ಬ್ರೇಕಿಂಗ್ ನ್ಯೂಸ್
02-11-22 03:57 pm Mangalore Correspondent ಕರಾವಳಿ
ಮಂಗಳೂರು, ನ.2: ಆಮ್ ಆದ್ಮಿ ಪಕ್ಷದ ಕಾರ್ಯಕ್ರಮದಲ್ಲಿ ತನ್ನ ಅಳಲು ಹೇಳಿಕೊಂಡ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಪತಿ ಜೀವ ಬೆದರಿಕೆ ಒಡ್ಡಿ ಧಮ್ಕಿ ಹಾಕಿದ ಘಟನೆ ನಡೆದಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಪ್ರತಿಕ್ರಿಯಿಸಿದ್ದು, ಉಪ ಮೇಯರ್ ಅವರ ಪತಿ ಫೋನ್ ಮಾಡಿ ಬೆದರಿಕೆ ಹಾಕಿದ್ದಾರಂತೆ. ಮನೆಗೆ ನುಗ್ಗಿ ಹೊಡೀತೀನಿ, ನಮ್ಮ ವಿರುದ್ಧ ಹೇಳಿಕೆ ನೀಡ್ತೀಯಾ ಎಂದು ಧಮ್ಕಿ ಹಾಕಿದ್ದಾರಂತೆ. ಅವರು ಮನೆಗೆ ಬಂದು ಹೊಡೆದು ನೋಡಲಿ. ನಾವು ಆ ವ್ಯಕ್ತಿಯ ಜೊತೆಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ನ.1ರಂದು ಆಪ್ ಪಕ್ಷದ ಮಂಗಳೂರು ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತ ನಾರಾಯಣ ಪ್ರಭು ಎಂಬವರು ತಮ್ಮ ವಾರ್ಡಿನಲ್ಲಿ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಏರಿಯಾ ಕಾರ್ಪೊರೇಟರ್ ಬಳಿ ಹೇಳಿದ್ದರೂ, ಸಮಸ್ಯೆ ಸರಿಪಡಿಸಿರದ ಕಾರಣ ತಿಂಗಳ ಹಿಂದೆ ಆಮ್ ಆದ್ಮಿ ಪಕ್ಷದ ವತಿಯಿಂದ ಆರಂಭಿಸಿದ್ದ ಪೋರ್ಟಲ್ ನಲ್ಲಿ ದೂರು ಹೇಳಿಕೊಂಡಿದ್ದರು. ನಮ್ಮ ಕಾರ್ಯಕರ್ತರು ಪಾಲಿಕೆಯಲ್ಲಿ ಮಾತನಾಡಿ ಅವರ ಸಮಸ್ಯೆ ನೀಗಿಸಿದ್ದಾರೆ. ಇದಕ್ಕೆ ಥ್ಯಾಂಕ್ಸ್ ಹೇಳಿದ್ದರು. ನೀವು ಪಕ್ಷದ ಕಚೇರಿಗೇ ಬಂದು ನಿಮ್ಮ ಅನುಭವ ಹೇಳಿದರೆ ಒಳ್ಳೆದು ಎಂದಿದ್ದಕ್ಕೆ ಬಂದಿದ್ದರು. ಆನಂತರ ಪಕ್ಷದ ವಿಚಾರ ತಿಳಿದು ಆಮ್ ಆದ್ಮಿ ಪಕ್ಷ ಸೇರುವುದಾಗಿಯೂ ತಿಳಿಸಿದ್ದರು. ಈ ನಡುವೆ, ಬಿಜೆಪಿ ನಾಯಕರು ಗೂಂಡಾ ರಾಜಕೀಯ ತೋರಿಸಿದ್ದಾರೆ. ಇವರ ಗೂಂಡಾಯಿಸಂ ನೋಡಿ ಕೈಕಟ್ಟಿ ಕೂರುವ ಜಾಯಮಾನ ನಮ್ಮದಿಲ್ಲ ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಇವತ್ತು ಗುಜರಾತ್ ಮತ್ತು ದೆಹಲಿ ಮಾಡೆಲ್ ನಮ್ಮ ಮುಂದಿದೆ. ಕರ್ನಾಟಕದಲ್ಲಿ ಸರಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿದವರು ಐವತ್ತು ಪರ್ಸೆಂಟ್ ಮಾತ್ರ ಪಾಸ್ ಆಗುತ್ತಿದ್ದಾರೆ. ದೆಹಲಿಯಲ್ಲಿ ಸರಕಾರಿ ಶಾಲೆಯಲ್ಲಿ ಓದಿದವರು ನೂರು ಪರ್ಸೆಂಟ್ ಪಾಸ್ ಆಗುತ್ತಾರೆ. ಇದು ಅಲ್ಲಿನ ಸರಕಾರಿ ಶಾಲೆಯಲ್ಲಿ ಆಗಿರುವ ಬದಲಾವಣೆ. ದೆಹಲಿ ಮಾಡೆಲ್ ಶೈನಿಂಗ್ ಆಗುತ್ತಿರುವುದನ್ನು ನೋಡಿ ಕರ್ನಾಟಕ, ಗುಜರಾತಿನಲ್ಲಿ ಅನುಕರಣೆ ಮಾಡಲಾಗುತ್ತಿದೆ. ನಲ್ವತ್ತು ವರ್ಷದಲ್ಲಿ ಒಮ್ಮೆಯೂ ಸರಕಾರಿ ಶಾಲೆಯ ಮುಖ ನೋಡದೇ ಇದ್ದ ಅಮಿತ್ ಷಾ ಮತ್ತು ನರೇಂದ್ರ ಮೋದಿ ಸರಕಾರಿ ಶಾಲೆಗೆ ಹೋಗುತ್ತಿದ್ದಾರೆ. ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿದ್ದಾರೆ. ಇದು ದೇಶದಲ್ಲಾಗುತ್ತಿರುವ ಬದಲಾವಣೆ.
ಕೇವಲ ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಆಮ್ ಆದ್ಮಿ ಪಕ್ಷ ಇಂದು ಎರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಜನರು ಆಮ್ ಆದ್ಮಿ ಪಕ್ಷದ ಬಗ್ಗೆ ವಿಶ್ವಾಸ ಪಡೆಯುತ್ತಿರುವುದು, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮನ್ನಣೆ ನೀಡುತ್ತಿರುವುದಕ್ಕೆ ಇದು ಸಾಕ್ಷಿ. ನಾವು ಗುಜರಾತಿನಲ್ಲಿಯೂ ಅಧಿಕಾರ ಪಡೆಯುವ ವಿಶ್ವಾಸದಲ್ಲಿದ್ದೇವೆ. ಕರ್ನಾಟಕದಲ್ಲಿಯೂ ನಮ್ಮ ಪಕ್ಷಕ್ಕೆ ಆದ್ಯತೆ ನೀಡುತ್ತಿದ್ದಾರೆ. ಮೂರು ಪಕ್ಷಗಳ ಬಗ್ಗೆ ಭ್ರಮನಿರಸನಗೊಂಡು ಆಪ್ ಕೈಹಿಡಿಯಲಿದ್ದಾರೆ. ಕಾಂಗ್ರೆಸ್, ಬಿಜೆಪಿಯವರು ಈವರೆಗೂ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದರು. ಈಗ ನೇರವಾಗಿ ಜನರ ಜೇಬಿಗೆ ಕೈಹಾಕುತ್ತಿದ್ದಾರೆ. ಸರಕಾರಿ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳಿಂದ ಪ್ರತಿ ತಿಂಗಳು ನೂರು ರೂ. ಪಡೆಯಲು ರಾಜ್ಯ ಸರಕಾರ ಆದೇಶ ಮಾಡಿತ್ತು. ಇವರಿಗೆ ನಾಚಿಕೆಯಾಗಬೇಕು, ಜನರ ದುಡ್ಡು ಕೀಳುವುದಕ್ಕೆ ಎಂದು ಹೇಳಿದರು.
ಸುರತ್ಕಲ್ ಟೋಲ್ ಗೇಟ್ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಮಾಧ್ಯಮದವರು ಕೇಳಿದ್ದಕ್ಕೆ ಇಲ್ಲಿನ ಸಂಸದ ನಳಿನ್ ಕುಮಾರ್, ಅದು ಆಸ್ಕರ್ ಆರಂಭಿಸಿದ್ದು, ಕಾಂಗ್ರೆಸ್ ನವರು ಮಾಡಿದ್ದು ಅಂತಾರೆ. ಕಾಂಗ್ರೆಸ್ ನವರು ಮಾಡಿದ್ದು ಅಂತಲೇ ಅದನ್ನು ಸರಿಪಡಿಸಲು ಬಿಜೆಪಿಗೆ ಜನ ಮತ ಕೊಟ್ಟಿದ್ದು. ಇವರು ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಮಾಡಿದ್ದು ಅಂತಾರೆ. ಹಾಗಾದ್ರೆ ಇವರು ಮಾಡಿದ್ದೇನು ಎಂದು ಪ್ರಶ್ನೆ ಮಾಡಿದರು.
ನೋಟಿನಲ್ಲಿ ಲಕ್ಷ್ಮಿ, ಗಣಪತಿ ಫೋಟೋ ಹಾಕುವ ಕೇಜ್ರಿವಾಲ್ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ, ನಾವು ಹಿಂದು ವಿರೋಧಿಗಳಲ್ಲ. ಅವರು ಯಾವುದೋ ದೇಶದ ಆರ್ಥಿಕತೆಯ ದೃಷ್ಟಿಯಿಂದ ಆ ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಮಾಡಿದಂತೆ, ಹಿಂದುಗಳನ್ನು ಮುಂದಿಟ್ಟು ದ್ವೇಷ ಬೆಳೆಸುವುದನ್ನು ವಿರೋಧಿಸುತ್ತೇವೆ. ಹಿಂದು, ಕ್ರಿಸ್ತಿಯನ್, ಮುಸ್ಲಿಮ್ ಹೆಸರಲ್ಲಿ ವಿಭಜಿಸುವುದು ಸರಿಯಲ್ಲ. ಎಲ್ಲರೂ ನಮ್ಮ ಸೋದರರು. ಸಮಾಜದಲ್ಲಿ ಎಲ್ಲರೂ ಬೇಕಾಗುತ್ತದೆ. ಇಂಡೋನೇಶ್ಯಾದಲ್ಲಿ 85 ಪರ್ಸೆಂಟ್ ಮುಸ್ಲಿಮರು, ಎರಡು ಪರ್ಸೆಂಟ್ ಹಿಂದುಗಳಿದ್ದರೂ, ಅಲ್ಲಿನ ನೋಟುಗಳಲ್ಲಿ ಲಕ್ಷ್ಮಿಯನ್ನು ಹಾಕಿದ್ದಾರೆ. ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದರು. ಕೇಜ್ರಿವಾಲ್ ದೀಪಾವಳಿ ಸಂದರ್ಭದಲ್ಲಿ ರೂಪಾಯಿ ಮೌಲ್ಯ ಕುಸಿತ ಆಗಿದ್ದಕ್ಕೆ ಧನಲಕ್ಷ್ಮಿಯನ್ನು ನೋಟಿನಲ್ಲಿ ಹಾಕುವಂತೆ ಸಲಹೆ ಮಾಡಿದ್ದರು ಅಷ್ಟೇ ಎಂದರು.
ಆಪ್ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಮಾತನಾಡಿ, ಮಂಗಳೂರಿನಲ್ಲಿ ಡ್ರೈನೇಜ್ ಸಮಸ್ಯೆ ದೊಡ್ಡದಾಗಿ ಕಾಣಿಸಿಕೊಂಡಿದ್ದು, ಮುಂದೊಂದು ದಿನ ನೀರಿನ ಹಾಹಾಕಾರಕ್ಕೆ ಕಾರಣವಾಗುವುದರಲ್ಲಿ ಸಂಶಯ ಇಲ್ಲ. ಡ್ರೈನೇಜ್ ಕಾರಣದಿಂದಾಗಿ ಬಾವಿ, ಬೋರ್ ವೆಲ್ ನೀರನ್ನು ಮಂಗಳೂರಿನಲ್ಲಿ ಕುಡಿಯಲಾಗದ ಸ್ಥಿತಿ ಬಂದಿದೆ. ಇದಕ್ಕಾಗಿ ಬಿಜೆಪಿ, ಕಾಂಗ್ರೆಸಿಗೆ ಪರ್ಯಾಯ ರೂಪದಲ್ಲಿ ಆಪ್ ಪಕ್ಷವನ್ನು ಜನರು ಗುರುತಿಸಬೇಕಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ವೆಂಕಟೇಶ್ ಬಾಳಿಗಾ, ಅಶೋಕ್ ಅದಮಲೆ ಇದ್ದರು.
Former Mayors husband threatens BJP member for attending AAP program in Mangalore, slams State Convener Prithvi Reddy.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm