ಬ್ರೇಕಿಂಗ್ ನ್ಯೂಸ್
01-02-23 10:40 pm Giridhar, Mangaluru Correspondent ಕರಾವಳಿ
ಮಂಗಳೂರು, ಫೆ.1 : ಈ ಬಾರಿಯ ಚುನಾವಣೆಗೆ ಕರಾವಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿರ್ಧರಿಸುವುದೇ ಸವಾಲಾಗಿದೆ. ಒಂದೆಡೆ ಬಿಲ್ಲವರು ತಮ್ಮ ಕೋಟಾ ಕೇಳುತ್ತಿದ್ದರೆ, ಬಿಜೆಪಿಯ ಹಿಂದುತ್ವ ಅಸ್ತ್ರದ ಹೊಡೆತಕ್ಕೆ ದಿಕ್ಕಾಪಾಲಾಗಿರುವ ಮತ ಬ್ಯಾಂಕನ್ನು ಮರಳಿ ಪಡೆಯುವುದು ಪಕ್ಷಕ್ಕೆ ಸವಾಲೆನಿಸಿದೆ. ಅಲ್ಪಸಂಖ್ಯಾತ ಮುಸ್ಲಿಂ ಮತ್ತು ಕ್ರಿಸ್ತಿಯನ್ ಕೋಟಾವನ್ನೂ ಪರಿಗಣಿಸಬೇಕಾದ ಅನಿವಾರ್ಯತೆಯಲ್ಲಿರುವ ನಾಯಕರು ಅಭ್ಯರ್ಥಿ ಅಂತಿಮಗೊಳಿಸಲು ತಿಣುಕಾಟದಲ್ಲಿದ್ದಾರೆ.
ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಒಟ್ಟು 13 ಸೀಟುಗಳಿದ್ದು, ಈ ಪೈಕಿ ಕಳೆದ ಬಾರಿ ಎರಡು ಸೀಟು ಮುಸ್ಲಿಂ, ಒಂದು ಕ್ರಿಸ್ತಿಯನ್ ಮತ್ತು ನಾಲ್ಕು ಸೀಟು ಬಿಲ್ಲವರಿಗೆ ನೀಡಲಾಗಿತ್ತು. ಈ ಬಾರಿ ಬಿಲ್ಲವರು ಪ್ರಬಲವಾಗಿ ಎರಡೂ ಜಿಲ್ಲೆಗಳಲ್ಲಿ ತಲಾ ಮೂರು ಸೀಟನ್ನು ಕೇಳಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ ಮತ್ತು ಬಿಲ್ಲವರಿಗೆ ತಲಾ ಎರಡು ಸೀಟನ್ನಾದರೂ ಕೊಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈಗಾಗಲೇ ಬಂಟ್ವಾಳದಲ್ಲಿ ರಮಾನಾಥ ರೈ(ಬಂಟ), ಮೂಡುಬಿದ್ರೆಯಲ್ಲಿ ಮಿಥುನ್ ರೈ ಟಿಕೆಟ್ ಬಯಸಿದ್ದಾರೆ. ಪುತ್ತೂರಿನಲ್ಲಿ ಅಶೋಕ್ ರೈ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇತ್ತ ಬಿಲ್ಲವ ಕೋಟಾದಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ರಕ್ಷಿತ್ ಶಿವರಾಂ ಬಹುತೇಕ ಫಿಕ್ಸ್ ಆಗಿದೆ.
ಮಂಗಳೂರು ಉತ್ತರ, ದಕ್ಷಿಣದಲ್ಲಿ ಟಿಕೆಟ್ ಯಾರಿಗೆ ನೀಡುವುದು ಎನ್ನುವ ಬಗ್ಗೆ ಚಿಂತನೆಯಲ್ಲಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯ ಚುನಾವಣೆಯಲ್ಲಿ ಮೊಯ್ದೀನ್ ಬಾವ ಸ್ಪರ್ಧಿಸಿದ್ದರು. 2013ರಲ್ಲಿ ಗೆದ್ದಿದ್ದರೆ 2008 ಮತ್ತು 2018ರಲ್ಲಿ ಸೋಲಾಗಿತ್ತು. ಈ ಬಾರಿಯೂ ಅಲ್ಪಸಂಖ್ಯಾತ ಕೋಟಾದಲ್ಲಿ ಮುಸ್ಲಿಮರಿಗೇ ಸೀಟು ಕೊಡಬೇಕೆಂಬುದು ಆ ಸಮುದಾಯದ ಬೇಡಿಕೆ. ಆದರೆ, ಆ ಕ್ಷೇತ್ರ ಹಿಂದಿನಿಂದಲೂ ಮುಸ್ಲಿಂ ಅಧಿಪತ್ಯದ ಕ್ಷೇತ್ರ ಅಲ್ಲ. ಕಳೆದ ಮೂರು ಬಾರಿ ಮೊಯ್ದೀನ್ ಬಾವರಿಗೆ ಟಿಕೆಟ್ ನೀಡಲಾಗಿತ್ತು. ಯಾಕೆ ನೀವದನ್ನು ನಿಮಗೆ ಫಿಕ್ಸ್ ಮಾಡಿಕೊಂಡಿದ್ದೀರಿ ಅನ್ನುವುದು ಬಿಲ್ಲವ ಮತ್ತು ಬಂಟ ಸಮುದಾಯದ ನಾಯಕರ ಪ್ರಶ್ನೆ. ಕರಾವಳಿಯಲ್ಲಿ ಬಿಜೆಪಿಯ ಹಿಂದುತ್ವದ ಅಸ್ತ್ರವನ್ನು ಎದುರಿಸಲು ಮತ್ತೆ ಅಲ್ಪಸಂಖ್ಯಾತರಿಗೆ ಸೀಟು ಕೊಟ್ಟು ಕಳೆದುಕೊಳ್ಳುವುದು ಯಾಕೆಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರವನ್ನು ಮೊದಲಿನಿಂದಲೂ ಕ್ರಿಸ್ತಿಯನ್ ಕೋಟಾದಡಿ ಕಾಂಗ್ರೆಸ್ ನೀಡುತ್ತಾ ಬಂದಿತ್ತು. ರಾಜ್ಯದಲ್ಲಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಜಾರ್ಜ್ ಪ್ರತಿನಿಧಿಸುವ ಕ್ಷೇತ್ರವನ್ನು ಕ್ರಿಸ್ತಿಯನ್ ಕೋಟಾದಡಿ ನೀಡುವುದು ವಾಡಿಕೆಯಾಗಿತ್ತು. ಹೀಗಾಗಿ ಆ ಕೋಟಾವನ್ನು ಬದಲಾವಣೆ ಮಾಡದಿರಿ ಅನ್ನುವ ಬೆದರಿಕೆಯನ್ನು ಐವಾನ್ ಡಿಸೋಜ, ಲೋಬೊ ಸೇರಿದಂತೆ ಮಂಗಳೂರಿನ ಸಮುದಾಯದ ಮುಖಂಡರು ತೋರಿದ್ದು ಪಕ್ಷದ ನಾಯಕರನ್ನು ಅಡಕತ್ತರಿಗೆ ಸಿಲುಕಿಸಿದ್ದಾರೆ. ಆದರೆ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೂ ಈ ಭಾಗದ ಪಕ್ಷದ ಹಿಂದು ಮುಖಂಡರು ಮಾತ್ರ ಒಂದೋ ಬಿಲ್ಲವ ಅಥವಾ ಬಂಟರಿಗೆ ಸೀಟು ಕೊಡಿ, ಗೆಲುವು ನಿಶ್ಚಿತ ಅನ್ನುವ ಬೇಡಿಕೆ ಇರಿಸಿದ್ದಾರೆ. ಬಿಲ್ಲವರ ಮತಗಳೇ ಹೆಚ್ಚಿದ್ದು ನಿರ್ಣಾಯಕ ಆಗಿರುವಾಗ ನೀವು ಮೈನಾರಿಟಿಗೆ ಸೀಟು ಕೊಟ್ಟು ಈಗಿನ ಹಿಂದುತ್ವದ ಟ್ರೆಂಡ್ ನಲ್ಲಿ ಗೆಲ್ಲಿಸುವುದು ಕಷ್ಟ ಅನ್ನುವುದು ಹಿಂದು ನಾಯಕರ ಅಳಲು.
ಇದೇನಿದ್ದರೂ, ರಾಜ್ಯ ಮತ್ತು ಕೇಂದ್ರ ಮಟ್ಟದ ನಾಯಕರು ಸ್ಥಳೀಯರ ಅಹವಾಲನ್ನು ಕೇಳುವ ಸ್ಥಿತಿಯಲ್ಲಿಲ್ಲ. ರಾಜ್ಯದಲ್ಲಿ ಅಂದಾಜು 17-18 ಸೀಟನ್ನು ಮುಸ್ಲಿಮರಿಗೆ ಮತ್ತು ಎರಡು ಸೀಟನ್ನು ಕ್ರಿಸ್ತಿಯನ್ನರಿಗೆ ನೀಡಲೇಬೇಕು. ಆಮೂಲಕ ಆ ಸಮುದಾಯಗಳ ಮತಗಳನ್ನು ಉಳಿಸಿಕೊಳ್ಳುವುದು ಸ್ಟ್ರಾಟಜಿ ರೂಪಿಸುವ ನಾಯಕರ ಲೆಕ್ಕಾಚಾರ. ಈಗಲೂ ಮುಸ್ಲಿಮ್ ಮತ್ತು ಕ್ರಿಸ್ತಿಯನ್ನರ 80 ಶೇಕಡಾ ಮತಗಳು ಕಾಂಗ್ರೆಸ್ ಪರ ಇವೆ ಅನ್ನುವ ವಿಶ್ವಾಸದಲ್ಲಿ ಪಕ್ಷದ ನಾಯಕರಿದ್ದಾರೆ. ಹೀಗಾಗಿ ಆ ಸಮುದಾಯದ ಕೋಟಾವನ್ನು ತಪ್ಪಿಸಿದರೆ ತಮ್ಮ ಮತಬ್ಯಾಂಕಿಗೆ ಪೆಟ್ಟು ಬೀಳಬಹುದು ಅನ್ನುವ ಆತಂಕ ಅವರಲ್ಲಿದೆ.
ದಕ್ಷಿಣ ಕನ್ನಡದಲ್ಲಿ ಬಂಟ – ಬಿಲ್ಲವ ತಾಳ-ಮೇಳ ಸರಿದೂಗಿಸಲು ತಲಾ ಎರಡು ಸ್ಥಾನ ಹಂಚಬೇಕಾಗಿದೆ. ಹೀಗಾಗಿ ಬಿಲ್ಲವರ ಮತ ಹೆಚ್ಚಿರುವ ಬಂಟ್ವಾಳ ಅಥವಾ ಮಂಗಳೂರು ಉತ್ತರದಲ್ಲಿ ಬಿಲ್ಲವರಿಗೆ ಸೀಟು ಕೊಡಲೇಬೇಕಾಗುತ್ತದೆ. ಉಡುಪಿಯ ಐದು ಕ್ಷೇತ್ರಗಳಲ್ಲಿ ಮೂರು ಬಿಲ್ಲವ, ಎರಡು ಸೀಟನ್ನು ಬಂಟರಿಗೆ ಕೊಡುತ್ತಾ ಬಂದಿದ್ದಾರೆ. ಈ ಬಾರಿ ತಿರುವು ಮುರುವಾದರೂ ಅಚ್ಚರಿಯಿಲ್ಲ. ಫೆ.2ರಂದು ಬೆಂಗಳೂರಿನಲ್ಲಿ ಚುನಾವಣಾ ಸಮಿತಿಯ ಪ್ರಮುಖರ ಸಭೆ ನಡೆಯಲಿದ್ದು, ಈ ಬಗ್ಗೆ ಚರ್ಚೆಗೆ ಬರಲಿದೆ. ಇದಲ್ಲದೆ, ಈಗಾಗಲೇ ಪಕ್ಷದ ಹೈಕಮಾಂಡ್ ನಡೆಸಿರುವ ಪ್ರತಿ ಕ್ಷೇತ್ರದ ಸರ್ವೆ ರಿಪೋರ್ಟ್ ದೆಹಲಿ ಅಂಗಳದಲ್ಲಿದೆ. ಸರ್ವೆ ರಿಪೋರ್ಟ್ ಮತ್ತು ರಾಜ್ಯ ನಾಯಕರ ಲೆಕ್ಕಾಚಾರ ಪರಿಗಣಿಸಿ ಸೀಟು ಹಂಚಿಕೆಯಾಗಲಿದೆ.
ಕೊನೆ ಮಾತು- ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಯ್ದೀನ್ ಬಾವ ಮತ್ತು ಇನಾಯತ್ ಆಲಿ ಟಿಕೆಟ್ ಗಿಟ್ಟಿಸಲು ಲಾಬಿ ನಡೆಸಿದ್ದಾರೆ. ಇಬ್ಬರ ಜಗಳ ಎಷ್ಟಿದೆಯಂದ್ರೆ, ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರು ಸೋಲಿಸುವಷ್ಟು. ಹಾಗಾಗಿ, ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಆದರೆ ಅಚ್ಚರಿ ಇಲ್ಲ.
The challenge for this year's elections is to decide the Congress candidate in the coastal areas. While on the one hand, the Billavas are asking for their quota, the challenge for the party is to regain the vote bank, which has been battered by the bjp's Hindutva weapon. Leaders who are forced to consider the minority Muslim and Christian quotas are also struggling to finalise a candidate.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 08:31 pm
Mangalore Correspondent
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
Pastor John Shamine, Madan Bugadi, IHRACSJC:...
27-08-25 11:02 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm