ಬ್ರೇಕಿಂಗ್ ನ್ಯೂಸ್
29-04-23 10:00 pm Mangalore Correspondent ಕರಾವಳಿ
ಮಂಗಳೂರು, ಎ.29 : ಬಿಜೆಪಿ ಪಾಲಿನ ಚುನಾವಣಾ ಚಾಣಕ್ಯ ಎಂದೇ ಪರಿಗಣಿಸಲ್ಪಟ್ಟ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳೂರಿನಲ್ಲಿ ರೋಡ್ ಶೋ ನಡೆಸಿ, ಕೇಸರಿ ಕಾರ್ಯಕರ್ತರಿಗೆ ಚುರುಕು ಮುಟ್ಟಿಸಿದ್ದಾರೆ.
ಸಂಜೆ 6 ಗಂಟೆ ವೇಳೆಗೆ ಬೈಂದೂರಿನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ಬಂದ ಅಮಿತ್ ಷಾ ನೇರವಾಗಿ ನಗರದ ಟೌನ್ ಹಾಲ್ ಬಳಿಗೆ ಬಂದರು. ಅಲ್ಲಿ ರೆಡಿಯಾಗಿದ್ದ ಬಿಜೆಪಿ ರೋಡ್ ಶೋ ಕಾರ್ಯಕ್ರಮದ ಬಸ್ಸನ್ನೇರಿದ ಅಮಿತ್ ಷಾ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಸೇರಿಕೊಂಡರು. ಅಲ್ಲಿ ಸೇರಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಅಮಿತ್ ಷಾ ವಾಹನದ ಮುಂದಿನಿಂದ ನಡೆದುಕೊಂಡು ರಸ್ತೆಯಲ್ಲಿ ಸಾಗಿದರು.







ಈ ವೇಳೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರ್ಯಕರ್ತರಿಗೆ ಹುರುಪು ತುಂಬಿಸಲು ಮೋದಿ ಮೋದಿ ಘೋಷಣೆ ಕೂಗಿದರು. ಅಮಿತ್ ಷಾ ರಸ್ತೆಯುದ್ದಕ್ಕೂ ಹೂವುಗಳನ್ನು ಕಾರ್ಯಕರ್ತರ ಕಡೆಗೆ ಚೆಲ್ಲುತ್ತಾ ಸಾಗಿದರು. ಜೊತೆಗೆ, ರಸ್ತೆಯ ಆಸುಪಾಸಿನಲ್ಲಿ ಸೇರಿದ್ದ ಸಾರ್ವಜನಿಕರಿಗೆ ಕೈಬೀಸುತ್ತಾ ಸಾಗಿದರು. ಕೆಎಸ್ ರಾವ್ ರಸ್ತೆಯಲ್ಲಿ ಕಟ್ಟಡ ಮೇಲೇರಿದ್ದ ಕಾರ್ಯಕರ್ತರು ಅಮಿತ್ ಷಾ ಇದ್ದ ವಾಹನದ ಮೇಲೆ ಹೂವುಗಳನ್ನು ಚೆಲ್ಲಿದರು. ಅಮಿತ್ ಷಾ ಪರ ಘೋಷಣೆಯನ್ನೂ ಕೂಗಿದರು. ಆದರೆ ಕತ್ತಲು ಆವರಿಸಿದ್ದರಿಂದ ಕಾರ್ಯಕರ್ತರ ಕಡೆಯಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗಲಿಲ್ಲ. ನಳಿನ್ ಕುಮಾರ್ ವಾಹನದಲ್ಲಿ ಮೈಕ್ ಹಿಡಿದು, ಅಮಿತ್ ಷಾ ಅವರು ಮಂಗಳೂರಿನ ಅಭ್ಯರ್ಥಿ ವೇದವ್ಯಾಸ ಕಾಮತ್ ಪರವಾಗಿ ಮತ ಕೇಳುವುದಕ್ಕಾಗಿ ಆಗಮಿಸಿದ್ದಾರೆ. ಬಿಜೆಪಿಗೆ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಹೇಳುತ್ತಾ ಸಾಗಿದರು.
ಕೊನೆಯಲ್ಲಿ ರೋಡ್ ಶೋ ನವಭಾರತ ಸರ್ಕಲ್ ತಲುಪುತ್ತಿದ್ದಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಅಮಿತ್ ಷಾ ಈಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದರು. ಅಷ್ಟರಲ್ಲಿ ಕ್ರೇನ್ ಮೂಲಕ ಅಮಿತ್ ಷಾ ಇದ್ದ ವಾಹನಕ್ಕೆ ಬೃಹತ್ ಹೂವಿನ ಹಾರ ಹಾಕಲು ಯತ್ನಿಸಲಾಯಿತು. ಆದರೆ ಹಾರವನ್ನು ಹಾಕಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಸಾರ್ವಜನಿಕರಿಗೆ ಕೈಮುಗಿದ ಅಮಿತ್ ಷಾ ವಾಹನದಿಂದ ಇಳಿದು ಹೋದರು.







ಭಾಷಣ ಮಾಡದ ಷಾ, ಕಾರ್ಯಕರ್ತರಿಗೆ ನಿರಾಸೆ
ರೋಡ್ ಶೋ ಕಾರ್ಯಕ್ರಮ ಶುರುವಾಗುವಾಗಲೇ 6 ಗಂಟೆ ಕಳೆದಿತ್ತು. ಎಸ್ ಪಿಜಿ ಭದ್ರತೆಯ ನಿಯಮದ ಪ್ರಕಾರ, ವಿಐಪಿ ವ್ಯಕ್ತಿಗಳು ಕತ್ತಲಾದ ಬಳಿಕ ರೋಡ್ ಶೋ ನಡೆಸುವಂತಿಲ್ಲ. ಆದರೂ ಅಮಿತ್ ಷಾ ಅದನ್ನು ಲೆಕ್ಕಿಸದೆ, ವಾಹನದಲ್ಲಿ ರೋಡ್ ಶೋ ಮೂಲಕ ಬಂದರು. ಲೇಟ್ ಆಗಿದ್ದರಿಂದ ಎಲ್ಲಿಯೂ ವಾಹನ ನಿಲ್ಲಿಸದೆ ಮುಂದಕ್ಕೆ ಹೋಗಿತ್ತು. ವಾಹನ ನವಭಾರತ ಸರ್ಕಲ್ ತಲುಪಿದಾಗ 7.30 ಗಂಟೆ ಕಳೆದಿತ್ತು. ಒಂದ್ಕಡೆ ತಡವಾಗಿದ್ದರಿಂದ ಅಮಿತ್ ಷಾ ಭಾಷಣ ಮಾಡುವುದಕ್ಕೆ ಕ್ಲೀಯರೆನ್ಸ್ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಇನ್ನೊಂದ್ಕಡೆ, ಉಡುಪಿ ಮತ್ತು ಬೈಂದೂರಿನಲ್ಲಿ ಕಾರ್ಯಕ್ರಮ ಮುಗಿಸಿ ಬಂದಿದ್ದರಿಂದ ದಣಿವಿನಿಂದಾಗಿ ಭಾಷಣ ಮಾಡದೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಾವಿರಾರು ಕಾರ್ಯಕರ್ತರು ಸರ್ಕಲ್ ಬಳಿ ಸೇರಿದ್ದು ಅಮಿಷ್ ಷಾ ಭಾಷಣಕ್ಕಾಗಿ ಕಾದು ನಿಂತಿದ್ದರು. ಅಮಿತ್ ಷಾ ನೇರವಾಗಿ ಎದ್ದು ಹೋದರೂ, ಮ್ಯಾನೇಜ್ ಮಾಡಲು ಬೇರೆಯವರೂ ಭಾಷಣ ಮಾಡದೇ ಇದ್ದುದು ಸಪ್ಪೆ ಆಗುವಂತಾಗಿತ್ತು.
ರೋಡ್ ಶೋ ಕಾರ್ಯಕ್ರಮ ಶುರುವಾಗಲು ಟೈಮ್ ಆಗಿದ್ದರೂ, ಟೌನ್ ಹಾಲ್ ಬಳಿ ಹೆಚ್ಚು ಜನ ಸೇರಿರಲಿಲ್ಲ. ಇದರಿಂದ ಸಿಟ್ಟಾದ ಶಾಸಕ ವೇದವ್ಯಾಸ ಕಾಮತ್, ಪಾಲಿಕೆಯ ಕಾರ್ಪೊರೇಟರುಗಳನ್ನು ಮತ್ತು ಸ್ಥಳೀಯ ನಾಯಕರನ್ನು ತರಾಟೆಗೆತ್ತಿಕೊಂಡರು. ಎಲ್ಲರಿಗೂ ಒಂದೊಂದು ಬಸ್ ನಲ್ಲಿ ಜನರನ್ನು ಕರೆತರುವಂತೆ ಸೂಚಿಸಿದ್ದರೂ, ನಿರೀಕ್ಷೆ ಮಾಡಿದಷ್ಟು ಜನ ಸೇರಿರಲಿಲ್ಲ. ಆನಂತರ, ರೋಡ್ ಶೋ ಶುರುವಾದ ಬಳಿಕ ರಸ್ತೆಯಲ್ಲಿ ಕಾರ್ಯಕರ್ತರು ಸೇರಿಕೊಂಡಿದ್ದರು. ರೋಡ್ ಶೋ ಕತ್ತಲಾಗುವ ನಿರೀಕ್ಷೆ ಇಲ್ಲದೇ ಇದ್ದುದರಿಂದ ಲೈಟಿಂಗ್ ವ್ಯವಸ್ಥೆಯನ್ನೂ ಮಾಡಿರಲಿಲ್ಲ.
Amit Shah holds roadshow in Mangalore in Poll bound Karnataka, thousand of people were disappointed as Shah goes without addressing people. Large number of people, BJP supporters gathered to witness the road show campaign. Tight security was beefed up for the road show. The road show started from Clock Tower via K S Rao road and concluded at Govind Pai Circle at PVS.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm