ಬ್ರೇಕಿಂಗ್ ನ್ಯೂಸ್
30-10-22 05:49 pm HK News Desk ಕರಾವಳಿ
ಮಂಗಳೂರು, ಅ.30:ಹಿಂದುಳಿದ ಬಿಲ್ಲವ- ಈಡಿಗರ ಕಲ್ಯಾಣಕ್ಕಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು ಎನ್ನುವುದು ನಮ್ಮ ಬೇಡಿಕೆ. ಆದರೆ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯದಲ್ಲಿ 75 ಲಕ್ಷ ಜನಸಂಖ್ಯೆಯಿರುವ ಬಿಲ್ಲವರ ಮೂಗಿಗೆ ತುಪ್ಪ ಸವರುವ ಯತ್ನ ಮಾಡಿದ್ದಾರೆ. ಕಾಟಾಚಾರಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ಅಭಿವೃದ್ಧಿ ಕೋಶ ರಚಿಸಿ, ನಮ್ಮನ್ನು ಒಡೆಯಲು ಮುಂದಾಗಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿ ರಾಜ್ಯ ಸರಕಾರ ಈ ಕುರಿತು ಹೊರಡಿಸಿದ ಆದೇಶ ಪತ್ರವನ್ನು ಹರಿದು ಹಾಕಿ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿದ ನಾರಾಯಣ ಗುರು ಪೀಠದ ರಾಜ್ಯಾಧ್ಯಕ್ಷ ಪ್ರಣವಾನಂದ ಸ್ವಾಮೀಜಿ, ಬೊಮ್ಮಾಯಿ ಮತ್ತು ಬಿಲ್ಲವರನ್ನು ಪ್ರತಿನಿಧಿಸುವ ಸಚಿವರಾದ ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವ- ಈಡಿಗ ಸಮುದಾಯದ ಹೋರಾಟವನ್ನು ಹತ್ತಿಕ್ಕಲು ನೋಡುತ್ತಿದ್ದಾರೆ. ನಾವು 500 ಕೋಟಿ ಅನುದಾನ ಮತ್ತು ಪ್ರತ್ಯೇಕ ನಿಗಮ ಕೇಳುತ್ತಿದ್ದರೆ, ಇವರು ಕೋಶ ನೀಡುತ್ತಿದ್ದಾರೆ. ಈ ಕೋಶಕ್ಕೆ ತಂದೆನೂ ಇಲ್ಲ, ತಾಯಿನೂ ಇಲ್ಲ. ಯಾರೋ ರಿಟೈರ್ ಅಧಿಕಾರಿಯನ್ನು ಕೋಶಕ್ಕೆ ನೇಮಿಸಿ, ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಅನುದಾನ ಸಿಗಲ್ಲ.
ಮೇಲ್ವರ್ಗದವರಿಗೆ ನಿಗಮ ಕೊಟ್ಟಿದ್ದೀರಿ. ಅವರು ಕೇಳಿದ್ದಕ್ಕೆ ಅನುದಾನವನ್ನೂ ಕೊಟ್ಟಿದ್ದೀರಿ. ಬಿಲ್ಲವರು ಅಂದರೆ ನಿಮಗೆ ಅಸಡ್ಡೆಯಾಗಿದೆ. ನಾವು ನಮ್ಮ ಪ್ರಾತಿನಿಧ್ಯಕ್ಕಾಗಿ ಶಕ್ತಿ ಪ್ರದರ್ಶನ ಮಾಡುತ್ತೇವೆ. ಜನವರಿ 6ರಿಂದ ಮಂಗಳೂರಿನಿಂದ ಉಡುಪಿ, ಶಿವಮೊಗ್ಗ, ದಾವಣಗೆರೆ ಮೂಲಕ ಬೆಂಗಳೂರಿಗೆ 630 ಕಿಮೀ ಉದ್ದಕ್ಕೆ ಪಾದಯಾತ್ರೆ ನಡೆಸುತ್ತೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಸಮಾವೇಶ ನಡೆಸುತ್ತೇವೆ. ಕರಾವಳಿ, ಮಲೆನಾಡಿನಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಬಿಲ್ಲವರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಲು ಒತ್ತಾಯಿಸುತ್ತೇವೆ. ಬಿಲ್ಲವ ಶಾಸಕರು, ಸಚಿವರು ತಮ್ಮ ಸ್ಥಾನ ತ್ಯಜಿಸಿ, ನಮ್ಮ ಹೋರಾಟಕ್ಕೆ ಕೈಜೋಡಿಸಬೇಕು. ನಾವೇನು ಭಿಕ್ಷೆ ಕೇಳುತ್ತಿಲ್ಲ. ಬೊಮ್ಮಾಯಿ ಸರಕಾರದ ಕುತಂತ್ರ ರಾಜಕಾರಣಕ್ಕೆ ನಾವು ಉತ್ತರ ನೀಡುತ್ತೇವೆ.
ಪೂಜಾರಿ ಉದ್ಘಾಟನೆ, ತೆಲಂಗಾಣ ಸಿಎಂ ಆಹ್ವಾನ
ಪಾದಯಾತ್ರೆಯನ್ನು ಬಿಲ್ಲವರ ಮಹಾನ್ ನಾಯಕ ಜನಾರ್ದನ ಪೂಜಾರಿಯವರು ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ತೆಲಂಗಾಣ ಸಿಎಂ ಕೆಸಿಆರ್, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸುತ್ತೇವೆ. ಕೇರಳದಲ್ಲಿ ನಮ್ಮ ಸಮುದಾಯದ 29 ಶಾಸಕರಿದ್ದಾರೆ. ತೆಲಂಗಾಣದಲ್ಲಿ 50 ಲಕ್ಷ ನಮ್ಮ ಸಮುದಾಯದ ಜನರಿದ್ದಾರೆ. ಅಲ್ಲಿಯೂ ಹಲವು ಶಾಸಕರಿದ್ದಾರೆ. ತೆಲಂಗಾಣದಲ್ಲಿ ಶೇಂದಿ ತೆಗೆಯುವವರು ಮರದಿಂದ ಬಿದ್ದು ಮೃತಪಟ್ಟರೆ 5 ಲಕ್ಷ ಪರಿಹಾರ ಇದೆ, ಉನ್ನತ ಶಿಕ್ಷಣ ಪಡೆಯಲು 20 ಲಕ್ಷ ಕೊಡುತ್ತಾರೆ. ಶೇಂದಿ ತೆಗೆಯುವ ತಾಳೆ, ತೆಂಗಿನ ಮರ ಕಡಿಯದಂತೆ ಕಾನೂನು ಮಾಡಿದ್ದಾರೆ. ತೆಲಂಗಾಣ ಮತ್ತು ಕೇರಳದಲ್ಲಿ ಬಿಲ್ಲವ- ಈಡಿಗರಿಗೆ ಸವಲತ್ತು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ರಾಜಕಾರಣಿಗಳು ನಿರ್ಲಕ್ಷ್ಯ ಮಾಡಿದ್ದಾರೆ.
ಹೋರಾಟ ದಿಕ್ಕು ತಪ್ಪಿಸಲು ಸಚಿವರಿಂದ ಆಮಿಷ
ಬಿಲ್ಲವರ ಹೋರಾಟವನ್ನು ದಾರಿ ತಪ್ಪಿಸಲು ಕೆಲವು ಸಚಿವರು ಮುಂದಾಗಿದ್ದರು. ನೀವು ಹೇಳುವ 25 ಮಂದಿಗೆ ಎಂಎಸ್ಐಎಲ್ ಲೈಸನ್ಸ್ ಕೊಡುತ್ತೇವೆ. ಓಡಾಡಲು ಫಾರ್ಚುನರ್ ಕಾರು ಕೊಡಿಸುತ್ತೇನೆಂದು ಸಚಿವರೊಬ್ಬರು ಆಫರ್ ಕೊಟ್ಟಿದ್ದರು. ಸಮಯ ಬಂದಾಗ ಅವರ ಹೆಸರನ್ನು ಹೇಳುತ್ತೇನೆ. ಆದರೆ ಆಮಿಷವನ್ನು ಬದಿಗೊತ್ತಿ ಸಮುದಾಯದ ಹಿತಕ್ಕಾಗಿ ಕೈಜೋಡಿಸಿದ್ದೇನೆ. ಬಿಲ್ಲವರನ್ನು ಪ್ರತಿನಿಧಿಸುವ ಕರಾವಳಿಯ ಸಚಿವರ ಬಗ್ಗೆ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯನ್ನು ಸಚಿವರು ಹುಸಿಗೊಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಲ್ಲವರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ ಮೂರು ಸೀಟನ್ನು ಜಿಲ್ಲೆಯಲ್ಲಿ ಬಿಲ್ಲವರಿಗೆ ಕೊಡಬೇಕೆಂದು ಹೇಳುತ್ತೇನೆ. ಬೆಳ್ತಂಗಡಿಯಲ್ಲಿ 75 ಸಾವಿರ ಮಂದಿ ಬಿಲ್ಲವರಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ 65 ಸಾವಿರ ಈಡಿಗರಿದ್ದಾರೆ. ನಮ್ಮ ಸಮುದಾಯದವರಿಗೆ ಶಾಸಕ ಸ್ಥಾನ ಕೊಡಿ. ಇಲ್ಲದಿದ್ದರೆ ಪರಿಣಾಮ ಎದುರಿಸಿ ಎಂದು ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದ್ದಾರೆ.
Cm Bommai is trying to play dirty politics, Trying to destroy billavas slams Pranavananda swami in Mangalore
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm