ಬ್ರೇಕಿಂಗ್ ನ್ಯೂಸ್
11-10-22 10:32 pm Mangalore Correspondent ಕರಾವಳಿ
ಮಂಗಳೂರು, ಅ.11: ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದಲ್ಲಿ ರಾಮಚಂದ್ರ ಭಟ್ ಎಂಬವರ ಮನೆಯ ಹೊರಗೆ ಇರಿಸಿದ್ದ ಓಮ್ನಿ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ನಕ್ಸಲರು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಆರೋಪಿತನಾಗಿ ಗುರುತಿಸಿದ್ದ ತುಮಕೂರು ಮೂಲದ ಚಿನ್ನಿ ರಮೇಶ್ ಅಲಿಯಾಸ್ ಶಿವಕುಮಾರ್ ಕೋರ್ಟಿನಲ್ಲಿ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಗೊಂಡಿದ್ದಾನೆ.
2013ರ ನವೆಂಬರ್ 9ರಂದು ನಸುಕಿನಲ್ಲಿ ತನ್ನ ಮನೆಗೆ ಬಂದಿದ್ದ ನಕ್ಸಲರು ಮನೆಯ ಬಾಗಿಲು ಬಡಿದು, ಹೊರಗೆ ಬಾರದೇ ಇದ್ದಾಗ ಹೊರಗಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದರು ಎಂದು ರಾಮಚಂದ್ರ ಭಟ್ ಎಂಬವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿ ನಕ್ಸಲರಾದ ವಿಕ್ರಂ ಗೌಡ, ಚಿನ್ನಿ ರಮೇಶ್, ಸಾವಿತ್ರಿ, ಸುಂದರಿ, ವಿಜಯ್, ಜಯಣ್ಣ ಮತ್ತು ಇತರರು ಸೇರಿಕೊಂಡು ಕೃತ್ಯ ಎಸಗಿದ್ದಾಗಿ ಹೇಳಲಾಗಿತ್ತು. ಬೆಂಕಿ ಹಚ್ಚಿದ್ದರಿಂದ 2.65 ಲಕ್ಷ ರೂ. ಮೌಲ್ಯದ ಕಾರು ಮತ್ತು ಬೈಕ್ ಸುಟ್ಟು ನಷ್ಟ ಉಂಟಾಗಿದ್ದಾಗಿ ಪೊಲೀಸರು ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪಿಗಳ ವಿರುದ್ಧ ಯುಎಪಿಎ - ಸೆಕ್ಷನ್ 10(ಬಿ) ಮತ್ತು ಶಸ್ತ್ರಾಸ್ತ್ರ ಕಾಯ್ದೆ, ಐಪಿಸಿ ಸೆಕ್ಷನ್ 143, 147, 148, 447, 435, 427 ಜೊತೆಗೆ 149 ಅಡಿ ಪೊಲೀಸರು ಕೇಸು ದಾಖಲಿಸಿದ್ದರು. ಮೊದಲಿಗೆ ತನಿಖೆ ನಡೆಸಿದ್ದ ಆಗಿನ ಬಂಟ್ವಾಳ ಡಿವೈಎಸ್ಪಿ ರವೀಶ್, ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ 2017ರ ಜ.17ರಂದು ಸಿ ರಿಪೋರ್ಟ್ ಸಲ್ಲಿಸಿದ್ದರು. ಆನಂತರ ಉಡುಪಿ ಎಸ್ಪಿಯಾಗಿದ್ದ ಅಣ್ಣಾಮಲೈ ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ನಕ್ಸಲ್ ಚಿನ್ನಿ ರಮೇಶ್ ಎಂಬಾತನನ್ನು ವಶಕ್ಕೆ ಪಡೆದು, ರಾಮಚಂದ್ರ ಭಟ್ ಮನೆಯ ಆವರಣದಲ್ಲಿ ಕಿಚ್ಚಿಟ್ಟ ಪ್ರಕರಣದಲ್ಲಿ ಆರೋಪಿಯೆಂದು ಸೂಚಿಸಿ ಮರು ತನಿಖೆಗೆ ಆದೇಶ ಮಾಡಿದ್ದರು. ಮರು ತನಿಖೆ ನಡೆಸಿದ ಡಿವೈಎಸ್ಪಿ ರವೀಶ್ ಸಿಆರ್, ನಕ್ಸಲ್ ಚಿನ್ನಿ ರಮೇಶ್ ನನ್ನು ಬಂಧಿಸಿ ತರಾತುರಿಯಲ್ಲಿ ಕೋರ್ಟಿಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಆರಂಭಿಸಿದ್ದ ಕೋರ್ಟ್, ಆರೋಪ ಪಟ್ಟಿಯಲ್ಲಿದ್ದ ಒಟ್ಟು 22 ಸಾಕ್ಷಿಗಳ ಪೈಕಿ 9 ಮಂದಿಯನ್ನು ಕರೆಸಿ ವಿಚಾರಣೆ ನಡೆಸಿತ್ತು. ಅದರಲ್ಲಿ 5 ಮಂದಿ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. ಆರೋಪಿ ಪರವಾಗಿ ವಾದ ಮಂಡಿಸಿದ್ದ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ, 2013ರ ವೇಳೆಗೆ ಕುತ್ಲೂರು ಪ್ರದೇಶದಲ್ಲಿ ಸರಕಾರ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುತ್ತಿತ್ತು. ಸ್ಥಳೀಯವಾಗಿ ರಾಮಚಂದ್ರ ಭಟ್ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಪರವಾಗಿದ್ದರು. ಇದಕ್ಕಾಗಿ ನಕ್ಸಲರು ಕಾಡಿನ ಜನರ ಪರವಾಗಿ ರಾಮಚಂದ್ರ ಭಟ್ ಮನೆಗೆ ಬಂದು ಕೃತ್ಯ ಎಸಗಿದ್ದಾರೆಂದು ದೂರಲಾಗಿತ್ತು. ಆದರೆ ಈ ಕೃತ್ಯ ಎಸಗಿರುವುದಕ್ಕೂ, ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿರುವ ಚಿನ್ನಿ ರಮೇಶ್ ಗೂ ಯಾವುದೇ ಸಂಬಂಧ ಇಲ್ಲವೆಂದು ವಾದ ಮಂಡಿಸಿದ್ದರು.
ಪ್ರಕರಣದಲ್ಲಿ ಪೊಲೀಸರು ಒದಗಿಸಿದ್ದ ಸಾಕ್ಷ್ಯದಲ್ಲಿಯೂ ಆರೋಪಿಯನ್ನು ಗುರುತಿಸಲು ಸಾಧ್ಯವಾಗದೇ ಇದ್ದುದು ಮತ್ತು ಆರೋಪ ಸಾಬೀತುಪಡಿಸುವ ಸಾಕ್ಷ್ಯಗಳು ಇರದೇ ಇದ್ದುದರಿಂದ ಜಿಲ್ಲಾ ನ್ಯಾಯಾಧೀಶ ರವೀಂದ್ರ ಜೋಷಿ, ಆರೋಪಿ ಚಿನ್ನಿ ರಮೇಶ್ ನನ್ನು ನಿರಪರಾಧಿಯೆಂದು ಆರೋಪದಿಂದ ಖುಲಾಸೆ ಮಾಡಿದೆ. ಸದ್ರಿ ಪ್ರಕರಣದಲ್ಲಿ ಚಿನ್ನಿ ರಮೇಶ್ ನನ್ನು ಮಾತ್ರ ಆರೋಪಿಯೆಂದು ಗುರುತಿಸಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಉಳಿದ ಆರೋಪಿಗಳನ್ನು ತಲೆಮರೆಸಿಕೊಂಡವರೆಂದು ಹೇಳಿದ್ದರು. ಚಿನ್ನಿ ರಮೇಶ್ ವಿರುದ್ಧ ಚಿಕ್ಕಮಗಳೂರಿನಲ್ಲಿ ದಾಖಲಾದ ನಾಲ್ಕು ಪ್ರಕರಣಗಳು ವಿಚಾರಣೆಯಲ್ಲಿದ್ದು ಪ್ರಸಕ್ತ ಬೆಂಗಳೂರು ಜೈಲಿನಲ್ಲಿದ್ದಾನೆ.
Mangalore Naxal chinni ramesh from Belthangady proved innocent after police failed to submit enough evidence.
12-07-25 07:07 pm
Bangalore Correspondent
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
Heart Attack, Belagavi, Bidar: ಹೃದಯಾಘಾತ ; ರಸ್...
11-07-25 04:22 pm
12-07-25 04:21 pm
HK News Desk
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
12-07-25 01:42 pm
Mangalore Correspondent
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
12-07-25 01:32 pm
HK News Desk
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm
Rape case in Ramanagar: 14 ವರ್ಷದ ಬಾಲಕಿ ಮೇಲೆ ಆ...
10-07-25 08:09 pm