ಬ್ರೇಕಿಂಗ್ ನ್ಯೂಸ್
21-05-22 07:55 pm Source: Vijayakarnataka ಡಾಕ್ಟರ್ಸ್ ನೋಟ್
ನಮಗೆಲ್ಲಾ ಗೊತ್ತೇ ಇರುವ ಹಾಗೆ ಮನುಷ್ಯನ ದೇಹದ ಪ್ರತಿಯೊಂದು ಅಂಗವೂ ಪ್ರಮುಖ ವಾಗಿದೆ. ಇದು ಒಂದು ರೀತಿಯ ಯಂತ್ರಗಳು ಇದ್ದ ಹಾಗೆ, ಇವು ತಮ್ಮ ಪಾಡಿಗೆ ಕೆಲಸಕಾರ್ಯ ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಹೋಗುತ್ತವೆ. ಒಂದು ವೇಳೆ ಇಲ್ಲಿ ಏನಾದರೂ ಏರು ಪೇರು ಉಂಟಾದರೆ ಅಂದರೆ, ದೇಹದ ಆಂತರಿಕ ಅಂಗಗಳಲ್ಲಿ ಕೊಂಚ ದೊಡ್ಡ ಸಮಸ್ಯೆಯನ್ನೇ ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದನ್ನು ಸಹ ಕಡೆಗಣಿಸುವ ಹಾಗಿಲ್ಲ.
ಇನ್ನು ಮುಖ್ಯವಾಗಿ ದೇಹದ ಪ್ರತಿಯೊಂದು ಅಂಗಾಗಗಳು ಅಚ್ಚುಕಟ್ಟಾಗಿ ಕೆಲಸ ಮಾಡ ಬೇಕೆಂದರೆ, ದೇಹದಲ್ಲಿ ಹರಿಯುವ ರಕ್ತ ಸಂಚಾರ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿ ಕೆಂಪು ರಕ್ತ ಕಣಗಳು ಮನುಷ್ಯನ ಜೀವನಾಡಿ ಆಗಿ ಕೆಲಸ ಮಾಡಿದರೆ, ಬಿಳಿ ರಕ್ತ ಕಣಗಳು, ಮನುಷ್ಯನ ಆರೋಗ್ಯಕ್ಕೆ ಸಮಸ್ಯೆ ಉಂಟು ಮಾಡುವ ಸೊಂಕುಗಳ ವಿರುದ್ಧ ಹೋರಾಡುವಲ್ಲಿ, ಒಂದುವೇಳೆ ಗಾಯಗಳಾಗಿದ್ದರೆ, ಅದನ್ನು ಕಡಿಮೆ ಮಾಡುವಲ್ಲಿ ಹಾಗೂ ಪರೋಕ್ಷವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಕೂಡ ನೆರವು ನೀಡುತ್ತದೆ.
ಒಂದು ವೇಳೆ ಮಾರಕ ಡೆಂಗ್ಯೂ ಜ್ವರ ಕಾಡಿದರೆ, ಬಿಳಿ ರಕ್ತಕಣಗಳು, ಮನುಷ್ಯನ ಪ್ರಾಣ ಉಳಿಸು ವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ವೈದ್ಯರೂ ಕೂಡ ಡೆಂಗ್ಯೂ ಜ್ವರ ಇರುವ ರೋಗಿಗಳಿಗೆ ಬಿಳಿ ರಕ್ತಕಣಗಳನ್ನು ಹೆಚ್ಚಿಸುವ ಆಹಾರ ಪದಾರ್ಥ ಗಳನ್ನು ಹೆಚ್ಚಾಗಿ ಸೇವಿಸಬೇಕೆಂದು ಹೇಳುವುದು. ಯಾಕೆಂದರೆ ಒಂದು ವೇಳೆ ಬಿಳಿ ರಕ್ತಕಣಗಳು ರೋಗಿ ಯಲ್ಲಿ ಕಡಿಮೆ ಆಗುತ್ತಾ ಹೋದರೆ, ಡೆಂಗ್ಯೂ ಜ್ವರದ ಸೋಂಕು ಹೆಚ್ಚಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆಯಂತೆ...
ಬಿಳಿ ರಕ್ತಕಣಗಳ ಮಹತ್ವದ ಬಗ್ಗೆ ನಿಮಗೆ ಗೊತ್ತಿರಲಿ...
ನಿಮಗೆ ಗೊತ್ತಿರಲಿ, ದೇಹದ ಸೋಂಕುಗಳ ವಿರುದ್ಧ ಹೋರಾಡುವ ಎಲ್ಲಾ ಗುಣಲಕ್ಷಣಗಳು ಕೂಡ ಈ ಬಿಳಿ ರಕ್ತಕಣಗಳು ಒಳಗೊಂಡಿರುತ್ತದೆ. ಒಂದು ವೇಳೆ ರೋಗನಿರೋಧಕ ಶಕ್ತಿ ಕಡಿಮೆಯಾಗಿ ವ್ಯಕ್ತಿ ಸೊಂಕಿಗೆ ಒಳಗಾದರೆ, ಆತನನ್ನು ಮೊದಲಿನಂತೆ ಹುಷಾರು ಮಾಡುವಲ್ಲಿ ಬಿಳಿ ರಕ್ತಕಣಗಳು ಮುಂಚೂಣಿಯಲ್ಲಿ ನಿಲ್ಲುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ, ಆರೋಗ್ಯದಲ್ಲಿ ಬಿಳಿ ರಕ್ತಕಣಗಳ ಸಂತತಿ ಕಡಿಮೆ ಆಗದಂತೆ ನೋಡಿಕೊಳ್ಳಬೇಕು.
ಪಪ್ಪಾಯಿ ಗಿಡದ ಎಲೆಗಳು
ಪಪ್ಪಾಯಿ ಎಲೆಗಳನ್ನು ಅರೆದು, ಇದರಿಂದ ಸಂಗ್ರಹಿಸಿದ ರಸವನ್ನು ಕುಡಿಯುವ ಮೂಲಕ ರಕ್ತದಲ್ಲಿರುವ ಪ್ಲೇಟ್ಲೆಟ್ ಸಂಖ್ಯೆ ವೃದ್ದಿಸುತ್ತದೆ, ಇದರಿಂದ ಡಂಗ್ಯೂ ಜ್ವರವನ್ನು ನಿಯಂತ್ರಿಸ ಬಹುದು, ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಅಂತೆಯೇ, ಬಿಳಿ ರಕ್ತಕಣಗಳ ಸಂಖ್ಯೆಯನ್ನು ಕೂಡ ಹೆಚ್ಚು ಮಾಡುವಲ್ಲಿ ನೆರವಾಗುತ್ತದೆ.
ಹೀಗೆ ಮಾಡಿ:
ಮೊದಲಿಗೆ ಸ್ವಲ್ಪ ಪಪ್ಪಾಯ ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು.
ನಂತರ ಇದರ ಎಲೆಗಳಿಗೆ, ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಂಡು, ಇನ್ನೊಂದು ಪಾತ್ರೆಗೆ ಸೋಸಿ ಕೊಳ್ಳಿ.
ಆಮೇಲೆ ಈ ಸೋಸಿಕೊಂಡ ಮಿಶ್ರಣಕ್ಕೆ, ಒಂದು ಟೇಬಲ್ ಚಮಚ ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ, ಚೆನ್ನಾಗಿ ಕದಡಿಕೊಳ್ಳಿ.
ಪಪ್ಪಾಯ ಎಲೆಗಳ, ಈ ರಸ ತುಂಬಾನೇ ಕಹಿ ಇರುವ ಕಾರಣ, ಇದಕ್ಕೆ ಒಂದು ಟೇಬಲ್ ಚಮಚ ಆಗು ವಷ್ಟು ಜೇನು ತುಪ್ಪವನ್ನು ಸೇರಿಸಿ ಕುಡಿಯಬಹುದು.
ಇನ್ನು ಇದರ ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ಸಿ. ಇ, ಕೆ ಮತ್ತು ಬಿ ಕಂಡು ಬರುವು ದರಿಂದ, ಇವು ಸೊಂಕುಗಳ ವಿರುದ್ಧ ಹೋರಾಡುವಲ್ಲಿ ಹಾಗೂ ದೇಹದ ರೋಗ ನಿರೋಧಕ ವ್ಯವಸ್ಥೆ ಯನ್ನು ಬಲ ಪಡಿಸುವುದರಲ್ಲಿ, ಪ್ರಮುಖ ಪಾತ್ರವಹಿಸುತ್ತದೆ.
ಒಂದೆರಡು ಲವಂಗಗಳನ್ನ ಜಗಿಯಿರಿ!
ನೆಲ್ಲಿಕಾಯಿ
ಸಿಟ್ರಸ್ ಹಣ್ಣುಗಳು
Ways To Improve White Blood Cell Count.
07-08-25 05:50 pm
Bangalore Correspondent
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 03:26 pm
Mangalore Correspondent
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm