ಬ್ರೇಕಿಂಗ್ ನ್ಯೂಸ್
07-01-23 10:45 pm Mangalore Correspondent ಕರಾವಳಿ
ಮಂಗಳೂರು, ಜ.7: ಸಾರ್ವಜನಿಕರ ಭಾರೀ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಕಟೀಲು ದೇವಸ್ಥಾನದಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದಕ್ಕೆ ಮತ್ತೆ ಜಿಲ್ಲಾಧಿಕಾರಿ ತಡೆ ನೀಡಿದ್ದಾರೆ. ಹೀಗಾಗಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಕಾರ್ಯವನ್ನು ಶನಿವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ದಿಢೀರ್ ಆಗಿ ನಿಲ್ಲಿಸಲಾಗಿದೆ.
ಜನವರಿ 1ರಿಂದ ಕಟೀಲು ದೇವಸ್ಥಾನ ಪರಿಸರದಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹ ಆರಂಭಗೊಂಡಿತ್ತು. ಆದರೆ, ಕಟೀಲು ಭಾಗದ ಭಕ್ತರು ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ಕಳೆದ ಆಗಸ್ಟ್ ತಿಂಗಳಲ್ಲಿ ಇದೇ ರೀತಿ ಪೇ ಪಾರ್ಕಿಂಗ್ ಆರಂಭಿಸುವುದೆಂದು ನಿರ್ಧಾರ ಬಂದಾಗಲೇ ಭಕ್ತರಿಂದ ವಿರೋಧ ಕೇಳಿಬಂದಿತ್ತು. ಆನಂತರ, ಸಂಸದ ನಳಿನ್ ಕುಮಾರ್ ಸೂಚನೆಯಂತೆ ಶುಲ್ಕ ಸಂಗ್ರಹಿಸುವ ನಿರ್ಧಾರ ಮುಂದೂಡಲಾಗಿತ್ತು. ಆದರೆ, ಅದಕ್ಕೂ ಮೊದಲೇ ಪೇ ಪಾರ್ಕಿಂಗ್ ಬಗ್ಗೆ ಮಂಗಳೂರಿನ ವರಾಹ ಅಸೋಸಿಯೇಟ್ಸ್ ಹೆಸರಲ್ಲಿ ಪ್ರವೀಣ್ ಎಂಬ ವ್ಯಕ್ತಿ ಪೇ ಪಾರ್ಕಿಂಗ್ ಗುತ್ತಿಗೆ ಪಡೆದಿದ್ದರು. ಅದಕ್ಕಾಗಿ ಮುಜರಾಯಿ ಇಲಾಖೆಯಲ್ಲಿ 15 ಲಕ್ಷ ಡಿಪಾಸಿಟ್ ಇಟ್ಟು ಶುಲ್ಕ ಸಂಗ್ರಹಕ್ಕೆ ಮುಂದಾಗಿದ್ದರು. ಗುತ್ತಿಗೆ ಪಡೆದು ಐದಾರು ತಿಂಗಳಾದ್ರೂ ಒಂದೆಡೆ ತನ್ನ ಡಿಪಾಸಿಟ್ ಹಣ ಪೆಂಡಿಂಗ್ ಆಗಿದ್ದರಿಂದ ಗುತ್ತಿಗೆ ವಹಿಸಿಕೊಂಡಿದ್ದ ವ್ಯಕ್ತಿ ಕೋರ್ಟಿಗೆ ಹೋಗಿ ಕಟೀಲು ದೇವಸ್ಥಾನದ ಆಡಳಿತಕ್ಕೆ ನೋಟೀಸ್ ನೀಡಿದ್ದರು.

ಕೋರ್ಟ್ ಮೆಟ್ಟಿಲೇರಿದ್ದ ಗುತ್ತಿಗೆದಾರ
ಕೋರ್ಟ್ ಸೂಚನೆಯಂತೆ, ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದಕ್ಕೆ ದೇವಸ್ಥಾನದ ಕಮಿಟಿ ಇತ್ತೀಚೆಗೆ ಅನುಮತಿ ನೀಡಿತ್ತು. ಅದರಂತೆ, ಈ ಬಾರಿ ಹಠಾತ್ ಪಾರ್ಕಿಂಗ್ ಶುಲ್ಕ ಆರಂಭಗೊಂಡಿದ್ದರೆ, ಇತ್ತ ದೇವಸ್ಥಾನದ ಆಡಳಿತದ ಬಗ್ಗೆ ಭಾರೀ ಟೀಕೆ ಕೇಳಿಬಂದಿತ್ತು. ಯಾಕಂದ್ರೆ, ಕಳೆದ ಬಾರಿ ಬ್ರಹ್ಮಕಲಶದ ಸಂದರ್ಭದಲ್ಲಿ ಈಗ ಪಾರ್ಕಿಂಗ್ ಮಾಡಿರುವ ಜಾಗವನ್ನ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡಲಾಗಿತ್ತು. ಭೂದಾನ ಯೋಜನೆಯಡಿ ಮುಂಬೈನ ಉದ್ಯಮಿಗಳಿಂದ ಪಡೆದಿದ್ದ ದೇಣಿಗೆ ಮೊತ್ತದಲ್ಲಿ ಜಾಗ ಖರೀದಿಸಲಾಗಿತ್ತು. ಯೋಜನೆಗೆ ಹಲವಾರು ಭಕ್ತರು ದೇಣಿಗೆ ನೀಡಿದ್ದು, ಆ ಹಣದಲ್ಲಿ ಕಟೀಲು ಆಸುಪಾಸಿನಲ್ಲಿ ಎರಡು- ಮೂರು ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಹಾಗಾಗಿ, ಭಕ್ತರ ಹಣದಲ್ಲಿ ಪಡೆದ ಜಾಗದಲ್ಲೀಗ ವಾಹನ ನಿಲ್ಲಿಸಲು ಸಾಮಾನ್ಯ ಭಕ್ತರಿಗೆ ಪಾರ್ಕಿಂಗ್ ಶುಲ್ಕ ವಿಧಿಸುವುದಕ್ಕೆ ಕಟೀಲಿನ ಭಕ್ತರಿಂದಲೇ ವಿರೋಧ ಬಂದಿತ್ತು.


ದೇವರು ಕೊಟ್ಟರೂ ಪೂಜಾರಿ ಬಿಡಲ್ಲ..
ಪಾರ್ಕಿಂಗ್ ಶುಲ್ಕದ ವಿಚಾರ ಇಷ್ಟು ಜಟಾಪಟಿಗೆ ಒಳಗಾಗಲು ಕಾರಣ ಸಂಸದ ನಳಿನ್ ಕುಮಾರ್ ಮತ್ತು ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಅನ್ನುವ ಮಾತುಗಳು ಕೇಳಿಬರುತ್ತಿವೆ. ಕಳೆದ ಬಾರಿ ಜನ ವಿರೋಧ ಬಂದಾಗಲೇ ಸಂಸದ ನಳಿನ್ ಕುಮಾರ್, ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದು ಬೇಡವೆಂದು ಮುಜರಾಯಿ ಇಲಾಖೆಯ ಆಯುಕ್ತರಿಗೂ ತಿಳಿಸಿದ್ದರು. ದೇವಸ್ಥಾನದ ಕಮಿಟಿಗೂ ಸೂಚನೆ ನೀಡಿದ್ದರು. ಆದರೆ ಈ ಬಗ್ಗೆ ಮುಜರಾಯಿ ಇಲಾಖೆಯಿಂದ ಪಾರ್ಕಿಂಗ್ ಶುಲ್ಕ ರದ್ದುಪಡಿಸಿ ಮರು ಆದೇಶ ಮಾಡಿರಲಿಲ್ಲ. ಮೊದಲಿಗೆ, ಬೇರೆಲ್ಲ ಸರಕಾರಿ ದೇವಸ್ಥಾನಗಳಲ್ಲಿರುವಂತೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಆದೇಶ ಮಾಡಿದ್ದೇ ಮುಜರಾಯಿ ಆಯುಕ್ತರಾಗಿದ್ದರಿಂದ ಅವರೇ ರದ್ದುಪಡಿಸಿ ಮರು ಆದೇಶ ನೀಡಬೇಕಿತ್ತು. ಆದರೆ, ಇಲ್ಲಿನ ಜನಪ್ರತಿನಿಧಿಗಳು ರೋಹಿಣಿ ಸಿಂಧೂರಿಗೆ ಒತ್ತಡ ಹೇರಿ ಮರು ಆದೇಶ ಹೊರಡಿಸುವಲ್ಲಿ ವಿಫಲರಾಗಿದ್ದರು. ಆಯುಕ್ತರು ನೀಡಿದ್ದ ಆದೇಶ ಹಾಗೆಯೇ ಉಳಿದುಕೊಂಡಿದ್ದರಿಂದ ಗುತ್ತಿಗೆ ವಹಿಸಿಕೊಂಡಿದ್ದ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿ ತನ್ನ ಕೆಲಸ ಮಾಡಿಸಿಕೊಂಡಿದ್ದರು. ಇದೀಗ ಜಿಲ್ಲಾಧಿಕಾರಿಯವರು ತಡೆಯಾಜ್ಞೆ ನೀಡಿದ್ದಾರೆ, ಇದು ಎಷ್ಟು ದಿನಕ್ಕೆ ಉಳಿದುಕೊಳ್ಳುತ್ತೆ ಕಾದು ನೋಡಬೇಕು.

ಪ್ರತಿಭಟನೆಗೆ ತಯಾರಾಗಿದ್ದ ಭಕ್ತರು
ಇದೇ ವೇಳೆ, ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ವಿರೋಧಿಸಿ ಸ್ಥಳೀಯ ಭಕ್ತರು ದೇವಸ್ಥಾನ ಕಮಿಟಿ ವಿರುದ್ಧ ಪ್ರತಿಭಟನೆಗೂ ತಯಾರಾಗಿತ್ತು. ಈ ಬಗ್ಗೆ ಹೆಡ್ ಲೈನ್ ಕರ್ನಾಟಕ ವರದಿಯನ್ನೂ ಮಾಡಿತ್ತು. ಒಂದೆಡೆ ಜನ ವಿರೋಧ, ಮತ್ತೊಂದೆಡೆ ಮಾಧ್ಯಮ ವರದಿಯಿಂದ ಎಚ್ಚೆತ್ತ ಜಿಲ್ಲಾಧಿಕಾರಿ ದೇವಸ್ಥಾನ ಕಮಿಟಿಯವರನ್ನ ಕರೆದು ಸಭೆ ನಡೆಸಿದ್ದರು. ಆನಂತರ, ದೇವಸ್ಥಾನ ಕಮಿಟಿಗೆ ಪಾರ್ಕಿಂಗ್ ಶುಲ್ಕ ತಾತ್ಕಾಲಿಕ ರದ್ದುಪಡಿಸಲು ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿ ಸೂಚನೆಯಂತೆ, ಗುತ್ತಿಗೆ ಪಡೆದಿದ್ದ ವರಾಹ ಅಸೋಸಿಯೇಟ್ಸ್ ಸಂಸ್ಥೆಗೆ ದೇವಸ್ಥಾನದ ಕಡೆಯಿಂದ ವರದಿ ಹೋಗುತ್ತಿದ್ದಂತೆ ಪಾರ್ಕಿಂಗ್ ಲೂಟಿ ನಿಂತುಬಿಟ್ಟಿದೆ.
Headline Karnataka news impact, collecting parking fees at Kateel temple in Mangalore held, Dc orders. There was a huge spark on social media about the collection of parking fees at the temple. Headline Karnataka had made a detailed report on the injustice to the devotees.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
13-11-25 05:13 pm
HK Staffer
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
13-11-25 05:01 pm
HK Staffer
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm