ಬ್ರೇಕಿಂಗ್ ನ್ಯೂಸ್
22-01-23 01:26 pm Mangalore Correspondent ಕರಾವಳಿ
ಮಂಗಳೂರು, ಜ 22; ಪ್ರಯಾಣಿಕರ ಬೇಡಿಕೆಗೆ ಭಾರತೀಯ ರೈಲ್ವೆ ಮಣಿದಿದೆ. ಮುರುಡೇಶ್ವರ- ಬೆಂಗಳೂರು ನಡುವಿನ ರೈಲು ಸೇವೆಯನ್ನು 2023ರ ಮೇ ತಿಂಗಳ ಕೊನೆಯ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಚಳಿಗಾಲದ ಅವಧಿಗಾಗಿ ಜನವರಿ ಅಂತ್ಯದ ತನಕ ಮಾತ್ರ ಮುರುಡೇಶ್ವರ-ಪಡೀಲ್ ಬೈಪಾಸ್-ಯಶವಂತಪುರ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ ಮಾಡಲಾಗಿತ್ತು.
ಕರಾವಳಿ ಭಾಗದ ಜನರು ಈ ರೈಲು ಸೇವೆ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನೈಋತ್ಯ ರೈಲ್ವೆ ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮೇ ತಿಂಗಳ ಅಂತ್ಯದ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಈ ರೈಲಿಗೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೆಚ್ಚಿನ ಪ್ರಯಾಣಿಕರು ಇರುವ ಹಿನ್ನಲೆಯಲ್ಲಿ ಈ ರೈಲನ್ನು ಪ್ರತಿದಿನ ಓಡಿಸಬೇಕು ಎಂದು ಸಹ ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿ ಒತ್ತಾಯಿಸುತ್ತಿದೆ.
ವೇಳಾಪಟ್ಟಿ;
ಈ ರೈಲು ಬೆಂಗಳೂರು ನಗರದ ಯಶವಂತಪುರದಿಂದ ಶನಿವಾರ ರಾತ್ರಿ 11.55ಕ್ಕೆ ಹೊರಡಲಿದೆ. ಮರುದಿನ ಮಧ್ಯಾಹ್ನ 1 ಗಂಟೆಗೆ ಮುರುಡೇಶ್ವರ ತಲುಪಲಿದೆ. ಮುರುಡೇಶ್ವರದಿಂದ ಭಾನುವಾರ ಮಧ್ಯಾಹ್ನ 1.30ಕ್ಕೆ ಹೊರಟು, ಮರುದಿನ ಮುಂಜಾನೆ 4 ಗಂಟೆಗೆ ಯಶವಂತಪುರ ತಲುಪುತ್ತದೆ.
ವಾರಾಂತ್ಯದ ಶನಿವಾರ ಬೆಂಗಳೂರಿನಿಂದ ರಾತ್ರಿ ತಡವಾಗಿ ರೈಲು ಹೊರಡುವ ಕಾರಣದಿಂದ ಬೆಂಗಳೂರಿನಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಕಡೆಯ ಜನರು ಸಂಚಾರ ನಡೆಸಲು ಅನುಕೂಲವಾಗಿತ್ತು.
ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಇದೆ. ಎಲ್ಲಾ ಸೀಟುಗಳು ಭರ್ತಿಯಾಗಿ ವೈಟಿಂಗ್ ಲಿಸ್ಟ್‌ನಲ್ಲಿ ಜನರು ಕಾಯಬೇಕಿತ್ತು. ಆದ್ದರಿಂದ ಈ ರೈಲನ್ನು ಪ್ರತಿದಿನ ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಮುರುಡೇಶ್ವರ-ಪಡೀಲ್ ಬೈಪಾಸ್-ಯಶವಂತಪುರ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಡಿಸೆಂಬರ್ 10 ರಿಂದ ಜನವರಿ 29ರ ತನಕ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಈ ಮೊದಲು ಘೋಷಣೆ ಮಾಡಿತ್ತು. ಈಗ ಮತ್ತೆ ರೈಲು ಸೇವೆಯನ್ನು ಮೇ ಅಂತ್ಯದ ತನಕ ವಿಸ್ತರಣೆ ಮಾಡಲಾಗಿದೆ.
ಮುರುಡೇಶ್ವರ ಬೆಂಗಳೂರು ನಡುವೆ ರೈಲು ಸಂಖ್ಯೆ 06564, 06563 ರೈಲು ಸಂಚಾರ ನಡೆಸುತ್ತದೆ. ಈ ರೈಲು ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ ಮಾರ್ಗವಾಗಿ ಮುರುಡೇಶ್ವರಕ್ಕೆ ತಲುಪಲಿದೆ.
ಬೆಂಗಳೂರಿನ ಯಶವಂತಪುರದಿಂದ-ಮುರುಡೇಶ್ವರಕ್ಕೆ ಈ ವಿಶೇಷ ರೈಲು ವಾರಕ್ಕೆ ಒಮ್ಮೆ ಸಂಚಾರ ನಡೆಸುತ್ತದೆ. ಆದರೆ ರೈಲು ದಕ್ಷಿಣ ಕನ್ನಡ, ಉಡುಪಿ ಮೂಲಕ ಸಾಗುವುದರಿಂದ ನೂರಾರು ಜನರಿಗೆ ಅನುಕೂಲವಾಗಲಿದೆ. ಈ ರೈಲು ಸೇವೆಗೆ ಜನರ ಪ್ರತಿಕ್ರಿಯೆ ಹೀಗೆ ಮುಂದುವರೆದರೆ ಮತ್ತೆ ಅದನ್ನು ವಿಸ್ತರಣೆ ಮಾಡಲಾಗುತ್ತದೆ.
ವೇಗ ಪರೀಕ್ಷೆ;
ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಜೈಪಾಲ್ ಸಿಂಗ್ ಶನಿವಾರ ಮೈಸೂರು ವಿಭಾಗದ ಮಾಸರಹಳ್ಳಿ-ಶಿವಮೊಗ್ಗ ಸಿಂಗಲ್ ಲೈನ್ ವಿಭಾಗದಲ್ಲಿ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿಯ ಪರಿಶೀಲನೆ ನಡೆಸಿದರು. ಗಂಟೆಗೆ 90 ಕಿ. ಮೀ. ವೇಗದಲ್ಲಿ ವೇಗ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದರು.
ಮತ್ತೊಂದು ಕಡೆ ಲೋಂಡಾ-ಮೀರಜ್ ಡಬ್ಲಿಂಗ್ ಯೋಜನೆಯ ಭಾಗವಾಗಿ ಗೋಕಾಕ್-ಘಟಪ್ರಭಾ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 125ರಲ್ಲಿ ಹೊಸದಾಗಿ ದ್ವಿಗುಣಗೊಂಡ ಮಾರ್ಗದಲ್ಲಿ ವೇಗ ಪ್ರಯೋಗ ನಡೆಸಲಾಯಿತು. ರೈಲು ಗಂಟೆಗೆ 120 ಕಿ. ಮೀ. ಗರಿಷ್ಠ ವೇಗದಲ್ಲಿ ಸಾಗಿದೆ.
Murudeshwar bangalore train extended till may end by railway department.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm