ಬ್ರೇಕಿಂಗ್ ನ್ಯೂಸ್
04-05-23 09:33 pm Mangalore Correspondent ಕರಾವಳಿ
ಮಂಗಳೂರು, ಮೇ 4: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮತ್ತೆ ಇಬ್ಬರು ಆರೋಪಿಗಳ ಹೆಸರಲ್ಲಿ ಹೆಚ್ಚುವರಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಮಡಿಕೇರಿ ಮೂಲದ ತುಫೈಲ್ ಎಂ.ಎಚ್. ಎಂಬಾತನೇ ಕಟುಕರ ಪಾಲಿಗೆ ಮಾಸ್ಟರ್ ಮೈಂಡ್ ಮತ್ತು ಟ್ರೈನರ್ ಆಗಿದ್ದ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ತುಫೈಲ್ ಮತ್ತು ಮಹಮ್ಮದ್ ಜಾಬೀರ್ ವಿರುದ್ಧ ಎನ್ಐಎ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಗುರುತರ ಆರೋಪಗಳನ್ನು ಹೊರಿಸಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಯುಎ(ಪಿ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದಂತಾಗಿದೆ.

ಸುಳ್ಯದ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಸಮಾಜದಲ್ಲಿ ಹಿಂಸೆ ಹಬ್ಬಿಸಲು ಮತ್ತು ಹಿಂದುಗಳಲ್ಲಿ ಭೀತಿ ಮೂಡಿಸಲು ಪಿಎಫ್ಐ ಕಾರ್ಯಕರ್ತರು ಸಂಚು ಹೂಡಿ ಕೊಲೆ ಮಾಡಿದ್ದರು ಎಂದು ಈ ಕುರಿತು ಜನವರಿ 20ರಂದು ಮೊದಲ ಬಾರಿಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಎನ್ಐಎ ಅಧಿಕಾರಿಗಳು ಉಲ್ಲೇಖಿಸಿದ್ದರು. ದೇಶದಲ್ಲಿ 2047ರ ವೇಳೆಗೆ ಇಸ್ಲಾಮಿಕ್ ಆಡಳಿತ ತರುವ ನಿಟ್ಟಿನಲ್ಲಿ ಈ ರೀತಿಯ ಕೆಲಸದಲ್ಲಿ ಪಿಎಫ್ಐ ತೊಡಗಿಕೊಂಡಿದೆ ಎಂದೂ ಉಲ್ಲೇಖ ಮಾಡಿತ್ತು. ಒಂದು ಸಮುದಾಯದ ಪ್ರಮುಖರನ್ನು ಟಾರ್ಗೆಟ್ ಮಾಡಿ ಕೊಲ್ಲುವುದಕ್ಕಾಗಿಯೇ ಸರ್ವಿಸ್ ಟೀಮ್ ಅಥವಾ ಕಿಲ್ಲರ್ ಸ್ಕ್ವಾಡ್ ಅನ್ನುವ ತಂಡವನ್ನು ಪಿಎಫ್ಐ ರಚಿಸಿಕೊಂಡಿತ್ತು ಎಂದು ಹೇಳಿತ್ತು.

ಇದೀಗ ಪೂರಕ ಆರೋಪ ಪಟ್ಟಿಯಲ್ಲಿ ಮಡಿಕೇರಿ ಮೂಲದ ತುಫೈಲ್ ಎಂ.ಎಚ್, ಪಿಎಫ್ಐ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದು, ಕೊಡಗಿನಲ್ಲಿ ಸರ್ವಿಸ್ ಟೀಮ್ ಉಸ್ತುವಾರಿ ಹೊಂದಿದ್ದ. ಅಲ್ಲದೆ, ಸರ್ವಿಸ್ ಟೀಮ್ ಸದಸ್ಯರಿಗೆ ಶಸ್ತ್ರ ಮತ್ತು ಹರಿತ ಆಯುಧಗಳ ಮೂಲಕ ಎದುರಾಳಿಯನ್ನು ಕೊಲ್ಲುವುದಕ್ಕೆ ತರಬೇತಿ ನೀಡುತ್ತಿದ್ದ. ವಿಟ್ಲ ಬಳಿಯ ಕಮ್ಯುನಿಟಿ ಸೆಂಟರ್ ನಲ್ಲಿ ಆಗಾಗ್ಗೆ ಬಂದು ದಕ್ಷಿಣ ಕನ್ನಡ ಜಿಲ್ಲೆಯ ಸರ್ವಿಸ್ ಟೀಮ್ ಸದಸ್ಯರಿಗೆ ತರಬೇತಿ ನೀಡುತ್ತಿದ್ದ. ಪ್ರವೀಣ್ ನೆಟ್ಟಾರು ಹಂತಕರ ಪೈಕಿ ಮೂವರಿಗೆ ಈತನೇ ಮೈಸೂರು, ಕೊಡಗು ಮತ್ತು ತಮಿಳುನಾಡಿನ ಈರೋಡ್ ನಲ್ಲಿ ಅಡಗುತಾಣ ಮಾಡಿಕೊಟ್ಟಿದ್ದ ಎಂದು ಗುರುತಿಸಿದೆ.
ಮಹಮ್ಮದ್ ಜಾಬೀರ್ ಪಿಎಫ್ಐ ಪುತ್ತೂರು ಜಿಲ್ಲಾ ಅಧ್ಯಕ್ಷನಾಗಿದ್ದು, ಪ್ರವೀಣ್ ನೆಟ್ಟಾರು ಕೊಲೆಯ ವಿಚಾರದಲ್ಲಿ ನಡೆಯುತ್ತಿದ್ದ ರಹಸ್ಯ ಸಭೆಗಳಲ್ಲಿ ಭಾಗಿಯಾಗುತ್ತಿದ್ದ. ಪ್ರವೀಣ್ ನೆಟ್ಟಾರು ಕೊಲೆಯಾಗೋದಕ್ಕೂ ಮೂರು ದಿನಗಳ ಹಿಂದೆ ಸಾವು ಕಂಡಿದ್ದ ಮಸೂದ್ ಪ್ರಕರಣಕ್ಕೆ ಪ್ರತಿಯಾಗಿ ಯಾರಾದ್ರೂ ಒಬ್ಬರನ್ನು ಕೊಲೆ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರಲ್ಲಿ ಈತನೂ ಒಬ್ಬನಾಗಿದ್ದ. ಆರೋಪಿ ತುಫೈಲ್ ಎಂ.ಎಚ್. ತಲೆಮರೆಸಿಕೊಂಡ ಬಳಿಕ ಆತನ ಪತ್ತೆಗಾಗಿ ಎನ್ಐಎ ತಂಡ 5 ಲಕ್ಷ ಬಹುಮಾನ ಘೋಷಿಸಿತ್ತು. ಇತ್ತೀಚೆಗೆ ಬೆಂಗಳೂರಿನ ರಹಸ್ಯ ಜಾಗದಲ್ಲಿ ಅವಿತುಕೊಂಡಿದ್ದ ತುಫೈಲ್ ನನ್ನು ಎನ್ಐಎ ಅಧಿಕಾರಿಗಳು ಮಾರುವೇಷದಲ್ಲಿ ಹೋಗಿ ಅರೆಸ್ಟ್ ಮಾಡಿದ್ದರು. ತನಿಖೆಯ ಬಳಿಕ ಇಬ್ಬರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
Praveen Nettaru murder, Kodagu PFI worker master trainer Thufail M H and Mahammad Jabir says NIA in chargesheet. Both the accused, Thufail M H and Mahammad Jabir, have been charged with various sections of IPC and UAPA, 1967. With this, the total number of accused chargesheeted in the case has gone up to 21.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm