ಬ್ರೇಕಿಂಗ್ ನ್ಯೂಸ್
02-09-20 02:49 pm Headline Karnataka News Network ಸಿನಿಮಾ
ಮಂಗಳೂರು, ಸೆಪ್ಟಂಬರ್ 2 : ಟಾಲಿವುಡ್ ಸ್ಟಾರ್ ಕಪಲ್ ಎಂದೇ ಹೆಸರಾಗಿದ್ದ ನೋಯಲ್ ಸೀನ್ ಮತ್ತು ಎಸ್ತರ್ ನೊರೊನ್ಹಾ ಮದುವೆಯಾದ ಒಂದೇ ವರ್ಷದಲ್ಲಿ ಡೈವರ್ಸ್ ಆಗಿದ್ದಾರೆ. ನೋಯಲ್ ಮತ್ತು ಎಸ್ತರ್ ಈ ಬಗ್ಗೆ ಪ್ರತ್ಯೇಕವಾಗಿ ಬರೆದುಕೊಂಡಿದ್ದು ಕಳೆದ ವರ್ಷವೇ ನಾವು ಬೇರೆಯಾಗಿದ್ದೆವು. ಇಬ್ಬರೂ ಒಪ್ಪಿಕೊಂಡೇ ಯಾವುದೇ ಶರತ್ತುಗಳಿಲ್ಲದೇ ಡೈವರ್ಸ್ ಆಗಲು ಅಪ್ಲೈ ಮಾಡಿದ್ದೆವು. ಈಗ ಕೋರ್ಟ್ ನಿರ್ಧಾರ ಹೊರಬರುವುದಷ್ಟೇ ಬಾಕಿ ಇದೆ ಎಂದು ಹೇಳಿದ್ದಾರೆ.

ನಮ್ಮ ನಡುವೆ ಹೊಂದಿಕೆಯಾಗುತ್ತಿರಲಿಲ್ಲ. ಅಂತಿಮವಾಗಿ ಬೇರೆಯಾಗಲು ನಿರ್ಧರಿಸಿದೆವು. ಈ ಸಂಬಂಧವನ್ನು ದೇವರಷ್ಟೇ ಉಳಿಸಿಕೊಳ್ಳಬೇಕು. ಇಂಥ ನೋವಿನ ಸಂದರ್ಭದಲ್ಲಿ ಎಲ್ಲರ ಸಹಕಾರ ಕೋರುತ್ತೇನೆ. ನೋವನ್ನು ಮರೆಯಲು ನೈತಿಕ ಶಕ್ತಿ ಕೊಡುವಂತೆ ಕೇಳುತ್ತೇನೆ ಎಂದು ನೋಯಲ್ ಬರೆದುಕೊಂಡಿದ್ದಾರೆ. ಎಸ್ತರ್ ಗೆ ದೇವರು ಒಳ್ಳೆದನ್ನು ಮಾಡಲಿ. ನಿಮ್ಮೆಲ್ಲ ಕನಸುಗಳು ಈಡೇರಲಿ. ಅದಷ್ಟೇ ನನ್ನ ಆಶಯ ಎಂದು ಭಾವುಕರಾಗಿ ಹಾರೈಸಿದ್ದಾರೆ.
ಇದೇ ವೇಳೆ, ನಟಿ ಎಸ್ತರ್ ನೊರೊನ್ಹಾ ಕೂಡ ತಮ್ಮ ಇನ್ ಸ್ಟಾ ಗ್ರಾಮಿನಲ್ಲಿ ಸುದೀರ್ಘ ಪತ್ರವನ್ನು ಪೋಸ್ಟ್ ಮಾಡಿದ್ದಾರೆ. "ಕಳೆದ ಒಂದು ವರ್ಷದಲ್ಲಿ ಎಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೇ ಆಗಿತ್ತು. ಈಗ ಎಲ್ಲರಿಗೂ ಹೇಳುತ್ತಿದ್ದೇನೆ. ನಾವು ಅಧಿಕೃತವಾಗಿ ಬೇರೆಯಾಗಿದ್ದೇವೆ. ನಾವೆಲ್ಲ ಮನುಷ್ಯರು. ನಮ್ಮ ಬದುಕಿನಲ್ಲಿ ಸುಖ ದುಃಖ ಸಹಜ. ಒಮ್ಮೆ ಮೇಲೆ ಬಂದರೆ ಇನ್ನೊಮ್ಮೆ ಕೆಳಗೆ ಹೋಗಬೇಕು ತಾನೇ.. ನಮ್ಮ ಸಂಬಂಧ ಹಳಸಿದ್ದನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ಆದರೆ ಒಂದು ಸಂಬಂಧವನ್ನು ಮುರಿದುಕೊಳ್ಳುವುದು ಎಷ್ಟು ಕಷ್ಟ , ಎಷ್ಟು ನೋವು ಕೊಡುವಂಥದ್ದು ಎಂದು ಗೊತ್ತು. ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದೇನೆ. ನೆಗೆಟಿವ್ ವಿಚಾರಗಳನ್ನು ಹೇಳಿ ನನ್ನನ್ನು ಮತ್ತಷ್ಟು ನೋವಿಗೆ ತಳ್ಳಬೇಡಿ ಎಂದಷ್ಟೇ ಬೇಡಿಕೊಳ್ಳುತ್ತೇನೆ" ಎಂದು ಎಸ್ತರ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಕಳೆದ 2019ರ ಜನವರಿ 3ರಂದು ನೋಯಲ್ ಸೀನ್ ಮತ್ತು ಎಸ್ತರ್ ನೊರೊನ್ಹಾ ಮದುವೆಯಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರ ಸಂಬಂಧ ಕಡಿದು ಹೋಗಿತ್ತು. ಮದುವೆಯಾದ ಬಳಿಕ ಬೇರೆಯಾಗೇ ಇದ್ದ ನಟ - ನಟಿಯರು ನಾಲ್ಕು ತಿಂಗಳ ಬಳಿಕ ಜೂನ್ ವೇಳೆಗೆ ಡೈವರ್ಸ್ ಮಾಡಿಕೊಳ್ಳಲು ಅರ್ಜಿ ಹಾಕಿದ್ದರು. ನೋಯಲ್ ಸೀನ್ ಮೊದಲಿಗೆ ಬಣ್ಣದ ಬದುಕಿಗೆ ಕಾಲಿರಿಸಿದ್ದು ತೆಲುಗು ಚಿತ್ರದ ಮೂಲಕ. ತೆಲುಗಿನ ಸಂಭವಾಮಿ ಯುಗೇ ಯುಗೇ ಚಿತ್ರದಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದರು. ಆಬಳಿಕ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಎಂ.ಎಂ. ಕೀರವಾಣಿ ಸ್ಟಾರ್ ಡೈರೆಕ್ಟರ್ ರಾಜಮೌಳಿಗೆ ಪರಿಚಯಿಸಿದ್ದರು. ಅದರಂತೆ ರಾಜಮೌಳಿಯ ವಿಕ್ರಮಾರ್ಕುಡು ಚಿತ್ರದಲ್ಲಿ ನಟಿಸುವಂತಾಗಿತ್ತು. ಅದೇ ರೀತಿ ಎಸ್ತರ್ ನೊರೊನ್ಹಾ ಕೂಡ ತೆಲುಗು, ಕೊಂಕಣಿ, ಕನ್ನಡ ಚಿತ್ರಗಳಲ್ಲಿ ಛಾಪು ಮೂಡಿಸಿದ್ದರು. ಕೊಂಕಣಿ ಆಲ್ಬಂ ಸಾಂಗ್ ನಲ್ಲಿಯೂ ಕಾಣಿಸಿಕೊಂಡಿದ್ದರು.
07-01-26 03:07 pm
HK News Desk
ಮತಪಟ್ಟಿ ಪರಿಷ್ಕರಣೆ ; ಉತ್ತರ ಪ್ರದೇಶದಲ್ಲಿ 2.89 ಕೋ...
07-01-26 12:12 pm
ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ...
06-01-26 08:23 pm
ಸಿನಿಮಾ ಥಿಯೇಟರ್ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ರೆ...
06-01-26 12:57 pm
ಅರಣ್ಯ ಸಚಿವ ಈಶ್ವರ ಖಂಡ್ರೆ ಎದುರಲ್ಲೇ ಕೈ ಕೈ ಮಿಲಾಯಿ...
05-01-26 10:06 pm
07-01-26 01:53 pm
HK News Desk
ಬಾಂಗ್ಲಾದಲ್ಲಿ ಒಂದೇ ದಿನ ಮತ್ತಿಬ್ಬರು ಹಿಂದುಗಳ ಹತ್ಯ...
06-01-26 12:40 pm
ಹರಿದ್ವಾರ - ಹೃಷಿಕೇಶ ಪರಿಸರದಲ್ಲಿ ಹಿಂದುಯೇತರ ವ್ಯಕ್...
05-01-26 02:13 pm
Venezuelan President Maduro: ವೆನಿಜುವೆಲಾ ಅಧ್ಯಕ...
04-01-26 06:38 pm
ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ...
02-01-26 06:43 pm
07-01-26 12:10 pm
Mangalore Correspondent
ವಿಧವೆ ಮೊಮ್ಮಗಳು, ಮರಿ ಮಕ್ಕಳೊಂದಿಗಿದ್ದ ವೃದ್ಧೆಯ ಗು...
06-01-26 08:25 pm
ನವೋದಯ ಟ್ರಸ್ಟ್ ನಿಂದ ಮಹಿಳಾ ಸಬಲೀಕರಣಕ್ಕೆ ಕೊಡುಗೆ ;...
06-01-26 07:51 pm
ಕೋಳಿ ಅಂಕದ ಮೇಲೆ ತೋರುವ ಕಾಳಜಿ, ಸೂರಿಲ್ಲದೆ ಬೀದಿಗೆ...
06-01-26 04:09 pm
ಜ.9ರಿಂದ ತಣ್ಣೀರುಬಾವಿಯಲ್ಲಿ ಬೀಚ್ ಉತ್ಸವ, ಟ್ರಯತ್ಲಾ...
06-01-26 04:01 pm
06-01-26 07:04 pm
Bangalore Correspondent
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm
Bank of Baroda, Fraud, Mangalore: ಬ್ಯಾಂಕ್ ಆಫ್...
03-01-26 03:43 pm