ಬ್ರೇಕಿಂಗ್ ನ್ಯೂಸ್
05-02-23 05:33 pm Mangalore Correspondent ಕರಾವಳಿ
ಮಂಗಳೂರು, ಫೆ.5 : ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾಯಕರು ಟಿಕೆಟ್ ಪಡೆಯಲು ಲಾಬಿ ನಡೆಸುತ್ತಿದ್ದಾರೆ. ಮಂಗಳೂರಿನ ಕಾಂಗ್ರೆಸ್ ನಾಯಕರು ಹಿರಿಯ ನಾಯಕ, ವಯೋವೃದ್ಧ ಜನಾರ್ದನ ಪೂಜಾರಿ ಅವರನ್ನು ಬಳಸಿ ಟಿಕೆಟಿಗಾಗಿ ಕಸರತ್ತು ನಡೆಸಲು ಆರಂಭಿಸಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಶಿತ್ ಪಿರೇರಾ, ಜನಾರ್ದನ ಪೂಜಾರಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕರೆ ಮಾಡಿಸಿದ ವಿಡಿಯೋ ಲೀಕ್ ಆಗಿದೆ.
ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದ ಮನೆಯಲ್ಲಿ ಭೇಟಿ ಮಾಡಿದ ಆಶಿತ್ ಪಿರೇರಾ, ಅವರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕರೆ ಮಾಡಿಸಿದ್ದಾರೆ. ಮಾಜಿ ಶಾಸಕ ಜೆ.ಆರ್.ಲೋಬೋ ಬದಲು ತನಗೆ ಟಿಕೆಟ್ ಕೊಡಿಸುವಂತೆ ಜನಾರ್ದನ ಪೂಜಾರಿ ಮೂಲಕ ಒತ್ತಡ ತಂತ್ರ ಮಾಡಿದ್ದಾರೆ.
ಡಿಕೆಶಿಗೆ ಕರೆ ಮಾಡಿದ ಪೂಜಾರಿ, 'ನನ್ನಲ್ಲಿಗೆ ಯೂತ್ ಕಾಂಗ್ರೆಸ್ ಲೀಡರ್ ಆಶೀತ್ ಪಿರೇರಾ ಬಂದಿದಾರೆ. ಅವರಿಗೆ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಏನಾದ್ರೂ ಸಹಾಯ ಮಾಡಲು ಸಾಧ್ಯ ಉಂಟಾ? ನೀವೇ ಸುಧಾರಿಸಿ, ಜೆ.ಆರ್.ಲೋಬೋ ಸ್ಥಾನಕ್ಕೆ.. ಆಶೀತ್ ಪಿರೇರಾ ಕೂಡ ಕ್ರಿಶ್ಚಿಯನ್ ಇದ್ದಾರೆ ಎಂದು ಹೇಳುವುದು ವಿಡಿಯೋದಲ್ಲಿದೆ.
ಡಿಕೆಶಿಗೆ ಕರೆ ಮಾಡಿ ವಯೋವೃದ್ಧ ಜನಾರ್ದನ ಪೂಜಾರಿ, ಆಶಿತ್ ಪಿರೇರಾ ಪರ ಮಾತನಾಡಿದ ವಿಡಿಯೋ ಲೀಕ್ ಆಗಿದೆ. 85 ವರ್ಷದ ಹಿರಿಯ, ಸದ್ಯ ಅರುಳು ಮರುಳು ಸ್ಥಿತಿಯಲ್ಲಿರುವ ಜನಾರ್ದನ ಪೂಜಾರಿ ಅವರನ್ನು ಕರಾವಳಿಯ ಕಾಂಗ್ರೆಸ್ ನಾಯಕರು ತಮ್ಮ ಟಿಕೆಟ್ ಲಾಬಿಗಾಗಿ ದುರ್ಬಳಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದೇ ರೀತಿ ಹಲವರು ಕರೆ ಮಾಡಿಸಿದ್ದಾರೆ ಎನ್ನಲಾಗುತ್ತಿದ್ದು ಈಗ ಆಶಿತ್ ಪಿರೇರಾ ವಿಡಿಯೋ ಹೊರಬಂದಿದೆ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಮಾಜಿ ಶಾಸಕ ಜೆ.ಆರ್.ಲೋಬೋ ಮತ್ತು ಐವನ್ ಡಿಸೋಜಾ ಪ್ರಬಲ ಲಾಬಿ ನಡೆಸಿದ್ದಾರೆ. ಹಿಂದುತ್ವದ ಅಸ್ತ್ರ ಎದುರಿಸಲು ಬಿಲ್ಲವರಿಗೆ ಟಿಕೆಟ್ ಕೊಟ್ಟರೆ ಗೆಲುವು ಸಾಧ್ಯ ಎನ್ನುವ ಲಾಬಿಯನ್ನೂ ಕಾಂಗ್ರೆಸಿನ ಹಿಂದು ನಾಯಕರು ಮಾಡಿದ್ದಾರೆ. ಆದರೆ ಹಿಂದಿನಿಂದಲೂ ಮಂಗಳೂರಿನ ಒಂದು ಕ್ಷೇತ್ರವನ್ನು ಕಾಂಗ್ರೆಸ್ ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲಿಟ್ಟಿತ್ತು.
#JanardhanaPoojary calls #DKShivakumar to give south #MLA seat to #Congress #AshithPereira in #Mangalore. #jrlobo pic.twitter.com/Jl3sFa7AvE
— Headline Karnataka (@hknewsonline) February 5, 2023
Janardhana Poojary calls DK Shivakumar to give south MLA seat to Congress Ashith Pereira in Mangalore. The call was made on request by Ashith by Poojary to DK Shivakumar. Poojary can be heard saying to issue ticket instead of JR Lobo.
28-08-25 02:41 pm
HK News Desk
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 02:51 pm
Mangalore Correspondent
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
Pastor John Shamine, Madan Bugadi, IHRACSJC:...
27-08-25 11:02 pm
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm