ಬ್ರೇಕಿಂಗ್ ನ್ಯೂಸ್
02-07-23 03:16 pm Mangalore Correspondent ಕರಾವಳಿ
ಮಂಗಳೂರು, ಜುಲೈ 2: ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತುಂಬೆಯ ಬ್ರಹ್ಮರಕೂಟ್ಲು ಎಂಬಲ್ಲಿ ಅಡ್ಡಲಾಗಿದ್ದ ಬ್ರಹ್ಮಸನ್ನಿಧಿಯನ್ನು ಕಡೆಗೂ ತೆರವುಗೊಳಿಸಿ ಬೇರೆ ಕಡೆ ನಿರ್ಮಿಸಲು ನಿರ್ಧರಿಸಲಾಗಿದೆ.
ಹೆದ್ದಾರಿ ಮಧ್ಯದಲ್ಲಿದ್ದು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೇ ತೊಡಕಾಗಿದ್ದ ಶ್ರೀ ಬ್ರಹ್ಮದೇವರ ಸನ್ನಿಧಿಯನ್ನು ಕಳ್ಳಿಗೆ ಗ್ರಾಮದಲ್ಲೇ ಬೇರೆ ಕಡೆ ನಿರ್ಮಿಸಲು ಆಸ್ತಿಕರು ಪ್ರಶ್ನಾ ಚಿಂತನೆಯ ಬಳಿಕ ನಿರ್ಧರಿಸಿದ್ದಾರೆ. ಬ್ರಹ್ಮನಿಗೆ ಪೂಜೆ ಸಲ್ಲಿಸುವ ಗುಡಿ ದೇಶದಲ್ಲಿ ಕಾಣಸಿಗುವುದೇ ಭಾರೀ ಅಪರೂಪ. ಅಂದಾಜು ಪ್ರಕಾರ, ಅಸ್ಸಾಂ ರಾಜ್ಯದ ಬ್ರಹ್ಮಪುತ್ರಾ ನದಿ ದಡದಲ್ಲಿ ಒಂದು ಗುಡಿ ಬಿಟ್ಟರೆ, ಮತ್ತೊಂದು ಬ್ರಹ್ಮ ದೇವರ ಗುಡಿ ಇರುವುದು ಕರ್ನಾಟಕ ರಾಜ್ಯದ ಬಂಟ್ವಾಳದಲ್ಲಿ ಮಾತ್ರ ಎನ್ನಲಾಗುತ್ತದೆ.
2006-07ರಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ಆರಂಭವಾದಾಗ ಬ್ರಹ್ಮ ಸನ್ನಿಧಿ ತೆರವುಗೊಳಿಸಲು ಹೆದ್ದಾರಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. ಸನ್ನಿಧಿ ತೆರವುಗೊಳಿಸುವುದಕ್ಕೆ ಜನವಿರೋಧ ವ್ಯಕ್ತವಾಗಿತ್ತು. ಆಭಾಗದಲ್ಲಿ ಹೆದ್ದಾರಿ ಕೆಲಸವೂ ನಿಂತುಹೋಗಿತ್ತು. 2009ರ ನವೆಂಬರ್ ನಲ್ಲಿ ಗುತ್ತಿಗೆ ವಹಿಸಿದ್ದ ಇರ್ಕಾನ್ ಸಂಸ್ಥೆ ಅಧಿಕಾರಿಗಳು ಏಕಾಏಕಿ ಜೆಸಿಬಿ ನುಗ್ಗಿಸಿ ಸನ್ನಿಧಿ ಕೆಡವಲು ಮುಂದಾಗಿದ್ದರು. ಆದರೆ, ಯಂತ್ರವು ಕೆಟ್ಟು ಹೋಗಿ ಕಾಮಗಾರಿಗೆ ತಡೆಯಾಗಿತ್ತು. ಆನಂತರ ಬ್ರಹ್ಮರಕೂಟ್ಲು ಶ್ರೀ ಬ್ರಹ್ಮ ಸನ್ನಿಧಿ ಉಳಿಸಿ ಹೋರಾಟ ಸಮಿತಿ ರಚಿಸಿ ಗ್ರಾಮಸ್ಥರೆಲ್ಲ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಭಾರೀ ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸಿದ್ದರಿಂದ ತೆರವು ಕಾರ್ಯಕ್ಕೆ ಬ್ರೇಕ್ ಬಿದ್ದಿತ್ತು.
ಬಳಿಕ ಹೆದ್ದಾರಿ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಸೇರಿ ಸನ್ನಿಧಿಯಲ್ಲಿ ಅಷ್ಟಮಂಗಳ ಪ್ರಶ್ನೆ ಇರಿಸಿದಾಗ, ಸನ್ನಿಧಿ ತೆರವುಗೊಳಿಸಲು ದೇವರ ಒಪ್ಪಿಗೆ ಇಲ್ಲ. ಇದ್ದ ಜಾಗದಲ್ಲೇ ಮೇಲಕ್ಕೆ ಏರಿಸಲು ಮಾತ್ರ ಅನುಮತಿ ದೊರೆಯುವಂತಾಗಿತ್ತು. ಇದರಿಂದಾಗಿ ಹೆದ್ದಾರಿ ಕಾಮಗಾರಿ ಈ ಭಾಗದಲ್ಲಿ ಉಳಿದು ಹೋಗಿದ್ದಲ್ಲದೆ, ಏಕಮುಖ ರಸ್ತೆಯಲ್ಲೇ ವಾಹನಗಳು ಸಂಚರಿಸುವಂತಾಗಿತ್ತು.
ಇತ್ತೀಚೆಗೆ ಸನ್ನಿಧಿಯನ್ನು ಜೀರ್ಣೋದ್ಧಾರ ಮಾಡಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿತ್ತು. ಅಲ್ಲದೆ, ಸನ್ನಿಧಿ ರಸ್ತೆಯಿಂದ ತಗ್ಗು ಪ್ರದೇಶದಲ್ಲಿದ್ದರಿಂದ ಅಲ್ಲಿಗೆ ತ್ಯಾಜ್ಯ ಎಸೆಯುವುದು, ನದಿ ತುಂಬಿ ಹರಿದಾಗ ಸನ್ನಿಧಿ ಸುತ್ತ ಕೆಸರು ತುಂಬಿಕೊಳ್ಳುತ್ತಿತ್ತು. ಜೀರ್ಣೋದ್ಧಾರ ಮಾಡಲು ಸನ್ನಿಧಿ ಇದ್ದ ಜಾಗ ಸರ್ಕಾರದ್ದಾಗಿದ್ದರಿಂದ ಬದಲಾವಣೆ ಮಾಡಲು ಸಾಧ್ಯ ಇರಲಿಲ್ಲ. ಹೀಗಾಗಿ ಮತ್ತೊಮ್ಮೆ ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ದೇವರಲ್ಲಿ ಪ್ರಾರ್ಥಿಸಿದಾಗ ಸನ್ನಿಧಿಯ ಉತ್ತರ ದಿಕ್ಕಿನಲ್ಲಿರುವ ಜಾಗ ಸೂಕ್ತ. ಅಲ್ಲಿ ಪ್ರತ್ಯೇಕ ಗುಡಿ ನಿರ್ಮಿಸಬಹುದು ಎಂಬ ಅಂಶ ತಿಳಿದುಬಂದಿತ್ತು. ಕಳ್ಳಿಗೆ ಗ್ರಾಮದ ಆಸುಪಾಸಿನ ಆಸ್ತಿಕ ಬಂಧುಗಳು, ಪ್ರಮುಖರ ಸಮಕ್ಷಮದಲ್ಲಿ 15 ವರ್ಷಗಳಿಂದ ತಿಕ್ಕಾಟಕ್ಕೆ ಕಾರಣವಾಗಿದ್ದ ಸನ್ನಿಧಿಯನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ.
ತುಂಬೆಯ ಅವೈಜ್ಞಾನಿಕ ಟೋಲ್ ಗೇಟ್ ಮುಂಭಾಗದಲ್ಲಿ ಬ್ರಹ್ಮಸನ್ನಿಧಿಯ ಕಾರಣ ಹೆದ್ದಾರಿ ಕಡಿತಗೊಂಡು ಒಂದೇ ರಸ್ತೆಯಲ್ಲಿ ವಾಹನಗಳ ಸಂಚಾರದಿಂದಾಗಿ ಬಹಳಷ್ಟು ಅಪಘಾತ ನಡೆದಿದ್ದು ಹಲವರು ಪ್ರಾಣ ಕಳಕೊಂಡಿದ್ದಾರೆ. ರಸ್ತೆ ನಿರ್ಮಾಣಕ್ಕೂ ಮೊದಲೇ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ನಕ್ಷೆ ಬದಲು ಮಾಡುತ್ತಿದ್ದರೆ, ಈ ಸಮಸ್ಯೆ ಇರುತ್ತಿರಲಿಲ್ಲ. ಬ್ರಹ್ಮಸನ್ನಿಧಿ ಇರುವುದನ್ನು ಲೆಕ್ಕಿಸದೆ ಹೆದ್ದಾರಿ ಇಲಾಖೆ ಅಧಿಕಾರಿಗಳು ನಕ್ಷೆ ರಚಿಸಿದ್ದು ಸಮಸ್ಯೆಗೆ ಕಾರಣವಾಗಿತ್ತು.
Brahma sanidhi to be moved finally for highway extention at Bantwal Brahmarakootlu in Mangalore.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
22-08-25 10:00 pm
HK News Desk
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
22-08-25 05:07 pm
Mangalore Correspondent
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
22-08-25 09:57 pm
HK News Desk
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm