ಬ್ರೇಕಿಂಗ್ ನ್ಯೂಸ್
06-01-23 12:40 pm Mangalore Correspondent ಕರಾವಳಿ
ಮಂಗಳೂರು, ಜ.6 : ಎನ್ಐಎ ಅಧಿಕಾರಿಗಳು ಜ.5ರಂದು ರಾಜ್ಯದ ಆರು ಕಡೆ ದಾಳಿ ಕಾರ್ಯಾಚರಣೆ ನಡೆಸಿದ್ದು, ಐಸಿಸ್ ನೆಟ್ವರ್ಕ್ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಸೇರಿ ರಾಜ್ಯದ ಆರು ಕಡೆಗಳಲ್ಲಿ ಎನ್ಐಎ ಏಕಕಾಲದಲ್ಲಿ ದಾಳಿ ನಡೆಸಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಬಾಂಬ್ ಟ್ರಯಲ್ ಪ್ರಕರಣ ಸಂಬಂಧಿಸಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು.
ಮಂಗಳೂರಿನ ಪಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ರೇಶಾನ್ ತಾಜುದ್ದೀನ್(22) ಮತ್ತು ಶಿವಮೊಗ್ಗದಲ್ಲಿ ಹುಝೈರ್ ಫರ್ಹಾನ್ ಎಂಬವರನ್ನು ಬಂಧಿಸಲಾಗಿದೆ. ರೇಶಾನ್, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ನಿವಾಸಿಯಾಗಿದ್ದು ಹುಝೈರ್, ಶಿವಮೊಗ್ಗ ಜಿಲ್ಲೆಯ ಟಿಪ್ಪು ಸುಲ್ತಾನ್ ನಗರದ 7ನೇ ಕ್ರಾಸ್ ನಿವಾಸಿಯಾಗಿದ್ದ.
ಈ ಹಿಂದೆ ಶಿವಮೊಗ್ಗದ ತುಂಗಾ ತೀರದಲ್ಲಿ ಬಾಂಬ್ ಟ್ರಯಲ್ ನಡೆಸಿದ್ದ ಪ್ರಕರಣದಲ್ಲಿ ಬಂಧಿಸಿದ್ದ ಮಾಜ್ ಮುನೀರ್ ಜೊತೆಗೆ ಇಂಜಿನಿಯರಿಂಗ್ ವಿದ್ಯಾರ್ಥಿ ರೇಶಾನ್ ನಿಕಟ ಸಂಪರ್ಕದಲ್ಲಿದ್ದ. ಮಾಜ್ ಕೂಡ ಪಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರೈಸಿದ್ದ. ಈ ವೇಳೆ, ರೇಶಾನ್ ಆತನ ಜೊತೆಗೆ ನಿಕಟ ಸಂಪರ್ಕದಲ್ಲಿದ್ದು ಉಗ್ರ ಚಟುವಟಿಕೆಗಾಗಿ ಫಂಡಿಂಗ್ ಪಡೆದುಕೊಂಡಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
ರೇಶಾನ್ ತಾಜುದ್ದೀನ್ ಮತ್ತು ಹುಜೈರ್ ಉಗ್ರ ಚಟುವಟಿಕೆ ನಡೆಸುವುದಕ್ಕಾಗಿ ಐಸಿಸ್ ನೆಟ್ವರ್ಕ್ ಕಡೆಯಿಂದ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ನೆರವು ಪಡೆದಿದ್ದರು. ರಾಜ್ಯದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಎಸಗಲು ಆರೋಪಿಗಳು ಪ್ಲಾನ್ ಹಾಕಿದ್ದರು. ಲಿಕ್ಕರ್ ಶಾಪ್, ಗೋಡೌನ್, ಟ್ರಾನ್ಸ್ ಫಾರ್ಮರ್ ರೀತಿಯ ಫರ್ಮ್ ಗಳನ್ನು ಸ್ಫೋಟಿಸಲು ಸಂಚು ಹೂಡಿದ್ದರು ಎನ್ನುವ ಅಂಶಗಳು ತನಿಖೆಯಲ್ಲಿ ತಿಳಿದುಬಂದಿತ್ತು.
ಎನ್ಐಎ ದಾಳಿ ಸಂದರ್ಭದಲ್ಲಿ ಆರೋಪಿಗಳ ಮನೆಯಿಂದ ಡಿಜಿಟಲ್ ಸಾಕ್ಷ್ಯಗಳು, ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಂಬ್ ಟ್ರಯಲ್ ಪ್ರಕರಣದಲ್ಲಿ ಮಾಝ್ ಮುನೀರ್ ಮತ್ತು ಸಯ್ಯದ್ ಯಾಸಿನ್ ಎಂಬುವರನ್ನು ಎನ್ಐಎ ಬಂಧಿಸಿತ್ತು. ಅವರಿಗೆ ಐಸಿಸ್ ನೆಟ್ವರ್ಕ್ ಇರುವುದು ಪತ್ತೆಯಾಗಿತ್ತು. ಮಾಝ್ ಮುನೀರ್ ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಗೋಡೆ ಬರಹ ಬರೆದಿರುವ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ.
ಶಿವಮೊಗ್ಗ ಬಾಂಬ್ ಟ್ರಯಲ್, ಕುಕ್ಕರ್ ಬಾಂಬ್ ಪ್ರಕರಣ ; ಪಿಎ ಇಂಜಿನಿಯರಿಂಗ್ ಕಾಲೇಜಿಗೆ ಎನ್ಐಎ ದಾಳಿ, ಪರಿಶೀಲನೆ
ಎನ್ಐಎ ದಾಳಿ ; ಮಂಗಳೂರಿನಲ್ಲಿ ಮತ್ತೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ವಶಕ್ಕೆ
The National Investigation Agency (NIA) raided six locations and arrested two suspects including an engineering student for their alleged involvement in Shivamogga Islamic State conspiracy case. The arrested have been identified as Reshaan Thajuddin Sheikh, an engineering student from Varamballi, Bramhavar, Udupi district and Huzair Farhan Baig, Tippu Sultan Nagar, Shivamogga district.
29-08-25 05:59 pm
HK News Desk
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 09:08 pm
Mangalore Correspondent
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm