿ ಅರುಣ್ ಪುತ್ತಿಲ ಬೆಂಬಲಿಗರು ಬಿಜೆಪಿ ವಿರುದ್ಧ ಇನ್ನಷ್ಟು ಗಟ್ಟಿಯಾದ ನಡೆ ಮುಂದಿಡಲು ನಿರ್ಧರಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಂಡಾಯ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಊಹಿಸದ ರೀತಿ ಮತಗಳನ್ನು ಬಾಚಿಕೊಂಡಿದ್ದರು. ಅಷ್ಟೇ ಅಲ್ಲ, ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಪೈಪೋಟಿಗೇ ಸಿಗದೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಅಂದು ಬಿಜೆಪಿ ಪಡೆದುಕೊಂಡಿದ್ದ ಒಂದಷ್ಟು ಮತಗಳೇ ಅರುಣ್ ಪುತ್ತಿಲ ಗೆಲುವಿಗೆ ತೊಡಕಾಗಿ ಪರಿಣಮಿಸಿತ್ತು. ಯಾಕಂದ್ರೆ, ಅರುಣ್ ಪುತ್ತಿಲ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ನಡುವೆ ನೇರ ಸ್ಪರ್ಧೆ ಏರ್ಪಟ್ಟು ನಾಲ್ಕು ಸಾವಿರ ಚಿಲ್ಲರೆ ಮತಗಳಲ್ಲಿ ಪುತ್ತಿಲ ಸೋಲನುಭವಿಸಿದ್ದರು. ಅಷ್ಟಕ್ಕೇ ಮುಗಿದು ಹೋಗುತ್ತಿದ್ದ ಬಂಡಾಯವನ್ನು ಹಿಡಿದಿಟ್ಟುಕೊಂಡಿದ್ದು ಅರುಣ್ ಪುತ್ತಿಲ ಬೆಂಬಲಿಗರ ಹೆಗ್ಗಳಿಕೆ. ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಎನ್ನುವ ಹೆಸರಲ್ಲಿ ಸಂಘಟನೆ ಕಟ್ಟಿಕೊಂಡ ಕಾರ್ಯಕರ್ತರು ಈಗ ಇಡೀ ಕ್ಷೇತ್ರವನ್ನು ಆವರಿಸಿಕೊಂಡಿದ್ದು ಪುತ್ತೂರಿನ ಬಿಜೆಪಿ ನಾಯಕರನ್ನು ವಿಲ ವಿಲ ಎನ್ನುವಂತಾಗಿಸಿದ್ದಾರೆ.
ಈ ನಡುವೆ, ಅರುಣ್ ಪುತ್ತಿಲ ದೆಹಲಿ ಮಟ್ಟಕ್ಕೂ ಹೋಗಿ ಬಂದಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರನ್ನು ಭೇಟಿಯಾಗಿ ಕರಾವಳಿಯಲ್ಲಿ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ಹಿಂದುತ್ವದ ಕೆಲಸ ಮುಂದುವರಿಸಿ, ಪಕ್ಷ ಸೇರ್ಪಡೆ ಬಗ್ಗೆ ನೋಡೋಣ ಎಂದು ಸಂತೋಷ್ ಮಾತುಕತೆ ಸಂದರ್ಭದಲ್ಲಿ ಹೇಳಿ ಕಳುಹಿಸಿದ್ದರು ಎನ್ನುವ ಮಾಹಿತಿಗಳಿದ್ದವು. ಆನಂತರ, ಮಂಗಳೂರು ಮತ್ತು ಬಂಟ್ವಾಳದಲ್ಲಿ ಎರಡು-ಮೂರು ಬಾರಿ ಪುತ್ತಿಲ ಪರಿವಾರದ ಪ್ರಮುಖರು ಮತ್ತು ಬಿಜೆಪಿ ಹಿರಿಯ ನಾಯಕರು ಮಾತುಕತೆ ನಡೆಸಿದ್ದಾರೆ. ಈ ವೇಳೆ, ಪಕ್ಷದಲ್ಲಿ ಉಪಾಧ್ಯಕ್ಷ ಸ್ಥಾನ ಕೊಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆಯೂ ಜಿಲ್ಲಾ ಉಪಾಧ್ಯಕ್ಷ, ಮುಂದಿನ ಬಾರಿ ಪುತ್ತೂರಿನಲ್ಲಿ ಸ್ಪರ್ಧೆಗೆ ಅವಕಾಶ ಎನ್ನುವ ಮಾತಿನ ಭರವಸೆ ನೀಡಲಾಗಿತ್ತು. ಆದರೆ, ಅದನ್ನು ಪಕ್ಷದ ನಾಯಕರು ಪಾಲಿಸಿಲ್ಲ ಅನ್ನುವ ನೋವು ಪುತ್ತಿಲ ಕಡೆಯವರಿಗಿದೆ. ಹಾಗಾಗಿ, ಈ ಬಾರಿ ಇಂತಹ ಪೊಳ್ಳು ಭರವಸೆಗಳಿಗೆ ಸೊಪ್ಪು ಹಾಕದಿರಲು ನಿರ್ಧರಿಸಿದ್ದಾರೆ. ಒಂದೋ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸ್ಥಾನ ಸಿಗಬೇಕು, ಇಲ್ಲಾಂದ್ರೆ ರಾಜ್ಯ ಕಾರ್ಯದರ್ಶಿ ಅಥವಾ ಮುಂದಿನ ಲೋಕಸಭೆ ಸ್ಪರ್ಧೆಗೆ ಟಿಕೆಟ್ ಈ ಮೂರರಲ್ಲಿ ಒಂದಂತೂ ಸಿಗಲೇಬೇಕು ಅನ್ನುವ ನೆಲೆಯಲ್ಲಿ ಪುತ್ತಿಲ ಪರಿವಾರ ಪಟ್ಟು ಹಾಕಿದೆ ಎನ್ನಲಾಗುತ್ತಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆದಿಯಾಗಿ ಜಿಲ್ಲೆಯ ಅಧ್ಯಕ್ಷರು, ಹಿರಿಯ ನಾಯಕರೆಲ್ಲ ಬಂದು ಮಾತುಕತೆ ನಡೆಸಿದರೂ ಪಟ್ಟು ಸಡಿಲಿಸದ ಪುತ್ತಿಲ ಪರಿವಾರದ ಬಗ್ಗೆ ನಿರ್ಧರಿಸಲು ಇನ್ನು ರಾಜ್ಯ ನಾಯಕರಿಗೆ ಬಿಡಲು ಜಿಲ್ಲಾ ಸಮಿತಿ ನಿರ್ಧರಿಸಿದೆ ಎನ್ನಲಾಗುತ್ತಿದೆ.
ಈ ನಡುವೆ, ಪುತ್ತೂರಿನಲ್ಲಿ ಎರಡು ಸ್ಥಾನಗಳಿಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿದೆ. ಎರಡೂ ಕಡೆ ಪುತ್ತಿಲ ಪರಿವಾರ ಬಿಜೆಪಿಯನ್ನು ಏನೂ ಅಲ್ಲ ಎನ್ನುವಂತೆ ಮೂರನೇ ಸ್ಥಾನಕ್ಕೆ ತಳ್ಳಿದ್ದಲ್ಲದೆ, ಇಡೀ ಗ್ರಾಮದಲ್ಲಿ ಪಕ್ಷದ ಮತಗಳು ತನ್ನ ಪರವೇ ಬೀಳುವಂತೆ ನೋಡಿಕೊಂಡಿದೆ. ಬಿಜೆಪಿ ಕಡೆಯಿಂದ ಹಣ ಬಲ, ಜನ ಬಲದ ಮೂಲಕ ಒತ್ತಡ ಹಾಕಿದ್ದರೂ, ಅದಕ್ಕೆಲ್ಲ ಹಳ್ಳಿ ಜನರು ಮತ ನೀಡದೇ ಇರುವುದು ಪುತ್ತೂರಿನ ಬಿಜೆಪಿ ಪಾಲಿಗೆ ದೊಡ್ಡ ಕುಠಾರಘಾತ ಅನ್ನುವುದಕ್ಕೇನು ಅಡ್ಡಿಯಿಲ್ಲ. ಇವೆಲ್ಲ ಕಾರಣದಿಂದ ಪುತ್ತೂರಿನ ಬಿಜೆಪಿಯಲ್ಲಿರುವ ಕೆಲವು ನಾಯಕರಿಗಂತೂ ಅರುಣ್ ಪುತ್ತಿಲ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸುತರಾಂ ಇಷ್ಟವಿಲ್ಲ. ಕಾಂಗ್ರೆಸಿನಿಂದ ಬಂದು ಪಕ್ಷದಲ್ಲಿ ಆಯಕಟ್ಟಿನ ಸ್ಥಾನ ಗಿಟ್ಟಿಸಿಕೊಂಡಿರುವ ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೊಟ್ಟು ಸೇರಿದಂತೆ ನಳಿನ್ ಕುಮಾರ್ ಆಪ್ತರಾಗಿ ಗುರುತಿಸಿಕೊಂಡ ಕೆಲವರು ಅರುಣ್ ಪುತ್ತಿಲ ದೂರ ಇದ್ದರೆ ತಮಗೇ ಕ್ಷೇಮ ಎನ್ನುವ ಭಾವನೆಯಲ್ಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಊರಲ್ಲಿ ಇಷ್ಟೆಲ್ಲ ಬಂಡಾಯ ಎದ್ದಿರುವುದು ರಾಷ್ಟ್ರೀಯ ನಾಯಕರಿಗೆ ತಿಳಿಯದ ವಿಚಾರ ಅಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಾಗಿರುವುದು, ಇದರಿಂದ ರಾಜ್ಯದ ಬಿಜೆಪಿ ನಾಯಕರ ಬಗ್ಗೆ ಪಕ್ಷದ ಕೇಂದ್ರ ನಾಯಕರು ವಿಶ್ವಾಸ ಕಳಕೊಂಡಿರುವುದು, ಈ ಮಧ್ಯೆ ಪ್ರತಿಪಕ್ಷ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹೊಸಬರ ನೇಮಕ ಮಾಡದೆ ನಿರ್ಲಕ್ಷ್ಯ ಮಾಡಿರುವ ಹೈಕಮಾಂಡ್ ನಡೆ ಕುತೂಹಲ ಮೂಡಿಸಿದೆ. ಇದೇ ಕಾರಣಕ್ಕೆ ಪುತ್ತಿಲ ಪರಿವಾರ ಹೊಸ ರಾಜ್ಯಾಧ್ಯಕ್ಷರ ನೇಮಕ ಆಗೋದಕ್ಕೂ ಕಾದು ಕುಳಿತಿದೆ. ಆಗಸ್ಟ್ ಮೊದಲ ವಾರದಲ್ಲಿ ಎರಡೂ ಸ್ಥಾನಗಳಿಗೆ ನೇಮಕ ಆಗಲಿದೆ ಎನ್ನಲಾಗುತ್ತಿದ್ದು, ಹೊಸ ತಂಡದಲ್ಲಿ ಅರುಣ್ ಪುತ್ತಿಲರಿಗೆ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸವನ್ನೂ ಕಾರ್ಯಕರ್ತರು ಹೊಂದಿದ್ದಾರೆ. ಅದು ಕಾಣಿಸದೇ ಇದ್ದಲ್ಲಿ ಈಗಿನಿಂದಲೇ ಇಡೀ ಜಿಲ್ಲೆಯಲ್ಲಿ ಜಿಪಂ ಮತ್ತು ತಾಪಂ ಚುನಾವಣೆಗೆ ತಯಾರಿ ನಡೆಸಲು ಮುಂದಾಗಿದ್ದಾರೆ. ಹಾಗಾದಲ್ಲಿ ದಕ್ಷಿಣ ಕನ್ನಡ ಬಿಜೆಪಿಯೇ ಒಡೆದ ಮನೆಯಾಗಲಿದ್ದು, ಬಹುತೇಕ ಅತೃಪ್ತ ನಾಯಕರು ಪುತ್ತಿಲ ಪರಿವಾರ ಸೇರುವ ಆತಂಕದಲ್ಲಿ ಬಿಜೆಪಿ ಜಿಲ್ಲಾ ನಾಯಕರಿದ್ದಾರೆ
The BJP Plans to bring Independent candidate Arun Puthila back to the party from Puttur, who is now a major troublemaker for the BJP in the upcoming elections. Arun Puthila stood as an Independent candidate for the Karnataka elections in 2023.
22-08-25 12:29 pm
HK News Desk
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
22-08-25 02:00 pm
HK News Desk
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm