ಬ್ರೇಕಿಂಗ್ ನ್ಯೂಸ್
16-02-21 09:53 am Source: FILMIBEAT Manjunatha C ಸಿನಿಮಾ
ರಿಹಾನಾ ಟ್ವೀಟ್‌ನ ನಂತರ ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್ ಸೇರಿದಂತೆ ಹಲವು ನಟ-ನಟಿಯರು ಮಾಡಿದ ಸರಣಿ ಟ್ವೀಟ್‌ಗಳ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶ ಮಾಡಿದೆ, ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲತಾ ಮಂಗೇಶ್ಕರ್ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ವಿಚಾರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶ್‌ಮುಖ್, 'ಸೆಲೆಬ್ರಿಟಿಗಳ ಟ್ವೀಟ್ ಬಗೆಗಿನ ನನ್ನ ಹೇಳಿಕೆಯನ್ನು ತಿರುಚಿ ಪ್ರಕಟಿಸಲಾಗಿದೆ. ಲತಾ ಮಂಗೇಶ್ಕರ್ ಅವರು ನಮಗೆ ದೇವರ ಸಮಾನ, ಸಚಿನ್ ಅವರನ್ನು ದೇಶವೇ ಗೌರವಿಸುತ್ತದೆ, ಅವರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ' ಎಂದಿದ್ದಾರೆ.
'ನನ್ನ ಹೇಳಿಕೆಯನ್ನು ತಪ್ಪಾಗಿ ಪ್ರೆಸೆಂಟ್ ಮಾಡಲಾಗಿದ್ದು, ಸೆಲೆಬ್ರಿಟಿಗಳ ವಿಚಾರಣೆ ನಡೆಯಲಿದೆ ಎಂದು ನಾನು ಹೇಳಿಲ್ಲ, ಪ್ರಕರಣದ ಬಗ್ಗೆ ಬಿಜೆಪಿ ಐಟಿ ಸೆಲ್ ನ ತನಿಖೆ ಆಗಲಿದೆ' ಎಂದಿದ್ದಾರೆ ಅನಿಲ್ ದೇಶ್‌ಮುಖ್.
'ಪ್ರಕರಣದಲ್ಲಿ ಬಿಜೆಪಿ ಐಟಿ ಸೆಲ್‌ನ ಪಾತ್ರ ಇದೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ. ಟ್ವೀಟ್ ಮಾಡಿದ ಸೆಲೆಬ್ರಿಟಿಗಳಿಗೆ ಬಿಜೆಪಿ ಐಟಿ ಸೆಲ್‌ನಿಂದ ಒತ್ತಡ ಹಾಕಲಾಗಿತ್ತೆ, ಟ್ವೀಟ್‌ನ 'ಸ್ಕ್ರಿಪ್ಟ್' ಅನ್ನು ನೀಡಲಾಗಿತ್ತೆ ಎಂಬುದನ್ನು ತನಿಖೆ ಮಾಡಲಾಗುತ್ತದೆ' ಎಂದಿದ್ದಾರೆ ಅನಿಲ್. ಈ ವರೆಗಿನ ತನಿಖೆಯ ಪ್ರಕಾರ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಹಾಗೂ ಇನ್ನೂ 12 ಮಂದಿಯ ಹೆಸರು ಕೇಳಿ ಬಂದಿದೆ, ತನಿಖೆ ಜಾರಿಯಲ್ಲಿದೆ ಎಂದು ಗೃಹ ಸಚಿವ ಅನಿಲ್ ಮಾಹಿತಿ ನೀಡಿದ್ದಾರೆ.
ರೈತ ಪ್ರತಿಭಟನೆ ಬಗ್ಗೆ ಅಂತರಾಷ್ಟ್ರೀಯ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡಿದ ಬಳಿಕ, ಭಾರತದ ಸಿನಿಮಾ ಹಾಗೂ ಕ್ರೀಡಾ ಸೆಲೆಬ್ರಿಟಿಗಳು ರಿಹಾನಾ ಟ್ವೀಟ್ ವಿರುದ್ಧವಾಗಿ ಸರಣಿ ಟ್ವೀಟ್ ಮಾಡಿದರು. ಅಕ್ಷಯ್ ಕುಮಾರ್,ಅಜಯ್ ದೇವಗನ್, ಸುನಿಲ್ ಶೆಟ್ಟಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ಇನ್ನೂ ಹಲವಾರು ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು.
This News Article is a Copy of FILMIBEAT
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
26-09-26 08:05 pm
HK News Staffer
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm