ಬ್ರೇಕಿಂಗ್ ನ್ಯೂಸ್
21-05-23 01:52 pm Mangalore Correspondent ಕರಾವಳಿ
ಬಂಟ್ವಾಳ, ಮೇ 21: ಬೇಸಗೆ ಕಳೆದು ಮಳೆಗಾಲಕ್ಕೆ ಹತ್ತಿರ ಆಗುತ್ತಿದ್ದರೂ, ಈ ಬಾರಿ ಮಳೆಯ ದರ್ಶನ ಆಗದೇ ಇರುವುದರಿಂದ ಕರಾವಳಿಯ ಜೀವನದಿ ನೇತ್ರಾವತಿ ಪೂರ್ತಿ ಬತ್ತಿಹೋಗಿದೆ. ಬಂಟ್ವಾಳ ಪೇಟೆಯನ್ನು ಸುತ್ತಿಹಾಕಿ ಹರಿಯುವ ನದಿಯಲ್ಲೀಗ ಅನಾದಿ ಕಾಲದ ಜೀವನ ದರ್ಶನ ಪ್ರತಿಫಲನ ಆಗುತ್ತಿದೆ. ನೀರಿಲ್ಲದೆ ಬರಡಾಗಿರುವ ನದಿಯ ತಳದಲ್ಲಿ ಬಂಡೆಕಲ್ಲುಗಳ ಕೆತ್ತನೆ, ದೇವರ ಪಾಣಿಪೀಠದ ದರ್ಶನ ಕುತೂಹಲ ಮೂಡಿಸಿದೆ.
ಬಂಟ್ವಾಳ ಪೇಟೆಯ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಹರಿಯುವ ನದಿಯ ತಳದಲ್ಲಿ ಕುತೂಹಲ ಮೂಡಿಸುವ ಚಿತ್ರಣ ಕಂಡುಬಂದಿದೆ. ಬಂಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಪ್ರಾಚೀನ ಬದುಕಿನ ಚಿತ್ರಣ ಕಂಡುಬರುತ್ತದೆ. ಇತಿಹಾಸಕಾರರು ಅಧ್ಯಯನಕ್ಕೆ ಹೊರಟರೆ, ಹಳೆಕಾಲದ ಜನರ ಬದುಕು- ಬವಣೆಯ ಚಿತ್ರಣ ಸಿಗಬಹುದು. ಅಪರೂಪಕ್ಕೆ ಇಂಥ ನೀರಿಲ್ಲದ ವಿದ್ಯಮಾನ ಆಗುತ್ತಿರುವುದರಿಂದ ಸ್ಥಳೀಯರಿಗೆ ಅಚ್ಚರಿಯ ನೋಟಗಳು ಕಾಣಸಿಗುತ್ತವೆ. ಶಿವ, ನಂದಿ, ಪಾಣಿಪೀಠ, ಚೆನ್ನಮಣೆ, ಊಟದ ಬಟ್ಟಲು, ಜಡೆ, ಸೂರ್ಯಚಂದ್ರ, ಕಾಲಿನ ಪಾದದ ಆಕೃತಿ... ಹೀಗೆ ಗಮನಿಸುತ್ತಾ ಹೋದರೆ ಶಿಲೆಗಳ ನಡುವೆ ಹುದುಗಿ ಹೋಗಿರುವ ಅನಾದಿಕಾಲದ ಇತಿಹಾಸದ ದರ್ಶನ ಆಗುತ್ತದೆ.




ಈ ಬಗ್ಗೆ ಸ್ಥಳೀಯ ಹಿರಿಯರಾದ ಬಂಟ್ವಾಳ ಪುರಸಭೆ ಸದಸ್ಯ ಗೋವಿಂದ ಪ್ರಭು ಅವರಲ್ಲಿ ಕೇಳಿದಾಗ, ನಾವು ಸಣ್ಣದಿರುವಾಗಲೂ ಇದೇ ರೀತಿ ನದಿಯಲ್ಲಿ ನೀರು ಖಾಲಿಯಾದಾಗ ಸೀತಾದೇವಿ ಪಾದ ಎಂದು ನೋಡಲು ಬರುತ್ತಿದ್ದೆವು. ಈಶ್ವರ ದೇವರು, ಪಾಣಿಪೀಠ, ಕಲ್ಲಿನ ಬಟ್ಟಲು, ಚೆನ್ನೆಮಣೆ ಇವೆಲ್ಲ ಕಾಣಸಿಗುತ್ತಿದ್ದವು. ಈ ಬಾರಿ ನೀರು ಖಾಲಿಯಾಗಿದ್ದರಿಂದ ಮತ್ತೆ ಅದೇ ರೀತಿಯ ಚಿತ್ರಣ ಕಂಡಿದೆ. ಅನಾದಿ ಕಾಲದಲ್ಲಿ ಯಾರೋ ಸಾಧಕರು, ಸಂತರು ಇಲ್ಲಿ ಪೂಜೆ ಮಾಡುತ್ತಿದ್ದಿರಬಹುದು ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.



ಹಿಂದೆಲ್ಲ ಪ್ರಾಚೀನ ಕಾಲದಲ್ಲಿ ನದಿ ಬದಿಯಲ್ಲೇ ನಾಗರಿಕತೆಗಳು ಬೆಳೆದಿದ್ದವು. ಅಂದರೆ, ಜನರು ನದಿ ಬದಿಗಳಲ್ಲಿ ವಾಸ ಇರುತ್ತಿದ್ದರು. ಅಂಥ ಸಂದರ್ಭದಲ್ಲಿ ಪೂಜೆ, ಪುನಸ್ಕಾರಕ್ಕೆ ಕಲ್ಲುಗಳೇ ದೇವರಾಗಿದ್ದವು. ನಿಧಾನಕ್ಕೆ ಇಂಥ ಕುರುಹುಗಳು ನದಿಯ ತಳಕ್ಕೆ ಸೇರಿಹೋಗಿದ್ದಿರಬಹುದು. ಬಂಟ್ವಾಳದಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಹಳೆಕಾಲದವಾಗಿದ್ದು ನದಿ ತಳದಲ್ಲಿ ಸಿಕ್ಕಿರುವ ಕುರುಹುಗಳಿಗೂ ದೇವಸ್ಥಾನಕ್ಕೂ ಸಂಬಂಧ ಇದ್ದಿರಲೂಬಹುದು. ಇದೇನಿದ್ದರೂ, ನದಿಯ ತಳದಲ್ಲಿ ಬಂಡೆ ಕಲ್ಲುಗಳ ಚಿತ್ರಣ, ನೀರಿನ ಸವೆತಕ್ಕೆ ಸಿಲುಕಿ ಆಕರ್ಷಣೆ ಮೂಡಿಸುವ ಶಿಲೆಗಳು ಸ್ಥಳೀಯರ ಆಕರ್ಷಣೆಗೆ ಕಾರಣವಾಗಿವೆ.
Ancient Engravings of gods found in Rocks at Netravati river at Bantwal in Mangalore. These engravings were found behind the Mahalingeshwara Temple. The rocks found here have the ancient engravings of religious practises. Shiva, Nandi, Pranipeeta and many more engravings have been found.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm