ಬ್ರೇಕಿಂಗ್ ನ್ಯೂಸ್
24-02-21 12:37 pm Source: FILMIBEAT ಸಿನಿಮಾ
ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಮದುವೆ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ಖ್ಯಾತ ಉದ್ಯಮಿಯೊಬ್ಬರ ಜೊತೆ ವೈವಾಹಿಕ ಬದುಕು ಆರಂಭಿಸಲು ತಯಾರಾಗಿದ್ದಾರೆ ಎಂದು ಸುದ್ದಿ ವರದಿಯಾಗಿತ್ತು. ನಂತರ ಆ ಸುದ್ದಿಯನ್ನು ನಟಿ ನಿರಾಕರಿಸಿದ್ದರು. ಇದೀಗ, ತಮಿಳಿನ ಖ್ಯಾತ ಸಂಗೀತ ನಿರ್ದೇಶಕನ ಜೊತೆ ಕೀರ್ತಿ ಸುರೇಶ್ ಪ್ರೀತಿಯಲ್ಲಿದ್ದಾರೆ ಎಂಬ ವಿಷಯ ಸದ್ದು ಮಾಡ್ತಿದೆ. ಈ ಕುರಿತು ತಮಿಳು ಫಿಲ್ಮಿಬೀಟ್ ವರದಿ ಮಾಡಿದ್ದು, ಈ ವರ್ಷದಲ್ಲೇ ಕೀರ್ತಿ ಮದುವೆ ಸಹ ಆಗಲಿದ್ದಾರೆ ಎಂದು ಹೇಳಿದೆ. ಕೀರ್ತಿ ಸುರೇಶ್ ಮತ್ತು ಸಂಗೀತ ನಿರ್ದೇಶಕನ ಪ್ರೀತಿ ವಿಚಾರ ಈಗ ತಮಿಳು ಹಾಗೂ ತೆಲುಗು ಇಂಡಸ್ಟ್ರಿಯಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಮುಂದೆ ಓದಿ....

ಅನಿರುದ್ಧ್ ಲವ್ಸ್ ಕೀರ್ತಿ ಸುರೇಶ್?
ತಮಿಳು ಇಂಡಸ್ಟ್ರಿಯಲ್ಲಿ ಸದ್ಯ ಸಂಚಲನ ಸೃಷ್ಟಿಸಿರುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಜೊತೆ ಕೀರ್ತಿ ಸುರೇಶ್ ಪ್ರೀತಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ವರ್ಷದ ಅಂತ್ಯದಲ್ಲಿ ದಾಂಪತ್ಯ ಜೀವನ ಆರಂಭಿಸಲು ಯೋಜಿಸಿದ್ದಾರೆ ಎನ್ನಲಾಗುತ್ತಿದೆ.

ಗಾಯಕಿ ಜೊತೆ ಅನಿರುದ್ಧ್ ಹೆಸರು?
ಈ ಹಿಂದೆ ಅನಿರುದ್ಧ್ ರವಿಚಂದ್ರನ್ ಹೆಸರು ಗಾಯಕಿ ಜೊನಿತಾ ಗಾಂಧಿ ಜೊತೆ ತಳುಕು ಹಾಕಿಕೊಂಡಿತ್ತು. ಅನಿರುದ್ಧ್ ಮತ್ತು ಜೊನಿತಾ ಡೇಟ್ ಮಾಡಿದ್ದರು. ಇಬ್ಬರು ವಿವಾಹ ಸಹ ಆಗಲಿದ್ದಾರೆ ಎನ್ನುವಷ್ಟು ಆತ್ಮೀಯತೆ ಇರುವುದಾಗಿ ಹೇಳಲಾಗಿತ್ತು. ಆದರೆ, ಈ ಜೋಡಿ ಅಧಿಕೃತವಾಗಿ ತಮ್ಮ ಪ್ರೀತಿ ಬಗ್ಗೆ ಹೇಳಲೇ ಇಲ್ಲ.

ಬರ್ತಡೇ ಫೋಟೋಗಳು ವೈರಲ್ ಆಗಿದ್ದವು
ಅನಿರುದ್ಧ್ ರವಿಚಂದ್ರನ್ ಬರ್ತಡೇಯಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದರು. ಅನಿರುದ್ಧ್ ಮತ್ತು ಕೀರ್ತಿ ಒಟ್ಟಿಗೆ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಫೋಟೋಗಳ ಹಿನ್ನೆಲೆ ಆಗಲೇ ಕೀರ್ತಿ ಸುರೇಶ್ ಮತ್ತು ಅನಿರುದ್ಧ್ ಸಂಬಂಧದ ಬಗ್ಗೆ ಚರ್ಚೆಗಳು ಆಗಿತ್ತು.

ಇಬ್ಬರದ್ದು ಬ್ಯುಸಿ ಜೀವನ
ಕೀರ್ತಿ ಸುರೇಶ್ ಸತತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ಜೊತೆ ಅಣ್ಣಾತ್ತೆ, ಮಹೇಶ್ ಬಾಬು ಜೊತೆ ಸರ್ಕಾರು ವಾರಿ ಪಾಟ, ತೆಲುಗಿನ ರಂಗ್ ದೇ, ಗುಡ್ ಲಕ್ ಸಖಿ ಸೇರಿದಂತೆ ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಕಡೆ ಮಾಸ್ಟರ್ ಸಕ್ಸಸ್ ಬಳಿಕ ಅನಿರುದ್ಧ್ ಶಿವಕಾರ್ತಿಕೇಯನ್ ನಟನೆಯ ಡಾಕ್ಟರ್, ವಿಜಯ್ 65ನೇ ಚಿತ್ರ, ವಿಘ್ನೇಶ್ ಶಿವನ್ ನಿರ್ದೇಶನದ ಚಿತ್ರಗಳು ಸೇರಿದಂತೆ ಹಲವು ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
This News Article is a Copy of FILMIBEAT
30-10-25 11:00 pm
Bangalore Correspondent
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
30-10-25 03:20 pm
HK News Desk
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
30-10-25 11:16 pm
Mangalore Correspondent
ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm