ಬ್ರೇಕಿಂಗ್ ನ್ಯೂಸ್
30-05-23 07:05 pm Mangalore Correspondent ಕರಾವಳಿ
ಮಂಗಳೂರು, ಮೇ 30: ಮುಸ್ಲಿಮ್ ಮಹಿಳೆಯರನ್ನು ಬೀದಿಗೆ ತಳ್ಳುವ ಕರಾಳ ಪದ್ಧತಿಯನ್ನು ನಿವಾರಿಸುವುದಕ್ಕಾಗಿ ಕೇಂದ್ರದ ಮೋದಿ ಸರ್ಕಾರ ತ್ರಿವಳಿ ತಲಾಖ್ ನಿಷೇಧ ಮಾಡಿತ್ತು. ಹಾಗೇನಾದರೂ ಮಾಡಿದಲ್ಲಿ ಕಠಿಣ ಕ್ರಮ ಜರುಗಿಸಲು ಕಾಯ್ದೆ ಜಾರಿ ಮಾಡಿತ್ತು. ಆದರೆ ಸುಶಿಕ್ಷಿತ ಜಿಲ್ಲೆಯೆಂದು ಹೆಸರಾಗಿರುವ ಮಂಗಳೂರಿನಲ್ಲಿ ತರಕಾರಿ ವ್ಯಾಪಾರಿ ವ್ಯಕ್ತಿಯೊಬ್ಬ ತಲಾಖ್ ತಲಾಖ್ ಹೇಳಿ ತನ್ನ ಪತ್ನಿಗೆ ವಿಚ್ಛೇದನ ನೀಡಿ, ಆಕೆಯನ್ನು ಮನೆಯಿಂದ ಹೊರ ದಬ್ಬಿರುವುದು ಬೆಳಕಿಗೆ ಬಂದಿದೆ.
ಮಂಗಳೂರಿನಲ್ಲಿ ತರಕಾರಿ ವ್ಯಾಪಾರಿ ಆಗಿರುವ, ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಹುಸೇನ್ ಈ ಕೃತ್ಯ ಎಸಗಿರುವ ವ್ಯಕ್ತಿಯಾಗಿದ್ದು, ಆರೋಪಿ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಮೊದಲ ಪತ್ನಿಗೆ ಇಬ್ಬರು ಮಕ್ಕಳನ್ನು ಕೊಟ್ಟು ವಿಚ್ಛೇದನ ನೀಡಿದ್ದ ಮಹಮ್ಮದ್ ಹುಸೇನ್ 2022ರ ನವೆಂಬರ್ ನಲ್ಲಿ ಶಬಾನಾ ಎಂಬ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಆಕೆಗೂ ಈ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಳು. ಆನಂತರ, ಹುಸೇನ್ ಜೊತೆಗೆ ಎರಡನೇ ಮದುವೆಯಾಗಿದ್ದಳು.
ಮದುವೆ ಬಳಿಕ ಮಾರ್ನಮಿಕಟ್ಟೆಯ ಗಂಡನ ಮನೆಯಲ್ಲೇ ವಾಸವಿದ್ದಳು. ಈ ನಡುವೆ, ಇತ್ತೀಚೆಗೆ ತಾಯಿ ಮನೆಗೆ ಹೋಗಿದ್ದ ಶಬಾನಾ ಆನಂತರ ಗಂಡನ ಮನೆಗೆ ಬಂದಿದ್ದಾಗ, ಅತ್ತೆ ಜೊಹರಾ ಮತ್ತು ಮಾವ ಅಹ್ಮದ್ ಅಬ್ಬು ತಡೆದಿದ್ದಾರೆ. ಇದೇ ವೇಳೆ, ಮನೆಗೆ ಬಂದಿದ್ದ ಗಂಡ ಮಹಮ್ಮದ್ ಹುಸೇನ್, ಪತ್ನಿಗೆ ಹಲ್ಲೆ ನಡೆಸಿದ್ದು ಎದೆ ಮತ್ತು ಕುತ್ತಿಗೆಯ ಭಾಗಕ್ಕೆ ಗುದ್ದಿ ಹಲ್ಲೆ ಮಾಡಿದ್ದಾನೆ. ಬಳಿಕ ಶಬಾನಾಳನ್ನು ನೆಲಕ್ಕೆ ಬೀಳಿಸಿ ಕಿಬ್ಬೊಟ್ಟೆಗೆ ತುಳಿದು ತೀವ್ರ ಹಲ್ಲೆಗೈದಿದ್ದಾನೆ. ಶಬಾನಾ ಈಗ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದು, ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಪಾಂಡೇಶ್ವರ ಠಾಣೆಯಲ್ಲಿ ಆರೋಪಿ ಮಹಮ್ಮದ್ ಹುಸೇನ್, ಕೃತ್ಯಕ್ಕೆ ಸಹಕಾರ ನೀಡಿದ್ದ ಅತ್ತೆ ಜೊಹರಾ ಮತ್ತು ಮಾವ ಅಹ್ಮದ್ ಅಬ್ಬು ಸಹಕಾರ ವಿರುದ್ಧ ಪ್ರಕರಣ ನೀಡಲಾಗಿದೆ. ತನ್ನಲ್ಲಿದ್ದ ಹತ್ತು ಲಕ್ಷ ಮೌಲ್ಯದ ಒಡವೆ, ಬಂಗಾರವನ್ನು ಪತಿ ಮಹಮ್ಮದ್ ಹುಸೇನ್ ಕಿತ್ತುಕೊಂಡಿದ್ದು, ಈಗ ಮನೆಯಿಂದಲೇ ಹೊರಗೆ ಹಾಕಿದ್ದಾನೆ. ಹೊಟ್ಟೆಗೆ ತುಳಿದು ಎದೆಯ ಭಾಗಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾನೆಂದು ಮಹಿಳೆ ದೂರಿದ್ದಾರೆ. ಆರೋಪಿಗಳ ವಿರುದ್ಧ ಮುಸ್ಲಿಮ್ ಮಹಿಳೆಗೆ ತ್ರಿವಳಿ ತಲಾಖ್ ನಿಂದ ರಕ್ಷಣೆ ನೀಡುವ 2019ರ ಕಾಯ್ದೆ, ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.
A Muslim woman has lodged a police complaint against her husband for throwing her and their two children out after pronouncing triple talaq in this district of the state. Shabana registered a complaint with Pandeshwara police station in Mangaluru city against Mohammad Hussain, a vegetable vendor.
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 10:22 pm
Mangalore Correspondent
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
23-08-25 10:49 pm
Mangalore Correspondent
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm