ಬ್ರೇಕಿಂಗ್ ನ್ಯೂಸ್
17-08-20 07:21 pm Headline Karnataka News Network ಸಿನಿಮಾ
ನವದೆಹಲಿ: ಹಿಂದಿ, ಮರಾಠಿ ಭಾಷೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ನಟ ನಿಶಿಕಾಂತ್ ಕಾಮತ್ (50ವರ್ಷ) ಸೋಮವಾರ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ನಿಶಿಕಾಂತ್ ಕಾಮತ್ ಹೈದರಾಬಾದ್ ನ ಗಚ್ಚಿಬೊಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 12ರಂದು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಅವರು ಸೋಮವಾರ ಬೆಳಗ್ಗೆಯೇ ನಿಧನರಾಗಿದ್ದಾರೆಂಬ ಸುದ್ದಿ ಹಬ್ಬಿದ್ದರಿಂದ ಎಐಜಿ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿ, ನಿಶಿಕಾಂತ್ ಅವರು ವೆಂಟಿಲೇಟರ್ ನಲ್ಲಿ ಇದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿತ್ತು.
2008ರ ‘ಮುಂಬೈ ಮೇರಿ ಜಾನ್’ ಸಿನಿಮಾದ ಮೂಲಕ ನಟ - ನಿರ್ದೇಶಕನಾಗಿ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. ’ದೊಂಬಿವಾಲಿ ಫಾಸ್ಟ್’, ‘ಮುಂಬೈ ಮೇರಿ ಜಾನ್’, ‘ರಾಕಿ ಹ್ಯಾಂಡ್‌ಸಮ್’, ‘ಫೋರ್ಸ್’, ‘ಮದಾರಿ’, ‘ದೃಶ್ಯಂ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಡ್ಯಾಡಿ’, ‘ರಾಕಿ ಹ್ಯಾಂಡ್‌ಸಮ್’, ‘ಜ್ಯೂಲಿ 2‘ ಹಾಗೂ ‘ಭಾವೇಶ್ ಜೋಶಿ’ ಸಿನಿಮಾಗಳಲ್ಲಿ ತಮ್ಮ ನಟನಾ ಚಾತುರ್ಯವನ್ನು ತೋರಿದ್ದರು ನಿಶಿಕಾಂತ್. ಸಿನಿಮಾಗಳಿಗೆ ಮಾತ್ರ ತಮ್ಮನ್ನು ಸೀಮಿತವಾಗಿರಿಸಿಕೊಳ್ಳದ ಇವರು ವೆಬ್ ಸರಣಿಗಳನ್ನು ನಿರ್ಮಾಣ ಮಾಡಿದ್ದರು.
ಗೆಳೆಯ ನಿಶಿಕಾಂತ್ ಕಾಮತ್ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ರಿತೇಶ್ ದೇಶ್ ಮುಖ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ರಿತೇಶ್ ನಟಿಸಿ, ನಿರ್ಮಾಣ ಮಾಡಿದ್ದ “ಲಾಯಿ ಭಾರಿ ಮರಾಠಿ ಸಿನಿಮಾವನ್ನು ನಿಶಿಕಾಂತ್ ನಿರ್ದೇಶಿಸಿದ್ದರು. ಈ ಸಿನಿಮಾ ಮರಾಠಿಯಲ್ಲಿ ಸೂಪರ್ ಹಿಟ್ ಆಗಿತ್ತು.
I will miss you my friend. #NishikantKamat Rest In Peace. 🙏🏽 pic.twitter.com/cqEeLbKJPM
— Riteish Deshmukh (@Riteishd) August 17, 2020
07-01-26 03:07 pm
HK News Desk
ಮತಪಟ್ಟಿ ಪರಿಷ್ಕರಣೆ ; ಉತ್ತರ ಪ್ರದೇಶದಲ್ಲಿ 2.89 ಕೋ...
07-01-26 12:12 pm
ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ...
06-01-26 08:23 pm
ಸಿನಿಮಾ ಥಿಯೇಟರ್ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ರೆ...
06-01-26 12:57 pm
ಅರಣ್ಯ ಸಚಿವ ಈಶ್ವರ ಖಂಡ್ರೆ ಎದುರಲ್ಲೇ ಕೈ ಕೈ ಮಿಲಾಯಿ...
05-01-26 10:06 pm
07-01-26 01:53 pm
HK News Desk
ಬಾಂಗ್ಲಾದಲ್ಲಿ ಒಂದೇ ದಿನ ಮತ್ತಿಬ್ಬರು ಹಿಂದುಗಳ ಹತ್ಯ...
06-01-26 12:40 pm
ಹರಿದ್ವಾರ - ಹೃಷಿಕೇಶ ಪರಿಸರದಲ್ಲಿ ಹಿಂದುಯೇತರ ವ್ಯಕ್...
05-01-26 02:13 pm
Venezuelan President Maduro: ವೆನಿಜುವೆಲಾ ಅಧ್ಯಕ...
04-01-26 06:38 pm
ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ...
02-01-26 06:43 pm
07-01-26 12:10 pm
Mangalore Correspondent
ವಿಧವೆ ಮೊಮ್ಮಗಳು, ಮರಿ ಮಕ್ಕಳೊಂದಿಗಿದ್ದ ವೃದ್ಧೆಯ ಗು...
06-01-26 08:25 pm
ನವೋದಯ ಟ್ರಸ್ಟ್ ನಿಂದ ಮಹಿಳಾ ಸಬಲೀಕರಣಕ್ಕೆ ಕೊಡುಗೆ ;...
06-01-26 07:51 pm
ಕೋಳಿ ಅಂಕದ ಮೇಲೆ ತೋರುವ ಕಾಳಜಿ, ಸೂರಿಲ್ಲದೆ ಬೀದಿಗೆ...
06-01-26 04:09 pm
ಜ.9ರಿಂದ ತಣ್ಣೀರುಬಾವಿಯಲ್ಲಿ ಬೀಚ್ ಉತ್ಸವ, ಟ್ರಯತ್ಲಾ...
06-01-26 04:01 pm
06-01-26 07:04 pm
Bangalore Correspondent
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm
Bank of Baroda, Fraud, Mangalore: ಬ್ಯಾಂಕ್ ಆಫ್...
03-01-26 03:43 pm