ಬ್ರೇಕಿಂಗ್ ನ್ಯೂಸ್
26-07-23 05:40 pm Mangaluru Correspondent ಕರಾವಳಿ
ಮಂಗಳೂರು, ಜುಲೈ 26: ನಗರದ ಏಜೆ ಆಸ್ಪತ್ರೆಯ ಮುಂದೆ ರಣಾಂಗಣವೇ ಏರ್ಪಟ್ಟಿತ್ತು. ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಕುಟುಂಬಸ್ಥರು ಮತ್ತು ಇತರ ಸಾರ್ವಜನಿಕರು ಆಸ್ಪತ್ರೆ ಮುಂದೆ ಜಮಾಯಿಸಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದ್ದಾರೆ. ಆದರೆ ವೈದ್ಯಾಧಿಕಾರಿ ಬಂದು ಹೇಳಿಕೆ ನೀಡಬೇಕೆಂಬ ಪ್ರತಿಭಟನಾಕಾರರ ಪಟ್ಟಿಗೆ ಪೊಲೀಸರು ಅವಕಾಶ ನೀಡಲಿಲ್ಲ.
ಮೂಡುಬಿದ್ರೆ ಬಳಿಯ ವೇಣೂರು ನಿವಾಸಿ ಶಿಲ್ಪಾ ಆಚಾರ್ಯ(34) ಹೆರಿಗೆಗೆಂದು ಜುಲೈ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಮಹಿಳೆಯ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದ ವೈದ್ಯೆ ವೀಣಾ ಭಗವಾನ್ ಅಂದು ಭಾನುವಾರ ಆಗಿದ್ದರಿಂದ ನಾನು ರಜೆಯಲ್ಲಿದ್ದೇನೆ, ಡ್ಯೂಟಿ ಡಾಕ್ಟರ್ ಹೆರಿಗೆ ಮಾಡುತ್ತಾರೆಂದು ಹೇಳಿ ಜಾರಿಕೊಂಡಿದ್ದರು ಎನ್ನಲಾಗಿದೆ. ಇತ್ತ ಅದೇ ದಿನ ಮಹಿಳೆಗೆ ಸಿಸೇರಿಯನ್ ನಡೆಸಿದ್ದು ವೈದ್ಯರು ಮಗುವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಆದರೆ ಮಹಿಳೆಗೆ ಬ್ಲೀಡಿಂಗ್ ಆಗಿದ್ದರಿಂದ ಸರಿಪಡಿಸಲಾಗದೆ ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಎಜೆ ಎಸ್ಪತ್ರೆಯಲ್ಲಿ ಬಡ ಮಹಿಳೆಯರ ಹೆರಿಗೆ ಸೌಲಭ್ಯ ಉಚಿತ ಇದೆಯೆಂದು ಮಹಿಳೆಯನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬ್ಲಡ್ ಬೇಕೆಂದು ಹೇಳಿ, 23 ಬಾಟಲ್ ರಕ್ತ ಪಡೆದಿದ್ದರು. ಗರ್ಭಕೋಶ ಸಮಸ್ಯೆ ಇದೆಯೆಂದು ಹೇಳಿ ಅದನ್ನೂ ವೈದ್ಯರು ತೆಗೆದಿದ್ದರು. ಈಗ ಮಗು ಉಳಿದುಕೊಂಡಿದೆ, ತಾಯಿ ಉಳಿದಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಹೆರಿಗೆ ಬಳಿಕ, ಕೋಮಾ ಸ್ಥಿತಿಗೆ ಜಾರಿದ್ದ ಮಹಿಳೆಗೆ ಜುಲೈ 19ರಂದು ಬ್ರೇನ್ ಡೆಡ್ ಆಗಿದೆಯೆಂದು ತಿಳಿಸಲಾಗಿತ್ತು. ಜುಲೈ 25ರಂದು ಮಹಿಳೆ ಸಾವನ್ನಪ್ಪಿದ್ದಾಗಿ ತಿಳಿಸಿದ್ದು, ಕುಟುಂಬಸ್ಥರು ಏನು ಮಾಡುವುದೆಂದು ತೋಚದೆ ದಿಕ್ಕೆಟ್ಟು ಹೋಗಿದ್ದರು. ಈ ನಡುವೆ, ಡಿವೈಎಫ್ಐ ಪ್ರಮುಖರು ಆಸ್ಪತ್ರೆಗೆ ತೆರಳಿ ವೈದ್ಯರ ನಿರ್ಲಕ್ಷ್ಯದಿಂದ ಬಡ ಮಹಿಳೆಯ ಸಾವಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಮಹಿಳೆ ಸಾವಿನ ಬಳಿಕ ವಿಶ್ವಕರ್ಮ ಸಮುದಾಯದ ವತಿಯಿಂದ ಶವ ಮುಂದಿಟ್ಟು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಅದರಂತೆ, ಸಮುದಾಯದ ಪ್ರತಿನಿಧಿಗಳು, ಆಕ್ರೋಶಿತರ ಗುಂಪು ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಆಸ್ಪತ್ರೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ವೈದ್ಯಾಧಿಕಾರಿ ಬಂದು ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದರೂ, ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ.
ಬಳಿಕ ಶವವನ್ನು ವೆನ್ಲಾಕ್ ಆಸ್ಪತ್ರೆಗೆ ಒಯ್ಯಲು ಆಂಬುಲೆನ್ಸ್ ಬಂದಿದ್ದು, ಅಷ್ಚರಲ್ಲಿ ಉದ್ರಿಕ್ತ ಯುವಕರ ಗುಂಪು ಅಡ್ಡಗಟ್ಟಿದ್ದು, ಹೋಗಲು ಬಿಡಲ್ಲ ಎಂದು ತಡೆ ಹಾಕಿದ್ದಾರೆ. ಈ ವೇಳೆ, ಕದ್ರಿ ಠಾಣೆಯ ಪೊಲೀಸರು ಮತ್ತು ಗುಂಪಿನ ಮಧ್ಯೆ ತಳ್ಳಾಟ ನಡೆದಿದ್ದು, ಒಂದಷ್ಟು ಹೊತ್ತು ಜಟಾಪಟಿ ಆಗಿದೆ. ಕೊನೆಗೆ, ಯುವಕರನ್ನು ಬದಿಗೊತ್ತಿ ಆಂಬುಲೆನ್ಸ್ ಹೋಗಲು ಪೊಲೀಸರು ಅವಕಾಶ ನೀಡಿದ್ದಾರೆ. ಸ್ಥಳಕ್ಕೆ ಡಿಎಚ್ಓ ಬರಬೇಕು, ಈ ರೀತಿಯ ನಿರ್ಲಕ್ಷ್ಯದ ಸಾವಿನ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಕೊನೆಗೆ, ವಿಶ್ವಕರ್ಮ ಕೆಲಸಗಾರರ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಆಚಾರ್ಯ, ಜಾಗೃತ ಮಹಿಳಾ ವೇದಿಕೆ ಅಧ್ಯಕ್ಷೆ ಪವಿತ್ರಾ ಆಚಾರ್ಯ, ಉದ್ರಿಕ್ತ ಪ್ರತಿಭಟನಾಕಾರರನ್ನು ಮನವೊಲಿಸಿದ್ದಾರೆ. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಸೇರಿದ್ದ ಯುವಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆ ಬಗ್ಗೆ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಆದರೆ, ನಾವು ಕೊಟ್ಟ ರೀತಿಯಲ್ಲಿ ಎಫ್ಐಆರ್ ಮಾಡಿಲ್ಲ, ನಿರ್ಲಕ್ಷ್ಯ ಮಾಡಿದ ವೈದ್ಯರ ವಿರುದ್ಧವೇ ಕೇಸು ದಾಖಲಿಸಬೇಕೆಂದು ಹೇಳಿದರೂ ಮಾಡಿಲ್ಲ. ನಮ್ಮಂತಹ ಬಡವರ ಪ್ರಾಣಕ್ಕೆ ಬೆಲೆ ಇಲ್ಲವೇ.. ಪೊಲೀಸರು ನಮ್ಮನ್ನು ನಿನ್ನೆ ಮಧ್ಯಾಹ್ನದಿಂದ ರಾತ್ರಿ ಹತ್ತು ಗಂಟೆ ವರಗೂ ಕಾಯಿಸಿದ್ದಾರೆ. ಬಳಿಕ ಎಫ್ಐಆರ್ ಮಾಡಿದ್ದಾರೆ. ಇವರಿಂದ ನ್ಯಾಯ ಸಿಗಲು ಸಾಧ್ಯವೇ ಎಂದು ಪವಿತ್ರಾ ಆಚಾರ್ಯ ಪ್ರಶ್ನೆ ಮಾಡಿದ್ದಾರೆ. ವೈದ್ಯರಾಗಿದ್ದ ವೀಣಾ ಭಗವಾನ್ ಅವರಲ್ಲಿ ಕೇಳಿದಾಗ, ನಮ್ಮ ಜೊತೆ ನಿರ್ಲಕ್ಷ್ಯದ ಮಾತುಗಳನ್ನಾಡಿದ್ದಾರೆ. ಈಗ ಯಾರು ಸಿಸೇರಿಯನ್ ಮಾಡಿದ್ದಾರೆಂದು ಕೇಳಿದರೂ, ಹೆಸರು ಹೇಳುವುದಿಲ್ಲ. ಅಷ್ಟು ಜವಾಬ್ದಾರಿ ಇಲ್ಲದ ವೈದ್ಯರು ಯಾಕೆ ಸಿಸೇರಿಯನ್ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಅಮ್ಮನಿಗಾಗಿ ಮನೆಯಲ್ಲಿ ಕಾದುಕುಳಿತ ದೊಡ್ಡ ಮಗಳು!
ದೊಡ್ಡ ಮಗಳು 12 ವರ್ಷದವಳಿದ್ದು, ಮನೆಯಲ್ಲಿ ಅಮ್ಮನಿಗಾಗಿ ಕಾಯುತ್ತಿದ್ದಾಳೆ. 23 ದಿವಸಗಳಿಂದ ಪತ್ನಿಯ ಜೊತೆಗಿದ್ದು ಹೋರಾಡಿದ್ದೇನೆ. ಯಾರದು ತಪ್ಪಾಗಿದೆ ಎಂದು ಗೊತ್ತಿಲ್ಲ. ವೈದ್ಯರು ಹೀಗೆ ಮಾಡಬಾರದಿತ್ತು. ಆಕೆ ಬರುವಾಗ ಆರೋಗ್ಯದಲ್ಲೇ ಇದ್ದರು. ಇವರು ಸಿಸೇರಿಯನ್ ಮಾಡಬೇಕೆಂದು ಹೇಳಿ ಆವತ್ತೇ ಮಾಡಿದ್ದರು. ವೈದ್ಯರು ಇಲ್ಲದಿದ್ದರೆ, ಉಷಾರಿದ್ದವರನ್ನು ಯಾಕೆ ಸಿಸೇರಿಯನ್ ಮಾಡಬೇಕಿತ್ತು. ಇಷ್ಟು ದಿನವೂ ನಿರ್ಲಕ್ಷ್ಯ ಮಾಡಿದ್ದಾರೆ, ನಮ್ಮನ್ನು ಕೇಳುವವರಿಲ್ಲ ಎಂದು ಮೃತ ಶಿಲ್ಪಾ ಆಚಾರ್ಯ ಅವರ ಪತಿ ಪ್ರದೀಪ್ ಅಳಲು ತೋಡಿಕೊಂಡಿದ್ದಾರೆ.
Pregnant women die due to doctors negligence, the family alleges at AJ Hospital in Mangalore. The deceased has been identified as Shipa Acharaya (34). Hundreds of people gathered at the hospital to fight and demand justice amid heavy rains, fighting with Kadri Police, who arrived at the spot.
22-08-25 08:01 pm
Bangalore Correspondent
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
Dharmasthala, Acharya Sri Gunadharanandi Maha...
21-08-25 10:21 pm
22-08-25 08:07 pm
HK News Desk
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
22-08-25 05:07 pm
Mangalore Correspondent
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm