ಬ್ರೇಕಿಂಗ್ ನ್ಯೂಸ್
25-04-23 09:43 pm Mangalore Correspondent ಕರಾವಳಿ
ಮಂಗಳೂರು, ಎ.25: ಅಸೆಂಬ್ಲಿ ಚುನಾವಣೆಗಿನ್ನು ಉಳಿದಿರೋದು ಕೇವಲ ಹದಿನೈದು ದಿನ. ಹಿಂದುತ್ವ ಎನ್ನುವ ತತ್ವದಡಿ ರಾಜಕೀಯದ ಭೂಮಿಕೆ ಮಾಡಿಕೊಂಡಿರುವ ಬಿಜೆಪಿಗೆ ತನ್ನ ತತ್ವ, ಸಿದ್ಧಾಂತಕ್ಕೆದುರಾಗಿ ಬಂಡಾಯದ ಕಿಡಿ ಎಬ್ಬಿಸಿರುವ ಪುತ್ತೂರಿನಲ್ಲಿ ತಮ್ಮ ಶಕ್ತಿ ತೋರಿಸಲೇಬೇಕಾದ ಅನಿವಾರ್ಯತೆ. ಹೀಗಾಗಿ ಆರೆಸ್ಸೆಸ್ ಟಾಪ್ ನಾಲ್ಕರಲ್ಲಿ ಒಬ್ಬರಾಗಿರುವ ಉನ್ನತ ಮಟ್ಟದ ವ್ಯಕ್ತಿಯೊಬ್ಬರು ಮಂಗಳೂರಿನಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಪ್ರಮುಖರ ಜೊತೆಗೆ ಸಭೆ ನಡೆಸಿದ್ದು ಖಡಕ್ ಸೂಚನೆಗಳನ್ನು ನೀಡಿದ್ದಾರೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಮತ್ತು ಬಂಡಾಯ ಸ್ಪರ್ಧಿ ಅರುಣ್ ಪುತ್ತಿಲ ಇಬ್ಬರ ವಿರುದ್ಧವೂ ಬಿಜೆಪಿ ಸ್ಪರ್ಧೆ ನಡೆಸಬೇಕಾಗಿದೆ. ಇವರಿಬ್ಬರು ಕೂಡ ಬಿಜೆಪಿಯಿಂದಲೇ ಬಂಡೆದ್ದು ಹೋಗಿರುವ ವ್ಯಕ್ತಿಗಳಾಗಿದ್ದರಿಂದ ಇಬ್ಬರಿಗೂ ಸಂಘಟನೆ ಮತ್ತು ಪಕ್ಷದ ಒಳಗಡೆಯೇ ಫಾಲೋವರ್ ಗಳಿದ್ದಾರೆ. ಅಶೋಕ್ ರೈ ಎದುರಾಳಿ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧಿಸುತ್ತಿದ್ದರೆ, ಹಿಂದು ಸಂಘಟನೆಯಲ್ಲೇ ಇದ್ದ ಅರುಣ್ ಪುತ್ತಿಲ ಬಿಜೆಪಿ ಕಾರ್ಯಕರ್ತರನ್ನೇ ಜೊತೆಗಿಟ್ಟು ಪಕ್ಷದ ನಾಯಕರ ವಿರುದ್ಧ ತೊಡೆ ತಟ್ಟಿದ್ದಾರೆ. ಒಂದು ರೀತಿಯಲ್ಲಿ ಅರುಣ್ ಪುತ್ತಿಲ ಆರೆಸ್ಸೆಸ್ ಮತ್ತು ಪಕ್ಷದ ನಾಯಕರ ವಿರುದ್ಧವೇ ಕತ್ತಿ ಮಸೆದಿರುವುದು ಸಂಘದ ನಾಯಕರನ್ನು ಸಿಟ್ಟಿಗೇಳುವಂತೆ ಮಾಡಿದೆ.
ಇದಕ್ಕಾಗಿ ಏನೇ ಆಗಲೀ, ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅರ್ಥಾತ್ ತಮ್ಮ ಆಯ್ಕೆಯನ್ನೇ ಗೆಲ್ಲಿಸಬೇಕೆಂದು ಸಂಘದ ನಾಯಕರು ಪಣ ತೊಟ್ಟಿದ್ದಾರೆ. ಪುತ್ತೂರಿನಲ್ಲಿ ಕಾರ್ಯಕರ್ತರ ಕೊರತೆಯಾದಲ್ಲಿ ಮಂಗಳೂರು ಮತ್ತು ಕಾಸರಗೋಡಿನಿಂದ ದೊಡ್ಡ ಸಂಖ್ಯೆಯ ಸಂಘ ನಿಷ್ಠ ಕಾರ್ಯಕರ್ತರನ್ನು ಒಯ್ದು ಫೀಲ್ಡಿಗಿಳಿಸಲು ಮುಂದಾಗಿದ್ದಾರೆ. ಇದಲ್ಲದೆ, ಯಾಕಾಗಿ ಅರುಣ್ ಪುತ್ತಿಲರಿಗೆ ಟಿಕೆಟ್ ಸಿಕ್ಕಿಲ್ಲ, ಅವರನ್ನು ಯಾಕೆ ಪಕ್ಷದಿಂದ ದೂರ ಇಡಲಾಯ್ತು ಎನ್ನುವ ಬಗ್ಗೆ ಕೇಸರಿ ಕಾರ್ಯಕರ್ತರಿಗೆ ಮನವರಿಕೆ ಮಾಡಲಾರಂಭಿಸಿದ್ದಾರೆ. ಅರುಣ್ ಪುತ್ತಿಲ ಹಿಂದೊಮ್ಮೆ ಹಿಂದು ಸಂಘಟನೆಗೆ ಎದುರಾಗಿ ರಾಮ ಸೇನೆಯಲ್ಲಿ ತೊಡಗಿಸಿಕೊಂಡಿದ್ದು, ಆನಂತರ ಶಕುಂತಳಾ ಶೆಟ್ಟಿ ಬಿಜೆಪಿ ವಿರುದ್ಧ ಬಂಡಾಯ ಸ್ಪರ್ಧಿಸಿದಾಗ ಅವರನ್ನು ಬೆಂಬಲಿಸಿದ್ದು, ಅದಲ್ಲದೆ, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಶಿವಸೇನೆ ಹೆಸರಲ್ಲಿ ಅಭ್ಯರ್ಥಿ ಹಾಕಿದ್ದನ್ನು ಪಕ್ಷ ವಿರೋಧಿ ಚಟುವಟಿಕೆಯಾಗಿತ್ತು. ಸಂಘಟನೆಯ ವ್ಯವಸ್ಥೆಯಲ್ಲಿ ಒಂದು ಬಾರಿ ಬಂಡಾಯ ತೋರ್ಪಡಿಸಿದರೆ, ಆ ವ್ಯಕ್ತಿಯ ಚಾಪ್ಟರ್ ಕ್ಲೋಸ್ ಅಂತಲೇ ಲೆಕ್ಕ. ಅದೇ ರೀತಿಯ ಲೆಕ್ಕಾಚಾರವನ್ನು ಅರುಣ್ ಪುತ್ತಿಲ ಕುರಿತಾಗಿಯೂ ಆರೆಸ್ಸೆಸ್ ನಾಯಕರು ತೆಗೆದುಕೊಂಡಿದ್ದಾರೆ. ಅದರಲ್ಲಿ ಜಾತಿ ಮೀರಿದ ತತ್ವ ಇದೆ. ಇದೇ ಕಾರಣಕ್ಕೆ ಪಕ್ಷದಲ್ಲಿ ಟಿಕೆಟ್ ನಿರಾಕರಣೆ ಮಾಡಲಾಗಿತ್ತು ಅನ್ನುವುದು ಸಂಘದ ಒಳಗಿನ ಮಾತು. ಆದರೂ, ಹಿಂದೊಮ್ಮೆ ಹೊರಗೆ ಹೋಗಿದ್ದ ವ್ಯಕ್ತಿಯನ್ನೂ ಮತ್ತೆ ಸಂಘಟನೆಯ ವ್ಯವಸ್ಥೆಯೊಳಗೆ ಸೇರಿಸಿಕೊಳ್ಳಲಾಗಿತ್ತು.
ತಾಳಿದವನು ಬಾಳಿಯಾನು ಅನ್ನುವ ಶೈಲಿ, ಆರೆಸ್ಸೆಸ್ ಮತ್ತು ಬಿಜೆಪಿ ಒಳಗಿನ ವ್ಯವಸ್ಥೆ ಹೇಗಿದೆ ಎನ್ನುವುದನ್ನು ತಿಳಿಯದ ವ್ಯಕ್ತಿಯಲ್ಲ ಅರುಣ್ ಪುತ್ತಿಲ. ಹಾಗಿದ್ದರೂ, ಪ್ರಖರ ಹಿಂದುತ್ವದ ಮಟ್ಟಿಗೆ ಮಾದರಿ ಎಂದೇ ಗುರುತಿಸಲ್ಪಟ್ಟ ಪುತ್ತೂರಿನಲ್ಲಿ ಅರುಣ್ ಪುತ್ತಿಲ ಮತ್ತೊಮ್ಮೆ ವ್ಯವಸ್ಥೆಯ ವಿರುದ್ಧ ಎದ್ದು ನಿಂತಿರುವುದು, ಕಾರ್ಯಕರ್ತರನ್ನು ಎತ್ತಿ ಕಟ್ಟಿರುವುದು ಸಂಘಟನೆಗೆ ಒದಗಿರುವ ಸವಾಲು. ಹೀಗಾಗಿ, ಪುತ್ತಿಲ ಬಂಡಾಯ ಎದ್ದಿರುವುದು ಒಂದು ವ್ಯಕ್ತಿಯ ವಿರುದ್ಧ ಅಲ್ಲ, ಒಟ್ಟು ವ್ಯವಸ್ಥೆಯ ವಿರುದ್ಧ ಎನ್ನುವ ನಿಲುವನ್ನು ಸಂಘದ ನಾಯಕರು ಹೊಂದಿದ್ದು, ಈ ರೀತಿಯ ನಡೆಗೆ ಯಾವತ್ತೂ ಸಂಘಟನೆಯಲ್ಲಿ ಅವಕಾಶವಿಲ್ಲ ಅನ್ನುವ ಸಂದೇಶವನ್ನು ನೀಡುವಂತೆ ಸೂಚನೆ ಲಭಿಸಿದೆ.
ಪುತ್ತೂರಿನಲ್ಲಿ ಎದುರಾಗಿರುವ ಸವಾಲನ್ನು ಎದುರಿಸಲು ಎಲ್ಲ ರೀತಿಯ ಶಕ್ತಿ ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಇದಕ್ಕಾಗಿ ಬಿಜೆಪಿ ಕೇಂದ್ರ ನಾಯಕರಿಂದ ಹಿಡಿದು ರಾಜ್ಯ ನಾಯಕರನ್ನು ಚೆನ್ನಾಗಿ ಬಳಸಿಕೊಳ್ಳಿ ಎಂದು ಸೂಚಿಸಲಾಗಿದೆ. ಅರುಣ್ ಪುತ್ತಿಲ ನಾಮಪತ್ರ ಹಿಂಪಡೆಯುವುದೇ ಆಗಿದ್ದರೆ, ಒಂದು ಹಂತದಲ್ಲಿ ಅಮಿತ್ ಷಾ ಅವರಲ್ಲಿಯೇ ಫೋನ್ ಮಾಡಿಸಲು ತಂತ್ರ ನಡೆದಿತ್ತು. ಆದರೆ ಯಾವುದಕ್ಕೂ ಬಗ್ಗದೆ ನಿಂತಿದ್ದು ಆರೆಸ್ಸೆಸ್ ನಾಯಕರನ್ನು ಸಿಟ್ಟಿಗೇಳುವಂತೆ ಮಾಡಿದೆ. ಪಕ್ಷ ಮತ್ತು ಸಂಘದ ವ್ಯವಸ್ಥೆ ಏನೆಂಬುದನ್ನು ತೋರಿಸುತ್ತೇವೆ ಎಂದು ಪ್ರಮುಖರ ಸಭೆಯಲ್ಲಿ ಉನ್ನತ ಮಟ್ಟದ ನಾಯಕರು ಸೂಚನೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಹುಬ್ಬಳ್ಳಿ, ಬೈಂದೂರು, ವರುಣಾ, ಅಥಣಿ ಗೆಲ್ಲಲು ತಂತ್ರ
ಇದಲ್ಲದೆ, ಇಡೀ ರಾಜ್ಯದಲ್ಲಿ ಕೆಲವು ಕ್ಷೇತ್ರಗಳಲ್ಲಿ ಆರೆಸ್ಸೆಸ್ ಶಕ್ತಿ ಮೀರಿ ಶ್ರಮ ಹಾಕಲು ನಿರ್ಧರಿಸಿದೆ. ಹುಬ್ಬಳ್ಳಿ, ಪುತ್ತೂರು, ಬೈಂದೂರು, ಅಥಣಿ, ವರುಣಾ, ಶಿವಮೊಗ್ಗ ನಗರ ಹೀಗೆ ಕೆಲವೊಂದು ಕ್ಷೇತ್ರಗಳಲ್ಲಿ ವಿಶೇಷ ಶ್ರಮ ಹಾಕಲು ಆರೆಸ್ಸೆಸ್ ತಂತ್ರ ಹೆಣೆದಿದೆ. ಬೈಂದೂರಿನಲ್ಲಿ ಆರೆಸ್ಸೆಸ್ ನಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿದ್ದ ಗುರುರಾಜ್ ಗಂಟಿಹೊಳೆ ಅಭ್ಯರ್ಥಿಯಾಗಿದ್ದು, ಆತನನ್ನು ಗೆಲ್ಲಿಸುವುದು ಸಂಘಟನೆಗಿರುವ ಸವಾಲು. ಅಥಣಿಯಲ್ಲಿ ಪಕ್ಷದಿಂದ ಬಂಡಾಯ ಎದ್ದು ಕಾಂಗ್ರೆಸ್ ಹೋಗಿರುವ ಲಕ್ಷ್ಮಣ ಸವದಿ ವಿರೋಧಿ ಅಭ್ಯರ್ಥಿಯಾಗಿರುವುದು, ಅಲ್ಲಿ ಮಹೇಶ್ ಕುಮಟಳ್ಳಿಯನ್ನು ಗೆಲ್ಲಿಸುವ ಸವಾಲು ಪಕ್ಷಕ್ಕಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದಿರುವ ಸೋಮಣ್ಣ ಗೆಲುವಿಗೆ ಶ್ರಮ ಹಾಕಲು ಆರೆಸ್ಸೆಸ್ ಮುಂದಾಗಿದೆ. ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ಪಕ್ಷದ ವಿರುದ್ಧ ಬಂಡಾಯ ಎದ್ದಿರುವುದರಿಂದ ಅವರನ್ನು ಸೋಲಿಸಲು ಬೆಳಗಾವಿ ಮತ್ತು ಹುಬ್ಬಳ್ಳಿ ಭಾಗದ ಆರೆಸ್ಸೆಸ್ ನಾಯಕರು ಈಗಾಗಲೇ ತಂತ್ರಗಾರಿಕೆ ನಡೆಸಿದ್ದಾರೆ.
RSS, BJP attempting all measures to make thier candidate Asha Thimmappa to bag Victory against Independent Arun Puthila. Arun Puthila who was closely associted with BJP has back stabbed party and stood independent against Asha. RSS in Puttur is working in full swing to Make Asha bag major victory.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am