ಬ್ರೇಕಿಂಗ್ ನ್ಯೂಸ್
06-06-22 01:57 pm Mangalore Correspondent ಕರಾವಳಿ
ಮಂಗಳೂರು, ಜೂನ್ 6: ರಫ್ತು ಆಧರಿತ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಪ್ರತೀ ಉತ್ಪನ್ನದ ಮೇಲೆ 45 ಶೇಕಡಾ ತೆರಿಗೆಯನ್ನು ಕೇಂದ್ರ ಸರಕಾರ ಹಾಕಿದ್ದು, ಆಮೂಲಕ ಸರಕಾರಿ ಅಧೀನದ ಸಂಸ್ಥೆಯನ್ನು ನಷ್ಟಕ್ಕೆ ದೂಡಿ ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಟೀಕಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾದರ್, ಮಂಗಳೂರಿನ ಕೆಐಓಸಿಎಲ್ ಕಂಪನಿಯನ್ನು ಇಂದಿರಾ ಗಾಂಧಿ ಸರಕಾರ ಇದ್ದಾಗ 1980ರಲ್ಲಿ ಆರಂಭಿಸಲಾಗಿತ್ತು. ಮೊದಲಿಗೆ ಕುದುರೆಮುಖದಲ್ಲಿ ತನ್ನದೇ ಅದಿರು ಕೋರೆ ಇತ್ತು. ಆನಂತರ, ಕುದುರೆಮುಖದಲ್ಲಿ ಅದಿರು ತೆಗೆಯುವುದನ್ನು ನಿಲ್ಲಿಸಿದ ಬಳಿಕ ಬಳ್ಳಾರಿಯಿಂದ ಅದಿರು ಪಡೆದು ಕಬ್ಬಿಣದ ಪ್ಲೇಟ್ಸ್ ಗಳನ್ನು ಮಾಡಲಾಗುತ್ತಿತ್ತು. ಕಬ್ಬಿಣದ ಪ್ಲೇಟ್ಸ್ ಗಳಿಗೆ ಭಾರತದಲ್ಲಿ ಬೇಡಿಕೆ ಇಲ್ಲ. ಹಾಗಾಗಿ ರಫ್ತು ಉದ್ದೇಶದಿಂದ ಪ್ಲೇಟ್ಸ್ ಗಳನ್ನು ಉತ್ಪಾದಿಸಿ ವಿದೇಶಕ್ಕೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು.
ರಫ್ತು ಉದ್ದೇಶದಲ್ಲಿ ಉತ್ಪಾದನೆ ಮತ್ತು ಮಾರಾಟ ಇದ್ದುದರಿಂದ ಅದರ ಉತ್ಪನ್ನಕ್ಕೆ ಇದುವರೆಗೂ ತೆರಿಗೆ ವಿಧಿಸಿರಲಿಲ್ಲ. ಆದರೆ ಇದೀಗ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಏಕಾಏಕಿ ಕೆಐಓಸಿಎಲ್ ಉತ್ಪನ್ನದ ಮೇಲೆ 45 ಶೇಕಡಾ ತೆರಿಗೆ ವಿಧಿಸಿದ್ದಾರೆ. 12 ಸಾವಿರಕ್ಕೆ ಮಾರಾಟವಾಗುವ ಪ್ಲೇಟ್ಸ್ ಮೇಲೆ 45 ಶೇಕಡಾ ಟ್ಯಾಕ್ಸ್ ಹಾಕಿದರೆ, ಈ ಕಂಪನಿ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದ ಖಾದರ್, ಕೇವಲ ರಫ್ತು ಆಧರಿತ ಕಂಪನಿಯಾಗಿದ್ದರೂ, ಕೆಐಓಸಿಎಲ್ ಲಾಭದಲ್ಲಿ ನಡೆಯುತ್ತಿದೆ. ಪ್ರತಿ ವರ್ಷ 300 ಕೋಟಿ ಲಾಭದಲ್ಲಿ ನಡೆಯುತ್ತಿದೆ. ಕೇಂದ್ರ ಸರಕಾರದ ಸಂಸ್ಥೆಯಾಗಿರುವ ಕಾರಣ ಉತ್ಪನ್ನದ ಮೇಲೆ ತೆರಿಗೆ ಹಾಕಿರಲಿಲ್ಲ. ಈಗ ಪ್ರತೀ ಉತ್ಪನ್ನದ ಮೇಲೆ ತೆರಿಗೆ ಹೊರೆ ಹೊರಿಸಿ ಕಂಪನಿಯನ್ನು ನಷ್ಟಕ್ಕೆ ದೂಡುವ ಯತ್ನ ಮಾಡಲಾಗುತ್ತಿದೆ. ಆಮೂಲಕ ಅದನ್ನು ಕೂಡ ನಷ್ಟದಲ್ಲಿದೆಯೆಂದು ಹೇಳಿ ಖಾಸಗಿಯವರಿಗೆ ವಹಿಸುವ ಹುನ್ನಾರ ಇಲ್ಲಿದೆ ಎಂದು ಹೇಳಿದರು.

ಈ ಬಗ್ಗೆ ಇದರ ಜವಾಬ್ದಾರಿ ಹೊತ್ತಿರುವ ಸಂಸದ ನಳಿನ್ ಕುಮಾರ್, ಕೇಂದ್ರ ಹಣಕಾಸು ಸಚಿವರಲ್ಲಿ ಮಾತನಾಡಬೇಕು. ಕೂಡಲೇ ಈ ತೆರಿಗೆಯ ಹೊರೆಯನ್ನು ಇಲ್ಲದಂತೆ ಮಾಡಬೇಕು. ಇಲ್ಲದೇ ಇದ್ದರೆ, ಕಾಂಗ್ರೆಸ್ ಇದರ ವಿರುದ್ಧ ಉಗ್ರ ರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಲಾಭದಲ್ಲಿರುವ ಬ್ಯಾಂಕುಗಳನ್ನು ನಷ್ಟದಲ್ಲಿರುವ ಬ್ಯಾಂಕುಗಳ ಜೊತೆ ವಿಲೀನ ಮಾಡಿ, ಅದರ ಹೆಸರನ್ನೇ ಇಲ್ಲದಂತೆ ಮಾಡಿದೆ. ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಕೂಡ ಇದೇ ರೀತಿ ನಷ್ಟಕ್ಕೆ ದೂಡಿ ಈಗ ಖಾಸಗೀಕರಣ ಮಾಡಲು ಹೊರಟಿದೆ. ಎನ್ಎಂಪಿಟಿ ಬಂದರನ್ನು ಅದಾನಿಗೆ ವಹಿಸಿ, ಅಲ್ಲಿ ಕೆಐಓಸಿಎಲ್ ಹಿಂದಿನಿಂದಲೂ ಇದ್ದ ತನ್ನ ಬರ್ತ್ ನಲ್ಲಿ ವ್ಯವಹಾರ ನಡೆಸುವುದಕ್ಕೂ ಅದಾನಿ ಅನುಮತಿ ಕೇಳುವ ಪರಿಸ್ಥಿತಿ ಬಂದಿದೆ. ಬಿಜೆಪಿಯವರು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಟ್ಟಿ ಬೆಳೆಸಿಕೊಂಡು ಬಂದ ಕಂಪನಿಗಳನ್ನು ಮುಗಿಸಲು ನೋಡುತ್ತಿದ್ದಾರೆ. ಖಾಸಗಿಯವರಿಗೆ ಮಾರಾಟ ಮಾಡಲು ನೋಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಭವಿಷ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸಾಧ್ಯವಿದೆಯೇ, ಈ ಬಗ್ಗೆ ಮಾತುಕತೆಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ, ಮೈತ್ರಿಯೋ ಮತ್ತೊಂದು ಅದೆಲ್ಲವನ್ನೂ ನಮ್ಮ ಹೈಕಮಾಂಡ್ ಮಟ್ಟದ ನಾಯಕರು ನೋಡಿಕೊಳ್ಳುತ್ತಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಸರಾಗವಾಗಿ ಗೆದ್ದು 20 ಮತಗಳು ಉಳಿಯುತ್ತವೆ. ಹಾಗಾಗಿ ಅಭ್ಯರ್ಥಿ ಹಾಕಿದ್ದೇವೆ. ಒಟ್ಟ ಸಕ್ರಿಯ ಕಾರ್ಯಕರ್ತ ಅನ್ನುವ ಕಾರಣಕ್ಕೆ ಮನ್ಸೂರ್ ಅಲಿ ಖಾನ್ ಗೆ ಟಿಕೆಟ್ ಕೊಟ್ಟಿದ್ದೇವೆ. ಅಲ್ಪಸಂಖ್ಯಾತ ಅನ್ನುವ ಕಾರಣಕ್ಕೆ ಅಲ್ಲ. ಜೆಡಿಎಸ್ ನವರಿಗೆ ಅಲ್ಪಸಂಖ್ಯಾತರು, ನಿಷ್ಠಾವಂತರ ಬಗ್ಗೆ ಕಾಳಜಿ ಇದ್ದರೆ, ಫಾರೂಕ್, ಡ್ಯಾನಿಷ್ ಆಲಿ, ಸಿಎಂ ಇಬ್ರಾಹಿಂ ಯಾರಿಗಾದರೂ ಟಿಕೆಟ್ ಕೊಡಬಹುದಿತ್ತು. ನಮ್ಮಲ್ಲಿ ಬೆಂಬಲ ಕೇಳಬಹುದಿತ್ತು ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ಇಟ್ಟರು.
BJP is planning to close KIOCL by looting money slams UT Khader in Mangalore after a press meet held at the congress office in Mangaluru.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm