ಬ್ರೇಕಿಂಗ್ ನ್ಯೂಸ್
03-03-21 09:08 pm Source: FILMIBEAT ಸಿನಿಮಾ
ಸುಶಾಂತ್ ಸಿಂಗ್ ರಜಪೂತ್ ಹಾಗೂ ರಿಯಾ ಚಕ್ರವರ್ತಿ ಪರಸ್ಪರ ಪ್ರೇಮದಲ್ಲಿದ್ದಾಗ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲು ತಯಾರಾಗಿದ್ದರು. ಕತೆ, ನಿರ್ಮಾಪಕರೂ ಓಕೆ ಆಗಿದ್ದರು. ಆದರೆ ಸಿನಿಮಾ ಸೆಟ್ಟೇರುವ ಹೊತ್ತಿಗೆ ಲಾಕ್‌ಡೌನ್ ಆಯಿತು, ಆ ನಂತರ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾದರು.
ಆದರೆ ಆಗ ನಿಂತಿದ್ದ ಸುಶಾಂತ್ ಸಿಂಗ್-ರಿಯಾ ಚಕ್ರವರ್ತಿ ಸಿನಿಮಾ ಈಗ ಮತ್ತೆ ಪ್ರಾರಂಭವಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಬದಲಿಗೆ ಬೇರೊಬ್ಬ ನಾಯಕನನ್ನು ಹಾಕಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ ನಿರ್ದೇಶಕರು.
ರಿಯಾ ಜೊತೆಗೆ ಈಗಾಗಲೇ 'ಚೆಹರೆ' ಸಿನಿಮಾ ಮಾಡಿರುವ ನಿರ್ದೇಶಕ ರೂಮಿ ಜಫ್ರಿ, ರಿಯಾ ಜೊತೆ ಮತ್ತೊಂದು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಿನಿಮಾದ ಕತೆಯೂ ಈಗಾಗಲೇ ತಯಾರಾಗಿದ್ದು, ನಾಯಕ-ನಾಯಕಿ ಪಾತ್ರವೂ ಸಹ ಅಂತಿಮವಾಗಿದೆಯಂತೆ.
ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ಅವರೊಟ್ಟಿಗೆ ಲಾಕ್‌ಡೌನ್ ಗೂ ಮೊದಲೇ ಸಿನಿಮಾ ಯೋಜನೆ ಆಗಿತ್ತು. ಲಂಡನ್‌ನಲ್ಲಿ ನಡೆಯುವ ಪ್ರೇಮಕತಾ ಸಿನಿಮಾವನ್ನು ನಿರ್ಮಿಸುವ ಯೋಜನೆ ಮಾಡಿ ಇಬ್ಬರಿಗೂ ಕತೆ ಹೇಳಿ, ಅವರೂ ಸಹ ಒಪ್ಪಿಕೊಂಡಿದ್ದರು. ಆದರೆ ಈ ಲಾಕ್‌ಡೌನ್ ನಲ್ಲಿಯೇ ಬೇರೆಯೇ ನಡೆಯಿತು' ಎಂದಿದ್ದಾರೆ ರೂಮಿ ಜಫ್ರಿ.
ಸುಶಾಂತ್ ಸಿಂಗ್ ನಟಿಸಬೇಕಿದ್ದ ಸ್ಥಾನಕ್ಕೆ ಪ್ರತಿಭಾವಂತ ಸ್ಟಾರ್ ನಟನನ್ನೇ ಆಯ್ಕೆ ಮಾಡಿದ್ದಾರಂತೆ ರೂಮಿ. ಆದರೆ ಆ ನಾಯಕ ಯಾರು ಎಂದು ಮಾಧ್ಯಮಗಳ ಮುಂದೆ ಹೇಳಿಲ್ಲ. ಬದಲಿಗೆ ರಿಯಾ ಜೊತೆ ಕೆಲಸ ಮಾಡಲು ಆ ನಟನಿಗೆ ಬಹಳ ಇಷ್ಟವಿರುವುದಾಗಿ ಮಾತ್ರ ಹೇಳಿದ್ದಾರೆ. ನಾನು ಆ ನಟನಿಗೆ ಕತೆ ಹೇಳಿ ರಿಯಾ ಚಕ್ರವರ್ತಿ ನಾಯಕಿ ಎಂದು ಹೇಳಿದಾಗ, 'ನನಗೂ ಆಕೆಯೊಂದಿಗೆ ನಟಿಸಲು ಇಷ್ಟವಿದೆ.
ಆಕೆ ಸುಂದರ ಹಾಗೂ ಪ್ರತಿಭಾವಂತ ಹುಡುಗಿ. ಆಕೆ ಜಾಮೀನಿನ ಮೇಲಿದ್ದರೂ ನನಗೆ ಆಕೆಯೊಂದಿಗೆ ನಟಿಸಲು ಅಡ್ಡಿಯಿಲ್ಲ. ಸಂಜಯ್ ದತ್ ಸಹ ಜಾಮೀನಿನ ಮೇಲಿದ್ದಾಗ ಎಷ್ಟೋಂದು ಸಿನಿಮಾಗಳನ್ನು ಮಾಡಿದರು' ಎಂದು ಆ ನಟ ಹೇಳಿದ್ದಾರಂತೆ. ರಿಯಾ ಚಕ್ರವರ್ತಿ, ಅಮಿತಾಬ್ ಬಚ್ಚನ್, ಇಮ್ರಾನ್ ಅಶ್ಮಿ ಇನ್ನೂ ಹಲವರು ನಟಿಸಿರುವ 'ಚೆಹ್ರೆ' ಸಿನಿಮಾವು ಏಪ್ರಿಲ್ 30 ರಂದು ಬಿಡುಗಡೆ ಆಗುತ್ತಿದ್ದು, ಆ ಸಿನಿಮಾದ ಬಿಡುಗಡೆ ನಂತರ ರಿಯಾ ನಾಯಕಿಯಾಗಿರುವ ಹೊಸ ಸಿನಿಮಾ ಸೆಟ್ಟೇರಲಿದೆ. ಸಿನಿಮಾದ ನಿರ್ಮಾಣವನ್ನು ವಶು ಭಗ್ನಾನಿ ಮಾಡಲಿದ್ದಾರೆ.
This News Article Is A Copy Of FILMIBEAT
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
26-09-26 08:05 pm
HK News Staffer
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm