ಬ್ರೇಕಿಂಗ್ ನ್ಯೂಸ್
23-06-22 09:02 pm Mangalore Correspondent ಕರಾವಳಿ
ಮಂಗಳೂರು, ಜೂನ್ 23: ಎನ್ಐಟಿಕೆ ಟೋಲ್ ಗೇಟನ್ನು 90 ದಿನಗಳ ಒಳಗಡೆ ಸ್ಥಳಾಂತರ ಮಾಡಲಾಗುತ್ತೆ ಅನ್ನುವ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆಯೂ ಹುಸಿಯಾಗಿದೆ. ಕಳೆದ ಮಾರ್ಚ್ 22ರಂದು ಗಡ್ಕರಿಯವರು ಸಂಸತ್ತಿನಲ್ಲಿಯೇ 60 ಕಿಮೀ ಒಳಗಿರುವ ದೇಶದ ಎಲ್ಲ ಟೋಲ್ ಗೇಟ್ ಗಳನ್ನು ರದ್ದು ಮಾಡಲಾಗುವುದು ಎಂದಿದ್ದರು. 90 ದಿನಗಳ ಗಡುವು ಜೂನ್ 22ಕ್ಕೆ ಮುಗಿದಿದ್ದು ಸುರತ್ಕಲ್ ಬಳಿಯ ಎನ್ಐಟಿಕೆ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ ಮತ್ತೆ ಪ್ರತಿಭಟನೆಗೆ ಸಿದ್ಧತೆ ನಡೆದಿದೆ.
ಇದರ ನಡುವೆಯೇ ಟೋಲ್ ಗೇಟ್ ಗುತ್ತಿಗೆ ಅವಧಿಯೂ ಕೊನೆಗೊಂಡಿದ್ದು, ಹೊಸ ಗುತ್ತಿಗೆ ವಹಿಸಲು ಹೆದ್ದಾರಿ ಪ್ರಾಧಿಕಾರ ಬಿಡ್ ಕರೆದಿದೆ. ಈಗ ಇರುವ ಗುತ್ತಿಗೆದಾರರು ದಿನಕ್ಕೆ 12.90 ಲಕ್ಷ ರೂಪಾಯಿ ಪಾವತಿಸುವ ಬಿಡ್ ಹೊಂದಿದ್ದಾರೆ. ಈಗ ಮಳೆಗಾಲದ ಕಾರಣ ನಷ್ಟ ಸಾಧ್ಯತೆ ಇರುವುದರಿಂದ ಹೊಸ ಬಿಡ್ಡಿಂಗ್ ಅಥವಾ ಅದಕ್ಕಿಂತ ಹೆಚ್ಚು ಬಿಡ್ ಸಲ್ಲಿಕೆಯಾಗುವ ಸಾಧ್ಯತೆ ಕಡಿಮೆ. ಬೇರೆ ಯಾವುದೇ ಕಂಪನಿ ಬಿಡ್ ಸಲ್ಲಿಕೆಗೆ ಮುಂದೆ ಬರದೇ ಇದ್ದಲ್ಲಿ ಈಗ ಇರುವ ಕಂಪನಿಗೇ ಮುಂದಿನ ಒಂದು ತಿಂಗಳು ಜುಲೈ 24ರ ವರೆಗೆ ಗುತ್ತಿಗೆ ಅವಧಿ ಮುಂದುವರೆಯಲಿದೆ.
ಈಗಾಗ್ಲೇ ಟೋಲ್ ಗೇಟ್ ವಿರೋಧಿ ಸಮಿತಿ ಸುಂಕ ವಸೂಲಿ ವಿರುದ್ಧ ಅಭಿಯಾನ ಆರಂಭಿಸಿದ್ದು, ಶಾಸಕ ಭರತ್ ಶೆಟ್ಟಿ ಮತ್ತು ಸಂಸದ ನಳಿನ್ ಕುಮಾರ್ ವಿರುದ್ಧ ಟ್ರೋಲಿಂಗ್ ಆರಂಭಿಸಿದೆ. ಮೂರು ತಿಂಗಳ ಹಿಂದೆ ಸಚಿವ ಗಡ್ಕರಿಯ ಹೇಳಿಕೆ ಉಲ್ಲೇಖಿಸಿ, ಟೋಲ್ ಗೇಟ್ ಬಂದ್ ಆಗುತ್ತೆ ಎಂದು ಸಂಸದ ನಳಿನ್ ಕುಮಾರ್ ಹೇಳಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಟೋಲ್ ವಿರುದ್ಧ ಅಬ್ಬರಿಸುವ ನೆಪದಲ್ಲಿ ಶಾಸಕ ಭರತ್ ಶೆಟ್ಟಿ, ಟೋಲ್ ಗೇಟ್ ತೆರವು ಆಗದೇ ಇದ್ದಲ್ಲಿ ಅಗೆದು ಹಾಕ್ತೀನಿ ಎಂದು ಹೇಳಿದ್ದರು. ಇವರ ಹೇಳಿಕೆಗಳು ಈಗ ಜಾಲತಾಣದಲ್ಲಿ ಟ್ರೋಲ್ ಆಗತೊಡಗಿವೆ.
ತಾತ್ಕಾಲಿಕ ನೆಪದಲ್ಲಿ ಸುರತ್ಕಲ್ ಟೋಲ್ ಗೇಟನ್ನು 2016ರಲ್ಲಿ ಆರಂಭಿಸಲಾಗಿತ್ತು. ಆನಂತರ, 2019ರಲ್ಲಿ ಹೆಜಮಾಡಿಯ ಟೋಲ್ ಗೇಟ್ ಆರಂಭಗೊಂಡಿತ್ತು. 12 ಕಿಮೀ ಅಂತರದಲ್ಲಿ ಹೆಜಮಾಡಿ ಟೋಲ್ ಗೇಟ್ ಇರುವುದರಿಂದ ಸುರತ್ಕಲ್ ನಲ್ಲಿ ಸುಂಕ ವಸೂಲಿ ಮಾಡುವುದು ಅವೈಜ್ಞಾನಿಕ ಅನ್ನುವುದು ಸಾರ್ವಜನಿಕರ ವಾದ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ, ಜನಾಕ್ರೋಶ ನಡೆದಿದ್ದರೂ, ಈ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಾದ ಸಂಸದ ನಳಿನ್ ಕುಮಾರ್, ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡುವ ನಾಟಕ ಮಾಡಿದ್ದರು. ಪ್ರತಿ ಬಾರಿ ಪ್ರತಿಭಟನೆ ಸಂದರ್ಭದಲ್ಲೂ ಟೋಲ್ ಗೇಟ್ ರದ್ದುಗೊಳಿಸುವ ನಿರ್ಧಾರ ಆಗಿದೆಯೆಂದೇ ಹೇಳಿ ಜನರನ್ನು ನಂಬಿಸುತ್ತಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಸಚಿವ ಗಡ್ಕರಿಯವರೇ ಸಂಸತ್ತಿನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು ಸುರತ್ಕಲ್ ಟೋಲ್ ಗೇಟ್ ರದ್ದಾಗುವ ಭರವಸೆ ಮೂಡಿಸಿತ್ತು. ಆದರೆ, ಸಚಿವರ ಮಾತನ್ನು ಅನುಷ್ಠಾನಿಸುವಲ್ಲಿ ಸ್ಥಳೀಯ ರಾಜಕಾರಣಿಗಳು ಸೋತಿದ್ದಾರೆ. ಹೀಗಾಗಿ ಮತ್ತೆ ಸ್ಥಳೀಯ ಶಾಸಕ ಭರತ್ ಶೆಟ್ಟಿ ಮತ್ತು ಸಂಸದ ನಳಿನ್ ಕಮಾರ್ ವಿರುದ್ಧ ಜನಾಕ್ರೋಶ ಎದ್ದಿದೆ.
ವಸೂಲಿ ಮುಂದುವರಿಸಿದರೆ ನೀವು ದ್ರೋಹಿಗಳು !
ಈ ಬಗ್ಗೆ ಹೇಳಿಕೆ ನೀಡಿರುವ ಟೋಲ್ ಗೇಟ್ ವಿರೋಧಿ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳಿ, ಸುರತ್ಕಲ್ ಟೋಲ್ ಸಂಗ್ರಹ ಗುತ್ತಿಗೆ ಇನ್ನೊಂದು ವಾರದಲ್ಲಿ ಮುಗಿಯುತ್ತದೆ. ಈಗಾಗ್ಲೇ ಹೆದ್ದಾರಿ ಪ್ರಾಧಿಕಾರದಿಂದ ಟೆಂಡರ್ ಕರೆಯಲಾಗಿದ್ದು ಯಾರೊಬ್ಬ ಗುತ್ತಿಗೆದಾರನೂ ಟೋಲ್ ಸಂಗ್ರಹದ ಗುತ್ತಿಗೆ ಪಡೆಯಲು ಅರ್ಜಿ ಹಾಕಿಲ್ಲ. ಆದುದರಿಂದ ಟೆಂಡರ್ ಪ್ರಕ್ರಿಯೆ ತಾನಾಗಿಯೇ ರದ್ದಾಗುತ್ತದೆ. ಟೋಲ್ ಸಂಗ್ರಹಿಸಲು ಅಧಿಕೃತ ಜನರೇ ಈ ತಿಂಗಳ ನಂತರ ಇರುವುದಿಲ್ಲ. ಶಾಸಕ ಭರತ್ ಶೆಟ್ಟಿ ಮತ್ತು ಸಂಸದ ನಳಿನ್ ಕುಮಾರ್ ಮನಸ್ಸು ಮಾಡಿದರೆ ಇಲ್ಲಿಗೆ ಟೋಲ್ ಸಂಗ್ರಹ ಬಂದ್ ಮಾಡಬಹುದು. ಇದು ಬಿಟ್ಟು ಅಡ್ಡದಾರಿಯಲ್ಲಿ ಟೋಲ್ ಸಂಗ್ರಹ ಮುಂದುವರಿಸಲು ಅವಕಾಶ ಕೊಟ್ಟರೆ ನಿಮ್ಮಂತಹ ದ್ರೋಹಿಗಳು ಯಾರೂ ಇರುವುದಿಲ್ಲ ಎಂದು ಹೇಳಿದ್ದಾರೆ.
The deadline given by the union transport minister Nitin Gadkari to close the toll gates that function within a distance of 60 km is over on Wednesday, June 22. However, the toll collection continues in Surathkal toll gate, the Toll Protest Committee has alleged. The committee in its suggestion said, “MP Nalin Kumar Kateel and MLA Dr Y Bharat Shetty could not keep their promise of getting the Surathkal toll gate closed. Now there is one more chance. The toll gate collection contract of Surathkal gets over within a week. New tender has already been called and the same will be opened on June 23. However, no contractor has submitted any tender, it is said. So the toll gate can be closed.”
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 12:58 pm
Mangalore Correspondent
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm