ಬ್ರೇಕಿಂಗ್ ನ್ಯೂಸ್
06-01-23 09:03 pm Mangalore Correspondent ಕರಾವಳಿ
ಮಂಗಳೂರು, ಜ.6 : ಬಿಲ್ಲವ- ಈಡಿಗರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ನೀಡಬೇಕು ಮತ್ತಿತರ ಬೇಡಿಕೆ ಮುಂದಿಟ್ಟು ಮಂಗಳೂರಿನಿಂದ ಬೆಂಗಳೂರು ವರೆಗೆ ನಡೆಯಲಿರುವ ಬೃಹತ್ ಪಾದಯಾತ್ರೆಗೆ ನಗರದ ಕುದ್ರೋಳಿಯಲ್ಲಿ ಚಾಲನೆ ನೀಡಲಾಯಿತು. ಪಾದಯಾತ್ರೆಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಕಲಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ. ಬಿಲ್ಲವರು, ಈಡಿಗರು ಸೇರಿ ರಾಜ್ಯದ 29 ವಿವಿಧ ಉಪ ಜಾತಿಗಳನ್ನು ಒಳಗೊಳ್ಳಿಸಿ, ಸಮುದಾಯದ ಜನರ ಹಿತರಕ್ಷಣೆಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 40 ದಿನಗಳ ಪಾದಯಾತ್ರೆಯಲ್ಲಿ ಆರು ಜಿಲ್ಲೆಗಳನ್ನು ಒಳಗೊಂಡು 658 ಕಿಮೀ ಉದ್ದ ಕ್ರಮಿಸಲಿದ್ದು ಕೊನೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಮಾವೇಶಗೊಳ್ಳಲಿದೆ. ಬೇಡಿಕೆ ಈಡೇರಿಸುವುದಕ್ಕಾಗಿ ಕೊನೆಯಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದ ಸಚಿವ ಶ್ರೀನಿವಾಸ ಗೌಡ ಮಾತನಾಡಿ, ರಾಜ್ಯ ಸರಕಾರ ಬಿಲ್ಲವರ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು. ಅಲ್ಲದೆ, ಬಿಲ್ಲವರಿಗಾಗಿ ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನ ಸ್ಥಾಪನೆ ಮಾಡಬೇಕು. ಕೇಂದ್ರ ಸರಕಾರವು ಅದಾನಿ, ಅಂಬಾನಿ ಲಾಭಕ್ಕಾಗಿ ಅನೇಕ ಸರಕಾರಿ ಕಂಪನಿಗಳನ್ನು ಖಾಸಗೀಕರಣ ಮಾಡಿದೆ. ಆದರೆ ಬಿಲ್ಲವರು, ಈಡಿಗರು, ನಾಮಧಾರಿಗಳ ಕುಲಕಸುಬಾಗಿರುವ ಶೇಂದಿ ತೆಗೆಯುವುದ ಪ್ರೋತ್ಸಾಹ ನೀಡದೇ ಇರುವುದು ದುರದೃಷ್ಟಕರ ಎಂದರು.
ಅಲ್ಲದೆ, ನಾವು ಸಮುದಾಯದ ಪರವಾಗಿ ಹತ್ತು ಬೇಡಿಕೆ ಮುಂದಿಟ್ಟಿದ್ದು ಇದರ ಈಡೇರಿಕೆ ಆಗೋ ತನಕ ವಿರಮಿಸಲ್ಲ. ರಾಜ್ಯ ಸರಕಾರ ತರಾತುರಿಯಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಿಸಿದ್ದು ರೂಪುರೇಷೆ ಬಗ್ಗೆ ಹೇಳಿಲ್ಲ. ಸಮುದಾಯದ ಹಿತಾಸಕ್ತಿ ವಿರುದ್ಧವಾಗಿ ಸರ್ಕಾರ ಈ ನಿಗಮ ಘೋಷಣೆ ಮಾಡಿದ್ದು ಯಾವುದೇ ಕಾರಣಕ್ಕು ನಾವಿದನ್ನು ಒಪ್ಪಲ್ಲ. ರಾಜಕೀಯ ಕಾರಣಕ್ಕಾಗಿ 21 ಮಂದಿ ಬಿಲ್ಲವರನ್ನು ಕರಾವಳಿಯಲ್ಲಿ ಕೊಲೆ ಮಾಡಲಾಗಿದೆ. ಇಂತಹ ಕೊಲೆ ರಾಜಕೀಯ ಇನ್ನೆಂದೂ ಮುಂದುವರಿಯಬಾರದು ಎಂದು ಹೇಳಿದರು.
ಶಿವಗಿರಿ ವಿಶುದಾನಂದ ಸ್ವಾಮೀಜಿ, ಸಂಗಮಾನಂದ ಸ್ವಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ದೊಡ್ಡಬಳ್ಳಾಪುರದ ನಿಶ್ಚಲ ನಿರಂಜನ ಸ್ವಾಮೀಜಿ, ಎಂಎಲ್ಸಿ ಹರೀಶ್ ಕುಮಾರ್, ಬಿಲ್ಲವ ಮುಖಂಡರಾದ ರಾಜಶೇಖರ ಕೋಟ್ಯಾನ್, ಎಚ್.ಎಸ್.ಸಾಯಿರಾಂ, ಸುಮನ್ ತಲ್ವಾರ್, ಪದ್ಮರಾಜ್, ಅರ್ಚನಾ ಜೈಸ್ವಾಲ್, ಎಚ್.ಆರ್ ಶ್ರೀನಾಥ್, ಮಾಜಿ ಮೇಯರ್ ಕವಿತಾ ಸನಿಲ್ ಭಾಗವಹಿಸಿದ್ದರು.
Former minister and senior Congress leader B Janardhana Poojary flagged off Pranavananda Swamiji’s padayatra from Mangaluru to Bengaluru over various demands on Friday January 6 at Kudroli temple. The padayatra is led by Pranavananda Swamiji Peetadipathi of Brahmashree Narayana Guru Shakthi Peeta, Kalburagi, demanding the state government to form a corporation for the welfare of Billawas and Ediga communities including 26 other sects and to fulfil various demands.
29-08-25 05:59 pm
HK News Desk
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 09:08 pm
Mangalore Correspondent
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm