ಬ್ರೇಕಿಂಗ್ ನ್ಯೂಸ್
30-12-22 06:40 pm Mangalore Correspondent ಕರಾವಳಿ
ಮಂಗಳೂರು, ಡಿ.30: ಕಂಬಳ ಕಣದ ವೇಗದ ಓಟಗಾರ, ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ಮಾಡೆಲ್ ಆಗುವತ್ತ ಹೆಜ್ಜೆ ಇರಿಸಿದ್ದಾರೆ. ಇದಕ್ಕೆ ಕಾರಣವಾಗಿರೋದು ಕರಾವಳಿಯ ಹೆಸರಾಂತ ಜುವೆಲ್ಲರಿಯವರು ಶ್ರೀನಿವಾಸ ಗೌಡ ಅವರನ್ನು ತಮ್ಮ ಪ್ರಚಾರ ಮಾಡೆಲ್ ಆಗಿ ಮಾಡಿಕೊಂಡಿರುವುದು. ಹೌದು.. ಈವರೆಗೂ ಕೊರಳಿಗೆ ಚಿನ್ನದ ಸರ ಸುತ್ತಿಕೊಂಡಿದ್ದ ಮಾಡೆಲ್ ಹೆಣ್ಮಕ್ಕಳ ಸ್ಥಾನವನ್ನು ಶ್ರೀನಿವಾಸ ಗೌಡ ತುಂಬಿದ್ದಾರೆ.
ಶ್ರೀನಿವಾಸ ಗೌಡ ಕಳೆದ 2-3 ವರ್ಷಗಳಲ್ಲಿ ಕಂಬಳದಲ್ಲಿ ಮಿಂಚು ಹರಿಸಿದ ಸಾಧಕ. ಅವರು ಓಡಿಸಿದ ಕಂಬಳದ ಕೋಣ ಕಣದಲ್ಲಿ ಗೆಲ್ಲುವ ಛಾತಿಯನ್ನು ಮೂಡಿಸಿರುವುದು ಶ್ರೀನಿವಾಸ ಗೌಡರ ಹೆಸರನ್ನು ದೊಡ್ಡ ಸ್ತರಕ್ಕೆ ಒಯ್ದಿದೆ. ಎರಡು ವರ್ಷಗಳ ಹಿಂದೆ ಜಗತ್ತಿನ ವೇಗದ ಓಟಗಾರ ಉಸೇನ್ ಬೋಲ್ಟ್ ಸಾಧನೆಯನ್ನು ಮೀರಿಸುವ ವೇಗದಲ್ಲಿ ಶ್ರೀನಿವಾಸ ಗೌಡ ಕೋಣದ ಜೊತೆಗೆ ಓಡಿದ್ದು ದೇಶ- ವಿದೇಶದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಕರಾವಳಿಯ ಜನಪದ ಕ್ರೀಡೆಯ ಕಂಬಳದಲ್ಲಿ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡರ ಹೆಸರು ಭಾರೀ ಪ್ರಚಾರ ಪಡೆದಿದೆ. ಇದೇ ಕಾರಣಕ್ಕೆ ಉಡುಪಿ ಮೂಲದ ಆಭರಣ ಜುವೆಲ್ಲರಿ ಸಂಸ್ಥೆಯವರು ತಮ್ಮ ಪ್ರಚಾರ ಜಾಹೀರಾತಿನಲ್ಲಿ ವೇಗದ ಓಟಗಾರ ಶ್ರೀನಿವಾಸ ಗೌಡ ಕೋಣವನ್ನು ಹಿಡಿದು ನಿಂತಿರುವ ಫೋಟೋವನ್ನು ಬಳಸಿಕೊಂಡಿದ್ದಾರೆ. ಉಡುಪಿ, ಪುತ್ತೂರಿನಲ್ಲಿ ಇಂಥ ಪೋಸ್ಟರ್ ಜಾಹೀರಾತು ರಸ್ತೆ ಬದಿ ಕಂಡುಬಂದಿದ್ದು, ಕಂಬಳದ ಓಟಗಾರನಿಗೆ ಸಿಕ್ಕ ದೊಡ್ಡ ಗೌರವ ಅನ್ನುವ ಭಾವನೆ ಕರಾವಳಿಯಲ್ಲಿ ಮೂಡಿದೆ.
ಈ ಬಗ್ಗೆ ಶ್ರೀನಿವಾಸ ಗೌಡ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಆರು ತಿಂಗಳ ಹಿಂದೆ ಫೋಟೊ ಶೂಟ್ ಮಾಡ್ಕೊಂಡಿದ್ದರು. ಆಭರಣ ಜುವೆಲ್ಲರಿಯ ಜಾಹೀರಾತು ಫೋಟೋದಿಂದ ಇಷ್ಟು ದೊಡ್ಡ ಪ್ರಚಾರ ಸಿಗುತ್ತೆ ಅಂದುಕೊಂಡಿರಲಿಲ್ಲ. ಕೋಣದ ಜೊತೆಗೆ ನಿಲ್ಲಿಸಿ ಫೋಟೊ ತೆಗೆಸಿದ್ದರು. ಕಂಬಳ ಓಟಗಾರನನ್ನು ಪ್ರಖ್ಯಾತ ಜುವೆಲ್ಲರಿ ಸಂಸ್ಥೆಯವರು ಪ್ರಚಾರಕ್ಕೆ ಬಳಸಿಕೊಂಡಿದ್ದು ತುಂಬ ಸಂತಸವಾಗಿದೆ ಎಂದು ಹೇಳಿದ್ದಾರೆ. ಶ್ರೀನಿವಾಸ ಗೌಡ ಜೊತೆಗೆ ಮಿಜಾರು ಶಕ್ತಿನಿಲಯ ಪ್ರಸಾದ್ ಶೆಟ್ಟಿಯವರ ಅಪ್ಪು ಹೆಸರಿನ ಕೋಣವನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ. ಈ ಬಾರಿಯ ಸೀಸನಲ್ಲಿ ಐದು ಕಂಬಳ ನಡೆದಿದ್ದು, ನಾಲ್ಕು ಮೆಡಲ್ ಗಳನ್ನು ಶ್ರೀನಿವಾಸ ಗೌಡ ಪಡೆದಿದ್ದಾರೆ. ಕಳೆದ ಐದು ವರ್ಷಗಳಲ್ಲಿ 75 ಕಂಬಳಗಳಲ್ಲಿ 76 ಮೆಡಲ್ ಗಳನ್ನು ಪಡೆದಿರುವ ಸಾಧನೆಯನ್ನು ಶ್ರೀನಿವಾಸ ಗೌಡ ಮಾಡಿದ್ದಾರೆ. ಇದಲ್ಲದೆ, ಕಂಬಳದ ಕುರಿತಾಗಿ ಸಿನಿಮಾ ಮಾಡುತ್ತಿರುವ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಬಿರ್ದ್ ದ ಕಂಬುಲ ಚಿತ್ರದಲ್ಲಿ ಶ್ರೀನಿವಾಸ ಗೌಡ ಪ್ರಮುಖ ಪಾತ್ರದಲ್ಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರಿನ ಕುಳೂರಿನಲ್ಲಿ ನಡೆಯುವ ರಾಮ ಲಕ್ಷ್ಮಣ ಕಂಬಳದ ಆಯೋಜಕ ಬೃಜೇಶ್ ಚೌಟ, ಕಂಬಳದ ಓಟಗಾರನಿಗೆ ಜುವೆಲ್ಲರಿ ಜಾಹೀರಾತಿನಲ್ಲಿ ಸ್ಥಾನ ಸಿಕ್ಕಿರುವ ಬೆಳವಣಿಗೆ ಜನರು ಕಂಬಳ ಬಗೆಗೆ ಹೊಂದಿರುವ ಪ್ರೀತಿಯನ್ನು ತೋರಿಸುತ್ತದೆ ಎಂದಿದ್ದಾರೆ. ಇದೇ ರೀತಿ ಮತ್ತಷ್ಟು ಕಂಪನಿಗಳು ಕಂಬಳದ ಬಗ್ಗೆ ಪ್ರೋತ್ಸಾಹ ನೀಡಿದರೆ ಜನಪದ ಕ್ರೀಡೆ ಮತ್ತು ಇದರಲ್ಲಿ ತೊಡಗಿಕೊಂಡವರಿಗೆ ಲಾಭ ಆಗುತ್ತದೆ. ಕಂಬಳ ಆಯೋಜನೆ ಮಾಡುವಲ್ಲಿ ಸರಕಾರವೂ ಮುತುವರ್ಜಿ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.
Kambala jockey Srinivas Gowda becomes model for jewellery brand in Mangalore. Renowned Kambala jockey Srinivas Gowda, who beat world record of Usain Bolt by running faster than Bolt in the Kambala race has turned into a model by becoming the brand ambassador of a popular golden ornament selling group.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm